ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಭಾರತದ ಸ್ವಾತಂತ್ರ್ಯ ಸಂಗ್ರಾಮದ ವಿಷಯವನ್ನು ಪ್ರಸ್ತಾಪಿಸುವಾಗಲೆಲ್ಲ ನಾವು ಮಾಡುವ ಹೆದ್ದಪ್ಪು ಎಂದರೆ ’ಸ್ವಾತಂತ್ರ್ಯ ಸಿಕ್ಕಿತು’ ಎಂದು ಹೇಳುವುದು. ನಾವು ತಿದ್ದಿಕೊಳ್ಳಲೇಬೇಕಾದ ಅಂಶ ಒಂದಿದೆ: ನಮಗೆ ಸ್ವಾತಂತ್ರ್ಯ ಸಿಕ್ಕಿದ್ದಲ್ಲ, ನಾವು ಸ್ವಾತಂತ್ರ್ಯವನ್ನು ಪಡೆದುಕೊಂಡೆವು.
ಹಾಗಾದರೆ ನಾವು ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ?
ಈ ಪ್ರಶ್ನೆಗೆ ಬಹುಪಾಲು ಜನರಿಂದ ನಮಗೆ ಸಿಗುವ ಉತ್ತರವು ಇತಿಹಾಸದ ಕಾಲಖಂಡದಲ್ಲಿ ಇಂದಿನಿಂದ ೧೫೦ ವರ್ಷಗಳನ್ನು ದಾಟಿ ಆಚೆ ಹೋಗಲಾರದು. [Jhansi LakshmiBhai, Kitturu Chennamma, Bhagat Singh, Gandhiji, Netaji, etc.. ನಮಗೆ ಚಿರಪರಿಚಿತವಾದ ಹೆಸರುಗಳು.]
ಇದಕ್ಕೆ ಕಾರಣ ನಮಗೆ ಸಂಕುಚಿತವಾಗಿ ೪೦ ಪುಠಗಳ ಪಠ್ಯಪುಸ್ತಕದಿಂದ ಬೋಧಿಸಿಲಾದ ಇತಿಹಾಸ ಆಗಿದ್ದರೂ ಬಹಳಷ್ಟುಮಟ್ಟಿಗೆ ರಾಜಕೀಯ ಕಾರಣವೂ ಹೌದು. [Dr SL Bhairappa ಅವರು ಹೇಳುವಂತೆ NCERT Text book committe was politically influenced]
ಈ ಪಠ್ಯಪುಸ್ತಕಗಳ ಪ್ರಕಾರ ಬ್ರಿಟೀಷರು, ಪೋರ್ಚುಗೀಸರು, ಡಚ್ಚರು ಮಾತ್ರ ಹಾವಳಿದಾರರು. ಹಾಗಾದರೆ ೧೦೦೦ ವರ್ಷಗಳ ಹಿಂದೆ ಬಂದ ಮುಘಲರು ನಮ್ಮ ಬೀಗರೆ?
[Unfortunately, our history text books call it 'The Advent of Mughals'. Advent ಎಂದರೆ ’ಆಗಮನ’ ಎಂದರ್ಥ. ಸಂದರ್ಭಕ್ಕೆ ಒಗ್ಗದ ಪದ ಹಾಗು ಶುದ್ಧ ಅಸತ್ಯ ... ]
ಸೂಕ್ಷ್ಮವಾಗಿ ನೋಡಿದರೆ, ನಾವು ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ ಎಂಬ ಪ್ರಶ್ನೆಗೆ ನಿಷ್ಪಕ್ಷಪಾತವಾದ ಉತ್ತರ: ’೧೦೦೦ ಕ್ಕೂ ಹೆಚ್ಚು ವರ್ಷಗಳ ಹಿಂದೆ; MUGHAL ದಾಳಿಯಿಂದ ಹಾಗು ಅದರ ನಂತರ ಸಂಭವಿಸಿದ EUROPEAN ದಾಳಿಯಿಂದ. ’
ಘಟಾನುಘಟಿಗಳಾದ ರಜಪುತರು ಮುಘಲರನ್ನು ಹೊರದಬ್ಬಲು ತಮ್ಮ ಪ್ರಾಣವನ್ನೇ ತ್ಯಜಿಸಿದ ಆ ದಿನಗಳು ಸ್ವಾತಂತ್ರ ಸಂಗ್ರಾಮದ ಪ್ರಾತ:ಕಾಲವೆಂದರೆ ತಪ್ಪಾಗಲಾರದು. ನಂತರ ಹುಟ್ಟಿದ ಮರಾಠರೂ ಅಷ್ಟೇ ತ್ಯಾಗಿಗಳು.
ಹಾಗಾಗಿ ನಾವು ತಿದ್ದಿಕೊಳ್ಳಬಹುದಾದ ಅಂಶವೆಂದರೆ "ನಮಗೆ ಸ್ವಾತಂತ್ರ ಸಿಕ್ಕಿದ್ದಲ್ಲ. ನಾವು ಸ್ವಾತಂತ್ರವನ್ನು ಪಡೆದುಕೊಂಡೆವು. ಅದಕ್ಕಾಗಿ ನಡೆದ ಸಂಗ್ರಾಮ ೧೦೦೦ ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಶುರುವಾದದ್ದು"
**************************************************************
ಡಾ ಜಿ.ಬಿ ಹರೀಶ ಅವರು ಬಸವನಗುಡಿಯ ಗೋಖಲೆ ಸಂಸ್ಥೆಯಲ್ಲಿ ಇಂದು ಸಂಜೆ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ನೀಡಿದ ಅಮೂಲ್ಯ ಮಾಹಿತಿಯಿಂದ ಈ ಸಂಚಿಕೆ ಬರೆಯಲು ಕಾರಣವಾಯಿತು.
***************************************************************

- anupkumart ರವರ ಬ್ಲಾಗ್
- Login or register to post comments
- 835 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಸೂಕ್ಷ್ಮವಾಗಿ ನೋಡಿದರೆ, ನಾವು ಸ್ವಾತಂತ್ರ್ಯ ಕಳೆದುಕೊಂಡದ್ದು ಯಾವಾಗ ಎಂಬ ಪ್ರಶ್ನೆಗೆ ನಿಷ್ಪಕ್ಷಪಾತವಾದ ಉತ್ತರ: ’೧೦೦೦ ಕ್ಕೂ ಹೆಚ್ಚು ವರ್ಷಗಳ ಹಿಂದೆ; MUGHAL ದಾಳಿಯಿಂದ ಹಾಗು ಅದರ ನಂತರ ಸಂಭವಿಸಿದ EUROPEAN ದಾಳಿಯಿಂದ.
ಮುಗಲರು ಬಂದಿದ್ದು ೧೫೦೦ ರ ಸುಮಾರಿನಲ್ಲಿ ಅಲ್ಲವೇ? ಗಜನಿ ಮಹಮ್ಮದನು ಬಂದಿದ್ದು ಸುಮಾರು ಕ್ರಿ.ಶ.೧೦೦೦ ಅಂತ ನೆನಪು.
-ಹಂಸಾನಂದಿ
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ನನ್ನ ಅನಿಸಿಕೆಯಲ್ಲಿ ನಮಗೆ ದಿಟವಾದ 'ಸ್ವತಂತ್ರ' ಕೊಟ್ಟವರು ಇಂಗ್ಲೀಶರೇ.
ಕೊನೆಗೂ ಈ ತಿಕ್ಕಲು-ಪುಕ್ಕಲು ದೊರೆಗಳಿಂದ ಬಿಡಿಸಿಕೊಂಡು ಜನರಾಡಳಿತಕ್ಕೆ ಬಂದೆವು. ಇಂಗ್ಲೀಶರು ಇಲ್ಲದಿದ್ದರೇ ನಾವು ಇಂದು ಟಿಪ್ಪು, ಮರಾಟರು, ರಾಜಪೂತರೋ, ಒಡೆಯರೂ ಮುಂತಾದ ದೊರೆಗಳ ಗುಲಾಮರಾಗಿರುತ್ತಿದ್ದೆವೆ. ಇಂಗ್ಲೀಶರು ಬಂದು ನಮಗೆಲ್ಲ ಹೊಸ ಹೊಸ ಸಂಗತಿಗಳನ್ನು ತಲೆಗೆ ತುಂಬಿ, ನಮ್ಮಲ್ಲಿದ್ದ ಎಷ್ಟೋ ಕೆಟ್ಟ ನಡುವಳಿಕೆಗಳನ್ನು ತಿದ್ದಿದವರು. ಇವರು ಕಾಪಾಡಿದಷ್ಟು ಪಳೆಯುಳಿಕೆಗಳನ್ನು ಯಾವ ದೊರೆಯೋ ಕಾಯ್ದಿಲ್ಲ.
"ಸ್ವಾತಂತ್ರ ಸಂಗ್ರಾಮದ ಪ್ರಾತ:ಕಾಲವೆಂದರೆ ತಪ್ಪಾಗಲಾರದು. ನಂತರ ಹುಟ್ಟಿದ ಮರಾಠರೂ ಅಷ್ಟೇ ತ್ಯಾಗಿಗಳು."
ಮತ್ತೊಂದು north-indian biased ಇತಿಹಾಸದ ಗೋಷ್ಠಿ. ಕನ್ನಡದವರು ಯಾರು ಇಂಗ್ಲೀಶರ ಇದುರು ಹೋರಾಡಲೇ ಇಲ್ಲವೇ? ಕಿತ್ತೂರಿನ ಚನ್ನಮ್ಮ, ಸಂಗೊಳ್ಳಿರಾಯಣ್ಣ, ಉಳ್ಳಾಲದ ಅಬ್ಬಕ್ಕ( ಪೋರ್ಚುಗೀಸರ ಇದಿರು), ಟಿಪ್ಟು, ಬೆಳವಾಡಿ ಮಲ್ಲಮ್ಮ( ಶಿವಾಜಿ ಇದಿರು) , ನಿಜಾಮ ಇದುರು ಹೋರಾಡಿ, ಅಡವಿಗೆ ಹೋಗಿ ಕನ್ನಡ ಕಲಿತ ಬೀದರ-ಕಲುಬುರ್ಗಿಯ ಕನ್ನಡಿಗರು, ಇವರೆಲ್ಲ ಬೈರಪ್ಪನವರ ಹೊತ್ತಗೆಯಲ್ಲಿ ಬಾರದೇ ಇರುವುದು ಯಾಕೋ ಕಾಣೆ! ಇವರ ಇತಿಹಾಸದ ಸತ್ಯಾನ್ವೇಷೆ ಬರೀ ಮರಾಟರು, ಮೊಘಲರು, ವಾರಣಾಸಿಯ ಸುತ್ತ ಇರುತ್ತದೆಯಲ್ಲ!
ನಮ್ಮ ದೇಶದ ಇತಿಹಾಸ ಅಂದ್ರೆ ಅದು ಬರೀ north ಇಂಡಿಯನ್ ದೊರೆಗಳ ಮೆರೆಸಾಟ. "ಜಾನ್ಸಿ ರಾಣಿ ಲಕ್ಷ್ಮೀ ಬಾಯಿ" ದಿಟವಾಗಿ ನಮ್ಮ ದೇಶಕ್ಕೆ ಹೋರಾಡಿದಳೇ? ಎಂದು ಶಂಕೆ ತೋರುವ ಹೊತ್ತಗೆಗಳಿವೆ. ಈ ರಜಪೂತರು, ಮರಾಟರು, ಇವರೆಲ್ಲ ಬಿಟ್ರೀಶರಿಂದ ಅಧಿಕಾರ ಕಸಿದುಕೊಂಡು ತಾವು ಆಳುವುದಷ್ಟೇ ಅವರ ಗುರಿಯಾಗಿತ್ತು.
1799ರಲ್ಲಿ ಮೈಸೂರನ್ನು ಒಡೆದು ಹಂಚಿಕೊಂಡ ಸಂಗತಿ ನೋಡಿರಿ. ಟಿಪ್ಪುವನ್ನು ಮಣಿಸಲು ಮರಾಟರು, ಹೈದರಾಬಾದಿನ ನಿಜಾಮರು, ಇಂಗ್ಲೀಶರು ಮುವ್ವರು ಒಟ್ಟುಗೂಡಿ ಟಿಪ್ಪುವನ್ನು ಸುತ್ತುವರಿದು ಸೋಲಿಸಿದರು. ಇದೆಂತಹ ಗೆಳೆತನ! ಇದರ ಜೊತೆ ಒಳಹುನ್ನಾರವಿತ್ತು. ಪೂರ್ಣಯ್ಯ ಮರಾಟಿ ಮೂಲದವನಂತೆ. ಟಿಪ್ಪು ಸತ್ತ ಬಳಿಕ ಹಿಂದೂ ದೇಶವೇ ಆದ ಮೈಸೂರನ್ನು ನಾಲ್ಕು ಹೋಳಾಗಿ ಒಡೆದು ಬಡಗದ ಮೂರು ಕಂಪಣಗಳನ್ನು ಮರಾಟರು, ಪೂರ್ವದ ಕಂಪಣಗಳನ್ನು ನಿಜಾಮರು, ಬಳ್ಳಾರಿ, ದಕ್ಷಿಣ ಕನ್ನಡ, ಕೃಷ್ಣಗಿರಿ, ನೀಲಗಿರಿಯ ಸುತ್ತ, ಕೊಯಮುತ್ತೂರನ್ನು ಇಂಗ್ಲೀಶರು ಇಟ್ಟುಕೊಂಡರು. ಇಲ್ಲಿ ಹೋದ ಕನ್ನಡ ಎಷ್ಟೋ ನೆಲ ಇಂದಿಗೂ ಕರ್ನಾಟಕಕ್ಕೆ ಸೇರಿಕೊಂಡಿಲ್ಲ!
ಈ ಮರಾಟರನ್ನು ನೋಡಿ, ಇತ್ತ ಟಿಪ್ಪು ಮಣಿಸಲು, ಇಂಗ್ಲೀಶರಿಗೆ ನೆರವಾಗಿ, ಅತ್ತ ಇಂಗ್ಲೀಶರ ಇದುರು ತಮ್ಮ ಆಳ್ವಿಕೆ ಉಳಿಸಿಕೊಳ್ಳಲೆಂದೇ ಬಿದ್ದವರು. ಕೊನೆಗೂ ಪೂರ್ತಿ ಇಂಗ್ಲೀಶರಿಗೆ ಸೋತು ಹೋದವರು.
ಆದರೆ ನಿಜಾಮ ಮತ್ತು ಒಡೆಯರು ಜಾಣತನದಿಂದ ತಮ್ಮ ತಮ್ಮ ನಾಡುಗಳನ್ನು ಉಳಿಸಿಕೊಂಡರು.
ನಮಗೆ ದಿಟವಾದ ಸ್ವತಂತ್ರ್‍ಯ ಚಳುವಳಿ ಶುರುವಾದದ್ದೇ ಕಾಂಗ್ರೆಸ್ಸಂತಾ ಒಂದು ಗುಂಪು, ಭಾರತ ಎಂಬ ಗುರಿ ಇಟ್ಟುಕೊಂಡು ಹೊರಹೊಮ್ಮಿದ ಮೇಲೆಯೇ.
ಅದರಲ್ಲೂ ಗಾಂಧೀ, ನೆಹರು, ಪಟೇಲರು ಇವರು ಮಂದಿಯನ್ನು ಒಗ್ಗೂಡಿಸಿ ಒಂದು ಹೊಸ ಬಗೆಯ ಹೋರಾಟವನ್ನು, ಮಾಮೂಲಿ ಮಂದಿಯಿಂದಲೇ ಮಾಡಿಸಿ, ಜಗಕ್ಕೆ ಮಾದರಿಯಾದರು. ಇವರ ನೆರವಿಗೆ ಯಾವ ಅರಸತನವೂ ಹೆಚ್ಚು ಬರಲಿಲ್ಲ. ಈ ಮುಂದಾಳುಗಳ personal ಬಾಳಲ್ಲಿರುವ ಹುಳುಕು ಎತ್ತಿ ತೋರಿ, ಇವರನ್ನು ಹಳಿಯುವ ಕೆಲಸವೂ ಇಂದು ನಡೆದೇ ಇದೆ.
ಏನೋ ಈ ಯಾರು ಹೇಳುವುದು ದಿಟವಾದ ಇತಿಹಾಸ ಅಂತ ಈಗ ಪೂರ ಗೊಂದಲವೆದ್ದಿದೆ.
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ನಮ್ಮ ರಾಜರು ಕಿತ್ತಾಡಿದ್ದು ನಿಜ. ಇಂಗ್ಲೀಷರು ನಮಗೆಲ್ಲಾ ಇಂಗ್ಲೀಷ್ ಕಲಿಸಿದ್ದು ನಿಜ. ಒಳ್ಳೆಯದೇನೋ ಆಯಿತು. ಆದರೆ ಅದರ ಹಿಂದೆ ಅವರ ದುರುದ್ದೇಶ ಏನಿದ್ದಿರಬಹುದು ಎಂದು ಯೋಚಿಸಲು ಆಗುತ್ತಿಲ್ಲ ನಮಗೆಲ್ಲ. ಅದಕ್ಕೆ ಕಾರಣ ನಮ್ಮ ಪಠ್ಯಪುಸ್ತಕಗಳೇ !
ನೀವು Lord Macualey ಆಗ ಮಾಡಿದ ಶಾಸನಗಳನ್ನು ಈಗ ಓದಿದರೆ ನಿಮಗೇ ತಿಲಿಯುತ್ತದೆ ಇಂಗ್ಲೀಷ್ರು ನಡೆಸಿದ ಸುಲಿಗೆ ಎಂಥದ್ದು ಎಂದು.
ಭಾರತಿಯರಿಗೆ ತಳಹದಿಯಾಗಿದ್ದ ಸಂಸ್ಕೃತಿಯನ್ನು, ಅದರ ಬೇರನ್ನು ಇಂಗ್ಲೀಷಿನ ಮೂಲಕ ಕಿತ್ತೊಗೆದರೆ ಮಾತ್ರ ಬ್ರಿಟೀಷರು ಇಲ್ಲಿ ಮೆರೆಯಬಹುದು - ಇದು ಅವರ ಉಪಾಯ ಆಗಿತ್ತು.
Education imparted at that time was complete in many aspects (Vedas, astology, Mathematics, etc..). ವೇದಗಳು ನಮ್ಮ ಸಂಸ್ಕೃತಿಯ ಬೆನ್ನೆಲುಬು. ವೇದಗಳು ಒಳಗೊಂದಿರುವ ಜ್ಞಾನ, ಸಾರುವ ತತ್ವಗಳು ಇವುಗಳನ್ನು ವಿಚಾರ ಮಾದಿದರೆ ನಮ್ಮ ಸಂಸ್ಕೃತಿಯಲ್ಲಿ ೩೦೦೦ ವರ್ಷಗಳ ಹಿಂದೆಯೇ ಅಷ್ಟು ಉತ್ಕೃಷ್ಟವಾದ ಚಿಂತನೆ ಆಗಿದೆ ಎಂದರ್ಥ ಅಲ್ಲವೆ? ಅದನ್ನು ಕೆಲವೇ ವರ್ಗಕ್ಕೆ ಮೀಸಲಿಟ್ಟಿದ್ದು ಶೋಷಣೀಯವೇ ಸರಿ.
The British could not withstand the effect of such education to Indians. To separate Indians from Indian Culture was the easiest way to gain power.
Mughals adopted violence as a means to destroy our roots. The Europeans used English.
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಸಾರ್ !
ನಾನು Macualey mintue ಅನ್ನು ಓದಿಕೊಂಡಿದ್ದೀನಿ.
ನಿಮ್ಮ ಮಾತಲ್ಲಿ ಕೆಲವು assumptionಗಳಿವೆ.
೧) "ವೇದಗಳು ನಮ್ಮ ಸಂಸ್ಕೃತಿಯ ಬೆನ್ನೆಲುಬು."
೨) The Europeans used English to destroy our roots.
ಇವನ್ನು ನಾನು ಒಪ್ಪಲ್ಲ.
ಕಾರಣಗಳು
"ವೇದಗಳು ನಮ್ಮ ಸಂಸ್ಕೃತಿಯ ಬೆನ್ನೆಲುಬು" ಅಲ್ಲ. ನಮ್ಮ ಕನ್ನಡದ ನಡಾವಳಿಯ ಬೆನ್ನೆಲುಬು ವೈದಿಕದ ಯಾವ ಹೊತ್ತಗೆಯೂ ಅಲ್ಲ. ಅದು ನಮ್ಮ ಕನ್ನಡ ನೆಲಸಿದ ವೈದಿಕ ಪಂಗಡದವರ ಸಂಸ್ಕೃತಿಯ ಬೆನ್ನಲುಬು. ಒಕ್ಕಲಿಗರು, ಲಿಂಗಾಯರು, ಕುರುಬರು, ಮುಂತಾದ ದೊಡ್ಡ ಎಣಿಕೆಯಲ್ಲಿರುವ ಪಂಗಡಗಳು ವೇದದ ಸಂಸ್ಕೃತಿಯನ್ನು ಪಾಲಿಸಲ್ಲ! ಇದು ಹೇಗೆ ಎಂದು ನೀವು ಹೋಗಿ ಅವರನ್ನು ಕೇಳಿರಿ. ಅವರ ಬಾಳಲ್ಲಿ ವೇದದ ಒಂದು ಮಂತ್ರವನ್ನು ಹೇಳ ನಡೆಸಿಹೋಗುವರು. ಅವರಲ್ಲಿ ವೇದದಲ್ಲಿ ಹೇಳಿ ಹದಿನಾರು ಕರ್ಮಗಳಿಲ್ಲ. ವೈದಿಕರಲ್ಲಿ ಶೂದ್ರನಿಗೂ ಚೌಲ, ಶ್ರಾದ್ಧಗಳುಂಟು. ಆದರೆ ಒಕ್ಕಲಿಗರಿಗೆ ಇವೆಲ್ಲ ಇಲ್ಲ.
ನಮ್ಮ ಕನ್ನಡ ಸಂಸ್ಕೃತಿಯ ಬೆನ್ನೆಲುಬು ನಮ್ಮ ಪಂಗಡದ ಆಚರಣೆಗಳು. ಇವು ಒಂದು ಹೊತ್ತಗೆಯಲ್ಲಿ ಕೂಡಿಟ್ಟಿಲ್ಲ ಎನ್ನುವುದು ಬೇರೆ ಮಾತು. ಆದರೆ ಹಲವು ಕನ್ನಡದ ಪಂಗಡಗಳು ವೇದವನ್ನು ಪಾಲಿಸಲ್ಲ!
೧ ಕನ್ನಡ ನೆಲದಲ್ಲಿ ಈಗ ದೊರೆತಿರುವ ಪುರಾವೆ, ಶಾಸನಗಳಂತೆ ಬಲು ಹಿಂದಿನ ಮತವೆಂದರೆ ಜಿನ ಮತ. ಇದೂ ವೇದದ ಮೇಲೆ ನಿಂತಿಲ್ಲ.
೨ ಲಿಂಗಾಯತರು ವೈದಿಕ ಮತದ ವರ್ಣ ಪದ್ದತಿಯನ್ನು ಒಪ್ಪದೇ, ವೇದವನ್ನು ಬಿಟ್ಟವರು.
೩ ಒಕ್ಕಲಿಗರಿಗೆ, ತಮ್ಮದೇ ಆದ ಸಂಪ್ರದಾಯಗಳಿವೆ. ಅವನ್ನು ಹೇಳುವ ಒಂದು ಹೊತ್ತಗೆ ಇಲ್ಲವಷ್ಟೆ.
೪ ಹೀಗೆ ದಿಟ ಕನ್ನಡದ ನಾಡಿಗರಲ್ಲಿ ಹೆಚ್ಚಿನವರು ವೇದ-ಸಂಸ್ಕೃತಿಗೆ ಒಳಪಟ್ಟವರಲ್ಲ. ಅವರನ್ನು ಒಳಪಡಿಸುತ್ತಿದ್ದಾರೆ ಈಗ ಅಷ್ಟೇ!
೨) The Europeans used English to destroy our roots.
ಮತ್ತೊಂದು ದೊಡ್ಡ ಸುಳ್ಳು. ಇಂಗ್ಲೀಶರು ಕನ್ನಡದ ಮೇಲೆ ಮಾಡಿದಷ್ಟು ಕೆಲಸವನ್ನು ಯಾವ ವೈದಿಕ-ದೊರೆಯೂ ಮಾಡಿಲ್ಲ. ಇಂಗ್ಲೀಶರು/ಕ್ರಿಚಿಯನ್ನರ ಕೊಡುಗೆ ಕನ್ನಡಕ್ಕೆ ಬಲೆ ಕಟ್ಟಲಾರದು. ಕನ್ನಡಕ್ಕೆ ಹೆಚ್ಚು ಕೊಡುಗೆ ಕೊಟ್ಟವರಲ್ಲಿ ಜಿನ ಮತದವರು ಮೊದಲಿಗರಾದರೆ ( ಕವಿರಾಜಮಾರ್ಗ, ಶಬ್ದಮಣಿದರ್ಪಣ, ಅಂಡಯ್ಯ, ಪಂಪ, ರನ್ನ, ಪೊನ್ನ ), ಇಂಗ್ಲೀಶರು ಕನ್ನಡಕ್ಕೆ ದೊಡ್ಡ ಕೊಡುಗೆ ಕೊಟ್ಟವರೇ ( ಕಿಟ್ಟಲ್, ರೈಸ್ ).
ಕೊಂಚ ಉಂಕಿಸಿ, ಇವೆಲ್ಲ ನಮ್ಮ ಕನ್ನಡ ಸಂಸ್ಕೃತಿಯ ಮೇಲೆ ಉತ್ತರ ಸಂಪ್ರದಾಯ ಹೇರಿಕೆಗಳ ಹುನ್ನಾರವಲ್ಲವೇ? Hindi imposition ಅಂತೆ. ಇಂದು ನಮ್ಮ ಮೇಲೆ 'Hindu' imposition ನಡೆಯುತ್ತಿದೆ.
'ವಿವಿಧತೆಯಲ್ಲಿ ಏಕತೆ' ಎನ್ನುವ ಮಾತು ಹಿಂದು ಧರ್ಮಕ್ಕೂ ಒಪ್ಪುವುದು. ಆದರೆ ಇಂದು ಏಕತೆಯಂದರೆ ಒಂದೇ ನುಡಿ, ನಡೆ ಮಾಡಹತ್ತಿದ್ದರೆ.
ಇಲ್ಲಿ ನಮ್ಮತನ ಕನ್ನಡತನವೇ ಹೊರತು, ಮರಾಟರ, ರಾಜಪೂತರ, ಸಂಪ್ರದಾಯವಲ್ಲ!
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ನನ್ನ ವಾದ ಕನ್ನಡದ ಬಗ್ಗೆ, ಬ್ರಾಹ್ಮಣ-ಲಿಂಗಾಯಿತ-ಗೌಡರ ಬಗ್ಗೆ ಅಲ್ಲ.
ವೇದ ಎಲ್ಲ ಮನುಜನಿಗೂ ಸಿಗಬೇಕಾದ ಜ್ಞಾನ. ಅದನ್ನು ದುರದೃಷ್ಟವಶಾತ್ ಆಗಿನ ಕಾಲದಲ್ಲಿ ಜಾತೀಕರಿಸಲಾಯಿತು. ಇದು ನಮ್ಮ ಸಂಸ್ಕೃತಿಯ ಮೇಲೆ ನಾವೇ ಎಸಗಿದ ದಾಳಿ.
ನಮ್ಮ ಸಂಸ್ಕೃತಿಯು ಉತ್ಕೃಷ್ಟ ತತ್ವಗಳನ್ನು ಒಳಗೊಂಡಿದೆ. ಅದನ್ನು ನಾವು ಯಾರೂ ತಿಳಿದಿಲ್ಲ, ಪಾಲಿಸುತ್ತಿಲ್ಲ. ವಚನಗಳು, ದಾಸರ ಪದಗಳು ಹೊಂದಿರುವ ತತ್ವಗಳನ್ನೇ ವೇದಗಳೂ ಹೇಳುತ್ತವೆ. ಆದರೆ ವೇದಗಳನ್ನು analyze ಮಾಡುವ ಜನರು ಈಗ ವಿರಳವಾಗಿದ್ದಾರೆ.
Our culture gives freedom to every person to find his god in his own way. ನಾವು ಯಾರನ್ನೂ ದಾಳಿ ಮಾಡಿ, ಹೊಡೆದು ಚಚ್ಚಿ, ನಮ್ಮ ವಿಚಾರಗಳನ್ನು ಅವರ ಮೇಲೆ ಬಲಾತ್ಕಾರದಿಂದ ಹೇರಲು ಯಾವತ್ತೂ ಮಾಡಿಲ್ಲ. ನಮ್ಮ ಸಂಸ್ಕೃತಿ ಉದ್ಭವವಾದದ್ದು ಒಬ್ಬನ ಪ್ರಚಾರ, ವಿಚಾರ, ತತ್ವಗಳ ಆಧಾರ ಮೇಲಲ್ಲ. ನೂರಾರು ವರ್ಷಗಳಿಂದ ತಿದ್ದುಪಡಿಯಾಗುತ್ತಾ ಬೆಳೆದು ಬಂದ ವಿಚಾರಗಳೇ ವೇದಗಳು. ಇದು ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಷಯ.
************************************************************************
ನಾನು ಹೇಳುತ್ತಿರುವುದು ಏನೆಂದರೆ ಯಾವತ್ತು ನಮ್ಮ ಸಂಸ್ಕೃತಿಯ ಮೇಲೆ ಪರಕೀಯರಿಂದ ದಾಳಿಯಾದವೋ, ಅಂದಿನಿಂದಲೇ ಸಂಗ್ರಾಮಗಳೂ ಶುರುವಾದವು.
ನಮ್ಮ ಮೇಲೆ ದಾಳಿ ಆಗಿದ್ದು ನಿಜ. ಅದರ ಹೊರೆಯನ್ನು ಕೇವಲ ಬ್ರಿಟೀಷರಿಗೆ ಮಾತ್ರ ಹೊರೆಸಿ, ಅದಕ್ಕಾದ ಸಂಗ್ರಾಮ ಕೇವಲ ೧೫೦ ವರ್ಷಗಳ ಹಿಂದೆ ನಡೆದದ್ದು ಎಂದು ಹೇಳುವವರು ಸಂಕುಚಿತವಾಗಿ ಯೋಚಿಸಿದ್ದಾರೆ ಎಂದು ಹೇಳ ಬಯಸುತ್ತೇನೆ.
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಮೇಲಿನ 'ನಮ್ಮ'ಗಳಲ್ಲಿ ನಾವು ಕನ್ನಡ ನೆಲದ ಬಲು ಮಂದಿ ಇಲ್ಲ!! ನೀವು 'ನಮ್ಮ' ಅನ್ನು ಬಲುವಾಗಿ ಹೇರುತ್ತಿರುವಿರಿ.
ಹೇರಿಕೆಯಿದು!
"ವೇದ ಎಲ್ಲ ಮನುಜನಿಗೂ ಸಿಗಬೇಕಾದ ಜ್ಞಾನ. ಅದನ್ನು ದುರದೃಷ್ಟವಶಾತ್ ಆಗಿನ ಕಾಲದಲ್ಲಿ ಜಾತೀಕರಿಸಲಾಯಿತು. ಇದು ನಮ್ಮ ಸಂಸ್ಕೃತಿಯ ಮೇಲೆ ನಾವೇ ಎಸಗಿದ ದಾಳಿ."
ನೀವು ವೇದಗಳನ್ನು ಪೂರ ಓದಿದ್ದೀರ? ವೇದ ಇಂತಿಂತವರು ಕಲಿಯಬಾರದು ಎಂಬ ಕಾಲವೂ ಇತ್ತು. ಇಂದು ಇದ್ದಕ್ಕಿದ್ದಂತೆ ಅದು 'ಎಲ್ಲರಿಗೂ ಸಿಗಬೇಕು'
ಅದನ್ನೇ ಎಷ್ಟು ಸರತಿ ಹೇಳಿದರೂ, ವೇದಗಳನ್ನು ನಂಬದ, ಬಿಟ್ಟ, ವೇದಗಳು ಸುಳ್ಳು ಎಂದ ಮತಗಳ ನಮ್ಮ ದೇಶದಲ್ಲಿವೆ.
ನೀವು ಇವನ್ನೆಲ್ಲ ಸಗಟಾಗಿ ಲೆಕ್ಕಕ್ಕೆ ತಗೆದು ಕೊಳ್ಳದೇ, ಹೇಳುದದನ್ನೇ ಹೇಳುತ್ತಿದ್ದೀರಿ.
"ನನ್ನ ವಾದ ಕನ್ನಡದ ಬಗ್ಗೆ, ಬ್ರಾಹ್ಮಣ-ಲಿಂಗಾಯಿತ-ಗೌಡರ ಬಗ್ಗೆ ಅಲ್ಲ."
ಅದೇ !! ನಮ್ಮ ಕನ್ನಡತನವನ್ನು ಕನ್ನಡ ನೆಲ ಜಾತಿಗಳ ಸಂಪ್ರದಾಯವನ್ನು ಲೆಕ್ಕಕ್ಕೆ ತಗೆದುಕೊಳ್ಳದೇ, 'ನಮ್ಮ' ಎಂದು ಹೇಳುತ್ತಿರುವಿರಿ. ನೀವು ಎಲ್ಲ ಕನ್ನಡಿಗರನ್ನು ವೈದಿಕರು ಎಂದು ಹೇಳುತ್ತಿರುವುದು ತಪ್ಪು. ವೈದಿಕ ಸಂಪ್ರದಾಯದವರು ಕನ್ನಡ ನೆಲೆದಲ್ಲಿ ಜಾಸ್ತಿಯಿಲ್ಲ.!!
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ನಿಮ್ಮ ವಾದ ಸ್ವಲ್ಪ ಮಟ್ಟಿಗೆ ಮಾತ್ರ ಸರಿಯಾಗಿದೆ. ಏಕೆಂದರೆ ನಾವೀಗ ಹೇಳುತ್ತಿರುವ ಅಥವಾ ಅಂದುಕೊಳ್ಳುತ್ತಿರುವ ಭಾರತ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ರೂಪು ಪಡೆದದ್ದು. ಇದಕ್ಕೂ ಮೊದಲು ಇದ್ದದ್ದು ಬಿಡಿ ಸಂಸ್ಥಾನಗಳು. ಅಥವಾ ಹಲವು ದೇಶಗಳು. ಇವೆಂದೂ ಒಂದಾಗಿ ಭಾರತವಾಗಿರಲಿಲ್ಲ. ಹರ್ಷವರ್ದನನೂ ದೇವೋತ್ಪಾಟನಾ ನಾಯಕನನ್ನು ಹೊಂದಿದ್ದಕ್ಕೂ ಇದೇ ಕಾರಣ. ಮರಾಠರು ಶೃಂಗೇರಿ ದೇವಸ್ಥಾನವನ್ನು ದೋಚಿದ್ದೂ ಇದೇ ಕಾರಣದಿಂದ. ಅಂದರೆ ಅವರೆಲ್ಲರೂ ಬೇರೆ ಬೇರೆಯೇ ದೇಶಗಳ ಕಲ್ಪನೆಯಲ್ಲಿದ್ದವರು. ಈ ಕಾಲಘಟ್ಟದಲ್ಲಿ ಎದುರಾದ ಪ್ರತಿರೋಧವನ್ನು ಪ್ರತ್ಯೇಕವಾಗಿಯೇ ನೋಡಲಾಯಿತು. ಆದರೆ ಈಸ್ಟ್ ಇಂಡಿಯಾ ಕಂಪೆನಿ ಒಂದರ್ಥದಲ್ಲಿ ಭಾರತವನ್ನು ಒಂದು ಗೂಡಿಸಿತು. ಇದಕ್ಕೆ ಒಂದು ಸಾಮುದಾಯಿಕವಾದ ಪ್ರತಿರೋಧ ಎದುರಾಯಿತು. ಇದಕ್ಕೆ ಮಾತ್ರ ಒಂದು ಪಾನ್ ಇಂಡಿಯನ್ ನೇಚರ್ ಇತ್ತು. ಆ ಕಾರಣದಿಂದಾಗಿ ಅದನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಯಿತು.
ಇನ್ನು ಭೈರಪ್ಪನವರ ಮಾತುಗಳು. ಎನ್ ಸಿಇ ಆರ್ ಟಿಯ ಪಠ್ಯ ಪುಸ್ತಕಗಳ ಮೇಲೆ ಎಡಪಂಥೀಯರ ಪ್ರಭಾವವಿದ್ದರೆ ಭೈರಪ್ಪನವರ ಮೇಲೆ ಸವರ್ಣೀಯ ಹಿಂದೂ ಐಡಿಯಾಲಜಿಯ ಪ್ರಭಾವವಿದೆ. ಇವುಗಳ ಮಧ್ಯೆ ಸತ್ಯವನ್ನು ನಾವೇ ಶೋಧಿಸಿಕೊಳ್ಳಬೇಕೇನೋ?
ರಮೇಶ್ ಸಮಗಾರ
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ವೇದದ ಕಾಲವನ್ನು ನಮ್ಮ ಸಮ್ಮ ಸಂಸ್ಕೃತಿಯ ಮಾನದಂಡವಾಗಿ ಏಕೆ ಪರಿಗಣಿಸಬೇಕು? ಅದನ್ನು ಮಾಡಿದವರು ಮನುಷ್ಯರೇ ತಾನೆ?
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಮರಾಟರು ತ್ಯಾಗಿಗಳೋ.!!
೧ ಶೃಂಗೇರಿ ಮಠಕ್ಕೆ ದಾಳಿಮಾಡಿ, ಅಲ್ಲಿನ ಶಾರದಾಂಬೆಯ ಮೂರ್ತಿ ಹೊಳೆಗೆ ಎಸೆದಿದ್ದು( ಶಂಕರ ಭಾಸ್ಕರ ),
೨ ಬೆಳವಾಡಿ ಮಲ್ಲಮ್ಮನ ಮೇಲೆ ದಾಳಿ ಮಾಡಿದ್ದು
೩ ಟಿಪ್ಪಿವನ್ನು ಸೋಲಿಸಲು ಇಂಗ್ಲೀಶರು, ನಿಜಾಮರ ಜೊತೆ ಕೈಸೇರಿಸಿದ್ದು. ಬಳಿಕ ಮೈಸೂರು ದೇಶದ ಮೂರು ಕಂಪಣಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದು. ಅಲ್ಲಿನ ಕನ್ನಡಿಗರ ಮೇಲೆ ಮರಾಟಿ ಹೇರಿದ್ದು.
ಇದು ಮರಾಟರ ತ್ಯಾಗಗಳು ಕನ್ನಡಿಗರಿಗಾಗಿ!
ಕನ್ನಡಿಗರಿಗೆ ನಮ್ಮ ಸುತ್ತಲ ಯಾರಿಂದಲೂ ಅನ್ಯಾಯವಾಗಿಯೇ ಇಲ್ಲವೇ? ಮರಾಟರು( ಕೊಲ್ಲಾಪುರದ, ಸೊಲ್ಲಪುರ, ಪಂಡರಾಪುರ, ಅಕ್ಕಲಕೋಟೆ), ನಿಜಾಮರು(ಅದೋನಿ, ರಾಯದುರ್ಗ), ಪೋರ್ಚುಗೀಸರು( ಗೋವೆದ ಕನ್ನಡ ನೆಲ ), ಮರಾಟ ನೆರವಿಂದ ಇಂಗ್ಲೀಶರು ಗೆದ್ದ ( ಬಡಗ-ಕನ್ನಡಿಗರ ನೀಲಗಿರಿ, ಕಾಸರಗೋಡು, ಕೃಷ್ಣಗಿರಿ, ಹೊಸೂರು) ಇವೆಲ್ಲ ಯಾಕೆ ಇಂದು ಕನ್ನಡ ರಾಜ್ಯದಲ್ಲಿಲ್ಲ?
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಸ್ವಾಮೀ ಅವರು ಹೇಳಿದ್ದು, ಹಿಂದೂಗಳ ಉಳಿವಿಗಾಗಿ ಚತ್ರಪತಿ ಶಿವಾಜಿ ಮಹಾರಾಜರ ಬಗ್ಗೆ.
ನೀವು ಹೇಳುತ್ತಿರುವುದು ಶಿವಾಜಿ ನಂತರದ ಮರಾಠರ ಬಗ್ಗೆ. ಅಷ್ಟಾಗಿ "ಆಗಿನ ಕಾಲದಲ್ಲಿ ಮರಾಠರಿಲ್ಲದಿದ್ದಲ್ಲಿ ಗಡಿನಾಡ ಕನ್ನಡಿಗರೆಲ್ಲರೂ ಮುಸಲ್ಮಾನರಾಗುತ್ತಿದ್ದರು" ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾಗಿದ್ದರೆ ಅಲ್ಲೆಲ್ಲ ಇಂದು ಕನ್ನಡವಲ್ಲ, ಉರ್ದೂ ಭಾಷೆ ಇರುತ್ತಿತ್ತು.ಉರ್ದೂವಿನ ಪ್ರಭಾವವನ್ನು ಈಗಲೂ ಬಿಜಾಪುರ, ಕಲಬುರ್ಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕಾಣಬಹುದು.
ನೀವು ಸಂದರ್ಭವನ್ನು ನೋಡಿ ಮಾತನಾಡಿದರೆ ಒಳ್ಳೆಯದು...
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಹೈದರಾಬಾದ್ ನಿಜಾಮನಡಿ ಇದ್ದವರೆಲ್ಲ ಮುಸಲ್ಮಾನರಾಗಿ ಬಿಟ್ಟಿದ್ದಾರೆ ಅಲ್ವಾ!!
ಬ್ರಿಟೀಶರಡಿ ಇದ್ದವರೆಲ್ಲ ಕ್ರಿಶ್ಚಿಯನ್ನಾಗಿ ಬಿಟ್ಟಿದ್ದಾರೆ ಅಲ್ವಾ!!
ಇದೇ ಮೊದಲ ಕಾಮೆಂಟಿನ ವಾದ!
ಶಿವಾಜಿ ಬೇರೆಯಂತೆ ಅವನ ಬಳಿಕ ಬಂದ ಮರಾಟರೇ ಬೇರೆಯಾ!!
ಆದರೂ ಶಿವಾಜಿ ಬೆಳವಾಡಿ ಮಲ್ಲಮ್ಮ ಮೇಲೇಕೆ ದಾಳಿಯಿಟ್ಟುದ್ದು? ಶಿವಾಜಿ ತಾಂಜಾವೂರಿಗೂ ದಾಳಿಯಿಟ್ಟಿದ್ದನಂತೆ.
ಶಿವಾಜಿ ಏನು ಹುಟ್ಟು ಕ್ಷತ್ರಿಯನೇ?
ಶಿವಾಜಿ ಮತ್ತು ಅವನ ಮರಾಟರಿಂದ ನಾವು ಕನ್ನಡಿಗರಿಗೆ ಬಲು ಅನ್ಯಾಯವಾಗಿರುವುದಕ್ಕೆ ಇತಿಹಾಸದಲ್ಲಿ ತಕ್ಕಮಟ್ಟಿಗೆ ಪುರಾವೆಯಿದೆ.
ಮಾತು ಬದಲಿಸಬೇಡಿ.!! ಅವರು ಶಿವಾಜಿ ಅಂತ ಹೇಳಿಲ್ಲ. 'ಮರಾಟರು ಮಹಾ ತ್ಯಾಗಿಗಳು' ಎಂದು ಹೇಳಿದ್ದಾರೆ.
ಮೊದಲ ಕಮೆಂಟಲ್ಲಿ ಬಲು ಹೇರಿಕೆಯ ಸಂಗತಿಗಳಿವೆ. ಇಡೀ ಭಾರತವೇ ವೈದಿಕ ಸಂಸ್ಕೃತಿಯಡಿ ಇದೆ ಅಂದರೆ, ಅದು ದಿಟವೇ?
"ನೀವು ಸಂದರ್ಭವನ್ನು ನೋಡಿ ಮಾತನಾಡಿದರೆ ಒಳ್ಳೆಯದು..."
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಮೈಸೂರ ಕನ್ನಡದಲ್ಲಿ ಸಂಸ್ಕೃತದ ಪ್ರಭಾವವಿಲ್ಲವೇ, ಧಾರವಾಡದ ಕನ್ನಡದಲ್ಲಿ ಮರಾಟಿ ಪ್ರಭಾವವಿಲ್ಲವೇ, ಬಳ್ಳಾರಿ ಕನ್ನಡದಲ್ಲಿ ತಲುಗು ಪ್ರಭಾವಿಲ್ಲವೇ?
ಅಕ್ಕಪಕ್ಕದ ನುಡಿಗಳಲ್ಲಿ ಇದು ಮಾಮೂಲಿ.
ಬಿಜಾಪುರ, ಕಲಬುರ್ಗಿ ಮತ್ತು ಬೀದರ ಕರ್ನಾಟಕಕ್ಕೆ ವಾಪಸ್ಸು ಬಂತು. ಅದನ್ನು ಆಂಧ್ರರೂ ಮತ್ತೇ ಕೇಳುತ್ತಿಲ್ಲವಲ್ಲ!
ಆದರೆ ಸೊಲ್ಲಪುರ, ಅಕ್ಕಲಕೋಟೆ, ಪಂಡರಾಪುರ ಇವನ್ನು ಮರಾಟಿ ಕೊಟ್ಟುಬಿಟ್ಟಾರ? ಬೆಳಗಾವಿ ವಿಷಯದಲ್ಲಿ ಶಿವಸೇನೆ ಏನು ಹೇಳುವುದು?
ಬಿಳಗಾವಿ ಸಂಗತಿಯನ್ನು ಕೆದಕೀ ಕೆದಕೀ ರಣ ಮಾಡುತ್ತಿರುವವರು, ಕನ್ನಡಿಗರೋ, ಮರಾಟಿಗರೋ!! ಅವರಿಗೆ ಕಾರವಾರವೂ ಬೇಕಂತೆ!!
ಹೀಗೆ ಮಾತು ಎತ್ತಲಿಂದೆತ್ತಲೋ ಹೋಗುವುದು.!!
ಆದಕ್ಕೆ ಮೊದಲ ಕಮೆಂಟಿ ಅಂಟಿ ಮಾತಾಡೋಣ.!!
ನಾನು ಕನ್ನಡ ನೆಲದ ದೃಷ್ಟಿಯಲ್ಲಿ, ಇರುವ ಸತ್ಯಾಂಶಗಳನ್ನು ಇಟ್ಟಿದ್ದೇನೆ. ಅದರಲ್ಲಿ ಸುಳ್ಳಿದ್ದರೆ ಹೇಳಿ.! ಮಾತನ್ನು ಮತ್ತೆಲ್ಲಿಗೋ ಎಳೆಯಬೇಡಿರಿ.
ನನ್ನ ಮೂಲ ಪ್ರಶ್ನೆ, ಮರಾಟರ ಮತ್ತು ಮೊಗಲರ ನಡುವಿನ ಹಗೆಗೂ ಕನ್ನಡ ನೆಲಕ್ಕೂ ಹೇಗೆ ಇಷ್ಟೊಂದು ನಂಟು ಬೆಸೆಯುತ್ತಿದ್ದಾರೆ? ಕನ್ನಡಿಗರಿಗೆ ಮರಾಟರೂ ಹಗೆಗಳಾಗಿದ್ದರಲ್ಲ!! ಮರಾಟರಿಂದ( ಅದು ಶಿವಾಜಿಯೋ, ಅವನ ಬಳಿಕ ಬಂದವರೋ) ನಾವು ಕನ್ನಡಿಗರಿಗೆ ಅನ್ಯಾಯವಾಗಿರುವುದು ನಿಶ್ಚಿತವಾಗಿದೆಯಲ್ಲ! ಇದಕ್ಕೆ ಪುರಾವೆಯೂ ಇದೆಯಲ್ಲ!!
ಕನ್ನಡಿಗನಿಗೆ ಹೇಗೆ ಮರಾಟರು ಮಹಾತ್ಯಾಗಿಗಳು, ಗುಣವಂತರು, ಆಗುವರು?
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಅದೇನೊ ನೂರಕ್ಕೆ ನೂರು ಪಾಲು ದಿಟ. ಒಂದುವೇಳೆ ಶಿವಾಜಿಯವರು ಇಲ್ಲದಿದ್ದಿದ್ದರೆ, ಆ ಮತಾಂಧ, ಔರಂಗಝೇಬ್ ದಕ್ಷಿಣದ ಎಲ್ಲರನ್ನೂ ಅಹ್ಮದ್, ಮೊಹ್ಮದ್ ಮಾಡ್ತಿದ್ದ. ಸದ್ಯ. ವೀರ ಶಿವಾಜಿಯನ್ನು ನಾವು ಎಂದೆಂದಿಗೂ ಮರೆಯುವಂತಿಲ್ಲ. ಹಾಗೆ ಗಟ್ಟಿಮನಸ್ಸಿನಿಂದ, ವೀರಾವೇಶದಿಂದ ಹೊಡೆದಾಡಿ ಅವರ ಆಕ್ರಮಣವನ್ನು ತಡೆದದ್ದು ಒಂದು ಚಾರಿತ್ರ್ಯಿಕ ಘಟನೆ !
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ವೆಂಕಟೇಶ ಸಾರ್
ಅವರಂಗಜೇಬ ಮತಾಂಧ ಸರಿ.. ಶಿವಾಜಿ ಮತಾಂದನಲ್ವೋ?
ಶಿವಾಜಿ ಕೂಡ ಕಟ್ಟರ್ ಹಿಂದೂವಾದಿ. ಅವನೇನು ನಯವಾದಿಯಲ್ಲ, ಉಗ್ರವಾದಿಯೇ...!!
ನೀವ್ ಮುಸ್ಲಿಂ ಆಗಿದ್ರೆ ನಿಮಗೆ ಶಿವಾಜಿ, ಅವರಂಗಜೇಬಂಗಿಂತ ಕ್ರೂರಿ ಅಲ್ವ!
ನೀವೂ ಬರೀ ಗೋಡೆ ಒಂದು ಅಂಚು ನೋಡಿ, ಇನ್ನೊಂದು ನಿಮಗೆ ಕಾಣಿಸ್ತಿಲ್ಲ; ಆದುದರಿಂದ ನೀವೂ ಮತಾಂಧರೇ!! ಈ ಬರಹದ ಬರೆಗಾರನೂ ಕೂಡ.. ಹಾಗೆ ನಾನೂ ನನ್ನೊಂದು ಮತಕ್ಕೆ ಒತ್ತು ಕೊಡುವುದರಿಂದ ನಾನೂ ..
[ ಅದನ್ನ ಬಿಡೋದು ಕಶ್ಟ.. ಹುಟ್ಟಿನಿಂದ ಹಸಿರು ಬಣ್ಣ, ಕೆಂಪು ಬಣ್ಣ ಎಂಬ ಬಣ್ಣದ ಬೇರೆತನ ತಿಳಿಯಲಾರದ ಬಣ್ಣಗುರುಡನಿಗೆ ಹೇಗೆ ಹಸಿರು, ಕೆಂಪು ಯಾವುದೆಂದು ಎಂದು ತಿಳಿಸೋದು?
ಹಾಗೆ ನಮಗೂ ಕೆಲವು ಬಣ್ಣಗಳು ಕಾಣಿಸಲ್ಲ.. ಹುಟ್ಟುಗುರುಡು, ಮತಗುರುಡು, ಬಣ್ಣಗುರುಡು ]
ಇದೇ ಸತ್ಯ, ಇದೇ ಸರಿ ಅಂತ ವಾದಿಸೋ ಮಂದಿಗೆ ಕೆಲವೇ ಅಂದ್ರೆ ಕೆಲವೇ ಬಣ್ಣಗಳು ಕಾಣಿಸೋದು ಅವರಿಗೆ ಕಪ್ಪುಬಿಳಿ ಕಾಣಬೋದು, ಆದ್ರೆ ಚಂಗುಲಾಬಿ ಬಣ್ಣ, ಕಾಣಿಸದೇ ಅದೂ ಕಪ್ಪಗೇ ಕಾಣಬೋದು.
"ಮತ"=ಅಭಿಪ್ರಾಯ, ವೋಟು
ಒಂದೇ ಅನಿಸಿಕೆಯ ಒಂದೇ ಮುಸುಡಿ ಕಂಡು, ಮಿಕ್ಕವನ್ನು ಕಾಣದೇ ಹೋಗೋದೇ ಮತಾಂಧತನ!
ಜಗದಲ್ಲಿ ೧೦೦% ಮನದಿಂದ ಕುರುಡರಲ್ಲದವರಿಲ್ಲ.
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
"ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?"
ಈ ಪ್ರಶ್ನೆಗೆ ಕನ್ನಡ ನೆಲದ ಉತ್ತರ.
ಅದು 1947ರ ವರಗೂ ಒಂದು ಸ್ವತಂತ್ರ ದೇಶವಾಗಿ 'ಮೈಸೂರು ಸಂಸ್ಥಾನವಾಗಿತ್ತು', ಈಗ ಅದು ಸ್ವತಂತ್ರವಾಗಿಲ್ಲ, ಬದಲಿಗೆ Indian Unionಗೆ ಸೇರಿಕೊಂಡಿದೆ.
ಕನ್ನಡ ನೆಲದ ಸ್ವತಂತ್ರ ಹೋಗಿದ್ದು,
೧) ರಕ್ಕಸ ತಂಗಡಿ ಬವರದಲ್ಲಿ
೨) 1799 ರಲ್ಲಿ ಮೈಸೂರು ದೇಶವನ್ನು ಮರಾಟರು, ನಿಜಾಮರು, ಇಂಗ್ಲೀಶರು ಹಂಚಿಕೊಂಡಾಗ.
ಆದರೂ ಉಳಿದ ಕನ್ನಡ ನೆಲವು 1947ರ ವರೆಗೂ ಒಂದು ಸ್ವತಂತ್ರ ದೇಶವೇ ಆಗಿತ್ತು. ನಮ್ಮ ಮಹಾರಾಜರು ಸಹಿ ಹಾಕದೇ ಇದ್ದರೆ ನಾವು ಇಂದಿಗೂ ಸ್ವತಂತ್ರವಾಗಿಯೇ ಉಳಿಯುತ್ತಿದ್ದೆವು. ಎಲ್ಲದಕ್ಕೂ 'ಕೇಂದ್ರ' ಎಂಬ ಡೆಲ್ಲಿ ಸರಕಾರಕ್ಕೆ ಕೈಚಾಚಬೇಕಾಗಿರಲಿಲ್ಲ. ನಿಜಾಮರ ಮೇಲೆ ಹೋದಂದೆ ಮೈಸೂರ ಮೇಲೆ ದಾಳಿ ಮಾಡುವ ಸಾಹಸ ಭಾರತದ ಪಡೆ ಮಾಡುತ್ತಿರಲಿಲ್ಲ. ಮೈಸೂರು ನಿಜಾಮರಿಗಿಂತ ಹೆಚ್ಚು ದುಡ್ಡಿನಲ್ಲಿ, ಸೈನ್ಯದಲ್ಲಿ ಗಟ್ಟಿ ದೇಶವಾಗಿತ್ತು.
ಆದರೂ ನಾವು ನಮ್ಮ ಮಹಾರಾಜ ಮಾತಿಗೆ ಒಪ್ಪಿ Indian Union ಖುಷಿಯಾಗೇ ಸೇರಿಕೊಂಡಿದ್ದೇವೆ. ಇದು ನಮ್ಮ ನಮ್ಮ ಮೇಲೆ ತಮ್ಮ
ಹಿಂದಿ, ಹಿಂದಿ ಸಂಸ್ಕೃತಿಯ ಹೇರಿಕೆಗೆ ಕೊಟ್ಟ ಅನುವೆಂದು ಅಂದುಕೊಂಡ ಅದು ದೊಡ್ಡ ತಪ್ಪು.!!
ಬಂಗಾಳದೇಶ ಯಾಕೆ ಪಾಕಿಸ್ತಾನದಿಂದ ಒಡೆಯಿತು? ಇದನ್ನು ನೋಡಿದರೆ ತಿಳಿಯುವುದು.
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಮೊಗಲರು ಕನ್ನಡ ನೆಲಕ್ಕೆ ಬರಲಿಲ್ಲ. ಇರಲಿ..
ಹೀಗೆ ನೋಡಿಕೊಂಡು ಹೋದರೆ,
ಪುಲಿಕೇಶಿಯನ್ನು ಸೋಲಿಸಿ ಪಲ್ಲವರು( ತಮಿಳರು ) ನಮ್ಮ ನೆಂಟರೇ?
ಪುಲಿಕೇಶಿಯ ಮೇಲೆ ದಾಳಿಯಿಟ್ಟು ಸೋತು ಹೋದ ಹರ್ಷವರ್ದನ ನಮ್ಮ ಬೀಗನೇ?
ಆಮೇಲೆ ರಾಷ್ಟ್ರಕೂಟರನ್ನು ಸೋಲಿಸಿದವರ ನಮ್ಮ ನೆಂಟರೇ?
ಹೀಗೆ ಎಲ್ಲಿಯ ತನಕ ಇತಿಹಾಸವನ್ನು ಹೆದಕುವುದು? ಇದಕ್ಕೆ ಕೊನೆಯುಂಟೇ?
ಆರ್ಯರ ವಲಸೆ ಎಂದು ಮಾತು ತಗೆದೆರೇ, ದೊಡ್ಡ ಗದ್ದಲವೇ ಆಗುವುದು!
ಇತಿಹಾಸವನ್ನು ಸರಿಪಡಿಸುವ ಆತುರದಲ್ಲಿ ನಮ್ಮ ಭವಿಷ್ಯವನ್ನು ಹಾಳುಗೆಡುವತ್ತಿದ್ದೇವೆ!
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಪುನ: ನೀವು ಅದೇ ರಾಗ ಹಾಡುತ್ತಿದ್ದೀರಿ. ಇದು ಕನ್ನಡ/ಕರ್ನಾಟಕದ ವಿಷಯ ಅಲ್ಲವೇ ಅಲ್ಲ. ವಿಷಯ ಪ್ರಸ್ತಾಪಿಸುವ ಮೊದಲು ಸನ್ನಿವೇಶವನ್ನು ತಿಳಿದುಕೊಂಡರೆ ಚರ್ಚೆ ಸುಗಮವಾಗಿ ಸಾಗುತ್ತದೆ.
ಭಾರತ ಎಂಬ ಖಂಡದ ಬಗ್ಗೆ ನಿಮಗೆ ಅರಿವುಂಟೆ? ಪಾಶ್ಚಾತ್ಯರಿಗಿಂತ ಮೊದಲು ಮುಘಲರು ಅದನ್ನು ದಾಳಿ ಮಾಡಿದ್ದು ನಿಮಗೆ ಗೊತ್ತುಂಟೆ? That was the time when we lost freedom of everything ! ಇದು ಈ ಚರ್ಚೆಯ ವಿಷಯ. ನಿಮ್ಮ ಪಾಂಡಿತ್ಯವನ್ನು ಮೆಚ್ಚುತ್ತೇನೆ. ಆದರೆ ಸಂದರ್ಭ ಮತ್ತು ಸನ್ನಿವೇಶ ಸೂಕ್ತವಲ್ಲ.
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಓಹೋ..
ನಿಮಗೆ ಕನ್ನಡ ನೆಲ ಗೊತ್ತಾ? ಅದಕ್ಕೆ ನೀವು ಹೊಗಳಿದ ಮರಾಟರು, ದಾಳಿಯಿಟ್ಟದ್ದು ಗೊತ್ತ?
ಸ್ವಾಮಿ ನೀವು ಕನ್ನಡದಲ್ಲಿ ಕನ್ನಡಿಗರ ಜೊತೆ ಮಾತಾಡುತ್ತಿರುವುದು? ಕನ್ನಡಿಗರಿಗೆ ಅನ್ಯಾಯವೆಸಗಿದ ಮರಾಟರು ನಮಗೆ ಹೇಗೆ ಮಾದರಿ?
ಮುಘಲರ ಮುನ್ನ ನಮ್ಮ ಪುಲಿಕೇಶಿಯನ್ನು ಹರ್ಷವರ್ದನ ಮುತ್ತಿದ್ದ ಗೊತ್ತ?ಇವನು ತಾನು ಆರ್ಯನೆಂದು, ಪುಲಿಕೇಶ ರಾಕ್ಷಸನೆಂದು ಹಳಿದಿದ್ದ ಗೊತ್ತ?
ಕನ್ನಡ ನೆಲ 1947 ವರಗೂ ಸ್ವತಂತ್ರವಾಗಿಯೇ ಇತ್ತು.
ಅನುಪ್, ನೀವು ’ನಾವು’ ಎನ್ವ ಪದವನ್ನು ಸರಿಯಾಗಿ ಬಳಸುತ್ತಿಲ್ಲ. ಕನ್ನಡಿಗರು ಯಾವ ಕನ್ನಡ ಕಬ್ಬದಲ್ಲೂ ಭಾರತದವರು ಎಂದು ಹೇಳಿಕೊಂಡಿಲ್ಲ. ಇದು ಬರೀ ೧೮೦೦ ಬಳಿಕದ ಮಾತು.
ವಯ್ಬವರ ಸಂದರ್ಭ ಮತ್ತು ಸನ್ನಿವೇಶ ಎರಡನ್ನು ಸೂಕ್ತವಾಗಿ ಹೊಂದಿದೆ.
ನೀವು "ಮರಾಟರು ಮಹಾ ತ್ಯಾಗಿಗಳು, ನಾವೆಲ್ಲ ವೈದಿಕರು" ಈ ಮಾತುಗಳು ಕನ್ನಡಿಗರಿಗೆ ಹೊಂದುವುದಿಲ್ಲ.
ನಿಮ್ಮ ಮೊದಲ ಪೂರ ಬರಹ ನಮ್ಮ(ಕನ್ನಡಿಗರ) ಮೇಲೇ ಹೇರಿಕೆ!
ಒಂದು ವೇಳೆ ನೀವು ’ಕನ್ನಡಿಗರನ್ನು’ ಹೊರತು ಪಡಿಸಿ, ’ನಾವು/ನಮ್ಮ’ ಪದಗಳನ್ನು ಬಳಸಿದ್ದಲ್ಲಿ, ಆಗ ಒಪ್ಪಬಹುದು!
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಭಾರತದ ಸ್ವಾತಂತ್ರ್ಯ ಅಂತೀರ....ಕರ್ನಾಟಕದ ವಿಶ್ಯ ಅಲ್ಲ ಅಂತೀರ? ಕರ್ನಾಟಕ ಭಾರತದಲ್ಲಿಲ್ಲವೇ ??
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಇದೇ ವಿಷಯದ ಬಗೀ ನಾನು ಓದುವಾಗಲೆ ಯೋಚಿಸಿದ್ದೆ. ಈ ಪರಕೀಯರು ಘಜ್ನಿ ಮೊಹ್ಮ್ದ್ ಘೊರಿ ಮೊಹಮದ್ ಮತ್ತು ಆ ಥರಹದ ಅನೇಕ ದೊರೆಗಳು ನಮ್ಮನ್ನು ಆಳಿದಾಗ ಯಾಕೆ ಈ ಸ್ವತಂತ್ರವೆಂದ ತಕ್ಷಣಾ ಬ್ರಿಟಿಶರು ಮತ್ತು ಗಾಂಧೀಜಿ ಮಾತ್ರ ನೆನಪಾಗುತ್ತರೆ ಎಂದು ನಾನು ನಮ್ಮ ಮಿಸ್‌ನ ಕೇಳಿಯೂ ಇದ್ದೆ . ಅವರಿಗೂ ಅದೇ ಪ್ರಶ್ನೆ ಕಾಡುತಿತ್ತಂತೆ ಆದರೆ ನಮ್ಮ ಪಠ್ಯ ಪುಸ್ತಕಗಳು ರಚಿತವಾಗಿದ್ದು ಸರ್ಕಾರದ ಅಡಿಯಲ್ಲಿದ್ದ ಯಾವುದೋ ಸಮಿತಿ ಅವರ ಮರ್ಜಿಗೆ ತಕ್ಕ ಹಾಗೆ ಬರೆಯಲೇ ಬೇಕಿತ್ತು . ಸರ್ಕಾರ ಒಂದು ವರ್ಗವನ್ನು ಮೆಚ್ಚಿಸಿ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಈ ತಂತ್ರ ಮಾಡುತ್ತಿವೆ.
ನಿಮ್ಮ ವಿಚಾರ ಧಾರೆ ಅದ್ಭುತವಾಗಿದೆ. ಹಾಗು ಸಾಂಧರ್ಭಿಕವಾಗಿದೆ
ಆದರೆ
) ಶತಕೋಟಿ ಮೀರಿದ ಜನರಲ್ಲಿ ನಾವು ಒಂದು ಹನಿ ಎಂಬ ವಿಚಾರವನ್ನು ತಿಳಿದಿರಬೇಕು.
ನಾವು ಎಂದರೆ ಬರೀ ಕರ್ನಾಟಕವಲ್ಲ . ಭಾರತದ ಅಥವ (ಕೇವಲ ಇಂಡಿಯಾದ ,,,ಕೆಲವರ ಪ್ರಕಾರ
ಕರ್ನಾಟಕವೇ ಬೇರೆ ಭಾರತಕ್ಕೆ ಸಂಭಂದ ಪಟ್ಟಿದ್ದಿಲ್ಲವೆಂದರೆ ನಮಗೂ ಪ್ರತ್ಯೇಕ ದೇಶ ಬೇಕೆಂದು ಕೂಗಿಡುತ್ತಿರುವ ತಮಿಳಿಗಿಗಾಗಲಿ ಯಾವ ವ್ಯತ್ಯಾಸವಿರುವುದಿಲ್ಲ.
ಹಾಗಾದರೂ ಆ ಕೂಗಿಗೆ ಎಲ್ಲಾ ಕನ್ನಡಿಗರ ಬೆಂಬಲವೂ ಇರುವುದಿಲ್ಲ.
ಕನ್ನಡದ ಮೇಲೆ ಪ್ರೀತಿ, ಭಕ್ತಿ ಇರಲಿ . ಆದರೆ ದುರಭಿಮಾನ ಬೇಡ
ರೂಪ
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
"ನಾವು ಎಂದರೆ ಬರೀ ಕರ್ನಾಟಕವಲ್ಲ . ಭಾರತದ ಅಥವ (ಕೇವಲ ಇಂಡಿಯಾದ ,,,ಕೆಲವರ ಪ್ರಕಾರ ) ಶತಕೋಟಿ ಮೀರಿದ ಜನರಲ್ಲಿ ನಾವು ಒಂದು ಹನಿ ಎಂಬ ವಿಚಾರವನ್ನು ತಿಳಿದಿರಬೇಕು"
ಯಾಕೆ? ನೀವ್ ಹೇಳ್ತೀರ ಅಂತ್ಲಾ?
ಕೆಲವರ ಪ್ರಕಾರವಾದರೂ ಅದೊಂದು ಅನಿಸಿಕೆ ಅದಕ್ಕೆ ಒಪ್ಪತಕ್ಕ ವಾದವಿದೆಯಲ್ಲ...
ಮೊಗಲರು, ಬ್ರಟೀಶರು ಬರುವ ತನಕ ಎಲ್ಲಿತ್ತು ಇಂಡಿಯ, ಈ ಬಾರತ, ಹಿಂದೂಸ್ತಾನ? ಪುರಾಣದ ಬುರುಡೆಗಳಲ್ಲಿ?
"ಕನ್ನಡದ ಮೇಲೆ ಪ್ರೀತಿ, ಭಕ್ತಿ ಇರಲಿ . ಆದರೆ ದುರಭಿಮಾನ ಬೇಡ"
ಯಾವುದು ದುರಭಿಮಾನ ಸದಭಿಮಾನ ಅನ್ನೋ ಪಟ್ಟ ಕೊಡಕ್ಕೆ ನೀವ್ಯಾರು?
ಅಸಮ ದೇಶವು ಇಂಡಿಯಕ್ಕೆ ಬ್ರಿಟೀಶರು ಎರಡನೇ ಜಗದ ವಾರಲ್ಲಿ ಕಬಳಿಸಿದ್ದು...
ಶ್ರೀಲಂಕ, ನೇಪಾಳ, ಬೂತಾನ ಯಾಕೆ ಇಂಡಿಯದಲ್ಲಿಲ್ಲ?
ಕಾಶ್ಮೀರ ದೇಶವನ್ನು ಪಾಕಿಸ್ತಾನ ಮತ್ತು ಬಾರತ ದೇಶಗಳು ಕಬಳಿಸಿ ಹಂಚಿಕೊಂಡಿವೆ[ ಈ ಅನಿಸಿಕೆ ಎಶ್ಟು ಸರಿ.. ಇದನ್ನೊಬ್ಬ ಕಾಶ್ಮೀರಿಗನೇ ಹೇಳಿರೋದು ]
"ಕರ್ನಾಟಕವೇ ಬೇರೆ ಭಾರತಕ್ಕೆ ಸಂಭಂದ ಪಟ್ಟಿದ್ದಿಲ್ಲವೆಂದರೆ ನಮಗೂ ಪ್ರತ್ಯೇಕ ದೇಶ ಬೇಕೆಂದು ಕೂಗಿಡುತ್ತಿರುವ ತಮಿಳಿಗಿಗಾಗಲಿ ಯಾವ ವ್ಯತ್ಯಾಸವಿರುವುದಿಲ್ಲ."
ಇದು ಜನಾಂಗೀಯ ಅವಹೇಳಣ. ತಮಿಳು ಜನಾಂಗವನ್ನು ಕೀಳುನೋಡಿದ್ದೀರಿ.. ನಿಮ್ಮದು ಕೀಳುಬುದ್ದಿ.. ಅಂತ ಸಲೀಸಾಗಿ ಒಬ್ಬ ತಮಿಳ ಅನ್ನಬೊದು.. ತಮಿಳರು ಮನುಶ್ಯರಲ್ವ? ಇಲ್ಲಿ ’ತಮಿಳಿಗ’ ಅಂದ್ರೇ ಏನೋ ಕೆಟ್ಟವನು ಎಂಬ ಜನಾಂಗ ನಿಂದನೆ ಇದೆ.
ಇವರೂ ಆರ್.ಆರ್.ಪಾಟೀಲರ ದಾರಿ ಹಿಡಿದಿದ್ದಾರೆ.
"ಹಾಗಾದರೂ ಆ ಕೂಗಿಗೆ ಎಲ್ಲಾ ಕನ್ನಡಿಗರ ಬೆಂಬಲವೂ ಇರುವುದಿಲ್ಲ."
ಒಂದೆಡೆ ಕೆಲವರು ಇದ್ದಾರೆ ಅಂತೀರಿ.. ಇಲ್ಲೀ ಎಲ್ಲಾ ಅಂತೀರಿ.. ಇವೊತ್ತು ಹೊಗೇನಕಲ್ ಚಳುವಳಿಯಲ್ಲಿ ಎಲ್ಲಾ ಕನ್ನಡಿಗರಿಲ್ಲ .ನೋಡಿ, ಮಂಗಳೂರು ಕಡೆ ಎಂದು ಇಂತಹ ಚಳುವಳಿಗಳಿಗೆ ಬೆಂಬಲ ಇರಲ್ಲ. ಹಾಗಂತ ಅವರು ಸರಿಯಾ? ಅವರು ಬರಲ್ಲ ಅಂತ ಯಾರು ಅಳ್ತಾರೆ? ಯಾರು ಕರೇತಾರೆ? ನಮ್ ನೀರು ಅಂತ ಹೋರಾಡೋರು ಹೋರಾಡ್ತಾರೆ.. ನೀವ್ ತಡೀತೀರ?
ಕನ್ನಡವೇ ಜಾತಿ, ಧರ್ಮ ಎಲ್ಲ ... ಅನ್ನೋದ್ರಲ್ಲಿ ಏನೂ ತಪ್ಪಿಲ್ಲ..
ಕನ್ನಡದೇಶ ಇತ್ತು ಅದನ್ನು ಬ್ರಿಟೀಶರ ಇಂಡಿಯ ಕಬಳಿಸಿತು ಅಂತ ತರ್ಕಬದ್ದವಾಗೇ ಹೇಳಬೋದು.. ೨೦೦BCಇಂದ೧೯೪೭AD(ಮಯ್ಸೂರುದೇಶ) ತನಕ ೨೦೦೦ಕ್ಕೂ ಹೆಚ್ಚು ವರ್ಶ ಸ್ವತಂತ್ರ ಕನ್ನಡಿಗರ ಕನ್ನಡದೇಶವಾಗಿದ್ದ ಕನ್ನಡದೇಶ ಇದ್ದಕ್ಕಿದ್ದ ಹಾಗೆ ೧೯೪೭ ಇಂಡಿಯಿಗರ ಇಂಡಿಯ ಹೇಗೆ? ಯಾವ ೧೮೦೦AD ಹಿಂದಿನ ಕನ್ನಡ ಕಾವ್ಯದಲ್ಲಿ ಶಾಸನದಲ್ಲಿ ಕನ್ನಡಿಗರ ಬಾರತ ಎಂಬ ದೇಶದ ಪ್ರಜೆ ಎಂದು ಹೇಳಿದೆ.
ಅದು ಹಾಳಾಗಲೀ ಮಹಾಭಾರತದಲ್ಲೇ ಕರ್ನಾಟ, ಆಂದ್ರ, ದ್ರಾವಿಡರು ಬೇರೆ ಅಂತ ಇದೆಯಲ್ಲ..!!
ಇವೊತ್ತು ಟಿಬೆಟ್ಟನ್ನ ಜೀಣಾ ೧೯೫೯ AD ಕಬಳಿಸಿತು, ಹಾಗಂತ ಟಿಬೆಟಿಗರು ತಾವೂ ಮೂಲದಿಂದ ಚೀನಾದೋರು ಎಂದು ತಿಳಿದಿರಬೇಕಾ?
ನೀವು ಹೇಳಿದೆಲ್ಲ ಸತ್ಯಗಳಲ್ಲ, ಕೇವಲ ಅಭಿಪ್ರಾಯ ಒಬ್ಬರು.. ಹಲರದು ಎಂದು ತಿಳಿಯಣ. ಹಾಗೆ ನನ್ನದು ಕೂಡ ಒಂದು ಅಬಿಪ್ರಾಯ
ನನ್ ಅನಿಸಿಕೆ ಓದಿ ಮಂದಿ
೧) ಕನ್ನಡ ಬಗ್ಗೆ fundamentalist, ಬಾರತ ದ್ರೋಹಿ
೨) ಹುಚ್ಚು
೩) ಹುಟ್ಟುಕನ್ನಡಪ್ರೇಮಿ
೪) ಕನ್ನಡ ರಾಶ್ಟ್ರೀಯತೆ
ಇನ್ನು ಹಲವು ರೀತಿ ಹೇಳಿದ್ದಾರೆ..
ಹಾಗೆ ನಿಮ್ಮ ಮಾತನ್ನು ನೋಡಿ..
೧) ಒಬ್ಬಳು ಹೆಂಗಸಿನ ಮಾತು ಎಂಬ ಉಡಾಪೆ. ನೀವು ತಮಿಳರನ್ನು ಕಂಡಂತೆ
೨) ಸ್ವಂತಿಕೆ ಎಂದು ನಾಲ್ಕು ಮಂದಿ ಮುಂದೆ ಮೆರೆಯುವವ ತೆವಲು
೩) ದೇಶಪ್ರೇಮಿ
೪) ಭಾರತ ರಾಶ್ಟ್ರೀಯತೆ
ಎಂದು ಹೇಳುವವರು
ಎಲ್ಲವೂ ಅನಿಸಿಕೆಗಳು.. ಎಲ್ಲದರ ಇವು ಸತ್ಯ.. ಎಲ್ಲವನ್ನು ಒಪ್ಪದಿದ್ರೇನು.. ಅವರ ಇರುವು ಹೋಗಲ್ಲ.. !!
ಅನಿಸಿಕೆಗಳನ್ನು ’ದುರಭಿಮಾನ’ ಎಂಬ ಲೇಬಲ್ ಅಂಟಿಸಬೇಡಿರಿ.. ಅದೂ ಒನ್ ತೆರ ಮೊಂಡು... facisim. ಅನಿಸಿಕೆ ಸಹಿಸದ ಸಿಟ್ಟು...!![ ನಾನು ತೋರಿಸುತ್ತಿರಬೋದೀಗ. ]
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಒಬ್ಬಳು ಹೆಂಗಸಿನ ಮಾತು ಎಂಬ ಉಡಾಪೆ.
ಈ ಮಾತನ್ನು ನೀವು ಹೇಳುತ್ತಿರುವುದನ್ನು ನೋಡಿ ಆಶ್ಛರ್ಯವಾಗಿದೆ ಹಿಂದೊಂದು ಬರಹದ ಕಾಮೆಂಟನಲ್ಲಿ ಹೆಣ್ಣಿನ ಬಗ್ಗೆ ಅಭಿಮಾನದ ಮಾತನ್ನು ಬರೆದವರು ನೀವೇನ ಅಂತ.
ಅಥವ ನೀವೆ ಬೇರೆ ಎಂದು ತೋರಿಸಿಕೊಳ್ಳಲು ಈ ರೀತಿ ಹೇಳಿಕೆ ಮಾಡುತ್ತೀರೇನೋ
ಅನಿಸಿಕೆಗಳು ಸರಿ ಆದರೆ ಅವು ಮತ್ತೊಬ್ಬರ ಮೇಲೆ ಹೇರಿಕೆಯಾಗಬಾರದಷ್ಟೆ(ಅದು ನಿಮ್ಮದೇ ಪದ)
ಸ್ವಂತಿಕೆ ಎಂಬುದು ಎಲ್ಲರಿಗೂ ಇದ್ದಿದ್ದೇ ಅದನ್ನು ತೋರಿಸುವ ಹಂಬಲ (ನಿಮ್ಮ ಭಾಷೆಯಲ್ಲಿ ತೆವಲು) ಎಲ್ಲರಿಗೂ ಇರುವುದೇ. ಹಾಗಿಲ್ಲದಿದ್ದಲಿ ಯಾವೊಬ್ಬ ಪ್ರತಿಭಾವಂತನೂ ಬೆಳಕಿಗೆ ಬರುತ್ತಿರಲಿಲ್ಲ . ಅಥವ ಹಾಗೆ ಖ್ಯಾತರಾದ ಬರಹಗಾರರೂ , ಚಿತ್ರನಟರೂ , ಮತ್ತಿತರರೂ , ಬ್ಲಾಗ ಬರೆಯುವವರು ಅಷ್ಟೇಕೆ ನೀವು ಎಲ್ಲರೂ ಅದೇ ತೆವಲು ಇರುವವರೂ ಎಂದಾಗುತ್ತೆ
ಮತ್ತೆ ಇಲ್ಲಿನವು ಅನಿಸಿಕೆಗಳಷ್ಟೆ ಯಾವವೂ ವ್ಯಕ್ತಿಗತವಲ್ಲ
ಹಾಗೊ ನನ್ನ ಇಲ್ಲಿನ ಮಾತುಗಳು ಪ್ರಸ್ತುತ ಪರಿಸ್ತಿತಿಗೆ ಸೇರಿದ್ದವು. ಈಗಿನಂತೆ ಕರ್ನಾಟಕ ಭಾರತಕ್ಕೆ ಸೇರಿದೆ
ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ರೂಪ
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ನನಗೆ ’ಹೆಣ್ಣಿನ ಮಾತೆಂಬ’ ಉಡಾಪೆ ಇದ್ರೆ ನಿಮ್ಮ ಕಮೆಂಟುಗಳಿಗೆ ಕಮೆಂಟುತ್ತಿದ್ನಾ?
=============================
ತೆವಲು ಅಂದ್ರೆ
http://dsal.uchicago.edu/cgi-bin/philologic/getobject.pl?c.1:1:845.burro...
31 Ka. tevalu, tevulu an itching desire, an inordinate addiction. Tu. tevalů desire, wish, attachment. Te. tivuru to desire; tivuṭa desire. DED(S) 2823.
ತಡೆಯಲಾರದ ಹಂಬಲ. ತುಳವಲ್ಲಿ ಬರೀ ಹಂಬಲ, ಆಸೆ, ಅಕ್ಕರೆ
ನನ್ನ ಕನ್ನಡ ಬಾಶೆಯಲ್ಲಿ ತೆವಲು, ಅಂದ್ರೆ ಒಂದು ಬಗೆಯ ಹಂಬಲವೇ.. ನಿಮ್ಮದು ಯಾವ ಬಾಶೇ?
==================
ನಿಮ್ಮ ಮಾತುಗಳಿ ಈಗಿನ ಹೊಗೇನಕಲ್ ಪರಿಸ್ತಿತಿಯಲ್ಲಿ ಹೇಗೆ ಪ್ರಸ್ತುತ.. ನಿಮ್ಮ ಬಾರತದ( ನಮ್ಮ ಇಂಡಿಯ) ಕೇಂದ್ರ ಸರಕಾರ ಕನ್ನಡಿಗರಿಗೆ ಏನು ಒಳಿತು ಈ ಪ್ರಸ್ತುತ ಪರಿಸ್ತಿತಿಯಲ್ಲಿ ಮಾಡಿತು.
=========
"ಜೈ ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ"
ಇದು ನಿಮ್ಮ ಸೊಂತದಲ್ಲ.. ಕುವೆಂಪು ಅವರದು.. ಆದರೆ ಅದರ ಅರ್ತ ನಮ್ಮ ಸೊಂತದ್ದು..
ಇಲ್ಲಿ ಬರುವ ತನುಜಾತಾ/ತೆ
೧) ತನುವನ್ನು ಜಾತಮಾಡಿದವಳು = ಬಾರತ ಎಂಬ ಜನನಿಯ ತನುವನ್ನು ಹುಟ್ಟಿಸಿದವಳು.. ಕನ್ನಡ ತಾಯಿ-ಬಾರತ ಮಗಳು... ಬಾರತದ ಒಬ್ಬಳು ತಾಯಿ ಕನ್ನಡ.
೨) ತನುವಿಂದ ಜಾತವಾದವಳು. ಒಂದು ತನುವಿಂದ ಹುಟ್ಟಿಬಂದವಳಿ. ತಾಯಿ-ಮಗಳು
೩) ತನುವಿಗೆ ಜಾತವಾದವಳು.. ಇಂಡಿಯಕ್ಕಾಗಿ ಹುಟ್ಟಿದವಳು. ಇಂಡಿಯ ಇರಲು ಕನ್ನಡ ಇದೆ.
೪)ತನುವಿನ ಜಾತವಾದವಳು.. ಇಂಡಿಯದ ಜಾತ/ಹುಟ್ಟು ಆದವಳು
೫) ತನುವಿನಲ್ಲಿ ಜಾತವಾದವಳು...
೬) ತನುವಿಂತೆ ಹುಟ್ಟಿದವಳು... [ ಚಂದ್ರಮುಖ ಅಂದ್ರೆ ಚಂದ್ರನಿಂದ ಬಂದ ಮುಖ ಅಂತ ಅಲ್ಲ ]
ಹೀಗೆ ತೆರ ತೆರ ಅರ್ತ ತೆಗೆಬೋದು... ನಾನು ಮೊದಲೆಯದನ್ನೇ ನಂಬೋದು..!! ಅದು ಸರಿಕೂಡ
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಕ್ಶಮಿಸಿ ಈಗಿನ ಚರ್ಚೆಯಲ್ಲಿ ಹೊಗೇನಕಲ್ ಇರಲಿಲ್ಲ. ಸುಮ್ಮನೇ ವಾದ ಮಾಡಿ ಗೆಲ್ಲಬೇಕೆಂಬ ತೆವಲಿನಿಂದ ಬರೆದಂತಿದೆ.
ನಮ್ಮ ಗೀತೆಯನ್ನು ಯಾರು ಬರೆದಿದ್ದಾರೆ ಎಂಬುದ್ನ್ನು ತಮ್ಮಿಂದ ತಿಳಿಯುವ ಅಗತ್ಯವಿಲ್ಲ ಹಾಗು ಅದು ನನ್ನ ಸ್ವಂತದ್ದೆಂದು ಹೇಳಲಿಲ್ಲ
ಇನ್ನೂ ಅವರವರ ಭಾವಕ್ಕೆ ಅವರವರ ರೀತಿಗೆ, ಮನಸ್ಟಿತಿಗೆ ಅರ್ಥೈಸುವ ಹಕ್ಕು ಎಲ್ಲರಿಗೂ ಇದೆ.
ಯಾವ ಸರ್ಕಾರವೂ ಏನು ಮಾಡುವುದಿಲ್ಲ
ನಮ್ಮ ಕರ್ನಾಟಕ ಸರ್ಕಾರ ಏನು ಮಾಡಿತು(ಸರ್ಕಾರವೇ ಇಲ್ಲ). ಮಾಡಬೇಕಾದವರು ನಾವು ಪ್ರಜೆಗಳು. ಪ್ರತಿನಿಧಿಯಾನು ಆರಿಸುವಾಗ ಸರಿಯಾದ ನಿರ್ಧಾರವನ್ನು
ಮತ ಹಾಕಿ ಈಗ ಅಳುತ್ತಾ ಕೂತರೆ ಪ್ರಯೋಜನವಿಲ್ಲ. ಈ ಅಳು ನಮ್ಮದೇ ಪ್ರಾದೇಶಿಕ ಪಕ್ಷ ಬರುವ ವರೆಗೆ ನಿಲ್ಲುವುದಿಲ್ಲ
ಈಗಿನ ಹೊಗೇನಕಲ್ ವಿವಾದದಲ್ಲಿ ಭಾಗವಹಿಸುತ್ತಿರುವುದು ಕೇವಲ ಕೆಲವೇ ಜನ ಎಲ್ಲೊ ಎ.ಸಿ ರೂಮ್ ನಲ್ಲಿ ಕೂತು ಕಾಫಿ ಸೇವಿಸುತ್ತಳೊ ಚಾಟ್ ತಿನ್ನುತ್ತಲೋ ಈ ಮಾತನ್ನು ವೀರಾವೇಶದಿಂದ ಆಡಿದರೆ ಪ್ರಯೋಜನವಿಲ್ಲ .
ಇಷ್ಟೆಲ್ಲಾ ಆದರೂ ನಮ್ಮ ಸಂಪದದ ಸದಸ್ಯರು ಸಂಘಟನೆಗೊಂಡು ಈ ವಿವಾದಕ್ಕೆ ಒಂದು ಪ್ರತಿಭಟನೆ ಮಾಡುವ ಮಾತನ್ನೂ ಆಡಲಿಲ್ಲ.
ಇಲ್ಲಿ ಕನ್ನಡ ಗಡಿಭಾಗದಲ್ಲಿರುವ ನಾವುಗಳು ಅದಕ್ಕೆ ರೂಪು ರೇಷೆಯನ್ನು ಮಾಡುತ್ತಿದ್ದೇವೆ. ಏಪ್ರಿಲ್ ೧೦ ರ ಬಂದ್ ನಲ್ಲಿ ಎಲ್ಲರೂ ತಮ್ಮ ತಮ್ಮ ಸಂಸ್ಥೆಗಳು, ಅಂಗಡಿಗಳನ್ನು ಸ್ವೈಚ್ಚೆಯಿಂದ ಮುಚ್ಚಿ ನಮ್ಮವರ ಧರಣಿಗೆ ಬೆಂಬಲ ಸೂಚಿಸುವ ಮಾತಾಡುತ್ತಿದ್ದಾರೆ.
ಇದನ್ನು ನೀವೆಲ್ಲಾ ಕೆಲಸ ಮಾಡುತ್ತಿರುವ ಐಟೆ ಕಂಪೆನಿಗಳು ಮಾಡುತ್ತವೆಯೇ?
ರೂಪ
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಕ್ಷಮೆ ಕೇಳಿದರೆ ಕೊಡಲು ಎಲ್ಲರೂ ಅಣಿಯಿರಲ್ಲ..!
ಈ ಬರಹ ಬಂದುದು ಜೂನಲ್ಲಿ..
ನೀವು ಪ್ರಸ್ತತ ಪರಿಸ್ತಿತಿ ಅಂದ್ರಲ್ಲ.. ಪ್ರಸ್ತುತ ಅಂದ್ರೆ ಈಗಿನ.. ನನಗೆ ನೀವು ಬರಹದ ಪರಿಸ್ತಿತಿಯಲ್ಲಿ ಹೇಳ್ತೀರ ಅಂತ ತಿಳಿಯದಶ್ಟು ದಡ್ಡು ಅನ್ನೋಕೋ ಬೇಕೆ?
ಇನ್ನು ವಾದ ಮಾಡಿ ನಿಮ್ ಜೊತೆ ಗೆದ್ದಾಗಿದೆ...
ನೀವು ನಿಮ್ಮದು "ಬಾರತ ಒಂದು ಹನಿ ಕನ್ನಡ" ಅನ್ನೋದು ಒಂದು ಅನಿಸಿಕೆ ಮಾತ್ರ ಅಂತ ಒಪ್ಪಿದ್ದೀರಿ.. ಅಂದ್ರೆ.. ಅದು ಸುಳ್ಳಿರಬೋದು..
ಆದ್ರೆ ನಾವು ಕನ್ನಡ ಬಾರತ ಒಂದು ಬಾಗ ಇಂದು ಹೊರತು.. ನಾಳೆ ಬಾರತ ಇಲ್ದೇ ಇದ್ರೂ, ಹಿಂದೆ ಬಾರತ ಇರದಿದ್ದಾಗ ಕನ್ನಡ ಇತ್ತು ಎಂಬುದು ಬರೀ ಅನಿಸಿಕೆ ಅಲ್ಲ.. ದಿಟ.!
ಇನ್ನೂ ಸರಕಾರವೇ ಇಲ್ಲ.. ಅಂದ್ರೇ ರಾಜ್ಯಪಾಲರ ರಾಜ್ಯಭಾರ ಇಲ್ವೇ!! ಸರಕಾರ ಇಲ್ದೇ ಇದ್ರೆ ಅರಾಜಕತೆ.. ನಮ್ ಇಂಡಿಯ ದೇಶದ ಕಾನೂನು ಒಂದು ರಾಜ್ಯವನ್ನ ಸರಕಾರವೇ ಇಲ್ಲದ ಪಾಡಿಗೆ ತಳ್ಳುವಶ್ಟು ಬಲವಿಲ್ಲದಿಲ್ಲ...
ಇನ್ನು ಮಿಕ್ಕಿದ್ದು ಏಸೀ ರೂಮು, ಅಯ್.ಟಿ ಕಂಪೆನಿ.. ಇವೆಲ್ಲ ಕಟ್ಟಿಕೊಂಡು ನಿಮಗೇನು ತೊಂದರೆ? ಈ ಬರಹ ಬರೆದಾತರೂ ಸಿಸ್ಕೋ ಎಂಬ ಅಯ್.ಟಿ ಕಂಪೆನಿಯ ಏಸೀ ಕೋಣೆಯವರೇ... ಅವರ ಮಾತಿಗೆ ನಿಮ್ಮ ಒಪ್ಪಿಗೆಯೋ
ನಮ್ ಅಯ್.ಟಿ ಕಂಪೆನಿ ಏನು ಮಾಡಬೇಕೋ ಅದನ್ನೂ ಮಾಡೇ ಮಾಡ್ತವೆ.. ಏನು ಐ.ಟಿ ಕಂಪೆನಿಗಳು ತಮಿಳುನಾಡಲ್ಲಿ ಇಲ್ವ?
ರಾಮ ರಾಮ.. ಇಲ್ಲಿಗೆ .. ವೀರಾವೇಶ.. ಹೋಗಿ.. ಆವೇಶ ಮಾತ್ರ ಆಯ್ತು...
ನೀವ್ ಹೀಗೆ ಮಾತು ಏಸೀ ರೂಮಿಗೆ ಹೊರಳಿಸಿ.. ಮತ್ತೆ ಒಂದು ಕೆಲಸದೋರ, ಬರೀ ಅವರಿಗಿರು ಕೆಲಸದ ಮೇಲೆ ನಿಮ್ಮ ಅಸಹನೆ ತೋರಿಸಿದಿರಿ.. ಅಸಾಧು! ವರ್ಣಭೇದ!
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಹೊಗೇನಕಲ್‍ಗೆ ದಾರಿ ಹೊರಳಿಸಿದ್ದು ನೀವೆ.
ಇನ್ನೂ ಗೆಲುವು ಸೋಲು ಅವರವರ ಮನಸ್ಠಿತಿಗೆ ಸಂಭಂದ ಪಟ್ತಿದ್ದಾಗಿದೆ. ನೀವೆ ಗೆದ್ದಿದ್ದರೆಂದು ಸಂತೋಷ ಪಟ್ಟರೆ ಹಾಗೆಯೆ ಇರಲಿ ಆದರೆ ವಸ್ತು ಸ್ತಿತಿಯೇನು ಬದಲಾಗುವುದಿಲ್ಲವಲ್ಲ.
ಹೋಗಲಿ
ಈ ಮಟ್ಟಿಗಿನ ನಾಡ ಪ್ರೇಮ ನಿಮಗಿದೆಯೆಂದು ಸಮಸ್ತ ಕನ್ನಡಿಗರು ಹೆಮ್ಮೆ ಪಡೋಣ.
ನನ್ನ ಅನಿಸಿಕೆಗಳನ್ನ್ನು ಅಸಹನೆ ಎಂದು ತಿರುಗಿಸಿದ ನಿಮ್ಮ ಜಾಣ್ಮೆಗೆ ನೂರು ವಂದನೆಗಳು
ರೂಪ
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಸರಿ ಟಾಟಾ!
ಒಳ್ಳೇದು
ಉ: ಸ್ವಾತಂತ್ರ್ಯ ಪಡೆದುಕೊಂಡೆವು...ಆದರೆ ಕಳೆದುಕೊಂಡದ್ದು ಯಾವಾಗ?
ಮಹೇಶಪ್ಪಾ,
ಅಬ್ಬಾ! ಅದೇನು ಟೆನಾಸಿಟಿ! ನಾನು ಹೇಳಿದ್ದೇ ಸರಿ ಅನ್ನೋ ಪಟ್ಟು. ಮಂಡ್ಯದ ನೀರಿನ ಗುಣ ಜೋರಾಗಿದೆಯಲ್ರೀ.
ಆ ನೊಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೇನ್ ಏನಾದರೂ ನಿಮ್ಮನ್ನ್ನು ಮೊದಲೇ ಭೇಟಿ ಮಾಡಿದ್ದಿದ್ದ್ರೆ ಅವರು ಬರೆದ ಪ್ರಸಿಧ್ಧ ಪುಸ