ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಜ್ಞಾನಪೀಠ ಪ್ರತಿನಿಧಿಗಳೇ ಹೀಗೆ ಮಾಡಬಹುದೇ !
ನಡುರಾತ್ರ್ಯಾಗೆ ಕಂಠ ಪೂರ್ತಿ ಕುಡ್ದು
ಅರೆನಗ್ನ ಮಾಡ್ಕ್ಯಂಡು ಕುಣ್ದು
ಮಾದಕ, ನಶೆ ತಿಂದು
ಫುಟ್-ಪಾತ್ ಮ್ಯಾಲೇ ಕಾರು ಹೊಡ್ದು
ಪ್ರಜಾಪ್ರಭುತ್ವದ ದುರುಪ್ಯೋಗ ಮಾಡೋ ಶೋಕೀ ಜನರ ಪರ ಮಾತಾಡೋದು ನಿಮಗೆ ಗೌರವ ತಂದೀತೆ?
ಅದೇ ಜನರು ಮೊನ್ನೆ MG ರಸ್ತೆಯಲ್ಲಿ ಪ್ರತಿಭಟನೆ ಸಮಯದಲ್ಲಿ ಗಾಂಧೀ ಪ್ರತಿಮೆ ಎದುರೇ ಸಿಗರೇಟು ಸೇದಿದರಂತೆ. ಇದಕ್ಕೆ ಏನಂತೀರಿ?
ಜ್ಞಾನಪೀಠ ಪ್ರತಿನಿಧಿಗಳಾದ ನೀವು ಸಂಪಾದಿಸಿರುವ ಗೌರವವನ್ನು ಹೀಗೆಲ್ಲಾ ಕಳೆದುಕೊಳ್ಳುವುದೇ !

- anupkumart ರವರ ಬ್ಲಾಗ್
- Login or register to post comments
- 213 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಜ್ಞಾನಪೀಠ ಪ್ರತಿನಿಧಿಗಳೇ ಹೀಗೆ ಮಾಡಬಹುದೇ !
ಹೌದು ಅನುಪ್ ರವರೆ, ಜ್ಞಾನಪೀಠ ಪ್ರಶಸ್ತಿಯ ಮಹತ್ವ ಬಹುಶ: ಪ್ರಶಸ್ತಿ ಪುರಸ್ಕ್ರುತರಿಗೆ ಅರ್ಥ ಆಗಿಲ್ಲ.. ಜನ ಅವರಿಂದ ಎನು ನೀರೀಕ್ಷಿಸುತ್ತಾರೆ ಅಂತ ಅವರಿಗೆ ಗೊತ್ತಿಲ್ಲ ಅನ್ಸುತ್ತೆ.. ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರುತರ ಮಾತಿಗೆ ಸಮಾಜದಲ್ಲಿ ಒಳ್ಳೆ ಗೌರವ ಇದೆ.. ಆವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಕ್ಕೊ, ಹೊಗೇನಿಕಲ್ ನದಿ ವಿವಾದಕ್ಕೊ, ರೈತರ ಸಮಸ್ಯೆಗೊ ಅಥವಾ ಇನ್ಯಾವುದೊ ಸಮಸ್ಯೆಗೋಸ್ಕರ ಬೀದಿಗಿಳಿದಿದ್ರೆ ಅವರ ಗೌರವ ಹೆಚಾಗ್ತ ಇತ್ತು... ವಿಪರ್ಯಾಸ ಅಂದ್ರೆ ಅವರು ಬೀದಿಗಿಳಿದು ಹೋರಾಟ ಮಾಡಿದ್ದು ಪಬ್, ಕ್ಲಬ್ಬುಗಳಲ್ಲಿ ಅಬ್ಬರದ ಸಂಗೀತ ನೀಷೆದಿಸಿರುವುದನ್ನು ವಿರೋದಿಸುವ ಸಲುವಾಗಿ.. ಇಷ್ಟು ದಿನ ನಾವು ನೋಡಿದ್ದ ಕಾರ್ನಡ್ ರು ಇವರೆನಾ ?