ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?
Saw this compact and wonderful post ..
...... authored by Pratap Simha, Vijaya karnataka
ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?
ಅಂದು ಬಸ್ಸಿನಲ್ಲಿ ಹೋಗುತ್ತಿದ್ದೆ. ಲೋಕಾಭಿರಾಮವಾಗಿ ಪರಿಚಯವಾದ ನನ್ನ ಪಕ್ಕದ ಸಹಪ್ರಯಾಣಿಕ ಒಬ್ಬರೊಡನೆ ಹರಟೆ ಶುರುವಾಯಿತು. ಅದೂ ಇದೂ ಮಾತನಾಡುತ್ತಾ ಕೊನೆಗೆ ವಿಷಯ ಡಾ.ರಾಜ್ ಬಗ್ಗೆ ತಿರುಗಿತು. ಇದ್ದಕ್ಕಿದ್ದಂತೆ ಆ ವ್ಯಕ್ತಿ " ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇ ಏನಲ್ಲಾ ಬಿಡ್ರಿ. ಎಷ್ಟೋ ಜನ ಸಾಹಿತಿಗಳೂ ಕವಿಗಳೂ ಕನ್ನಡಕ್ಕಾಗಿ ದುಡಿದಿರುವಾಗ ಕೇವಲ ರಾಜ್‍ಕುಮಾರ್ ಹೆಸರನ್ನ ಹೇಳುವುದು ಅನ್ಯಾಯವಲ್ಲವಾ? ಅಷ್ಟಕ್ಕೂ ರಾಜ್‍ಕುಮಾರ್ ಕನ್ನಡಕ್ಕಾಗಿ ಏನು ತಾನೇ ಮಾಡಿದ್ದಾರೆ? " ಎಂಡುಬಿಡಬೇಕಾ.
ಅದಕ್ಕೆ ನಾನು ಹೇಳಿದೆ.
" ಮಾಹಾಸ್ವಾಮಿ, ಎಷ್ಟೋ ಜನ ಸಾಹಿತಿಗಳೂ, ಕವಿಗಳೂ ಕನ್ನಡಕ್ಕಾಗಿ ದುಡಿದಿದ್ದಾರೆ ನಿಜ. ಆ ಎಷ್ಟೋ ಜನ ಸಾಹಿತಿಗಳೂ, ಕವಿಗಳೂ ಬರೆದ ಎಷ್ಟೋ ಸಾಹಿತ್ಯದಲ್ಲಿ ನೀವೆಷ್ಟರ ಮಟ್ಟಿಗೆ ಓದಿದ್ದೀರಾ? ಕುವೆಂಪು ಬರೆದಿರುವ 'ರಾಮಾಯಣ ದರ್ಶನಂ' ಓದಿದ್ದೀರಾ? ಅಥವಾ ತ.ರಾ.ಸು ಅವರ ದುರ್ಗಾಸ್ತಮಾನವನ್ನೇನಾದರೂ ಓದಿದ್ದೀರಾ? At least 'ಜೈ ಭಾರತ ಜನನಿಯ ತನುಜಾತೆ' ಗೀತೆಯ ಅರ್ಥವಾದರೂ ಗೊತ್ತೇ ನಿಮಗೆ? ಕನ್ನಡ ಸಾಹಿತ್ಯ ಕ್ಷೇತ್ರ ಎಷ್ಟೇ ಅಗಾಧವಾಗಿದ್ದರೂ ಕನ್ನಡ ಓದುವ ಹವ್ಯಾಸದವರೇ ಇಲ್ಲದಿರುವಾಗ ಅವೆಲ್ಲ ಪುಸ್ತಕದ ಬಡನೆಯಂತಾಗಿವೆ. ಸುಮ್ನೇ, ರಾಜ್‍ಕುಮಾರ್ ಮೇಲಿನ ಹೊಟ್ಟೆ ಕಿಚ್ಚಿಗೆ ಅವ್ರನ್ ಬೈದ್ರೇ ಏನ್ ಬಂತು ರೀ. ಇಲ್ಲಿ ಕೇಲ್ರಿ ಹೇಳ್ತೀನಿ. ಕನ್ನಡದ ಮೊದಲ ರಾಜ ಕದಂಬರ ಮಯೂರ ವರ್ಮ ಹೀಗಿದ್ದ. ಚಾಲುಕ್ಯರ ಪುಲಿಕೇಶಿ ಪಲ್ಲವರೊಡನೆ ಹೀಗೆಲ್ಲ ಯುದ್ಧ ಮಾಡಿದ್ದ. ಕೃಷ್ಣದೇವರಾಯ ನ ಆಸ್ಥಾನ ಹೀಗಿತ್ತು. ಮೈಸೂರಿನ ರಣಧೀರ ಕಂಠೀರವ ನರಸರಾಜ ಒಡೆಯರರ ಗಾಂಭೀರ್ಯ (body language) ಹೀಗಿತ್ತು. ಕನ್ನಡದ ಕವಿ ಸರ್ವಜ್ಞ ಹೀಗಿದ್ದ. ನವಕೋಟಿ ನಾರಾಯಾಣನಾಗಿದ್ದ ಜಿಪುಣ, ಪುರಂದರ ದಾಸರಾಗಿ ಬಹಲ್‍ಷ್ಟು ಕೀರ್ತನೆಗಳನ್ನು ರಚಿಸಿದರು ಎಂಬಂತಹ ಕನ್ನಡ ಸಾಹಿತ್ಯ ಚರಿತ್ರೆಯ ಮಹತ್ವಪೂರ್ಣ ಅಂಶಗಳನ್ನೆಲ್ಲ ತೆರೆಯ ಮೇಲೆ ಅಮೋಘವಾಗಿ ಅಭಿನಯಿಸಿ ಕನ್ನಡ ನಾಡಿನ ಮೂಲೆ ಮೂಲೆಗೂ ಕನ್ನಡದ ಬಗ್ಗೆ ಕಾಳಜಿ ಬರುವಷ್ಟು ಕನ್ನಡಕ್ಕಾಗಿ ದುಡಿದಿರುವುದು ಡಾ.ರಾಜ್‍ಕುಮಾರ್ ತಿಳ್ಕೊಲ್ರೀ. ಕರ್ನಾಟಕದ ಏಕೀಕರಣವಾದ ಮೇಲೆ, ಕನ್ನಡದ ಬಗ್ಗೆ ಪ್ರಾಥಮಿಕ ಮತ್ತು ಮೂಲಭೂತವಾದ ಒಂದು ಅರಿವು ಜನಗಳಿಗೆ ಬಂದಿದ್ದು ಡಾ.ರಾಜ್‍ಕುಮಾರ್ ಸಿನಿಮಾಗಳಿಂದ. ಅಂಥವರು ತಾವು ದುಡಿದ ದುಡ್ಡನ್ನು ದಾನ ಮಾಡಿ ಬೆಂಗಳೂರನ್ನು ಸಿಂಗಾಪುರ ಮಾಡುವು ದೇನೂ ಬೇಡ. ಅವರು ಚಿತ್ರಗಳ ಮೂಲಕ ಕನ್ನಡಿಗರಲ್ಲಿ ಮೂಡಿಸಿರುವ ಜಾಗೃತಿ ಇದೆಯಲ್ಲಾ ಅಷ್ಟು ಸಾಕು. ಇನ್ಮೇಲೆ ರಾಜ್‍ಕುಮಾರ್ ಬಗ್ಗೆ ಬಾಯಿಗೆ ಬಂದಂತೆಲ್ಲಾ ಮತಾಡಕ್ಕೆ ಹೋಗ್‌ಬೇಡಿ " ಎಂದೆ.
ಆ ಮಹಾಪುರುಷ ಇನ್ನೂ ತನ್ನ ಹಟ ಬಿಡದೆ ಇನ್ನೇನೋ ರಾಗವೇಳೆಯಲು ತೊಡಗಿದ.
ನಾನ್ ಮನಸ್‌ನಲ್ಲಿ ಅಂದುಕೊಂಡೆ, " ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ "

- anupkumart ರವರ ಬ್ಲಾಗ್
- Login or register to post comments
- 453 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?
ಈ ರೀತಿಯ ಅನೇಕ ಪ್ರಸಂಗಗಳನ್ನು ನಾವು ಆಗಾಗ ನೋಡುತ್ತಿರುತ್ತೇವೆ ,ಕೇಳುತ್ತಿರುತ್ತೇವೆ.ಕೆಲವರು ಸುಮ್ಮನೆ ರಾಜ್ಕುಮಾರ್ ಅವರನ್ನ ಟೀಕೆ ಮಾಡಬೇಕು ಅಂತ ಮಾಡ್ತಾರೆ ಆಂಥವರಿಗೆಲ್ಲ ತಿಳಿ ಹೇಳುವುದು ಬಹಳ ಕಷ್ಟ .ಆದಾಗ್ಯು ಕನ್ನಡದ ಹಿರಿಯ ಸಾಹಿತಿಗಳ ಕೊಡುಗೆ ಅಪಾರ ,ಆದರೆ ರಾಜ್ ಕನ್ನಡ ಪ್ರಜ್ನೆಯ ಬಹು ಪ್ರಮುಖ ಅಂಗ ಎಂಬುದು ಪ್ರಶ್ನಾತೀತ.
ಉ: ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?
ಸದಾ ನಿಮ್ಮವನೇ,
ಪ್ರಸಾದ
ರಾಜ್ಕುಮಾರ್ ಅವರಂಥ ಮೇರು ನಟ ಕನ್ನಡದಲ್ಲಿಲ್ಲ....
ಆದರೆ, ಅದರ ಬಗ್ಗೆ ನಮಗ ಅಭಿಮಾನಕ್ಕಿಂತ ದುರಭಿಮಾನವೇ ಹೆಚ್ಚೆಂದು ಅನಸ್ತದ.
ಆದರ ಉಳಿದವರನ್ನೂ ನೆನದ್ರ ತಪ್ಪೇನು?
ಆ ಸಹ ಪ್ರಯಾಣಿಕನನ್ನು ಕತ್ತೆ ಎಂದು ಹೇಳುವ ಜನರು ಉಳಿದವರ ಬಗ್ಗೆ ಯಾವಭಾವನೆ ಇಟ್ಟುಕೊಂಡಾರ ಅನ್ನೂದು ತಿಳಿತದ
ಉ: ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?
ನೆನೆಯಿರಿ ಸ್ವಾಮಿ, ಯಾರು ಬೇಡ ಅಂತಾರಾ. ಆದರೆ ರಜನಿಕಾಂತ್ ಹಾಗಂತೆ ಹೀಗಂತೆ. ರಾಜ್ಕುಮಾರ್ ಮಾತ್ರ ಕನ್ನಡಕ್ಕೆ ಏನು ಮಾಡಲೇ ಇಲ್ಲ. ಇಂತಹವುಗಳು ತೀರಾ ಬಾಲಿಶ. ಅಷ್ಟಕ್ಕೂ ರಾಜ್ಕುಮಾರ್ ತೆರೆಯ ಹಿಂದಿನಲ್ಲಿ ಜನಪರ ಕೆಲಸಗಳನ್ನು ಮಾಡಿರಬಹುದು. ಅಥವಾ ಮಾಡಿಲ್ಲ ಅಂತಲೇ ಇಟ್ಟುಕೊಳ್ಳಿ, ಏನಿವಾಗ. ಯಾರೋ ಯಾಕೆ ಬಂದು ನಮಗೆ ಸಹಾಯ ಮಾಡಬೇಕು ಸ್ವಾಮಿ. ನೀವು "ಮಯೂರ" ಸಿನಿಮಾ ನೋಡಿದ್ದೀರಾ. ಕದಂಬ ಸಾಮ್ರಾಜ್ಯದ ಚಕ್ರವತ್ರಿ ಮಯೂರ ಹೇಗಿದ್ದ ಅಂತ ಕಾದಂಬರಿ ಓದಿ ತಿಳಿದುಕೊಳ್ಳುವುದಕ್ಕಾಗುತ್ತದೆಯೇ. "ಶಿವಸ್ಕಂದವರ್ಮ....." ಅಂತ ಗರ್ಜಿಸುತ್ತಾ ನಮ್ಮ ಕನ್ನಡತನವನ್ನು ಗಟ್ಟಿಗೊಳಿಸಿದ ರಾಜ್ಕುಮಾರ್ ನಮಗೆ ಸಾಕಲ್ಲವೇ. ರಾಜ್ಕುಮಾರನ್ನ ರಾಜ್ಕುಮಾರ್ ಆಗಿಯೇ ನಾವುಗಳು ನೋಡಬೇಕು. ಬೇರೆ ಯಾರದೋ ಆದರ್ಶಗಳನ್ನು ರಾಜ್ಕುಮಾರನಿಗೆ ತುರುಕಲೇಕೆ ನಾವುಗಳು ಯತ್ನಿಸಬೇಕು.
ಈ-ಟೀವಿ ವರ್ಷದ ಕನ್ನಡಿಗ ಪ್ರಶಸ್ತಿ ಸ್ವೀಕರಿಸುವಾಗ ರಾಜ್ಕುಮಾರ್ ಆಡಿದ ಮಾತುಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಆ ಮಾತುಗಳು ಅವರ ಅಂತರಾಳದಿಂದ ಬಂದ್ದದ್ದು. ಎಲ್ಲಿಯಾದರೂ ಸಿಕ್ಕಿದರೆ ತಪ್ಪದೆ ನೋಡಿ.