ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಗುಡಿಗಳದನೆಷ್ಟೊ ಕಟ್ಟಿಹೆವು,
ಹಾಲುತುಪ್ಪವದೆಷ್ಟೊ ಚೆಲ್ಲಿಹೆವು,
ಅಕ್ಕಿಸಕ್ಕರೆಯದೆಷ್ಟೊ ಎರಚಿಹೆವು,
ಬಾಳೆವೀಳ್ಯವದೆಷ್ಟೊ ಮುರಿದಿಹೆವು!
ಜನ್ಮಾಷ್ಟಮಿ ಜಯಂತಿಗಳೆಷ್ಟೊ
ಆಗ ಉರುಳು-ಸಾಷ್ಟಾಂಗಗಳೆಷ್ಟೊ!
ಪ್ರಾರ್ಥನೆಯದೇನು ಬರೀ ನಾಮ ಸ್ತೋತ್ತ್ರ
ಪೂಜೆಯೆಲ್ಲಾ ಪ್ರೋಕ್ಷಣೆ ನೇವೇದ್ಯ ಮಂತ್ರ !
ಉಳ್ಳವರ ಒಪ್ಪತ್ತು ದೇವನನೊಲಿಸುವ ಪರಿಯೈ?
ದೀನರ ಒಪ್ಪತ್ತಿಗೆ ದೇವನೊಲಿಯದಿರುವನೈ?
ಬೇಸತ್ತಿಹರು ದೇವದೇವತೆಯರು
ವಿದ್ಯಾಸಿರಿವಂತರ ಮತಿದಾರಿದ್ರ್ಯಕೆ !
ಸೇವೆಯಾಗಲಿ ದೀನದುರ್ಬಲರಿಗೆ,
ಹಬ್ಬವಾಗಲಿ ಮಾನವೀಯತೆಗೆ !
ಜಗದೊಳಿರದಿರೆ ಹಸಿದ ಕೂಸು,
ಜಗಕೆ ಹಬ್ಬವದಾವುದಿದಕಿಂತ ಲೇಸು?
ಅನುಪ್ ಮಲೆನಾಡು
[೨೦೦೮ ಗೌರಿಗಣೇಶ ಹಬ್ಬದ ಪ್ರಯುಕ್ತ ...]

- anupkumart ರವರ ಬ್ಲಾಗ್
- Login or register to post comments
- 193 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಅನೂಪ್ ರವರೆ, ಕವನ ತುಂಬಾ ಚನ್ನಾಗಿದೆ... ಮುಖ್ಯವಾಗಿ
"ಉಳ್ಳವರ ಒಪ್ಪತ್ತು ದೇವನನೊಲಿಸುವ ಪರಿಯೈ?
ದೀನರ ಒಪ್ಪತ್ತಿಗೆ ದೇವನೊಲಿಯದಿರುವನೈ?"
ಈ ಎರಡು ಸಾಲುಗಳು ತುಂಬಾ ಚನ್ನಾಗಿವೆ ಮತ್ತು ಆ ಎರಡು ಸಾಲುಗಳು ನನ್ನನು ತುಂಬ ಕಾಡ್ತಾ ಇದಾವೆ...
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಹರ್ಷ ಅವರೆ, ಓದಿ ಮೆಚ್ಚಿದ್ದಕ್ಕೆ ತುಂಬಾ ಖುಷಿ ಆಯ್ತು... ಆದಷ್ಟು ಸತ್ಯವನ್ನು ಸಾಲುಗಳಲ್ಲಿ ತರಲು ಪ್ರಯತ್ನಿಸಿದ್ದೇನೆ..
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
"ಉಳ್ಳವರ ಒಪ್ಪತ್ತು ದೇವನನೊಲಿಸುವ ಪರಿಯೈ?
ದೀನರ ಒಪ್ಪತ್ತಿಗೆ ದೇವನೊಲಿಯದಿರುವನೈ?"
ನನಗೆ ಈ ಸಾಲುಗಳು ತಿಳಿಯಲಿಲ್ಲ .. :-(
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಉಳ್ಳವರು ಒಮ್ಮೆ ಉಪವಾಸ ಮಾಡುತ್ತಾರೆ, ದೇವನನ್ನು ಒಲಿಸಿಕೊಳ್ಳಲು...ಹಾಗಿದ್ದರೆ ದೀನರ ಉಪವಾಸಕ್ಕೆ ದೇವರು ಎಂದೋ ಒಲಿಯಬೇಕಿತ್ತಲ್ಲವೆ?
ಅನುಪ್ ಮಲೆನಾಡು
"ಸೃಷ್ಟಿಯೇ ದೇಗುಲ"
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಒಳ್ಳೆಯ ಕವನ, ಅನುಪ್. ಮತ್ತಷ್ಟು ಬರಿಯುತ್ತಿರು, ನಿಲ್ಲಿಸಬೇಡ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಅನೂಪ್ ರವರೆ ಅದ್ಬುತ!!!!!!!
ಕೂಸು ಹಸಿದೆ ಸತ್ತರೆ ದೇವ್ರಿಗೂ ಪಾಪ ಬರುತ್ತಾ? ಹಾಗಿದ್ದಿದ್ರೆ ಚನ್ನಾಗಿರ್ತಿತ್ತು...
ಕವನ ಓದಿದಾಗ ದೇವರು ಇಲ್ವೇನೋ ಅನ್ನುಸ್ತು!!!!!
ಈ ವಿಷಯದ ಬಗ್ಗೆನೇ ಬರೀತಾ ಇರಿ.
-Yogi
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಖುಷಿ ಆಯ್ತು ಸಾರ್ ನಿಮ್ಮ ಮೆಚ್ಚುಗೆಗೆ...
ಅನುಪ್ ಮಲೆನಾಡು
"ಸೃಷ್ಟಿಯೇ ದೇಗುಲ"
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಓದಿ ಮೆಚ್ಚುಗೆ, ವಿಷಾದ .... ಹೀಗೇ ಬರೆಯುತ್ತಿರಿ.
ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
ಮೆಚ್ಚುಗೆಗೆ ಖುಷಿಯಾದೆ.. ವ
ಅನುಪ್ ಮಲೆನಾಡು
"ಸೃಷ್ಟಿಯೇ ದೇಗುಲ"