ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: ಕಿಲಾರದ ಕಿಲಾಡಿ ಜಲಯೋಧರು

ಸಂಪದ › Sampada Blogs › anupkumart ರವರ ಬ್ಲಾಗ್

(Technical article ಭಾಗ ೨): ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ

September 15, 2008 - 6:23pm — anupkumart

 

ಭಾಗ ೨

************

ಮಾಹಿತಿಕೇಂದ್ರ ಎಂದರೇನು?

ಶೇಖರಣ ಉಪಕರಣ ಹಾಗು ಸರ್ವರ್ ಗಳನ್ನು ಒಂದು ಕೋಣೆಯಲ್ಲಿ ಕೂಡಿಸಿಟ್ಟು ಅದಕ್ಕೆ ಮಾಹಿತಿಕೇಂದ್ರ (Datacenter) ಎಂದು ಕರೆಯುತ್ತಾರೆ. ಈ ನೂರಾರು ಶೇಖರಣ ಉಪಕರಣ ಹಾಗು ಸರ್ವರ್ ಗಳ ನಡುವೆ ಸಂಪರ್ಕ ಮಾರ್ಗ ನಿರ್ಮಿಸಲು ಅದೇ ಕೋಣೆಯಲ್ಲಿ ಮಾರ್ಗಸೂಚಕ (router)ಗಳನ್ನೂ ಅಳವಡಿಸಲಾಗುತ್ತದೆ. ಶೇಖರಣ ಉಪಕರಣ ಹಾಗು ಸರ್ವರ್ ಗಳನ್ನು ಈ ಮಾರ್ಗಸೂಚಕಗಳಿಗೆ ಜೋಡಿಸಲಾಗುತ್ತದೆ. ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಮಾಹಿತಿಕೇಂದ್ರವನ್ನು ಹೊಂದಿರುತ್ತದೆ. ಇಲ್ಲಿ ಸಂಸ್ಥೆಯ ವ್ಯವಹಾರಕ್ಕೆ ಬೇಕಾದ ಮಾಹಿತಿಯ ಶೇಖರಣೆ ಮತ್ತು ಪರಿಶ್ಕರಣೆ ಕಂಪ್ಯೂಟರ್ ಗಳಲ್ಲಿ ದಿನದ ೨೪ ಗಂಟೆ ನಡೆಯುತ್ತಲೇಯಿರುತ್ತದೆ !

ಇಎಂಸಿ2 (EMC2), ಸಿಸ್ಕೋ (Cisco), ಟೋಶಿಬಾ (Toshiba), ಎಚ್-ಪಿ (HP), ಐಬಿಎಂ (IBM) ಮುಂತಾದ ಕಂಪೆನಿಗಳು ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಹೆಸರುವಾಸಿ.

ಬ್ಯಾಂಕುಗಳಲ್ಲಿದ್ದ ಭೂತಾಕಾರದ ಲೆಕ್ಕ ಪುಸ್ತಕಗಳು ಇನ್ನಿಲ್ಲ. ನಮ್ಮ  ಉಳಿತಾಯ ಖಾತೆಯ ವಿವರಗಳನ್ನು ಬ್ಯಾಂಕಿನ ಮಾಹಿತಿಕೇಂದ್ರಗಳಲ್ಲಿಡಲಾಗುತ್ತದೆ. ರೈಲು-ಬಸ್ಸುಗಳ  ಟಿಕೆಟ್ ಗಳನ್ನು ಪಡೆಯಲು ಅಥವಾ ಕಾಯ್ದಿರಿಸಲು ಮಳಿಗೆಗಳಿಗೆ ಹೋಗಬೇಕಿಲ್ಲ. ಟಿಕೆಟ್ ವಿವರಗಳನ್ನು ಸಾರಿಗೆ ಸಂಸ್ಥೆಯ ಮಾಹಿತಿಕೇಂದ್ರಗಳಡಲಾಗುತ್ತದೆ. ಯಾವ ಸಮಯದಲ್ಲಾದರೂ ಪ್ರಪಂಚದ ಯಾವ ಊರಿನಿಂದಲೂ ನಾವು ಕುಳಿತಲ್ಲೇ ನಮ್ಮ ಮನೆಯ ಕಂಪ್ಯೂಟರ್ ಮೂಲಕ ಸಂಸ್ಥೆಯ ಮಾಹಿತಿಕೇಂದ್ರಗಳಲ್ಲಿರುವ ಸರ್ವರ್ ಗಳನ್ನು ಸಂಪರ್ಕಿಸಿ ನಮ್ಮ ಖಾತೆಯಲ್ಲಿರುವ ಹಣದ ಮಾಹಿತಿಯನ್ನು ಪಡೆಯಬಹುದು, ನಮ್ಮ ಟಿಕೆಟ್ ಗಳನ್ನು ಕಾಯ್ದಿರಿಸಬಹುದು.

 

ಇಂಟರ್ನೆಟ್ ಎಂದರೇನು?
ನಾವು ಕುಳಿತಲ್ಲೇ ಸಂಸ್ಥೆಯ ಸೌಲಭ್ಯವನ್ನು ಪಡೆಯುವುದಕ್ಕೆ ನಮ್ಮ ಕಂಪ್ಯೂಟರ್ ಗಳನ್ನೂ, ಸಂಸ್ಥೆಯು ತನ್ನ ಮಾಹಿತಿಕೇಂದ್ರದಲ್ಲಿರುವ ಸರ್ವರ್ ಗಳನ್ನೂ ಇಂಟರ್ನೆಟ್ ಎಂಬ ಸಂಪರ್ಕ್ ಜಾಲಕ್ಕೆ ಜೋಡಿಸಬೇಕಾಗುತ್ತದೆ. ನಾವು ಸಂಸ್ಥೆಗೆ ಹೋಗಿ ಮಾತನಾಡುವ ಅವಶ್ಯಕತೆಯಿಲ್ಲ!

ಉದಾಹರಣೆಗೆ: ಅಮೇರಿಕಾದಿಂದ ಮಗನು ಅಮ್ಮನಿಗೆ ಹಣವನ್ನು ಕಳುಹಿಸಲು ಭಾರತದಲ್ಲಿನ ಬ್ಯಾಂಕ್ ನ ಮತ್ತು ಅಮೇರಿಕಾದ ಬ್ಯಾಂಕ್ ನ ಮಾಹಿತಿಕೇಂದ್ರಗಳ ನಡುವೆ ಸಂಪರ್ಕ ಮಾರ್ಗ ನಿರ್ಮಿಸಬೇಕಾಗುತ್ತದೆ. ಚೀನಾದಲ್ಲಿರುವ ನಮ್ಮ ಮಿತ್ರನೊಡನೆ ಕಂಪ್ಯೂಟರ್ ಮೂಲಕ ಮಾತಾಡಲು ನಮ್ಮ ಕಂಪ್ಯೂಟರ್ ಮತ್ತು ನಮ್ಮ ಮಿತ್ರನ ಕಂಪ್ಯೂಟರ್ ಗಳ ನಡುವೆ ಸಂಪರ್ಕ ಮಾರ್ಗ ನಿರ್ಮಿಸಬೇಕಾಗುತ್ತದೆ.

ಹೀಗೆ ದೂರದ ಕಂಪ್ಯೂಟರ್, ಮಾಹಿತಿಕೇಂದ್ರಗಳ ನಡುವಿನ ಸಂಪರ್ಕ ಮಾರ್ಗವನ್ನು ಇಂಟರ್ನೆಟ್ ಎಂಬ ಸಂಪರ್ಕ ಜಾಲ ನಿರ್ಮಿಸಿಕೊಡುತ್ತದೆ.

 

ಇಂಟರ್ನೆಟ್ ನಲ್ಲಿ ಏಂಥಹ ಉಪಕರಣಗಳಿರುತ್ತವೆ?
ಇಂಟರ್ನೆಟ್ ನಲ್ಲಿ  ಸಂಪರ್ಕ ಕಲ್ಪಿಸಿಕೊಡುವ ಉಪಕರಣಗಳು (networking devices) ಇರುತ್ತವೆ. ಇದಕ್ಕೆ ಮಾರ್ಗಸೂಚಕ (router) ಎಂದು ಹೆಸರು. ಪ್ರಪಂಚದೆಲ್ಲೆಡೆ ಲಕ್ಷಾಂತರ ಮಾರ್ಗಸೂಚಕಗಳನ್ನು ಅಳವಡಿಸಲಾಗುತ್ತದೆ. ಒಂದು ಮಾರ್ಗಸೂಚಕದಿಂದ ಹತ್ತಿರದ ಮತ್ತೊಂದು ಮಾರ್ಗಸೂಚಕಕ್ಕೆ ತಂತಿ (link)ಗಳ ಮೂಲಕ ಮಾಹಿತಿ ರವಾನೆಯಾಗುತ್ತದೆ. ಹೀಗೆ ಪ್ರಪಂಚದ ಮಾರ್ಗಸೂಚಕಗಳು ಮತ್ತು ಅವುಗಳ ನಡುವಿನ ತಂತಿಗಳು ಒಟ್ಟಾರೆ ಸೇರಿ ಇಂಟರ್ನೆಟ್ ಆಗುತ್ತದೆ.

ಈ ಮಾರ್ಗಸೂಚಕಗಳೂ ಒಂದು ರೀತಿ ಕಂಪ್ಯೂಟರ್ ಗಳೇ. ಇವು ತಮ್ಮದೇ ಆದ ’ಸಂಪರ್ಕ ಕಲ್ಪಿಸಿಕೊಡುವ’ ಸಾಫ್ಟವೇರ್ ಮತ್ತು ಹಾರ್ಡ್ವೇರ್ (networking software & hardware) ಗಳನ್ನು ಹೊಂದಿರುತ್ತವೆ.

ಸಿಸ್ಕೋ (Cisco) ಎಂಬ ಸಂಸ್ಥೆ ಇಂಟರ್ನೆಟ್ ತಂತ್ರಜ್ನಾನದ ನಿಟ್ಟಿನ್ನಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ. ಇಂದು ಪ್ರಪಂಚದ ಇಂಟರ್ನೆಟ್ ನಲ್ಲಿ ಶೇಖಡ ೯೦ ರಷ್ಟು ಉಪಕರಣಗಳು ಸಿಸ್ಕೋ ಸಂಸ್ಥೆಯದ್ದು ! ಸಿಸ್ಕೋ ಸಂಸ್ಥೆಯ ಮುಖ್ಯಶಾಖೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದೆ. ಎರಡನೆಯ ಮುಖ್ಯಶಾಖೆ ಬೆಂಗಳೂರಿನಲ್ಲಿದೆ.

 

~.~
  • anupkumart ರವರ ಬ್ಲಾಗ್
  • Login or register to post comments
  • 136 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇಂಟರ್ನೆಟ್ ತಂತ್ರಜ್ಞಾನ....
  • (Technical article ಭಾಗ - ೩) ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ
  • (Technical article ಭಾಗ - ೧) ಇಂಟರ್ನೆಟ್ ತಂತ್ರಜ್ಞಾನ, ಒಂದು ನೋಟ
  • ಓ ನನ್ನ ಜೀವವೇ
  • ಕೆಂಡದ ದಾರಿಯ ಪಯಣ
Syndicate content

ಲೇಖಕರು

anupkumart's picture

ಪೂರ್ಣ ಹೆಸರು
ಆನುಪ್ ಮಲೆನಾಡು

ಪರಿಚಯ

"ಸಿಸ್ಕೋ ಸಿಸ್ಟಮ್ಸ್" ಸಂಸ್ಥೆಯಲ್ಲಿ ಸಾಫ್ಟವೇರ್ ಕೆಲಸ. ಬೆಂಗಳೂರಿನ ಜೆ.ಪಿ. ನಗರ ಬಡಾವಣೆಯಲ್ಲಿ ನಿವಾಸ. ಕನ್ನಡ ಸಂಸ್ಕೃತಿ ಬಗ್ಗೆ ಗೌರವ ಮತ್ತು ಕಾಳಜಿ. ಕುವೆಂಪು, ಕಾರಾಂತರ ಕೃತಿಗಳಲ್ಲಿ ಹೆಚ್ಚಿನ ಆಸಕ್ತಿ. ಮಲೆನಾಡಿನಲ್ಲಿ ಒಲವು. ಪ್ರಕೃತಿ ಆರಾಧನೆಯಲ್ಲಿ ನಂಬಿಕೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -137 ನಾವೇಕೆ ಸಂತೋಷವಾಗಿರೋದಿಲ್ಲ?
  • ಹಸಿರೇ ಉಸಿರು
  • ಪೇಪರ್ ಬೇಕೋ ? ಪ್ಲಾಸ್ಟಿಕ್ ಬೇಕೋ?
  • ಕೊಳಲ ನಾದದ ಗುಂಗು..
  • ಪೂರ್ಣಚಂದಿರ
  • ವಿಶ್ವದ ಅತಿದೊಡ್ಡ ಈಜುಕೊಳ
  • ಭಾಗೀರಥಿ ಮತ್ತು ಬಿಸ್ಲೇರಿ
  • ಇನ್ನೂ ಹೊಗೆಯಾಡುತ್ತಲೇ ಇದೆ!!
  • ಕವನಗಳು ಕುವೆಂಪು ಮತ್ತು ದ.ರಾ. ಬೇಂದ್ರೆ
  • ಅಪರೂಪದ ಸಿದ್ದಗಿರಿ ತೋರ್ದಾಣ (MUSEUM)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಹಂಸನಾದ
    January 10, 2009 - 5:32am
  • hamsanandi
    ಉ: ಹಂಸನಾದ
    January 10, 2009 - 4:57am
  • hamsanandi
    ಉ: ಹಂಸನಾದ
    January 10, 2009 - 4:56am
  • bhasip
    ಉ: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ, ವಂದೇ ಮಾತರಂ, ಗೀತೆ.
    January 10, 2009 - 4:36am
  • kalpana
    ಉ: ಕೊಳಲ ನಾದದ ಗುಂಗು..
    January 10, 2009 - 1:44am
  • Aravinda
    ಉ: ಕೇಳಲೂ ಬೇಡಿ... ಕೇಳಿಸ್ಲೂ ಬೇಡಿ... ಲೈಫ್ ಎಲ್ಲರದ್ದಾಗಿಸಿ...
    January 10, 2009 - 1:08am
  • rasikathe
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 1:06am
  • hamsanandi
    ಉ: ಹೊಸವರ್ಷಕ್ಕೊಂದಾದ್ರೂ ಬದ್ಲಾವಣೆ ಬೇಡ್ವಾ?
    January 10, 2009 - 12:11am
  • shaamala
    ಉ: ’ಅನ್ವೇಷಣೆ,’-ಹೀಗೊಂದು ಪದ್ಯವಿದೆ
    January 10, 2009 - 12:05am
  • ಗಣೇಶ
    ಉ: ಪೂರ್ಣಚಂದಿರ
    January 10, 2009 - 12:02am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 254 ಅತಿಥಿಗಳು ಆನ್ಲೈನ್ ಇರುವರು.


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator