ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › anupkumart ರವರ ಬ್ಲಾಗ್

ಅಣ್ಣಾವ್ರ ಕೊಡುಗೆಗೆ ಮಾಪನ ಉಂಟೆ !

July 22, 2007 - 2:30am — anupkumart

... 

ನನ್ನ ಗೆಳೆಯರಿಬ್ಬರು ಕೇಳಿದರು "ರಾಜ್ ಕುಮಾರ್‍ ಕನ್ನಡಕ್ಕೆ ಏನು ಮಾಡಿದ್ದಾರೆ ಅಂತ ಅಷ್ಟು ಪ್ರಾಮುಖ್ಯತೆ ಕೊಡುತಿದ್ದೀರಿ?" ಎಂದು. ಅದರಲ್ಲಿ ಒಬ್ಬ ಶ..ಶ..ಶ..ಶಹರುಕ್ಕಾನರ ರಸಿಕ. ನನಗೆ ಕೋಪ, ನಗು, ಅಳು, ಬೇಸರ ಎಲ್ಲಾ ಒಟ್ಟಿಗೆ ಬಂದು "ಹಣ ಕೊಟ್ಟು ಸಹಾಯ ಮಾಡುವವರು ಮಾತ್ರ ಮಹನೀಯರು ಎಂಬ ಭ್ರಮೆಯಿಂದ ಬಹಳಷ್ಟು ಜನರು ಹೊರಬರಬೇಕಿದೆ. ಆಗಲೇ ವಿವಿಧ ದೃಷ್ಟಿಕೋಣದಿಂದ ವ್ಯಕ್ತಿಗಳನ್ನು ನೋಡಿ ಅರಿಯಲಾದೀತು. ಇಲ್ಲದಿದ್ದರೆ ಕತ್ತೆಗೆಲ್ಲಿ ಆದೀತು ಕಸ್ತೂರಿ ಪರಿಮಳದ ಅರಿವು." ಎಂದುಕೊಂಡು ಸುಮ್ಮನಾದೆ. 

ನನ್ನ ಪ್ರಕಾರ Rajkumar is a Symbol of Unity and a Source of Patriotism to a true Kannadiga. ಯಾವ ಕಾಲದಲ್ಲಿಯೂ ಕನ್ನಡಿಗರನ್ನೆಲ್ಲಾ ಒಗ್ಗೂಡಿಸಬಲ್ಲ ಚೇತನ, ಶಕ್ತಿ ಎಂದರೆ ಅದು ಅಣ್ಣಾವರು, ಅಣ್ಣಾವರ ಅಭಿನಯ, ಅಣ್ಣಾವರ ಗೀತೆಗಳು, ಅಣ್ಣಾವರ ಚಿತ್ರಗಳು. ಇವೆಲ್ಲದರ ಹಿಂದೆ ಸೂಕ್ಷ್ಮವಾಗಿ ನಿಂತಿರುವ ಅಣ್ಣಾವರ ವ್ಯಕ್ತಿತ್ವ. 

ನನ್ನ ಉತ್ತರ ಇಲ್ಲಿದೆ:

ಕನ್ನಡದ ಮಹಾಕವಿಗಳು, ಕಾದಂಬರಿಕಾರರು ಕೃತಿಗಳನ್ನು ರಚಿಸಿದರು. ಅವುಗಳ ತತ್ವ, ವೈಚಾರಿಕತೆಗಳನ್ನು ಆ ಕಾಲದಲ್ಲಿ ಕನ್ನಡಿಗರೆಲ್ಲರಿಗೂ ತಲುಪಿಸಿದ್ದು ಸಿನಿಮಾಗಳು . ಅವುಗಳಲ್ಲಿ ಹೆಚ್ಚಿನವು ಅಣ್ಣಾವರ ಸಿನಿಮಾಗಳು. ಅಣ್ಣಾವರ ’ಬಂಗಾರದ ಮನುಷ್ಯ’ ಚಿತ್ರವು ಒಳಗೊಂಡಿರುವ ನೀತಿಯನ್ನು  ೩೫ ವರ್ಷಗಳ ನಂತರ ಶ..ಶ..ಶ..ರ ’ಸ್ವದೇಶ್’ ಆಗಿ ಹಿಂದಿಯಲ್ಲಿ ತೋರಿಸಲಾಯಿತು.

ಬಬ್ರುವಾಹನ, ವೀರಕೇಸರಿ, ಮಯೂರ, ಕೃಷ್ಣದೇವರಾಯ, ಕವಿರತ್ನ ಕಾಳಿದಾಸ ಮುಂತಾದ ಪಾತ್ರಗಳನ್ನು  ನೋಡುವವರ ಮೈನವಿರೇಳಿಸುವಂತಹ ಅಭಿನಯವನ್ನು ಮತ್ತು ಕೇಳುವವರನ್ನು ಬೆರಗುಗೊಳಿಸುವ ಅಚ್ಚಕನ್ನಡ ಹಾಗು ಸಂಸ್ಕೃತ ಸಂಭಾಷಣೆಯನ್ನು ಅಣ್ಣಾವರ ಹೊರತು ಬೇರೊಬ್ಬರು ಬೆಳೆಸಿಕೊಳ್ಳಲಿಲ್ಲ.

ಅಂದಿಗೂ, ಇಂದಿಗೂ, ಮುಂದೆಯೂ ಎಂದೆಂದಿಗೂ ಕನ್ನಡಾಭಿಮಾನವನ್ನು ಹುಟ್ಟಿಸುವ ಕುವೆಂಪುರವರ  ’ಎಲ್ಲಾದರು ಇರು, ಎಂತಾದರು ಇರು’ ಕವನವನ್ನು, ರಾಘವೇಂದ್ರ ಸ್ವಾಮಿಯವರನ್ನು ಕುರಿತ ’ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು’ ಭಕ್ತಿಗೀತೆಯನ್ನು,  ’ನಾದಮಯ ಈ ಲೋಕವೆಲ್ಲಾ ನಾದಮಯ’ ಗೀತೆಯನ್ನು ಕಣ್ಮುಚ್ಚಿ ಕೇಳ ತೊಡಗಿದಾಗ ನಾವು ಒಳಗಾಗುವ ಭಾವಪರವಶಕ್ಕೆ ಅಣ್ಣಾವರ ಧ್ವನಿ, ಭಕ್ತಿ ಮತ್ತು ಭಾವಗಳ ಪ್ರಭಾವವೇ ಹೆಚ್ಚಾಗಿರುತ್ತದೆ.

Submission to art ಎಂಬಂತೆ ಅಣ್ಣಾವರು ಅಭಿನಯ ಕಲೆ, ಗಾಯನ ಕಲೆ, ಯೋಗ ಕಲೆ ಇತ್ಯಾದಿಗಳಿಗೆ ತಮ್ಮ ಸಕಲ ಸಮಯವನ್ನು ಸಮರ್ಪಿಸಿದರು, ತಮ್ಮನ್ನು ತಾವೇ ಸಮರ್ಪಿಸಿಕೊಂಡರು.

ಸಮಾಜದಲ್ಲಿ ಹೆಸರುಗಳಿಸಿದರೂ, ರಾಜ್ಯ ರಾಷ್ಟ್ರ ಮಟ್ಟದ ಗೌರವ ದೊರೆತರೂ, ರಾಜಕೀಯದಿಂದ, ಬೆಡಗು-ಬಿನ್ನಾಣಗಳಿಂದ, ಕೋಳಿ ಜಗಳಗಳಿಂದ ದೂರವಿದ್ದು ಸರಳ ಜೀವನ ನಡೆಸಿರುವ ಮಹನೀಯರಲ್ಲಿ ಅಣ್ಣಾವರು ಒಬ್ಬರು.

ಇವೆಲ್ಲದಕ್ಕೂ ಮಿಗಿಲಾಗಿ Rajkumar is a Symbol of Unity and a Source of Patriotism to a true Kannadiga. ನಮ್ಮ ಆಟೋ, ಟೆಂಪೋ, ವ್ಯಾನ್, ಬಸ್ ಚಾಲಕರು, BHEL ನೌಕರರು, IT ಉದ್ಯಮಿಗಳು, ಹೀಗೆ ಸಮಾಜದಲ್ಲಿ ವಿವಿಧ ವರ್ಗಗಳು ತಂತಮ್ಮ ಒಗ್ಗಟ್ಟಿನ ಪ್ರತೀಕವಾಗಿ ಹೆಚ್ಚಾಗಿ ಉಳಿಸಿಕೊಂಡಿರುವುದು ಅಣ್ಣಾವರನ್ನು. 

ಯಾವ ಕಾಲದಲ್ಲಿಯೂ ಕನ್ನಡಿಗರನ್ನೆಲ್ಲಾ ಒಗ್ಗೂಡಿಸಬಲ್ಲ ಚೇತನ, ಶಕ್ತಿ ಎಂದರೆ ಅದು ಅಣ್ಣಾವರು, ಅಣ್ಣಾವರ ಅಭಿನಯ, ಅಣ್ಣಾವರ ಗೀತೆಗಳು, ಅಣ್ಣಾವರ ಚಿತ್ರಗಳು. ಇವಲ್ಲದರ ಹಿಂದೆ ಸೂಕ್ಷ್ಮವಾಗಿ ನಿಂತಿರುವ ಅಣ್ಣಾವರ ವ್ಯಕ್ತಿತ್ವ. 

ಇದಕ್ಕಾಗಿಯೇ ಹೇಳುವುದು "ಅಣ್ಣಾ ನೀ ಮತ್ತೆ ಹುಟ್ಟಿ ಬಾ" ...

~.~
  • anupkumart ರವರ ಬ್ಲಾಗ್
  • Login or register to post comments
  • 315 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2007 - 7:10pm — smurthygr

ಉ: ಅಣ್ಣಾವ್ರ ಕೊಡುಗೆಗೆ ಮಾಪನ ಉಂಟೆ !

smurthygr's picture

ಸರಿಯಾಗಿ ಹೇಳಿದ್ದೀರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಡೆಯರ ನುಡಿಮುತ್ತುಗಳು
  • ರಾಜ್-ತಾಜ್
  • "ಓದುವ ಸುಖ, ಬರೆಯುವ ಸುಖ....." - ಒಂದು ಚಿಂತನೆಗೆ ಹಚ್ಚುವ ಲೇಖನ
  • ಮಿ. ಗರಗಸ ಮತ್ತು ಗಾಳಿಪಟದ ಹಾಡುಗಳು
  • ನೀಳ್ಗತೆ
Syndicate content

ಲೇಖಕರು

anupkumart's picture

ಪೂರ್ಣ ಹೆಸರು
ಆನುಪ್ ಮಲೆನಾಡು

ಪರಿಚಯ

"ಸಿಸ್ಕೋ ಸಿಸ್ಟಮ್ಸ್" ಸಂಸ್ಥೆಯಲ್ಲಿ ಸಾಫ್ಟವೇರ್ ಕೆಲಸ. ಬೆಂಗಳೂರಿನ ಜೆ.ಪಿ. ನಗರ ಬಡಾವಣೆಯಲ್ಲಿ ನಿವಾಸ. ಕನ್ನಡ ಸಂಸ್ಕೃತಿ ಬಗ್ಗೆ ಗೌರವ ಮತ್ತು ಕಾಳಜಿ. ಕುವೆಂಪು, ಕಾರಾಂತರ ಕೃತಿಗಳಲ್ಲಿ ಹೆಚ್ಚಿನ ಆಸಕ್ತಿ. ಮಲೆನಾಡಿನಲ್ಲಿ ಒಲವು. ಪ್ರಕೃತಿ ಆರಾಧನೆಯಲ್ಲಿ ನಂಬಿಕೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 203 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator