Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Aravinda ರವರ ಬ್ಲಾಗ್

ಸೊಳ್ಳೆ ಬೇಟೆ :)

March 15, 2008 - 11:11am — Aravinda

ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ.

ಪ್ರಯೋಗ ಒಂದು
ನಾನು ಮಲಗೋ ಜಾಗದಿಂದ ಸಲ್ಪ ದೂರ ನಿಲ್ಲೋದು, ಸೊಳ್ಳೆ ನಾನು ಮಲ್ಗಿರೊ ಜಾಗಕ್ಕೆ ಹೊಗಿ ಹುಡುಕುತ್ತೆ ಅವಾಗ ಟಪ್ ಅಂತ ಹಿಡಿದು ಬಿಡೊದು ಅಂತ ಪ್ಲಾನ್ ಮಾಡಿದೆ. ಸೊಳ್ಳೆ ಬಂದ ತಕ್ಷಣ ಹೊಡೆಯಕ್ಕೆ ಎಲ್ಲಾ ತಯಾರಿ ಮಾಡಿಕೊಂಡು ನಿಂತೆ, ಸಲ್ಪ ಹೊತ್ತಿಗೆ ಕಾಲಿಗೆ ಏನೋ ಕಚ್ಚಿದಂಗಾಯ್ತು !. ಅದಕ್ಕೆ ನನ್ನ ಪ್ಲಾನ್ ಎಲ್ಲಾ ಹೆಂಗೋ ಗೊತ್ತಾಗಿ ಬಿಟ್ಟಿತ್ತು ಹಂಗಾಗಿ ಹಿಂದಿನಿಂದ ಅಟ್ಯಾಕ್ ಮಾಡಿತ್ತು. ಈ ಪ್ಲಾನ್ ಯಾಕೋ ಸರಿಯಿಲ್ಲ ಅಂತ ಬೇರೆ ಯೋಚ್ನೆ ಮಾಡಕ್ಕೆ ಶುರು ಮಾಡಿದೆ.

ಪ್ರಯೋಗ ಎರಡು
ಪೂರ್ತಿ ಹೊದಿಕೆ ಹೊದ್ದು ನಿದ್ರೆ ಬಂದಂತೆ ನಟಿಸೋದು, ಎಡಕೈ ಸಲ್ಪ ಹೊರಗೆ ಇಟ್ಟು ಕೊಳ್ಳೋದು ಬಲಗೈ ನ ಸೊಳ್ಳೆ ಹೊಡೆಯಕ್ಕೆ ರೆಡಿಯಾಗಿ ಇಟ್ಕೋಳದು ಅಂತ ಯೋಚಿಸಿ ಅದರಂತೆ ಎಲ್ಲಾ ವ್ಯವಸ್ತೆ ಮಾಡಿದೆ. ನನ್ನ ಪ್ಲಾನ್ ಬಗ್ಗೆ ನಂಗೇ ಹೆಮ್ಮೆ ಅನ್ನಿಸ್ತಿತ್ತು. ನಾನು ನನ್ನ ಎಡ ಕೈ ನ ನೋಡ್ತಾ ಹೊಂಚು ಹಾಕ್ತಿದ್ದೆ, ಸೊಳ್ಳೆ ನನ್ನ ಹತ್ತಿರ ಬಂದ ಅನುಭವ ಆಗುತ್ತಿತ್ತು. ಇದ್ದಕ್ಕಿದ್ದಂತೆ ಸೊಳ್ಳೆ ಯ ಗುಯ್ ನಿಂತಂತಾಯ್ತು ನಾನು ಮತ್ತೂ ಅಲರ್ಟ್ ಆದೆ, ಆದರೆ ಅದು ನನ್ನ ಕೈ ಬಿಟ್ಟು ಮುಖಕ್ಕೆ ಗುರಿ ಇಟ್ಟಿತ್ತು ನಾನು ಹೊಡೆಯಕ್ಕೆ ಕೈ ಎತ್ತೋ ಅಷ್ಟರಲ್ಲಿ ಅದು ಓಡಿ ಹೋಗಿತ್ತು. ಛೆ ತುಂಬಾ ವಿಶ್ವಾಸ ಇದ್ದ ಪ್ರಯೋಗ ಹಿಂಗಾಯ್ತಲ್ಲ ಅಂತ ಬೇಜಾರಾಯ್ತು.

ಪ್ರಯೋಗ ಮೂರು
ಜೋರು ನಿದ್ರೆ ಬರ್ತಿದೆ ಹಾಳಾದ್ದು ಈ ಸೊಳ್ಳೆ ಸಿಕ್ತಿಲ್ವಲ್ಲಾ ಅಂತ ಬೈಕೋತಾ ಇದ್ದೆ ಅಷ್ಟರಲ್ಲಿ ಮತ್ತೊಂದು ಯೋಚ್ನೆ ಬಂತು! ಹೆಂಗೂ ಒಂದೆ ಸೊಳ್ಳೆ ಇರೋದು ಒಂದ್ಸಲ ರಕ್ತ ಕುಡಿದ್ರೆ ಅದ್ರ ಹೊಟ್ಟೆ ತುಂಬೋಗತ್ತೆ, ಅದಕ್ಕೆ ಒಂದ್ಸಲ ಹೆಂಗಾರ ಸಹಿಸ್ಕೋಂಬಿಡದು ಅಂತ ಅಂದ್ಕೊಂಡು ಲೈಟ್ ಆಫ್ ಮಾಡಿ ಮಲಗಿದೆ. ಸೊಳ್ಳೆ ಬಂದೇ ಬಿಡ್ತು, ನಾನು ಮನಸು ಗಟ್ಟಿ ಮಾಡ್ಕೊಂಡೆ. ಸಲ್ಪ ಹೊತ್ತಿಗೆ ಅದ್ರ ಸದ್ದೂ ನಿಂತೋಯ್ತು, ನನ್ನ ಕೈ ಆಟೋಮ್ಯಾಟಿಕ್ ಆಗಿ ಹೋಗಿ ನನ್ನ ಕೆನ್ನೆಗೆ ಹೊಡೆದಿತ್ತು. ಸೊಳ್ಳೆ ಯ ಸದ್ದು ಶಾಶ್ವತ ವಾಗಿ ನಿಂತಿತ್ತು. ನನ್ಗೆ ನಂಬಕ್ಕೇ ಆಗ್ಲಿಲ್ಲ ಸಲ್ಪ ಹೊತ್ತು! ಕತ್ತಲಲ್ಲೇ ಸೊಳ್ಳೆ ಹೊಡೆದೆ, ಎಂತಾ ಗುರಿ! ಎಷ್ಟು ಹೊಗಳಿದ್ರೂ ಸಾಲದು ಅಂತ ಅಂದುಕೊಂಡು ಮಲಗಿದೆ.

  • ಸುಮ್ಮನೆ
  • ಹರಟೆ
  • ಹಾಸ್ಯ
Ornamental seperator
  • Aravinda ರವರ ಬ್ಲಾಗ್
  • Login or register to post comments
  • 201 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 15, 2008 - 10:31pm — Sunil Jayaprakash

ಉ: ಸೊಳ್ಳೆ ಬೇಟೆ :)

Sunil Jayaprakash's picture

"ಸೊಳ್ಳೆ ಸಾಯಿಸಿದ ವೀರ"ನಿಗೆ ಬಹುಪರಾಕ್, ಬಹುಪರಾಕ್.

  • Login or register to post comments
  • link
  • Email this ಪ್ರತಿಕ್ರಿಯೆ
March 16, 2008 - 11:35am — ಸಂಗನಗೌಡ

ಉ: ಸೊಳ್ಳೆ ಬೇಟೆ :)

ಸಂಗನಗೌಡ's picture

ನೊಣ ಹಿಡಿಯೋಕೆ ಒಂದ್ ಐಡಿಯ ಇದೆ,.. ಹೆಬ್ಬೆಟ್ಟು ಮತ್ತು ತೋರುಬೆಟ್ಟು ಸೇರಿಸಿ ಒತ್ತಿ ಹಿಡಿದಿರಬೇಕು, ತುದಿಗೆ ಸಿಹಿಯ ಒಂದು ಸಣ್ಣ ಹನಿ ಇರಲಿ. ನೊಣ ಬರುತ್ತೆ, ತಟ್ಟನೆ ಬೆಟ್ಟುಗಳ ತುದಿಯಗಳನ್ನು ಕೂಡಿಸಿ ಬಿಡಿ. ನೊಣದ ಕಾಲು ಸಿಕ್ಕೇ ಸಿಗುತ್ತೆ... ಎಸ್ಟು ಒದ್ದಾಡಿದರೂ ಬಿಡಬೇಡಿ, ಆಮೇಲೆ ಅದನ್ನು ಬಾಟಲಿಯ, ಜೈಲಿನಲ್ಲಿ ಇಡಬಹುದು. ನಮ್ ತಿನಿಸುಗಳ ಮೇಲ್ ಕೂತು ಕೊಳಕ್ ಮಾಡೋದು, ರೋಗಗಳನ್ನು ಹರಡೋದು ಹಿಂಗೆ ಹತ್ತು ಹಲವು ಬಗೆಯಲ್ಲಿ ತೊಂದರೆ ಕೊಡೋ ನೊಣಕ್ಕೆ ಹಿಂಗ್ ಮಾಡಿದ್ರೆ ತಪ್ಪಿಲ್ಲ,,.. ಏನಂತೀರ? Smiling

  • Login or register to post comments
  • link
  • Email this ಪ್ರತಿಕ್ರಿಯೆ
March 16, 2008 - 1:22pm — Aravinda

ಉ: ಸೊಳ್ಳೆ ಬೇಟೆ :)

Aravinda's picture

ಐಡಿಯಾ ಬೊಂಬಾಟ್ ಆಗಿದೆ, ಆದರೆ ನನ್ನ ರೂಮಲ್ಲಿ ನೊಣ ಇನ್ನೂ ಬಂದಿಲ್ಲ Laughing out loud

ಧನ್ಯವಾದಗಳೊಂದಿಗೆ
ಅರವಿಂದ
http://www.belaku.net

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದಿಷ್ಟು ಒಣ ತರಲೆ
  • ಶ್ರೀಹರಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಂಡಿದ್ದು ಹೇಗೆ?
  • ವಲಸೆ
  • ಮೂಲಾನಕ್ಷತ್ರದ ಅನಿಷ್ಟದವಳೇ....
  • ಕವಲ್ ದಾರಿ
Syndicate content

ಲೇಖಕರು

Aravinda's picture

ಪೂರ್ಣ ಹೆಸರು
ಅರವಿಂದ

ಪರಿಚಯ

ನನ್ನ ಊರು ಶ್ರಿಂಗೇರಿ ಹತ್ತಿರದಲ್ಲಿರುವ ಉತ್ತಮೇಶ್ವರ ಎಂಬ ಹಳ್ಳಿ.
ನನಗೆ ಕುಂಗ್ ಫು, ಅಂತರ್ಜಾಲ ತಂತ್ರಜ್ಞಾನ ಹಾಗೂ ಮುಕ್ತ ತಂತ್ರಾಂಶಗಳಲ್ಲಿ ಆಸಕ್ತಿ.
ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ. ವೃತ್ತಿಯಲ್ಲಿ ತಂತ್ರಾಂಶ ತಂತ್ರಜ್ನ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:10pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ |
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ ||

— ಡಿ.ವಿ.ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator