ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › anupkumart ರವರ ಬ್ಲಾಗ್

ಮೌನವೇ ಸೃಷ್ಟಿಯೊಳಿರದಿರೆ ನೀನು... ಬೇರೆಲ್ಲಿಯೂ ನೀನಿಲ್ಲ

July 13, 2008 - 12:05pm — anupkumart

ಕಳೆದ ವಾರ ಮಡಿಕೇರಿಯ ತಲಕಾವೇರಿಯಲ್ಲಿ ಮಳೆಗಾಲದ ದಿನಗಳಾದ್ದರಿಂದ ಮೋಡಗಳು ರಾಶಿರಾಶಿಯಾಗಿ ಮುಗಿಲನ್ನೂ ಬೆಟ್ಟ ಕಾಡು ಕಣಿವೆಗಳನ್ನೂ ತುಂಬಿಕೊಂಡಿದ್ದವು. ಮೊದಲ ಮಳೆಗಳು ಸುರಿದು ಸುತ್ತಲಿನ ಹಸುರೆಲ್ಲಾ ತೊಯ್ದು ನವಚೇತನದಿಂದ ಪ್ರಶಾಂತದಲ್ಲೇ ರಾರಾಜಿಸುತ್ತಿತ್ತು. ಪಶ್ಚಿಮದ ಅರಬ್ಬೀ ಸಮುದ್ರದ ಕಡೆಯಿಂದ ಬೀಸುವ ಗಾಳಿಯೊಡನೆ ತೇಲಿ ಬರುವ ಮೋಡಗಳು ಬಿಳಿಯ ಪರದೆಯೊಂದು ಹಸುರನ್ನೆಲ್ಲಾ ಆವರಿಸಿಕೊಳ್ಳುವಂತೆ ಕಣಿವೆಕಾಡುಗಳನ್ನೆಲ್ಲಾ ನುಗ್ಗಿದ್ದವು. ಸ್ವಲ್ಪ ಹೊತ್ತು ಹಸುರುಕಟ್ಟಾದ ಬೆಟ್ಟಗಳು ತಿಳಿಮೋಡಗಳ ಆ ಬಿಳಿಯ ಪರದೆಯ ಹಿಂದೆ ನೋಟದಿಂದ ಅದೃಶ್ಯವಾಗುತ್ತಿದ್ದವು, ಹಾಗೇ ಕವಿದ ಬಿಳುಪು ಸರಿಯುತ್ತಾ ಮುಂದೆ ಸಾಗುತ್ತಿದ್ದಂತೆ ಹಿಂದೆ ಕುಳಿತಿದ್ದ ಹಸುರು ಮತ್ತೆ ನೋಟಕ್ಕೆ ಸಿಗುತ್ತಿತ್ತು. ನೋಡುತ್ತಿದ್ದರೆ ಬೆಟ್ಟಗಾಡಿನಲ್ಲಿ ಕುಳಿತ ಹಸಿರು ಮತ್ತು ಬೀಸುವ ತಿಳಿಮೋಡಗಳ ಬಿಳಿಯ ಪರದೆ, ತಾನು ಮತ್ತೊಂದಕ್ಕಿಂತ ಮಿಗಿಲು ಎಂಬಂತೆ ಆಟದಲ್ಲಿ ತೊಡಗಿದ್ದಂತೆ ಅನುಭವವಾಗುತ್ತಿತ್ತು. ಅಲ್ಲಲ್ಲಿ ಕೆಲವು ಕಡೆ ಬೆಟ್ಟದ ನತ್ತಿಯನ್ನೇರಿ ಕುಳಿತಿರುವ ದಟ್ಟವಾದ ಮೋಡಗಳು ಹಾಗು ಕಾಡಿನ ಮಯ್ಯಿಗೆ ಪೋಣಿಸಿದಂತೆ ಕುಳಿತಿರುವ ಆಲಸೀ ಮೋಡಗಳೂ ಕಂಡುಬಂದವು. ಆಗೊಮ್ಮೆ ಈಗೊಮ್ಮೆ ಕಾರ್ಮೋಡಗಳೂ ನುಗ್ಗಿ ಮಳೆಯನ್ನು ಸುರಿಸಿ ಸೃಷ್ಟಿಯ ವಿವಿಧ ಲೀಲೆಗಳ ಅನುಭವಕ್ಕೆ ಇನ್ನೂ ಕಾತರತೆಯನ್ನು ಮೂಡಿಸುತ್ತಿತ್ತು.

ಈ ಎಲ್ಲಾ  ಸೃಷ್ಟಿಕರ್ಮಗಳಲ್ಲಿ ಮೌನವು ಅಭೇದವಾಗಿಯೇ ಬೆರೆದಿತ್ತು. ಗಾಳಿಯು ತನ್ನೊಡನೆ ಮೌನವನ್ನೂ ಬೀಸುತ್ತಿತ್ತು, ಮೋಡಗಳು ತನ್ನೊಡನೆ ಮೌನವನ್ನೂ ತೇಲಿಸುತ್ತಿದ್ದವು, ಬೆಟ್ಟವು ಕಾಡಿನೊಡನೆ ಮೌನವನ್ನೂ ಬೆಳೆಸಿತ್ತು, ಮಳೆಯು ಮೌನವನ್ನೂ ಸುರಿಸುತ್ತಿತ್ತು. ಅಲ್ಲೇ ಬೆಟ್ಟದ ಇಳಿಜಾರಿನಲ್ಲಿ ಕುಳಿತು ಎಲ್ಲೆಲ್ಲೂ ನೆರೆದಿದ್ದ ಮೌನವನ್ನು ಗಮನಿಸುವುದರಲ್ಲಿ ತೊಡಗಿದೆವು. ಸ್ವಲ್ಪ ಹೊತ್ತಿನ ನಂತರ ಮೌನವು ಬೆಟ್ಟಗಾಡು ಮೋಡಗಳಿಂದ ನಮ್ಮ ಮನಸ್ಸಿಗೆ ಇಳಿದು ಬಂದಂತೆ ಅನುಭವವಾಯಿತು... ಮನಸು ತಿಳಿಯಾಯಿತು, ನಿರ್ಭಾರವಾಯಿತು...

ಬಹುಶ: ಮಲೆನಾಡಿನ ಇಂತಹ ದೃಶ್ಯಗಳೇ ಕುವೆಂಪು ಅವರನ್ನು ...

’ಮೌನವೇ ಸೃಷ್ಟಿಯೊಳಿರದಿರೆ ನೀನು

ಬೇರೆಲ್ಲಿಯೂ ನೀನಿಲ್ಲ’

.... - ಎಂದು

’ನಿನ್ನ ಬಾಂದಳದಂತೆ ನನ್ನ ಮನವಿರಲಿ

ನಿನ್ನ ಸಾಗರದಂತೆ ನನ್ನ ಎದೆಯಿರಲಿ

ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ

ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ

ನಿನ್ನ ಬಲವಿರುವಂತೆ ನನ್ನ ಬಲವಿರಲಿ

ನಿನ್ನೊಳಿರುವಾ ಶಾಂತಿ ನನ್ನೆದೆಗೆ ಬರಲಿ’

..........  ಎಂತೆಲ್ಲಾ  ಬರೆಯುವಂತೆ ಸ್ಫೂರ್ತಿ ನೀಡಿತೇ?
~.~
  • anupkumart ರವರ ಬ್ಲಾಗ್
  • Login or register to post comments
  • 211 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ಮನವಿ
  • ಅಂದಗಾತಿ
  • ನಿನ್ನಯ ಗುರುತು
  • *ಸ್ಪೂರ್ತಿಯ ಲೈಟು*
Syndicate content

ಲೇಖಕರು

anupkumart's picture

ಪೂರ್ಣ ಹೆಸರು
ಆನುಪ್ ಮಲೆನಾಡು

ಪರಿಚಯ

"ಸಿಸ್ಕೋ ಸಿಸ್ಟಮ್ಸ್" ಸಂಸ್ಥೆಯಲ್ಲಿ ಸಾಫ್ಟವೇರ್ ಕೆಲಸ. ಬೆಂಗಳೂರಿನ ಜೆ.ಪಿ. ನಗರ ಬಡಾವಣೆಯಲ್ಲಿ ನಿವಾಸ. ಕನ್ನಡ ಸಂಸ್ಕೃತಿ ಬಗ್ಗೆ ಗೌರವ ಮತ್ತು ಕಾಳಜಿ. ಕುವೆಂಪು, ಕಾರಾಂತರ ಕೃತಿಗಳಲ್ಲಿ ಹೆಚ್ಚಿನ ಆಸಕ್ತಿ. ಮಲೆನಾಡಿನಲ್ಲಿ ಒಲವು. ಪ್ರಕೃತಿ ಆರಾಧನೆಯಲ್ಲಿ ನಂಬಿಕೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:11am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 8:07am
  • JAYADEV
    ಉ: ಯಾವುದು ಬೇಕು?
    January 10, 2009 - 8:05am
  • JAYADEV
    ಉ: ಮನೆಗೆ ಬಂದದ್ದು: ಕಾಫ್ಕಾ ಕಥೆ
    January 10, 2009 - 8:03am
  • anivaasi
    ಉ: ನಾವು ಅದೆಷ್ಟು ಬಡವರು!
    January 10, 2009 - 8:01am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:54am
  • venkatesh
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:48am
  • hariharapurasridhar
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 7:38am
  • hariharapurasridhar
    ಉ: ಮರೆತು ಹೋದ ಪದಗಳು
    January 10, 2009 - 7:29am
  • mahesha
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 7:29am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 193 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator