ಹೊಸ ಕ್ಯಾಮೆರಾ ಮತ್ತು ಕಲಿಕೆ
ಇಬ್ಬರು ಗೆಳೆಯರು...
"ಮಗಾ!... ನಾನೊಂದು ಕ್ಯಾಮೆರಾ ತಗೊಂಡೆ"
"ಸೂಪರ್ ಕಣೋ "
"ನೀ ಸಕತ್ ಫೋಟೋ ತೆಗೀತಿರ್ತೀಯಲ್ಲ ನಂಗೂ ಹೇಳಿಕೊಡೋ"
"ಹು ಕಣೋ... ಮುಖ್ಯವಾಗಿ ISO, ಎಕ್ಸ್ ಪೋಸರ್ ಬಗ್ಗೆ ತಿಳ್ಕೊಂಡ್ರಾಯ್ತು ಅಷ್ಟೆ"
"ಹೌದಾ!"
"ಹು.... ನೋಡೂ ಇದ್ರಲ್ಲಿ M ಅಂತ ಇದ್ಯಲ್ಲಾ ಅದು ಮ್ಯಾನುಯಲ್ ಮೋಡ್, ನಿಂಗೆ ಬೇಕಾದಂಗೆ ನೀ ಸೆಟ್ ಮಾಡ್ಕೊಂಡು ತೆಗೀಬೋದು"
"ಅಯ್ಯೋ... ಅಷ್ಟೆಲ್ಲಾ ಕಷ್ಟ ಯಾಕೋ... ಇದ್ರಲ್ಲಿ ಆಟೋಮ್ಯಾಟಿಕ್ ಮೋಡ್ ಇದೆ ನೀ ನೋಡಿಲ್ವಾ? ಎಲ್ಲಾ ಕೆಲ್ಸ ಅದೇ ಮಾಡುತ್ತೆ, ನೀ ಸುಮ್ನೆ ಕ್ಲಿಕ್ ಮಾಡಿದ್ರೆ ಸಾಕು "
"! " (ಮತ್ಯಾಕೆ ನನ್ನತ್ರ ಕೇಳಿದನೋ ಅರ್ಥ ಆಗ್ಲಿಲ್ಲ )
- Aravinda's blog
- Login or register to post comments
- 806 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹೊಸ ಕ್ಯಾಮೆರಾ ಮತ್ತು ಕಲಿಕೆ
ಮಾಲ್ಗುಡಿ ಡೇಸ್ನ ಮೀಟಾಯಿ ವಾಲಾದಲ್ಲಿ, ಅವ್ರ ಮಗ ಪುಸ್ತಕ ಬರೆಯೋಕೆ ಮೆಷಿನ್ನ ಉಪಯೋಗಿಸೋ ಪ್ರಸ್ತಾಪ ನೆನಪಿಗೆ ಬಂತು. ಭಾವನೆಗಳ ಬಟನ್ ಒತ್ತಿದ್ರಾಯ್ತು ಪುಸ್ತಕ ರೆಡಿ! ಕಲೆಯಲ್ಲೂ ಅಟೋಮೇಷನ್..
ಉ: ಹೊಸ ಕ್ಯಾಮೆರಾ ಮತ್ತು ಕಲಿಕೆ
ಹಹ್ಹ ಹ್ಹ.. ಸೂಪರ್.. ಕ್ಯಾಮರಾ ಬಳಕೆ ಇಷ್ಟು ಸುಲಭ ಅಂತ ಇವತ್ತು ಗೊತ್ತಾಯ್ತು..