Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Aravinda ರವರ ಬ್ಲಾಗ್

ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ

May 9, 2008 - 12:09am — Aravinda

ನಾವು ಲಿನಕ್ಸ್ ಹಬ್ಬ ಮಾಡ್ತಾ ಇದೀವಿ ಅಂತ ಎಲ್ಲರ ಹತ್ರ ಹೇಳ್ಕೊಳೋದೇ ಖುಷಿ ಆಗ್ಬಿಟ್ಟಿತ್ತು. ಜಿಮೈಲಲ್ಲಿ, ಆರ್ಕುಟ್  ಅಲ್ಲಿ ಎಲ್ಲಾ ಕಡೆ ಸ್ಟೇಟಸ್ ಮೆಸೇಜ್ ಹಬ್ಬದ ಬಗ್ಗೆನೇ !
ಫ್ರೆಂಡ್ಸ್ ಗೆ ಕಾಲ್ ಮಾಡಿದಾಗ ಅಥವಾ ಅವ್ರೇ ಕಾಲ್ ಮಾಡಿದಾಗ ಬರೀ ಹಬ್ಬದ ವಿಷ್ಯ ಮಾತಾಡಿ ಬೈಸಿಕೊಂಡಿದೀನಿ.("ಏನೋ ಮೂರು ಹೊತ್ತೂ ಇದೇ ಯೋಚ್ನೆನಾ ನಿಂಗೆ" ಅಂತ). ಎಲ್ಲಾ ಒಟ್ಟಾಗಿ ಕೆಲ್ಸ ಮಾಡೋ ಮಜಾನೇ ಸಕತ್ತಾಗಿತ್ತು. ಹಬ್ಬದ ವಿಷ್ಯ ಚರ್ಚೆ ಮಾಡಕ್ಕೆ  wiki ಮತ್ತೆ  IRC ಬಳಸ್ತಾ ಇದ್ವಿ, ನಾನು ಇದಕ್ಕೂ ಮುಂಚೆ IRC ಬಳಸಿಯೇ ಇರ್ಲಿಲ್ಲ. ಹಬ್ಬಕ್ಕೆ  ಕೆಲ್ಸ ಮಾಡುವಾಗ  ದಿನೇ ದಿನೇ ಹೊಸ ವಿಷ್ಯ ಗೊತ್ತಾಗುತ್ತಿತ್ತು.

ಆಫೀಸಲ್ಲಿ  ಸರಿಯಾಗಿ ಕೆಲ್ಸ ಮಾಡಕ್ಕೆ ಆಗ್ತಿರ್ಲಿಲ್ಲ, ಬೆಳಗ್ಗೆ ಹತ್ತು ಗಂಟೆ ಆದ ತಕ್ಷಣ  ಪವನ್ ನ, ರಾಘವ್ ನ ಕಾಫಿ ಕುಡ್ಯಕ್ಕೆ  ಬರ್ತೀರಾ ಅಂತ ಕೇಳೋದು, ಎಲ್ಲಾರೂ ಅದ್ಕೇ ಕಾಯ್ತಿದ್ವೇನೋ ಅನ್ನೊ ಹಾಗೆ  ಒಟ್ಟಿಗೆ ಕಾಫಿಗೆ ಹೋಗೋದು. ಅಲ್ಲಿ ಕಾಫಿ ಕುಡೀತಾ ಮತ್ತೆ ಹಬ್ಬಕ್ಕೆ ಏನು ಮಾಡಿದ್ರೆ ಚೆನಾಗಿರುತ್ತೆ ಅಂತ ಮಾತಾಡ್ತಿದ್ವಿ. ಪವನ್ ಅಂತೂ ನನ್ನ ನೋಡಿ ನಗ್ತಾ ಇದ್ದ, ಸಲ್ಪ ಆಫೀಸ್ ಕೆಲ್ಸನೂ ಮಾಡೋ ಅಂತ ;)  ಅವ್ನಂತೂ ಬೇಗ ಬೇಗ ಆಫೀಸ್ ಕೆಲ್ಸ ಮುಗ್ಸಿ   ಸಂಜೆ ಮನೇಲಿ ಪ್ರಯೋಗ ಶುರು. ಒಂದಿನ ನಮ್ಮ ಮ್ಯಾನೇಜರ್ ಗೆ ಹೇಳ್ದೆ , ನಂಗೆ ಕೆಲ್ಸದಲ್ಲಿ ಗಮನ ಕೊಡೋಕೆ ಆಗ್ತಾನೇ ಇಲ್ಲ  ಹಂಗಾಗಿ ಕೆಲ್ಸ ಸಲ್ಪ ನಿಧಾನ ಆಗ್ಬೋದು, ಹಬ್ಬ ಮುಗಿದ್ಮೇಲೆ ಬೇಗ ಮುಗಿಸ್ತೀನಿ  ಅಂತ. ಅವರಿಗೂ ನನ್ನ ಪರಿಸ್ತಿತಿ ಅರ್ಥ ಆಗಿತ್ತು ಹಂಗಾಗಿ OK ಅಂದ್ರು. (ಅದೇ ಕೆಲ್ಸ ಗಳು ಈಗ ತಲೆ ಮೇಲೆ ಕೂತಿದ್ರಿಂದ ಇಷ್ಟು ದಿನ ಬ್ಲಾಗ್ ಬರೆಯಲು ಬಿಡುವಿಲ್ಲದ ಹಾಗೆ ಮಾಡಿತ್ತು.)

ಹಿಂಗೇ ನಾನು, ಪವನ್ ಮತ್ತೆ   ರಾಘವ್ ಮಾತಾಡ್ತಿದ್ದಾಗ, "ನಾನು ಶುಕ್ರವಾರ, ಸೋಮವಾರ ಎರಡೂ ದಿನ ರಜ ಹಾಕ್ತೀನಿ" ಅಂದ  ರಾಘವ.(ಶನಿವಾರ ಹಬ್ಬ ಇದ್ದಿದ್ದು) ಅರರೇ ನಂಗೆ ಈ ಐಡಿಯಾನೇ ಹೊಳೀಲಿಲ್ವಲಾ  ಅಂತ ನಾನೂ ಶುಕ್ರವಾರ ರಜ ಹಾಕಿದೆ. (ರಾಘವಂಗೆ ಥ್ಯಾಂಕ್ಸ್ ಈ ಐಡಿಯಾ ಕೊಟ್ಟಿದ್ದಕ್ಕೆ)

ಏನೋ ಈ ವೀಕೆಂಡ್ ಪ್ಲಾನ್ ಅಂತ ಕೇಳೋ ಫ್ರೆಂಡ್ಸ್ ಗೆ ಹಬ್ಬದ ಮೀಟಿಂಗ್ ಇದೆ  ಕಣೋ ಅಂತ ಹೇಳೋದೇ ಗಮ್ಮತ್ತಾಗಿತ್ತು. ಮೀಟಿಂಗ್ ಗೆ ಮೈಸೂರಿಂದ ಬೆಂಗಳೂರಿಗೆ  ಹೋಗುವಾಗ ಬಸ್ ಅಲ್ಲಿ ಪವರ್ ಕಾರ್ಡ್ ಇದ್ದಿದ್ರೆ ಲ್ಯಾಪ್ ಟಾಪ್ ಅಲ್ಲಿ ಕೆಲ್ಸ ಮಾಡ್ಕೊಂಡು ಹೋಗ್ಬೋದಿತ್ತು ಅಂತ ಪೇಚಾಡಿಕೊಂಡಿದ್ದಿದೆ. ಮೀಟಿಂಗ್ ಗಳನ್ನ ನಾಲ್ಕು ಗೋಡೆಗಳ ಮದ್ಯ ಮಾಡೋ ಬದ್ಲು   ಪಾರ್ಕ್ ಅಲ್ಲಿ ಮಾಡಿದ್ದು ಕೂಡಾ ಚೆನಾಗಿತ್ತು. ಸಂಪದದಲ್ಲಿ ಬ್ಲಾಗುಗಳ ಮೂಲಕವಷ್ಟೇ ಪರಿಚಯವಾದವರನ್ನು  ನಿಜವಾಗಲೂ  ಬೇಟಿ ಮಾಡುವ ಅವಕಾಶ ಸಿಕ್ಕಿತು.  

ಹಬ್ಬದ ಬಗ್ಗೆ ಎಲ್ಲಾರ್ಗೂ ಹೇಳೋವಾಗ ಸಂಪದದ ಹಬ್ಬದ ಪುಟದ ಉದ್ದದ ಲಿಂಕ್(URL) ಹೇಳ್ಬೇಕಲ್ಲಾ  ಅಂತ ಯೋಚ್ನೆ  ಮಾಡೋ ಅಷ್ಟರಲ್ಲಿ  ಶಿವು ಮತ್ತೆ ಹರಿ ಸೇರಿ ಹಬ್ಬಕ್ಕೇ ಒಂದು ಅಂತರ್ಜಾಲ ಪುಟ ಮಾಡಿದ್ರು, ಚೆಂದದ ಹೆಸ್ರು  www.habba.in , ಎಲ್ಲಾರ್ಗೂ ಹೇಳ್ಕೋಳೋದೇ ಒಂದು ಸಂಭ್ರಮ.
ಈ ಸಂಭ್ರಮದ ಜೊತೆಗೆ ಮತ್ತೊಂದು ಅನ್ನೋ ಹಾಗೆ, ನ್ಯೂಸ್ ಪೇಪರ್ ನಲ್ಲಿ ಹಬ್ಬದ ಸುದ್ದಿ ಬಂದಿದೆಯಂತೆ ಅಂತ  ಈಮೈಲ್ ಬರ್ತಿತ್ತು. ಅದನ್ನ ನೋಡಿ ಪೇಪರ್ ಅಂಗಡಿಗೆ ಹೋಗಿ ಕೇಳ್ಕೊಂಡು ಬರೋದು, ದುರಾದೃಷ್ಟಕ್ಕೆ  ಮೈಸೂರು ಪೇಪರ್ ಗಳಲ್ಲಿ ಬರ್ಲೇ ಇಲ್ಲ. Sad ಹಂಗಾಗಿ  ಆನ್ ಲೈನ್ ಪೇಪರ್ ಗಳನ್ನೇ ಸೇವ್ ಮಾಡಿಟ್ಟು ಕೊಂಡ್ವಿ. Smiling

ಇತ್ತೀಚೆಗೆ ಕಲ್ಪನಾರವರು ಒಂದು ಬ್ಲಾಗಿಗೆ ಪ್ರತಿಕ್ರಿಯಿಸಿದ್ದರು. ಆ ಹಾಡೇನಾದ್ರು (ಚೆಲುವಯ್ಯ ಚೆಲುವೋ ತಾನಿತಂದಾನಾ....) ಮೊದ್ಲೇ ಸಿಕ್ಕು ಬಿಟ್ಟಿದ್ರೆ ಅದನ್ನ ಹೇಳ್ಕೊಂಡು ಕುಣಿದೇ ಬಿಟ್ತಿದ್ವೇನೋ Smiling

ಹಬ್ಬದ ದಿನ ಹತ್ತಿರ ಬರ್ತಾ ಇತ್ತು, ಮೊಬೈಲ್ ಗೆ ಇನ್ನು ಹಬ್ಬದ ಜ್ವರ ಬಂದಿಲ್ವಲಾ ಅಂತ ಗ್ನು ಮತ್ತೆ ಪೆಂಗ್ವಿನ್ ನ ಚಿತ್ರ  ಬಳಸಿ ಒಂದು ವಾಲ್ ಪೇಪರ್ ಮಾಡಿ ಮೊಬೈಲ್ ಗೆ ಹಾಕಿಕೊಂಡೆ.

ಶುಕ್ರವಾರ ರಾತ್ರಿ IISC ಗೆ ಹೋದಾಗ ಅಲ್ಲಿ ಜಾಗ ಬಹಳ ಕಡಿಮೆ ಇರೋದು ರಿಜಿಸ್ಟ್ರೇಷನ್ 300 ದಾಟಿದೆ ಅಂತ ಹರಿ ಹೇಳಿದಾಗ ನಮಗೆಲ್ಲಾ ಗಾಭರಿ. ಹೆಂಗಪ್ಪಾ  ಮ್ಯಾನೇಜ್ ಮಾಡೋದು ಅಂತ. ಆಮೇಲೆ ಎಲ್ಲಾರ ಮೊಬೈಲ್ ಗೂ ಮೆಸೇಜ್ ಮಾಡೋದು ಅಂತ ಡಿಸೈಡ್ ಮಾಡಿ ನನ್ನ ಮೊಬೈಲ್ ಅನ್ನು  ಲ್ಯಾಪ್ ಟಾಪ್ ಗೆ ಜೋಡಿಸಿ ನೋಕಿಯಾ ಪಿಸಿ ಸೂಟ್ ಓಪನ್ ಮಾಡಿ ಮೆಸೇಜ್ ಕಳಿಸಲು ಎಲ್ಲಾ ರೆಡಿ ಮಾಡಿ ನಂಬರ್ ಗಳನ್ನ ಕೊಟ್ಟ್ರೆ  ಅದು ನಕರಾ ಮಾಡ್ತು. ನಂಗೆ ನಂಬರ್ ಗಳು ಈ format ಅಲ್ಲಿ ಬೇಡ  ಬೇರೆ format ಅಲ್ಲಿ ಕೊಟ್ರೆ ಮಾತ್ರ  ಕೆಲ್ಸ ಮಾಡೋದು ಅಂತ (<number>;<number2>; ...) ತಕೋಳಪ್ಪ... ಇದ್ರದ್ದು  ಒಳ್ಳೇ ಗೋಳಾಯ್ತಲ್ಲ ಅಂತ ರಾಘವ, ಶಿವು ಸೇರಿ ಅಲ್ಲೇ ಒಂದು ಸಣ್ಣ  ಪ್ರೋಗ್ರಾಮು ಬರೆದು ಅದಕ್ಕೆ ಬೇಕಾದಂಗೆ ಬರೋ ಹಂಗೆ ಮಾಡಿ ಕೊಟ್ರು. ಆಮೇಲೆ ಎಲ್ಲಾರ್ಗೂ ಮೆಸೇಜ್ ಮಾಡಿದ್ವಿ (300 ನಂಬರ್ ಗಳನ್ನ  ಒಂದೊಂದಾಗಿ  ಆ format ಅಲ್ಲಿ   ಬರೆಯೋದು ಆ ಸಮಯದಲ್ಲಿ ಸಾಧ್ಯ ಇರ್ಲಿಲ್ಲ) ಎಲ್ಲಾ ಮೆಸೇಜ್ ಗಳು ಒಟ್ಟಿಗೇ ಹೋಗ್ಲಿಲ್ಲ, ಮೊಬೈಲ್ outbox ಅಲ್ಲಿ ಇದ್ವು  ಅಲ್ಲಿಂದ ಒಂದೊಂದಾಗಿ ಹೋಗ್ತಾ ಇತ್ತು. ಮಜಾ ಅಂದ್ರೆ ರಾತ್ರಿ 10 ಗಂಟೆ ಒಳಗೆ ನಿಮ್ಮ ಬರುವಿಕೆ ತಿಳಿಸಿ ಅಂತ ಇದ್ದ ಮೆಸೇಜ್ ಕೆಲವರಿಗೆ ತಲುಪುವಾಗ 10 ಗಂಟೆ ಮೇಲಾಗಿತ್ತು.

ಹಬ್ಬ ತುಂಬಾ ಚೆನ್ನಾಗಿ ಆಯ್ತು. ಕೆಲವರಿಗೆ ಹಬ್ಬಕ್ಕೆ ಬರುವ ಅವಕಾಶ ಸಿಗಲಿಲ್ಲ . ಮುಂದಿನ ಬಾರಿ ಹಬ್ಬ ಮಾಡುವಾಗ ಖಂಡಿತ ಚೆನ್ನಾಗಿ ಸ್ಥಳಾವಕಾಶ ಇರುವ ಜಾಗ ಆಯ್ಕೆ ಮಾಡಿಕೊಳ್ಳುತ್ತೇವೆ .

  • ಜ್ವರ
  • ಲಿನಕ್ಸ್ ಹಬ್ಬ
  • ಸಡಗರ
Ornamental seperator
  • Aravinda ರವರ ಬ್ಲಾಗ್
  • Login or register to post comments
  • 192 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 9, 2008 - 10:53am — vinayudupa

ಉ: ಲಿನಕ್ಸ್ ಹಬ್ಬದ ಜ್ವರ ಮತ್ತು ಸಡಗರ

vinayudupa's picture

ಅರವಿಂದ,

ನನಗೆ ಈಗ್ಲೂ ಸುವರ್ಣ ವಾಹಿನಿ ಹಾಕಿದಾಗ್ಲೆಲ್ಲ, ನಿನದೆ ನೆನಪು... Smiling.

ನಿನ್ ಮೆಸೇಜ್ ಭರಸಿಡಿಲಿನಂತೆ ಬಂದೆರಗಿ, ನನ್ನ ಸಡಗರ ವಂಚಿತನಾಗಿ ಮಾಡಿದ್ದು ಮರೆತಿಲ್ಲಪ್ಪ. Smiling

ಮಧ್ಯಾಹ್ನ ಕ್ರಿಕೆಟ್ ನೋಡೋಕೆ ಹೋಗಿದ್ರಿಂದ ಬರಲಿಲ್ಲ.

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
  • ಗ್ನು/ಲಿನಕ್ಸ್ ಹಬ್ಬದ ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ
  • ಬೆಂಗಳೂರಲ್ಲಿ ಲಿನಕ್ಸ್ ಹಬ್ಬ: ನೀವೂ ಬನ್ನಿ!
  • ಸ್ಕೈಪ್ - ಇಂಟರ್ನೆಟ್ ನಲ್ಲಿ ದೃಶ್ಯ ಮತ್ತು ಶ್ರಾವ್ಯ ಸಂವಾದ
  • ಗ್ನು/ಲಿನಕ್ಸ್ ಹಬ್ಬ - Volunteers meet :: ಶ್ರೀನಿಧಿ
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
  • ರಾಜ ಮುದ್ದು ರಾಜ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 6:16pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 12, 2008 - 5:56pm
  • ಸಂಗನಗೌಡ
    ಉ: ಒತ್ತಕ್ಷರಗಳು ಮತ್ತು ಸಂಯುಕ್ತಾಕ್ಷರಗಳು
    May 12, 2008 - 5:27pm
  • omshivaprakash
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 4:41pm
  • hpn
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 4:37pm
  • prasannasp
    ಉ: ದೊಡ್ಡದಾದ ಮಂಚ ???
    May 12, 2008 - 4:10pm
  • prasannasp
    ಉ: ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
    May 12, 2008 - 3:32pm
  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಕಣ್ಣಿಗೆ ಕಣ್ಣು ತತ್ವವು ಇಡೀ ಜಗತ್ತನ್ನು ಕುರುಡಾಗಿಸುವುದು

— ಮಹಾತ್ಮಾ ಗಾಂಧಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator