ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ?
WYSIWYG ಎಂದರೆ What You See Is What You Get ಎಂದರ್ಥ.
ಅಂತರ್ಜಾಲ ಪುಟ ಮಾಡಲು ಅಥವಾ ಎಡಿಟ್ ಮಾಡಲು ಕೆಲವೊಂದು ಎಡಿಟರ್ ಗಳನ್ನ ಬಳಸುತ್ತೇವೆ.(ಉದಾ NVU), Editor ಬದಲಿಗೆ ಬ್ರೌಸರ್ ಅನ್ನೇ ಎಡಿಟರ್ ಆಗಿ ಬಳಸಬಹುದು. ಇದರ ಉಪಯೋಗ ಏನೆಂದರೆ on the fly ಅಂತರ್ಜಾಲ ಪುಟ ಮಾಡಬಹುದು.
ನಿಮ್ಮ ಅಂತರ್ಜಾಲ ಪುಟ ಅಥವಾ ಯಾವುದಾದರೂ ಅಂತರ್ಜಾಲ ಪುಟ open ಮಾಡಿ ಈ ಕೆಳಗಿನ ಸ್ಕ್ರಿಪ್ಟ್ ಅನ್ನು address bar ನಲ್ಲಿ paste ಮಾಡಿ. (javascript enable ಆಗಿರಬೇಕು). ಈಗ ನಿಮ್ಮ ಎಡಿಟರ್ ರೆಡಿ.
javascript:document.contentEditable='true'; document.designMode='on'; void 0
ಎಲ್ಲ ಬದಲಾವಣೆ ಮಾಡಿದ ಮೇಲೆ save as ಅಂತ ಬೇರೆ ಕಡೆ save ಮಾಡಿ. ಇದು internet explorer ನಲ್ಲೂ ಮಾಡಬಹುದಂತೆ, ಆದರೆ ನನಗೆ ಆಗಲಿಲ್ಲ ನೀವು ಟ್ರೈ ಮಾಡಿ ನೋಡಿ.

- Aravinda ರವರ ಬ್ಲಾಗ್
- Login or register to post comments
- 589 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ?
Nvu ಈಗ standard repo ಇಂದ ತೆಗೆದುಹಾಕಿಬಿಟ್ಟಿದ್ದಾರೆ ಅಲ್ವ? ಬಹುಶಃ ಲೈಸೆನ್ಸ್ ಬದಲಾಯಿತು ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ?
ಹಾಗೇನಿಲ್ಲ. ಲೈಸೆನ್ಸ್ ಇವಾಗ್ಲೂ MPL ನಲ್ಲೇ ಇದೆ. ಆದರೆ ಅದು ಪ್ರಾರಂಭ ಆದಾಗಿಂದ ಏನೂ ಡೆವಲಪ್ಮೆಂಟ್ ಮಾಡಿದಂಗೆ ಕಾಣಲ್ಲ. (Integration with other languages, SVN ಸಪೋರ್ಟು etc). ಆದರೆ html ಮತ್ತು css ಎಡಿಟ್ ಮಾಡಲು ತುಂಬಾ ಚೆನ್ನಾಗಿದೆ. ಅವ್ರು ಯಾಕೆ ರೆಪಾಸಿಟರಿಯಿಂದ ತೆಗ್ದಿದಾರೋ ಗೊತ್ತಿಲ್ಲ.
ನಿಮ್ಮವನೇ,
ಅರವಿಂದ
http://www.belaku.net
ಉ: ಫೈರ್ ಫಾಕ್ಸ್ ಬ್ರೌಸರ್ ಅನ್ನು WYSIWYG editor ಆಗಿ ಬಳಸುವುದು ಹೇಗೆ?
NVU ಡೆವಲಪ್ ಮೆಂಟ್ ನಿಲ್ಲಿಸಿದ್ದರಿಂದ, ಅದರ ತೊಂದರೆಗಳನ್ನು ಸರಿಪಡಿಸಲು Kompozer (http://www.kompozer.net) ಅನ್ನೋ ಪ್ರಾಜೆಕ್ಟ್ ಅನ್ನ ಪ್ರಾರಂಬಿಸಿದರು. ಅದು ಉಬಂಟು ರೆಪಾಸಿಅಟರಿಯಲ್ಲಿ ಇದೆ ಅನ್ಸುತ್ತೆ.
https://help.ubuntu.com/community/Kompozer
ನಿಮ್ಮವನೇ,
ಅರವಿಂದ