ಎಲ್ಲರಲ್ಲಿಯೂ ಪ್ರೀತಿ, ಸ್ನೇಹಗಳನ್ನು ಕಾಣುವುದಕ್ಕಿಂತ ಮಹದಾನಂದ ಯಾವುದಿದೆ?

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ

ನಮಸ್ಕಾರ,

ನನ್ನ ಬಳಿ ಕನ್ನಡದ ಹೊಸ ಓಪನ್ ಟೈಪ್ ಫಾಂಟ್ ಇಲ್ಲದ ಕಾರಣ ಕೆಲವು ಅಕ್ಸ್ಶರ ಗಳು ತಪ್ಪಾಗಿ ಬರುತ್ತಿವೆ. ದಯವಿಟ್ಟು ಪರಿಹಾರ ತಿಳಿಸಿ.

ಇನ್ನೊಂದು ಸಮಸ್ಯೆ ಎಂದರೆ ನಾನು ಸರಿಯಾದ ಫಾಂಟ್ ಬಳಸಿ ಬರೆದ ಕಡತವನ್ನು ಇನ್ನೊಬ್ಬರಿಗೆ ಕಳಿಸಿದಾಗ ಅವರಲ್ಲಿ ಸರಿಯಾದ ಫಾಂಟ್ ಇಲ್ಲದಿದ್ದರೆ ಅವರಿಗೆ ತಪ್ಪುಗಳು ಕಾಣಿಸುತ್ತದೆಯೇ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ನಿಮ್ಮ

ismail's picture

ನಿಮ್ಮ ಪ್ರಶ್ನೆ ಅಸ್ಪಷ್ಟವಾಗಿದೆ. ನೀವು ಮೈಕ್ರೋಸಾಫ್ಟ್ ಎಕ್ಸ್ ಪಿ ಬಳಕೆದಾರರಿರಬಹುದೆಂದು ಊಹಿಸಿ ಉತ್ತರಿಸಲು ಪ್ರಯತ್ನಿಸುತ್ತೇನೆ. ಮೈಕ್ರೋಸಾಫ್ಟ್ ನವರು ಒದಗಿಸುವ ತುಂಗಾ ಫಾಂಟ್ ನಲ್ಲಿ ಕೆಲವು ತೊಂದರೆಗಳಿವೆ. ಪರಿಣಾಮವಾಗಿ 'ಮೂ'ಎಂದು ಬರೆದರೆ 'ಮೊ' ಎಂಬಂತೆ ಕಾಣಿಸುತ್ತದೆ. 'ಯ' ಅಕ್ಷರದಲ್ಲೂ ಇದೇ ಸಮಸ್ಯೆ ಇದೆ. ಆದುದರಿಂದ ನೀವು ಏರಿಯಲ್ ಎಂಎಸ್  ಯೂನಿಕೋಡ್ ,  ಕೇದಗೆ ಇತ್ಯಾದಿ ಫಾಂಟ್ ಗಳನ್ನು ಬಳಸಬಹುದು. ಬಹಳ ಹಿಂದೆಯೇ ತುಂಗಾ ಫಾಂಟನ್ನು ಸರಿಪಡಿಸಲಾಗಿದೆಯಾದರೂ ಅದನ್ನು ಮೈಕ್ರೋಸಾಫ್ಟ್  ತನ್ನ ಆಪರೇಟಿಂಗ್ ಸಿಸ್ಟಂ ವಿತರಣೆಗಳ ಜತೆ ನೀಡುತ್ತಿಲ್ಲ.

ನನ್ನ ಬ್ಲಾಗ್ ನೋಡಿ

ವಂದನೆಗಳು

Aravinda's picture

ನಾನು ಎಕ್ಸ್ ಪಿ ಅನ್ನು ಬಳಸುತ್ತಿದ್ದೇನೆ. ನಿಮ್ಮ ಉತ್ತರಕ್ಕೆ ದನ್ಯವಾದಗಳು.

ನನಗೆ ಇನ್ನೊಂದು ಸಂದೇಹ ಇದೆ, ಈಗ ಕೇದಗೆಯನ್ನು ಬಳಸಿ ಯಾವುದಾದರೂ ವೆಬ್ ಸೈಟ್ ಮಾಡಿದರೆ ಅದನ್ನು ನೋಡುವವರಿಗೆ ಕೇದಗೆಯನ್ನು ತಲುಪಿಸುವುದು ಹೇಗೆ? ನನ್ನ ಕಂಪ್ಯೂತರ್ ನಲ್ಲಿ ಸರಿಯಾಗಿ ಕಾಣುವ ಪದಗಳು ಅಲ್ಲಿ ತಪ್ಪಾಗಿ ಕಾಣಬಹುದಲ್ಲವೇ?

 

ಧನ್ಯವಾದಗಳೊಂದಿಗೆ

ಅರವಿಂದ

http://www.belaku.net

ಯೂನಿಕೋಡ್ ಏನು ಎತ್ತ?

ismail's picture

ನೀವು ಇಂಗ್ಲಿಷ್ ನಲ್ಲಿ ವೆಬ್ ಸೈಟ್ ಮಾಡುವ ಫಾಂಟ್ ಬಗ್ಗೆ ತಲೆಕೆಡಿಸಿಕೊಳ್ಳುತ್ತೀರಾ? ಯೂನಿಕೋಡ್ ಎಂಬುದು ಜಾಗತಿಕ ಸ್ಟಾಂಡರ್ಡ್. ಮೊದಲಿನಂತೆ ಫಾಂಟ್ ಇನ್ ಸ್ಟಾಲ್ ಮಾಡಿಕೊಳ್ಳುವ ಸಮಸ್ಯೆ ಇದರಿಲ್ಲಿಲ್ಲ. ಹೆಚ್ಚಿನ ವಿವರಗಳಿಗೆ ಸಂಪದದ ಫಾಂಟ್ ಹೆಲ್ಪ್ ವಿಭಾಗ ನೋಡಿ ಪವನಜ ಅವರು ಬರೆದಿರುವ ಈ ಲೇಖನ ಓದಿ.

ಇಸ್ಮಾಯಿಲ್

ನನ್ನ ಬ್ಲಾಗ್ ನೋಡಿ

ಮತ್ತೆ ತೊಂದರೆ ಕೊಡುತ್ತಿದ್ದೇನೆ

Aravinda's picture

ನನಗೆ ಫಾಂಟ್ ಬಗ್ಗೆ ತಿಳಿಯಿತು. ಆದರೆ ನನ್ನ ಸಮಸ್ಯೆ ನಿಮಗೆ ತಿಳಿಯಲಿಲ್ಲವೆಂದೇ ಭಾವಿಸುತ್ತೇನೆ.

ನಾನು ಕನ್ನಡದಲ್ಲೇ ಅಂತರ್ಜಾಲ ಪುಟ ಮಾಡುತ್ತಿದ್ದೇನೆ. ನನ್ನ ಅಂತರ್ಜಾಲ ಪುಟ ನೋಡಿ http://www.belaku.net.

ನಾನು ಅಂತರ್ಜಾಲ ಪುಟ ಮಾಡುವಾಗ ಕೇದಗೆ ಯನ್ನು ಬಳಸುತ್ತೇನೆ ಅಂದುಕೊಳ್ಳಿ, ನನ್ನ ಅಂತರ್ಜಾಲ ಪುಟ ದ ವೀಕ್ಶಕರ ಹತ್ತಿರ ಕೇದಗೆ ಇರುವುದಿಲ್ಲ. ಆದರೆ ಅವರ ಹತ್ತಿರ ತುಂಗಾ ಇದ್ದರೂ ಇರಬಹುದು. ಆಗ ಅವರಿಗೆ ಅಕ್ಸರ ಗಳು ಹೇಗೆ ಕಾಣಿಸುತ್ತವೆ.(ನೋದುಗರು ಬೇರೆ ಗಣಕ ಯಂತ್ರದಲ್ಲಿ ನೋಡುತ್ತಾರೆ, ಕೇದಗೆ ಇನ್ಸ್ತಾಲ್  ಆಗಿರುವುದಿಲ್ಲ )

ಧನ್ಯವಾದಗಳೊಂದಿಗೆ

ಅರವಿಂದ

http://www.belaku.net

 

ಕೇದಗೆಗೆ ಒಂದು ಲಿಂಕ್ ಹಾಕಿ

ismail's picture

ನನಗೆ ತಿಳಿದಿರುವಂತೆ ಇದಕ್ಕಿರುವ ಉಪಾಯ ಒಂದೇ. ನಿಮ್ಮ ಸೈಟ್ ನಲ್ಲಿ ಕೇದಗೆ ಫಾಂಟ್ ಹಾಕಿದರೆ ಚೆನ್ನಾಗಿ ಕಾಣಿಸುತ್ತದೆ ಎಂದು ಬರೆದ ಕೇದಗೆಗೆ ಒಂದು ಲಿಂಕ್ ಕೊಡುವುದು. ನೀವು ಭಾವಿಸಿದಂತೆ ಕೇದಗೆ ಇಲ್ಲದ ಕಂಪ್ಯೂಟರ್ ಗಳಲ್ಲಿ ನಿಮ್ಮ ಸೈಟ್ ಕೆಟ್ಟದಾಗಿ ಕಾಣಿಸುವುದಿಲ್ಲ. ಒಂದೆರಡು ಅಕ್ಷರಗಳಲ್ಲಿ ಸಮಸ್ಯೆ ಇರುತ್ತದೆ ಅಷ್ಟೇ. ಅದು ಯೂನಿಕೋಡ್ ನಲ್ಲಿ ಕನ್ನಡ ಓದುವರಿಗೆಲ್ಲಾ ಗೊತ್ತೇ ಇದೆ. ಹರಿಪ್ರಸಾದ್, ಪವನಜ, ಸುನಿಲ್ ಜಯಪ್ರಕಾಶ್ ಈ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲ ನನಗೂ ಇದೆ. ನಾನೇನೂ ಕಂಪ್ಯೂಟರ್ ತಜ್ಞ ಅಲ್ಲ. ಈ ವಿಷಯದಲ್ಲಿ ಉತ್ತರ ನೀಡುವಂಥ ಇನ್ನೂ ಅನೇಕು ಸಂಪದ ಬಳಗದಲ್ಲಿದ್ದಾರೆ. 

ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

ಫಾಂಟ್ ಸ್ವಾತಂತ್ರ್ಯ

pavanaja's picture

ಯುನಿಕೋಡ್‌ನ್ನು ಬಳಸುವಾಗ ಒಂದು ಬಹಳ ಮುಖ್ಯವಾದ ಅಂಶ ಗಮನದಲ್ಲಿಟ್ಟುಕೊಳ್ಳಬೇಕು -ಯುನಿಕೋಡ್ ಮಾಹಿತಿ ಸಂಕೇತೀಕರಣದ ಶಿಷ್ಟತೆ. ಅದಕ್ಕೂ ಫಾಂಟ್‌ಗೂ ನೇರ ಅವಲಂಬನೆ ಇಲ್ಲ. ಯಾವ ಫಾಂಟ್ ಬೇಕಾದರೂ ಬಳಸಬಹುದು. ನಿಮ್ಮ ಗಣಕದಲ್ಲಿ ಯಾವ ಫಾಂಟ್ ಇದೆಯೋ ಅದನ್ನು ಬಳಸಿ ತಾಣವೀಕ್ಷಣೆ ಮಾಡಬಹುದು. ನೀವು ತಾಣವನ್ನು ಕೇದಗೆ ಬಳಸಿ ನಿರ್ಮಾಣ ಮಾಡಿದ್ದರೂ ನಾನು ಅದನ್ನು ತುಂಗ ಬಳಸಿ ನೋಡುವುದರಿಂದ ಯಾವ ಸಮಸ್ಯೆಯೂ ಇಲ್ಲ. ಇತ್ತೀಚೆಗಿನ ಎಲ್ಲ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ (ಆಪರೇಟಿಂಗ್ ಸಿಸ್ಟಮ್) (ಎಕ್ಸ್‌ಪಿ, ಲಿನಕ್ಸ್, ಮ್ಯಾಕ್, ..) ಯುನಿಕೋಡ್ ಸೌಲಭ್ಯವಿದೆ. ಕನ್ನಡದ ಓಪನ್‌ಟೈಪ್ ಫಾಂಟ್ ಇದ್ದವರೆಲ್ಲ ಕನ್ನಡ ಯುನಿಕೋಡ್ ತಾಣಗಳನ್ನು ಸರಿಯಾಗಿ ಓದಬಹುದು. ಕೆಲವು ಕನ್ನಡ ಓಪನ್‌ಟೈಪ್ ಫಾಂಟ್‌ಗಳು -ತುಂಗ, ಸಂಪಿಗೆ, ಕೇದಗೆ, ಮಲ್ಲಿಗೆ, ರಘು, ಜನಕನ್ನಡ, Arial Unicode MS.

ನಿಮ್ಮ ತಾಣ ವೀಕ್ಷಕರು ನೀವು ಬಳಸಿದ ಕೇದಗೆ ಫಾಂಟ್‌ನಲ್ಲೇ ನಿಮ್ಮ ತಾಣವನ್ನು ವೀಕ್ಷಿಸಬೇಕು ಎಂಬ ಹಠ ನಿಮಗಿದ್ದರೆ ಅದಕ್ಕೂ ಪರಿಹಾರವಿದೆ. ಆದರೆ ಈ ಪರಿಹಾರ ವಿಂಡೋಸ್‌ ಬಳಸುವವರಿಗೆ ಮಾತ್ರ ಅನ್ವಯಿಸುತ್ತದೆ. ನೀವು ಕೇದಗೆ ಫಾಂಟ್‌ನ್ನು ಡೈನಮಿಕ್ ಫಾಂಟ್ ಆಗಿ ಪರಿವರ್ತಿಸಿ (.eot file) ನಿಮ್ಮ ತಾಣದಲ್ಲಿ ಹಾಕಿ ಅದನ್ನು ಸೂಕ್ತ ಆದೇಶದ ಮೂಲಕ ನಿಮ್ಮ ಪುಟದಿಂದ ಕೊಂಡಿ ನೀಡಿದರೆ ನಿಮ್ಮ ಪುಟವು ಎಲ್ಲ ವೀಕ್ಷಕರಿಗೂ ಕೇದಗೆ ಫಾಂಟ್‌ನಲ್ಲೇ ನೋಡಿದಂತಾಗುತ್ತದೆ. ಈ ವಿಧಾನವನ್ನು ಬಳಸುವುದರಿಂದ ಇನ್ನೊಂದು ಲಾಭವೂ ಇದೆ. ವಿಂಡೋಸ್ 98 ಬಳಸುವವರೂ ಆಗ ನಿಮ್ಮ ತಾಣ ವೀಕ್ಷಣೆ ಮಾಡಬಹುದು.

ಸಿಗೋಣ,
ಪವನಜ
-----------
Vishva Kannada
Think globally, Act locally

ಪ್ರಯತ್ನ ಉತ್ತಮವಾಗಿದೆ.

ರಘುನಂದನ's picture

ಬೆಳಕು ತಂದ ಬಾಲಕರೇ(?) ಸೈಟು ಮಾಡುವ ನಿಮ್ಮ ಪ್ರಯತ್ನಕ್ಕೆ ಟೋಪಿ ಎತ್ತುವೆ. ಆದರೆ ಸೈಟು ನೋಡಿದಾಗ ನನಗೆ ಅನಿಸಿದ ಅಭಿಪ್ರಾಯಗಳನ್ನು ನಾನು ಹೇಳುತ್ತೇನೆ. ದಯವಿಟ್ಟು ಬೇಸರಿಸದಿರಿ, ನೀವೆಂದಂತೆ ನಿಮ್ಮ ಸೈಟಿನ ಫಾಂಟುಗಳು ನನ್ನ ಕಂಪ್ಯೂಟರಿನಲ್ಲಿ ಸಂಪೂರ್ಣವಾಗಿ ಮೂಡಿಬರಲಿಲ್ಲ. ಮುರಿದಹೋದ ಗರಿಗರಿ ಚಕ್ಕುಲಿಯಾಗಿಹೋಗಿದ್ದವು. ಪವನಜರ ತಂತ್ರವನ್ನುಪಯೋಗಿಸಿ ನೋಡಿ.

ಬೆಳಕು ಎಂದು ಬರೆದು ಬೆಂಕಿಯನ್ನು ತೋರಿಸಿದರೆ ನನಗೆ ಹೆದರಿಕೆಯಾಗುತ್ತೆ ಸ್ವಾಮಿ, ಇನ್ನೂ ಉತ್ತಮವಾದ ಚಿತ್ರವನ್ನು ಹಾಕಬಹುದೇನೊ?

ಆಮೇಲೆ http://www.belaku.ne... ಈ ಪೇಜಿನಲ್ಲಿ ಟೈಟಲ್ಲು ಸಿಕ್ಕಾಪಟ್ಟೆ ಓಡಿ ಹೋಗ್ತಾ ಇದೆ, ಸ್ವಲ್ಪ ಸ್ಪೀಡು ಕಮ್ಮಿಯಿರಲಿ.

ಎನಗಿಂತ ಕಿರಿಯರಿಲ್ಲ

ರಘುನಂದನ

hpn's picture

ರಘುನಂದನ wrote:

ಬೆಳಕು ಎಂದು ಬರೆದು ಬೆಂಕಿಯನ್ನು ತೋರಿಸಿದರೆ ನನಗೆ ಹೆದರಿಕೆಯಾಗುತ್ತೆ ಸ್ವಾಮಿ, ಇನ್ನೂ ಉತ್ತಮವಾದ ಚಿತ್ರವನ್ನು ಹಾಕಬಹುದೇನೊ?

'ರಘುನಂದನ'ರೆಂದು ಹೂವಿನಲ್ಲಿ ಮಗುವೊಂದನ್ನು ಹಾಕಿಕೊಂಡಿದ್ದೀರಲ್ಲ. ಅದು ಉಲ್ಟಾ ಆಗಲಿಲ್ವೆ? ;-)

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

;)

ರಘುನಂದನ's picture

ಅರೆರೆ ಹೌದಲ್ವ! ನಾನು "ರಘುನಂದನ" ಎಂದು ಹೆಸರಿಟ್ಟುಕೊಂಡು ಹೂವಿನಲ್ಲಿ ಮಗುವೊಂದು ಇರುವ ಚಿತ್ರವನ್ನು ಹಾಕಿಕೊಂಡಿದ್ದೇನೆ.

ಆದರೆ ಉಲ್ಟಾ ಹೇಗಾಯಿತೋ?

ಎನಗಿಂತ ಕಿರಿಯರಿಲ್ಲ