ಊಟದ ಸಮಯ
ಏನ್ ಜನಾನೋ ಯಪ್ಪಾ... ಊಟ ಮಾಡೋ ಟೈಮ್ ಅಲ್ಲಿ ಇಡ್ಲಿ ತಿಂತಾ ಕೂತಿದಾರೆ... ಅಂತ ಯೋಚಿಸುತ್ತಾ ಅಲ್ಲಿ ತಿನ್ನುತ್ತಾ ಕುಳಿತವ್ರನ್ನ ನೋಡ್ತಾ ವೆಜ್ ಪಾರ್ಕ್ ಒಳಗೆ ಹೋದೆ.
ಏನು ಕೊಡ್ಲಿ ಕೇಳಿದ... ಊಟ ಕೊಡ್ರೀ ಅಂದೆ.
"ಸಾರ್ ಊಟ ಕ್ಲೋಸ್ ಆಯ್ತು!"
"ಇಷ್ಟು ಬೇಗನಾ !? "
"ಮೂರು ಮುಕ್ಕಾಲಾಯ್ತು ಸಾರ್"
"ಓಹ್!.. ಸರಿ ಮತ್ತೇನಿದೆ?"
"ದೋಸೆ ಮತ್ತೆ ಇಡ್ಲಿ ಇದೆ"
ದೋಸೆಗೆ ಕಾದು ಕೂತ್ರೆ ಹಸಿವು ತಾಳಕ್ಕಾಗಲ್ಲ, ಇಡ್ಲಿ ಕೊಡಿ ಅಂದೆ.
----------------------
ನಗ್ಬೇಡ್ರೀ... ನೀವೇ ಹೇಳಿ ಇನ್ನೇನ್ ಮಾಡುಕ್ಕಾಗುತ್ತೆ :P
- Aravinda's blog
- Login or register to post comments
- 607 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಊಟದ ಸಮಯ
ಇವತ್ತೂ ವೆಜ್ಪಾರ್ಕೇನಾ? ಸರಿಹೋಯ್ತು! :P
ಅದ್ಸರಿ ಇವತ್ತಾಫೀಸಿಗೂ ಬಂದಿಲ್ಲಾ, ಮೂರೂಮುಕ್ಕಾಲ್ವರ್ಗೂ ಏನ್ಮಾಡ್ತಿದ್ದೇ?!
ಏನ್ಹುಡುಗ್ರೋ ಏನೋ, ಹೊತ್ಹೊತ್ತಿಗೂಟಾತಿಂಡೀತಿನ್ನೋಕೂ ಸೋಂಭೇರ್ತನಾ ... :P :D
ಉ: ಊಟದ ಸಮಯ
ಬೇರೆ ಕಡೆ ಹೋಗಣಾ ಅಂತನೇ ಹೊರ್ಟೆ, ಆದ್ರೆ ನನ್ನ ಬೈಕ್ ಅಲ್ಲಿಗೆ ತಗಂಡೋಗಿ ನಿಲ್ಲಿಸ್ತು...
ಉ: ಊಟದ ಸಮಯ
ಅರವಿಂದ್,
ಸರಿಯಾದ ಸಮಯಕ್ಕೆ ಊಟ ಮಾಡಲ್ಲ ಅಂತ ನಮ್ಮ ಅಮ್ಮ ಅಪ್ಪ ಕೂದ ಯಾವಾಗಲೂ ಬೈತ ಇರ್ತಾರೆ. ಆದ್ರೆ ನಮ್ಮ ಕ್ಯಾನ್ಟೀನು ಊಟಕ್ಕಿಂತ ತಿಂಡಿಯೇ ಏಷ್ಟೋ ಪರ್ವಾಗಿಲ್ಲ. ಹಾಗಾಗಿ ನಮಗೆ/ ನನಗೆ ಮಧ್ಯಾಹ್ನ ತಿಂಡಿಯೇ ಗತಿ.
ಸಾತ್ವಿಕ್ ಎನ್.ವಿ
ಉ: ಊಟದ ಸಮಯ
ಇದನ್ನೊಮ್ಮೆ ನೋಡಿ :)
http://sampada.net/b...
ಉ: ಊಟದ ಸಮಯ
ವೆಜ್ ಪಾರ್ಕಾ??
ನಮ್ ಹಳೇ ಅಡ್ಡ ಅದು!!
ಇತ್ತೀಚೆಗೆ ಅಲ್ಲಿಗೆ ಬರದೆ ತುಂಬಾ ಆಯ್ತು..
ಹೆಂಗಿದೆ ಈಗ ವೆಜ್ ಪಾರ್ಕು??
ಉ: ಊಟದ ಸಮಯ
ಓಹೋ.. ಹೌದಾ :)
ಪರವಾಗಿಲ್ಲ... ಸುಮಾರು ಸಲ ಊಟಕ್ಕೆ ಎಲ್ಲೋಗದು.. ಎಲ್ಲೋಗದು ಅಂದ್ಕೊಳ್ತಾ, ಕೊನೆಗೆ ಎಲ್ಲೂ ಡಿಸೈಡ್ ಆಗದೆ ವೆಜ್ ಪಾರ್ಕ್ ಗೆ ಹೋಗ್ತಿರ್ತೀವಿ.
ಉ: ಊಟದ ಸಮಯ
:D
ಮನ್ನಿಸಿ.. ನಗದೇ ಇರಕ್ಕಾಗ್ತಿಲ್ಲ
ಉ: ಊಟದ ಸಮಯ
:D
ಉ: ಊಟದ ಸಮಯ
6th ಮೇನ್ ಅಲ್ವಾ ನೀವು ಯಾವಾಗ್ಲೂ ಹೋಗ್ತಿದ್ದಿದ್ದು?
ಉ: ಊಟದ ಸಮಯ
ಈಗ ಸಲ್ಪ ಕಮ್ಮಿ ಆಗಿದೆ ಅಲ್ಲಿಗೆ ಹೋಗೋದು :)
ಉ: ಊಟದ ಸಮಯ
6th main ಗ್ಯಾಂಗು :)
ಉ: ಊಟದ ಸಮಯ
ಮನೆಯಲ್ಲಿ ಅಡುಗೆ ಮಾಡ್ಕೊಂಡ್ ಡಬ್ಬಿ ತಗೊಂಡೋಗೋದು ಉತ್ತಮ.
ಉ: ಊಟದ ಸಮಯ
ಬಿಸಿ ಬಿಸಿ ಊಟ ಆಗ್ಬೇಕು ಅನ್ನೋ ನಮ್ಮಂಥವರಿಗೆ ಕಷ್ಟ! ;-)
ಉ: ಊಟದ ಸಮಯ
ಇಡ್ಲಿ ಸ್ಟಾರ್ಟರ್ಸ್ ಇದ್ದಂಗೆ, ಅದ್ರ ಜೊತೆಗೆ ಹೊಟ್ಟೆ ತುಂಬೋಕೆ ದೋಸೆನೂ ಹೇಳಬಹುದಿತ್ತಪ್ಪ!
ಉ: ಊಟದ ಸಮಯ
ಅಲ್ವ? :)
ಇಡ್ಲಿ ಅರವಿಂದನಿಗೇ ಸಾಕಾಗ್ಬೇಕು.
ಉ: ಊಟದ ಸಮಯ
:)
ಉ: ಊಟದ ಸಮಯ
:)
ಉ: ಊಟದ ಸಮಯ
ಓಹ್.. ಅರೆರೆ ಹೌದಲ್ವಾ... :)
ಉ: ಊಟದ ಸಮಯ
ಅರವಿಂದ, ಇವರ್ ಗೊತ್ತಾಯ್ತು ನೋಡು ;) ನೀನಿಂಗ್ಯಾಕೆ ಅಂತ...