ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಮೆಟ್ರೋ ರೈಲು ಸರಿ ಆದರೆ ಹಳಿ ತಪ್ಪು ದಾರಿ
ಬೆಂಗಳೂರಿನಲ್ಲಿ ದಿನನಿತ್ಯದ ಪ್ರಯಾಣದ ತೊಂದರೆಗಳಿಗೆ ಕಾರಣ
೧. ಸ್ವಂತ ವಾಹನ ಬಳಕೆ
೨. ITPL / Electronic City ಗಳಿಗೆ ಸಾರ್ವಜನಿಕ ಬಸ್ಸುಗಳ ಕೊರತೆ
೩. ಸಾರ್ವಜನಿಕ ಬಸ್ಸುಗಳ "ತರ್ಕಹೀನ" ದರ ಹೇರಿಕೆ (robbery by BMTC ಅನ್ನಬಹುದು)
೩,೦೦,೦೦೦ ಸಾಫ್ಟವೇರ್ ಇಂಜಿನಿಯರುಗಳಲ್ಲಿ ಬಹಳಷ್ಟು ಜನ ITPL / Electronic City ಕಡೆ ಹೋಗುವವರು. ಈ ಜಾಗಗಳಲ್ಲಿ ಒಂದು ದೊಡ್ಡ Bus Terminus ಇಲ್ಲ. ನಗರದ ಎಲ್ಲಾ / ಪ್ರಮುಖ ಭಾಗಗಳಿಂದ ಇಲ್ಲಿಗೆ ಬಸ್ಸಿಲ್ಲ.
ಇನ್ನು ಮೆಟ್ರೋ ಹಳಿ... ಈ ಕಡೆ ಹರಿದೇ ಬರುವ ಹಾಗೆ ಕಾಣುತ್ತಿಲ್ಲ... ಎಂದರೆ, ಮೆಟ್ರೋ ಸಾಫ್ಟವೇರ್ ಇಂಜಿನಿಯರುಗಳಿಗೆ ಸಿಗದ ಹೊರತು ತೊಂದರೆ ನಿವಾರಣೆಯಾಗುವುದಿಲ್ಲ. ಈಗ ಕಾಮಗಾರಿ ಶುರು ಆಗಿದೆ. ಇನ್ನು ಬೆಂಗಳೂರಿನಲ್ಲಿ ಅಡ್ಡಾಡುವುದು ನರಕ ಯಾತನೆ !!
ಒಟ್ಟಿನಲ್ಲಿ ಯಾರಿಗೋ ಕೋಟಿ ಕೋಟಿ ಹಣ ಬೇಕಿತ್ತು. ನಗರದ ಜನ-ಪಯಣವನ್ನು ವಿಚಾರ ಮಾಡದೆ ಪರಿಸ್ಥಿತಿಯನ್ನು ಸುಧಾರಿಸಲಾಗದ ಯತ್ನ ಇದು.....

- anupkumart ರವರ ಬ್ಲಾಗ್
- Login or register to post comments
- 559 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಮೆಟ್ರೋ ರೈಲು
ಎಂ ಜಿ ರಸ್ತೆ ಅಗೆಯೋಕೆ ಶುರು ಮಾಡಿದಂತರಲ್ಲಾ...ನೀವು ಹೇಳೋದು ಸರಿ...ಜನರಿನ್ನು ನರಕ ಯಾತನೆ ಅನುಭವಿಸಬೇಕಾಗುತ್ತದೆ. ಆದರೆ ಅದು ಅನಿವಾರ್ಯ ತಾನೇ? ಅಂದ ಹಾಗೆ ಮೆಟ್ರೋ ಇಲೆಕ್ಟ್ರಾನಿಕ್ಸ್ ಸಿಟಿ ಕಡೆ ಬರೋದಿಲ್ವೇ!
Re: ಮೆಟ್ರೋ ರೈಲು
ಕರೆಕ್ಟಾಗಿ ಹೇಳಿದ್ದೀರಾ ..ಇದೇ ಪ್ರಯೋಗವನ್ನು ಬೋಸ್ಟನ್ ನಗರದಲ್ಲಿ ಮಾಡಲಾಗಿತ್ತು.
ಆಮೇಲೆ ಅವರು ನಾವು ಮೇಲೆ ಮೆಟ್ರೋ ಹಾಕಬಾರದಾಗಿತ್ತು ಅ೦ದು ವಾಪಸ್ಸು ಕೆಳಗಡೆ
ಹಾಕಿದರು. ಅಲ್ಲಿಯ ಒಬ್ಬ ಹಿರಿಯ ಅಧಿಕಾರಿಗಳು ಬೆ೦ಗಳೂರಿಗೆ ಬ೦ದು ನೀವು ಹೀಗೆ ಮಾಡಬೇಡಿ
ಅ೦ದರು ನಮ್ಮವರು ಕೇಳಲಿಲ್ಲಾ.
ನಿಮ್ಮಲ್ಲಿ (US ನಲ್ಲಿ ಇರುವ ಸ೦ಪದ ಬಳಗದವರು ) ಯಾರಾದರೂ ಬೋಸ್ಟನ್ ನಗರದ ಮೆಟ್ರೋ ಕತೆಯನ್ನು ಸ೦ಪದದಲ್ಲಿ ಹಾಕಬೇಕು ಎ೦ದು ವಿನ೦ತಿ.
ನನಗೆ ಬ೦ದ Email :
In Dec we organised a lecture by Ken Kruckemeyer, former Commissioner (Tranport) of Boston Metro. Ken was incharge of pulling down several kms of the Boston Metro, which was elevated, and cutting open and pushing it down below. On top, where the elevated tracks rested, is one of the longest and most enchanting urban parks I have seen (runs for about 7-8 kms). While the tracks were elevated (for about two decades),the surrounding businesses lost heavily, and the entire area became depressed. When the tracks went down under, it sprung back to life and
is in fact prime residential property in Boston. Ken's talk is available on CD for free from CED (doccentre.org) Tel: CED Bangalore,#7, 8th Main , 3rd phase, Domlur 2nd Stage, Bangalore - 560071 Phone:
(080) 25353397 email: cedban@doccentre.net
ಪರ್ಯಾಯ ಮಾರ್ಗಗಳೂ :
http://www.adaptiveenvironments.org/index.php?option=Content&Itemid=14
http://www.auroville.org/thecity/planning_traffic.htm
http://www.ecoplan.org/wtpp/wt_index.htm
Re: ಮೆಟ್ರೋ ರೈಲು
ಮೆಟ್ರೋ ರೈಲಿನ ನಕಾಶೆಗಾಗಿ ಕ್ಲಿಕ್ಕಿಸಿ.ಮೆಟ್ರೋ ರೈಲಿನ ಅಂತರ್ಜಾಲ ತಾಣ :bmrc.co.in
Re: ಮೆಟ್ರೋ ರೈಲು
ಮೆಟ್ರೋ ಒಂದು "super flop show" ಆಗಲಿದೆ.
ನಗರದಲ್ಲಿ ದಿನ ಕೆಲಸಕ್ಕೆ ಹೋಗುವವರು, ಶಾಲೆಗೆ ಹೋಗುವವರು ಬಹಳ ಇದ್ದಾರೆ... MG ರಸ್ತೆ, ವಿಧಾನ ಸೌಧ, CMH ರಸ್ತೆ .. ಇಂತಹ ಶೋಕಿ ಜಾಗಗಳಿಗೆ ಹೋಗುವವರು ಎಂದಿಗೂ ಮೆಟ್ರೋ ಹತ್ತಲಾರರು.
ಬೇಕಾಗಿರುವುದು ITPL, Electronic City, Vidhaana soudha (ಸರಕಾರಿ ನೌಕರರಿಗೆ), Majestic ...etc...
Re: ಮೆಟ್ರೋ ರೈಲು flop ಆಗಲಿದೆಯೇ?
ಅಂತಹ ಋಣಾತ್ಮಕ ಚಿಂತನೆ ಅಗತ್ಯವಿಲ್ಲವೇನೋ? ಮಜೆಸ್ಟಿಕ್ ಕಡೆ ಮೆಟ್ರೋ ಬರುವಂತೆ ನಕಾಶೆ ತೋರಿಸುತ್ತದೆ. ದೆಹಲಿಯಲ್ಲಿ ಮೆಟ್ರೋ ಯಶಸ್ಸು ಗಳಿಸಿದಂತೆ ಇಲ್ಯಾಕೆ ಆಗಬಾರದು?
Re: ಮೆಟ್ರೋ ರೈಲು flop ಆಗಲಿದೆಯೇ?
ಈಗಾಗಲೇ ಕೆಲವು ಸಾಫ್ಟ್ವೇರ್ ಕಂಪೆನಿಗಳು ಸಾಕಷ್ಟು ಬಿಎಂಟಿಸಿ ಬಸ್ಸುಗಳನ್ನು ಗುತ್ತಿಗೆಗೆ ಪಡೆದುಕೊಂಡು, ಸಾಮಾನ್ಯ ಪ್ರಯಾಣಿಕರೆಲ್ಲ ಫುಟ್ಬೋರ್ಡ್ನಲ್ಲಿ ಒಂದು ಕಾಲಿನಲ್ಲಿ ನೇತಾಡುತ್ತಾ ಸಾಗುವ ಪೀಕ್ ಅವರ್ಗಳಲ್ಲಿ ಈ ಸಾಫ್ಟ್ವೇರ್ ಕಂಪೆನಿಗಳಿಗೆ ಒದಗಿಸಿರುವ ಬಸ್ಸುಗಳು ನಾಲ್ಕಾರು ಸೀಟುಗಳನ್ನಷ್ಟೇ ತುಂಬಿಕೊಂಡು ಹೋಗುವುದನ್ನು ನೋಡಿದರೆ ಯಾರಿಗಾದರೂ ಸಿಟ್ಟು ಬರುತ್ತದೆ. ಈಗಲೇ ಹೀಗಾದರೆ, ಇನ್ನು ಸಾಫ್ಟ್ವೇರ್ ಕಂಪೆನಿಗಳು ಇರುವೆಡೆ ಮೆಟ್ರೋ ರೈಲು ಬಂದರೆ ನಮ್ಮ ಘನ ಸರ್ಕಾರಗಳು ಲಾಭದ ಕಾರಣವೊಡ್ಡಿ ಅವುಗಳಲ್ಲಿ ಒಂದೆರಡು ರೈಲುಗಳನ್ನು ಸಾಫ್ಟ್ವೇರ್ ಕಂಪೆನಿಗಳಿಗೇ ಗುತ್ತಿಗೆ ನೀಡಿದರಂತೂ ಸಾಮಾನ್ಯ ಪ್ರಯಾಣಿಕನ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತೆಯೇ. ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಮೆಟ್ರೋ ರೈಲಿನ ಪ್ರಯೋಜನ ಸಿಗುವುದಿಲ್ಲ ಎಂದು ಚಿಂತಿಸಬೇಡಿ. ಮೆಟ್ರೋ ರೈಲು ಬಂದಾಗ ಅದನ್ನೇ ಕಾರಣವಾಗಿಸಿ ಇನ್ನಷ್ಟು ಬಿಎಂಟಿಸಿ ಬಸ್ಸುಗಳನ್ನು ನಮ್ಮ ಸಾರಿಗೆ ಸಂಸ್ಥೆ ಅವರಿಗೆ ಒದಗಿಸಿಕೊಡುತ್ತದೆ. ಆಗ ಒಬ್ಬ ಸಾಫ್ಟ್ವೇರ್ ಎಂಜಿನಿಯರ್ಗೆ ಒಂದು ಬಸ್ಸು ಎಂಬಂತೆ ಅವರು ಇನ್ನಷ್ಟು ಆರಾಮಾಗಿ ಓಡಾಡಬಹುದು.
Re: ಮೆಟ್ರೋ ರೈಲು ಸರಿ ಆದರೆ ಹಳಿ ತಪ್ಪು ದಾರಿ
ನನಗೆ ಹೊಸೂರು ರಸ್ತೆಬಗ್ಗೆ ಸ್ವಲ್ಪ ವಿಷಯ ವಿನಿಮಯಮಾಡಿಕೋಬೇಕು ಅನಿಸ್ತಾಇದೆ.
ನಾನು ಹೊಸೂರು ರೋಡಿನಲ್ಲಿ ತಿರುಗಾಡುವುದು ಹೆಚ್ಚು. ಬೊಮ್ಮನಹಳ್ಳಿಯ ಟ್ರಾಫಿಕ್ ಜಾಮ್ ನಲ್ಲಿ ದಿನವೂ ಓಡಾಡಿ ಸುಸ್ತಾಗಿದ್ದೇನೆ.
ಅದಕ್ಕೇನಾದರೂ ಮಾರ್ಗೋಪಾಯವಿದೆಯೇ ಎಂದು ಲೆಕ್ಕಾಚಾರ ಮಾಡ್ತಾ ಇದ್ದೆ. ಈಗ ಸರಕಾರ ಇದನ್ನು ಸರಿಪಡಿಸಲು 10 ಕಿ.ಮೀ ಉದ್ದದ ಫ್ಲೈಓವರ್ ಕಟ್ಟಿಸ್ತಿದೆ.
ಆದರೆ ಈ ಫ್ಲೈಓವರ್ ಒಂದು ಅನವಶ್ಯಕವೆಂದು ಹಾಗೂ ಕೇವಲ ದುಡ್ಡಿನಾಸೆಗೆ ಮಾಡುತ್ತಿರುವ ಪ್ರಾಜೆಕ್ಟ ಅನಿಸುವುದಿಲ್ಲವೇ?
ಈ ಕೆಳಗೆ ನಾನು ಕೊಟ್ಟಿರುವ ನೀಲಿಕ್ಷೆ ನೋಡಿ.
ಎಲೆಕ್ಟ್ರಾನಿಕ್ ಸಿಟಿ ಕಡೆ ಹೋಗುವಾಗ, ಬೊಮ್ಮನಹಳ್ಳಿ ಕ್ರಾಸ್ ನಲ್ಲೊಂದು ಬಲತಿರುವು ಇದೆ. ಇದರಿಂದಲೇ ಅಲ್ಲಿ 3ರಿಂದ 5 ಕಿ.ಮೀ. ಟ್ರಾಫಿಕ್ ಜಾಮ್ ಆಗ್ತಾಇರೋದು.
ಅಲ್ಲಿ ಬಲತಿರುವು ತೆಗೆದು, ಸಿಲ್ಕ್ ಬೋರ್ಡ್ ಫ್ಲೈಓವರ್ ಕೆಳಗಡೆಯಿಂದ ರಿಂಗ್ ರಸ್ತೆ ಮೂಲಕ ಹಾದು, ಮತ್ತೆ ಎಡಗಡೆಯೇ ತಿರುವು ಮಾಡಿದರೆ ಆಗ್ತಿತು.
ಅದಕ್ಕೆ ಹೆಚ್ಚೆಂದರೆ ರಿಂಗ್ ರಸ್ತೆ ಗೆ ಎಡಗಡೆ ಒಂದು ಅಗಲವಾದ (ಈಗಾಗಲೇ ಇರುವುದನ್ನು ಅಗಲಮಾಡಿದರೂ ಸರಿ) ರಸ್ತೆ ಸಾಕಾಗಿತ್ತು.
ಅದು ಬಿಟ್ಟು ಇಷ್ಟೊಂದು ದುಡ್ಡು ಖರ್ಚು ಮಾಡ್ತಿರೋದು ನನಗೇಕೋ ಇದೊಂದು ಹಗರಣವೇನೋ ಅನಿಸ್ತಾಇದೆ. ನಿಮಗೂ ಇದು ಸರಿ ಎನಿಸಿತೆ ಹೇಳಿ...
ಬೊಮ್ಮನಹಳ್ಳಿ ಕ್ರಾಸ್ ನಲ್ಲೊಂದು ಬಲತಿರುವು ಇದೆ.
ಅದು ಬೇಗೂರ್ಗೆ ಹೋಗೋ ದಾರಿ..!!!
======================================