ಇವರ ಮೌನ ಕನ್ನಡಕ್ಕೆ ಒಳಿತು ...
ಶಾಲೆಯಲ್ಲಿ ಹಾಡಿದ ಹಾದು ಈಗ ನೆನಪಿನಂಗಳದಲ್ಲಿ ಹಾಗೆ ಕಾಣಿಸಿಕೊಂಡಿತು. ಅದರ ಮೊದಲನೇ ಸಾಲು ಹೀಗಿದೆ - "ನುಡಿದರೆ ಮುತ್ತಿನ ಹಾರದಂತಿರಬೇಕು". ಇದರಲ್ಲಿ ಯಾರಿಗೂ ಅರ್ಥವಾಗದ, ವಿಶ್ಲೇಷಿಸಲಾಗದ, ಗಾಢವಾದ, ನಿಗೂಢವಾದ ಅರ್ಥವೇನೂ ಇಲ್ಲ. ಮುತ್ತಿನ ಹರಳು ನೋಡಲು ಸರಳ ಹಾಗೂ ಸೌಮ್ಯ. ಅಂತೆಯೇ ಕೇಳುವವರಿಗೂ ನಮ್ಮ ಮಾತು, ಅದರ ಪದಗಳು ಇರಬೇಕು ಎಂಬ ಅರ್ಥ ಅದರಲ್ಲಿದೆ.
ನಾವು ಬೆಳೆಸಿದಂತೆ ಭಾಷೆ ಮತ್ತು ಸಂಸ್ಕೃತಿ ಬೆಳೆಯುತ್ತವೆ. ಕುವೆಂಪುರವರನ್ನು ಶಬ್ದ ಟಂಕಸಾಲಿಯೆಂದು, ಬೇಂದ್ರೆಯವರನ್ನು ಶಬ್ದ ಗಾರುಡಿಗರೆಂದು ಕರೆಯುತ್ತೇವೆ. ಭಾಷೆಯ ಸೊಗಡನ್ನು ಪಸರಿಸಿದ ಮಹಾತ್ಮರಲ್ಲಿ ಅವರು ಇಬ್ಬರು. ವಿಶ್ವ ಲಿಪಿಗಳ ರಾಣಿ ಕನ್ನಡ ಎಂದು ಓದಿದ ನೆನಪು. ಹಲವು ಸಾವಿರ ವರ್ಷಗಳ ಪರಂಪರೆಯ ಭಾಷೆ ಹಾಗು ಸಂಸ್ಕೃತಿ ನಮ್ಮದು. ಉಳಿಸಿ ಬೆಳೆಸುವ ನೊಗಭಾರ ನಮ್ಮ ಮೇಲಿದೆ.
ಹೀಗಿರುವಾಗ, ನಮ್ಮ ಮಹಾನಗರಿಯಲ್ಲಿ ಈ ದಿನಗಳಲ್ಲಿ ಬಳಕೆಯಲ್ಲಿರುವ ಮಹಾ(ದುರ್)ಜನರ, ಅವಿವೇಕಿ ಯುವಜನರ ಕನ್ನಡ ಕೇಳಿ ಬಹಳ ವಿಷಾದವಾಗುತ್ತದೆ. ಸ್ವಾಮಿ, ಅಯ್ಯಾ, ಗೆಳೆಯ ಎಂಬ ಪ್ರಣಾಮಗಳು ಹೋದವು. ಈಗೇನಿದ್ದರೂ ಮಚ್ಚಾ, ಮಗ, ಸಿಸ್ಯರ ಕಾಲ. ಬೇಕಿತ್ತೆ ನಮಗಿದು? ಒಂದೆಡೆ ತನ್ನ ಸಾಮಾಜಿಕ ಜವಾಬ್ದಾರಿಯನ್ನು ತೊರೆದು ಮಚ್ಚು, ಲಾಂಗು, ದುರ್ಭಷೆ, ಅರೆನಗ್ನ ಸಂಸ್ಕೃತಿಯನ್ನು ಸಾರುತ್ತಿರುವ ಸಿನಿಮಾ,ಧಾರಾವಾಹಿ,ಜಾಹಿರಾತು ಮಾಧ್ಯಮಗಳು. ಇನ್ನೊಂದೆಡೆ ಅದನ್ನು ಸ್ವೀಕರಿಸುತ್ತಿರುವ ಮತಿಗೇಡಿ ಯುವಜನರು. ಇದಕ್ಕೆ ಕಾರಣ ನಮಲ್ಲಿರುವ ಸ್ವಂತ ಬುದ್ದಿಯ ಕೊರತೆ. ಪ್ರಜಾಪ್ರಭುತ್ವದಲ್ಲಿ ತಿಳಿಸಿ ಹೇಳುವವರೂ ಇಲ್ಲ. ಬಡಿದು ಹೇಳುವವರೂ ಇಲ್ಲ. ಇನ್ನು ಬುದ್ದಿ ಹೇಗೆ ವಿಕಸನಗೊಳ್ಳಬೇಕು ಹೇಳಿ.
ಇತ್ತೀಚಿನ ಸಿನಿಮಾ ಮಾಧ್ಯಮದಲ್ಲಿ ಸಾಮಾಜಿಕ, ಭಾಷಿಕ, ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಜನರೇ ತುಂಬಿದ್ದಾರೆ ಎಂದು ಹೇಳಿದರೆ ಉತ್ಪ್ರೇಕ್ಷೆ ಆಗಲಾರದು. ಇಂತಹ ಮಾತೃಭಾಷಾನಾಶಕ ಮಾಧ್ಯಮಗಳನ್ನು ಬಹಿಷ್ಕರಿಸುವುದೇ ಲೇಸು. ಇತ್ತೀಚೆಗೆ ಸಿದ್ದಲಿಂಗಯ್ಯರವರು ರೇಡಿಯೋ ಚಾನಲ್ ಗಳ ವಿರುದ್ಧ ಭಾಷೆಯ ದುರ್ಬಳಕೆಯ ಕಾರಣವಾಗಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಅದನ್ನು ಸಿನಿಮಾ ಮಾಧ್ಯಮಕ್ಕೆ, ಜಾಹಿರಾತುಗಳಿಗೆ ವಿಸ್ತರಿಸ ಬೇಕಿತ್ತು. ನಮ್ಮ ಮಾನ್ಯ ಮುಖ್ಯಮಂತ್ರಿಗಳೂ ಸಿನಿಮಾ ಹಿನ್ನೆಲೆಯುಳ್ಳವರಲ್ಲವೆ. ಅವರು ಸ್ವಲ್ಪ ನೀತಿ ಪಾಠ ಹೇಳಲಿ.
ಇಂಥ ಮಾಧ್ಯಮದವರು ಕನ್ನಡವನ್ನು ಬೆಳೆಸದಿದ್ದರೂ ಪರವಾಗಿಲ್ಲ. ಇರುವಷ್ಟನ್ನು ಹಾಳು ಮಾಡದಿದ್ದರೆ ಸಾಕು ಕಣ್ರಿ. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಎಂದಾದರೂ ತಪ್ಪಾದೀತೇ? ಇವರುಗಳು ಮಾತನಾಡದಿದ್ದರೆ ಕನ್ನಡ ಉಳಿಯುತ್ತದೆ ಸ್ವಾಮಿ ....
ಇಂತೀ,
ಅನುಪ್ ಮಲೆನಾಡು
"ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು"

- anupkumart ರವರ ಬ್ಲಾಗ್
- Login or register to post comments
- 424 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ







RSS:
ಪ್ರತಿಕ್ರಿಯೆಗಳು
Re: ಇವರ ಮೌನ ಕನ್ನಡಕ್ಕೆ ಒಳಿತು ...
ಉತ್ತಮ ಲೇಖನ.
ಕನ್ನಡ ನಾಡಿನಲ್ಲಿದ್ದು, ಇಲ್ಲಿನ ಭಾಷೆ, ಸಂಸ್ಕೃತಿಯನ್ನು ಅರಿಯದೇ ಇರುವವರು ಬೇಂದ್ರೆಯವರ ಮಾತಿನಂತೆ
Re: ಇವರ ಮೌನ ಕನ್ನಡಕ್ಕೆ ಒಳಿತು ...
ಕನ್ನಡ ಒಂದೇ ಅಲ್ಲ ಕಣ್ರೀ , ಎಲ್ಲಾ ಭಾಷೆಯಲ್ಲೂ ಈ ತರ Slang ಗಳು ಇವೆ. ಕನ್ನಡದಲ್ಲಿ ರೌಡಿಗಳ ಬಗ್ಗೆ ಸಿನೆಮಾ ಮಾಡುವಾಗ, ರೌಡಿಗಳು ಅಯ್ಯಾ, ಸ್ವಾಮಿ, ಗೆಳೆಯಾ ಅಂತ ಮಾತಾಡಕ್ಕಾಗುತ್ತಾ ? ಈ ತರ Style-ಊ ಇರ್ಬೇಕು, ಅಚ್ಚ ಕನ್ನಡ styleಊ ಇರ್ಬೇಕು - ಒಟ್ನಲ್ಲಿ ಎಲ್ಲ ತರ ವಿವಿಧತೆಗಳೂ ಇರ್ಬೇಕು. ಆದ್ರೆ ನಮ್ಮಲ್ಲಿ Slang ಕನ್ನಡ, ಇಂಗ್ಳಿಷ್ ಬೆರೆಕೆ ಸ್ವಲ್ಪ ಜಾಸ್ತಿ ಆಗ್ತಾ ಇದೆ. ಅದೂ ಬದಲಾಗುತ್ತೆ ಅಂತ ನನಗೆ ಅನ್ನಿಸುತ್ತೆ. ಈಗೀಗ ಎಲ್ರೂ ಅಚ್ಚ್ಹ ಕನ್ನಡ ಇಷ್ತ ಪಡ್ತಿದಾರೆ.
Re: ಇವರ ಮೌನ ಕನ್ನಡಕ್ಕೆ ಒಳಿತು ...
ನನಗನ್ನಿಸಿದಂತೆ ಅನುಪ್ ಲೇಖನದ ಉದ್ದೇಶ:
ಅನುಪ್ ಲೇಖನ ಕೇವಲ ಭಾಷೆ 'dilute' ಆಗ್ತಾ ಇರೋ ಬಗ್ಗೆ ಅಥವಾ slang ಬೇಡ ಅಂತ ಅಲ್ಲ - ಈ ಬದಲಾವಣೆಗಳು ನಮ್ಮ ವಿಕೃತಿಯನ್ನು ತೋರಿಸುತ್ತಿವೆ ಎಂದು. ನಮ್ಮ ಮನಸ್ಸಿನಂತೆ ನಮ್ಮ ಭಾಷೆ ಅನ್ನೋದು ನಿಜ. TNS ಹೇಳೋ ಹಾಗೆ ನಮ್ಮ ನಡೆ-ನುಡಿ ನಮ್ಮ ಮುಖಕ್ಕೆ ಕನ್ನಡಿ ಹಿಡಿಯುತ್ತೆ.
ಇತ್ತೀಚಿನ ಒಳ್ಳೆ ಉದಾಹರಣೆ 'ಮುಕ್ತ'ದ ರಾಣೆ ಪಾತ್ರದ ಸಂಭಾಷಣೆಗಳು - ಮಚ್ಚು, ಲಾಂಗು ಇಲ್ಲದೇನೇ ಆ ಪಾತ್ರಕ್ಕೆ ತಕ್ಕಂತಹ ಡೈಲಾಗ್ ಗಳಿದ್ದವು ಮತ್ತು ಸಹಜವಾಗಿದ್ದವು. ರಾಣೆ ಮಚ್ಚು ಹಿಡಿಯದೇನೇ ಆ ಪಾತ್ರಕ್ಕೆ ಬೇಕಾದ ಗಟ್ಟಿತನ ತುಂಬಿದ್ರು.
ಹಳೇ ಕನ್ನಡ ಸಿನೆಮಾ ವಿಲನ್ ಗಳ ಭಾಷೆ ಕೇಳೋ ಮಟ್ಟದಲ್ಲಿದ್ದವು. ಈಗ ಬಿಡುಗಡೆ ಆಗೋ ಸಿನೆಮಾಗಳ ಪೋಸ್ಟರ್-ಗಳನ್ನೂ ನೋಡೋಕ್ ಆಗಲ್ಲ. ಟಿವಿ ಧಾರವಾಹಿಗಳ ವಿಷಯ ಅಂತೂ ಹೇಳದಿದ್ರೆ ಒಳ್ಳೇದು
ಇವು ವಯಸ್ಸಿನ ಭೇದವಿಲ್ಲದೇ, ಸೆಕ್ಸ್, ಕ್ರೌರ್ಯ, ವಂಚನೆ ಎಲ್ಲವನ್ನೂ prime-time ನಲ್ಲಿ ನೇರ ನಮ್ಮ ಮನೆಯಂಗಳಕ್ಕೆ ತಂದಿವೆ. ಪೋಲಿ ವಿದ್ಯೆ ಕಲಿಯಕ್ಕೆ ಮಕ್ಕಳು ಮನೆ ದಾಟಿ ಹೋಗ್ ಬೇಕಿಲ್ಲ (ನಮ್ಮ ಕಾಲದಂತೆ!)
ಉ: Re: ಇವರ ಮೌನ ಕನ್ನಡಕ್ಕೆ ಒಳಿತು ...
ಏನ್ರಿ ಅದು ಬ್ರಾಕೆಟ್ಟಿನಲ್ಲಿ ಹಾಕಿರುವುದು!