19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪಾಕಿಸ್ತಾನದ ದೇವಾಲಯಗಳು

February 5, 2010 - 3:05pm
arshad

ಪಾಕಿಸ್ತಾನ ಎಂದಾಕ್ಷಣ ಕಣ್ಣೆದುರಿಗೆ ಮೂಡಿಬರುವುದು ಒಂದು ಮುಸ್ಲಿಂ ರಾಷ್ಟ್ರ. ಆದರೆ ಸ್ವಾತಂತ್ರ್ಯಪೂರ್ವದಲ್ಲಿ ಪಾಕಿಸ್ತಾನ ಅಖಂಡ ಭಾರತದ ಒಂದು ಅಂಗವಾಗಿತ್ತು. ಭಾರತದಲ್ಲಿದ್ದ ವಿವಿಧ ಧರ್ಮೀಯರೂ ಅಲ್ಲಿದ್ದರು. ತಾವು ಸ್ಥಿತರಿದ್ದಲ್ಲಿ ಆರಾಧಾನಾಲಯ, ದೇಗುಲಗಳನ್ನೂ ನಿರ್ಮಿಸಿದ್ದರು.

ವಿಭಜನೆಯ ಬಳಿಕ ಜನರು ಭಾರತ ಪಾಕಿಸ್ತಾನಗಳಲ್ಲಿ ಹಂಚಿಹೋದರೂ ಅವರು ನಿರ್ಮಿಸಿದ್ದ ದೇವಾಲಯಗಳು ಹಾಗೇ ಉಳಿದವು. ಪಾಕಿಸ್ತಾನದಲ್ಲಿರುವ ಹಲವಾರು ದೇವಾಲಯಗಳ ಪೈಕಿ ಪ್ರಮುಖವಾದುದನ್ನು ಸಂಗ್ರಹಿಸಿ ಈ ಕೆಳಗೆ ನೀಡಲಾಗಿದೆ:

1) ಪಂಜಾಬ್ ರಾಜ್ಯದಲ್ಲಿರುವ ಕಟಾಸ್ ರಾಜ್ ದೇವಾಲಯ -
 
ಲಾಹೋರ್ ಬಳಿಯ ಚಕ್ವಾಲ್ ಜಿಲ್ಲೆಯಲ್ಲಿದೆ ಕಟಾಸ್ ರಾಜ್ ದೇವಾಲಯ. ಮಹಾಭಾರತದ ಕಾಲದ ಇದೊಂದು ಶಿವಾಲಯವಾಗಿದ್ದು ಮಹಾಭಾರತದ ಕಾಲದಲ್ಲಿ ಪಾಂಡವರು ಹದಿನಾಲ್ಕು ವರ್ಷದ ವನವಾಸದ ಅವಧಿಯಲ್ಲಿ ನಾಲ್ಲ್ಕು ವರ್ಷಗಳನ್ನು ಈ ದೇವಾಲಯದ ಸುತ್ತಮುತ್ತ ಕಳೆದರು ಎಂದು ನಂಬಲಾಗಿದೆ.

ಈ ದೇವಾಲಯದ ಇತಿಹಾಸದಲ್ಲಿ ಪುರಾಣದ ಕಥೆಯೊಂದು ಅಡಕವಾಗಿದೆ. ಶಿವನ ಪತ್ನಿ ಸತಿ ಸ್ವರ್ಗಸ್ಥಳಾದಾಗ ದುಃಖಿತನಾದ ಶಿವ ಸುರಿಸಿದ ಅಶ್ರುಗಳು ಎರೆಡು ಪವಿತ್ರ ಕೆರೆಗಳನ್ನು ಸೃಷ್ಟಿಸಿದವು. ಒಂದು ಭಾರತದ ಅಜ್ಮೇರಿನಲ್ಲಿರುವ ಪುಷ್ಕರ್ ಕೆರೆಯಾದರೆ ಇನ್ನೊಂದು ಕಟಾಸ್ ರಾಜ್ ದೇವಾಲಯದ ಆವರಣದಲ್ಲಿವೆ.

2) ಪಂಜಾಬ್ ರಾಜ್ಯದ ಇಸ್ಲಾಮಾಬಾದ್ ಸಮೀಪದ ರೋಹ್ಟಾಸ್ ಕೋಟೆಯಲ್ಲಿರುವ ದೇವಾಲಯ:

3) ಪಂಜಾಬ್ ರಾಜ್ಯದಲ್ಲಿರುವ ಕಾಲಾಬಾಘ್ ಬಳಿಯ ಮಾರಿ ಇಂಡಸ್ ಕಣಿವೆಯಲ್ಲಿರುವ ದೇವಾಲಯ:
4) ಪಂಜಾಬ್ ರಾಜ್ಯದ ರಾವಲ್ಪಿಂಡಿಯಲ್ಲಿರುವ ದೇವಾಲಯ:

5) ಬಲೂಚಿಸ್ತಾನದ ಹಿಂಗೋಲ್ ರಾಷ್ಟೀಯ ಉದ್ಯಾನವನದಲ್ಲಿರುವ ಹಿಂಗ್ರಾಜ್ ಮಂದಿರ್ ಅಥವಾ ನಾನಿ ಮಂದಿರ್:
ಈ ಮಂದಿರದ ಇತಿಹಾಸದಲ್ಲಿಯೂ ಒಂದು ಪುರಾಣದ ಕಥೆಯಿದೆ. ಶಿವನ ಪತ್ನಿ ಸತಿ ಸ್ವರ್ಗಸ್ಥಳಾದ ಬಳಿಕ ದುಃಖದಲ್ಲಿದ್ದ ಶಿವ ತಾಂಡವನೃತ್ಯ ಪ್ರಾರಂಭಿಸಿದನಂತೆ. ಈ ತಾಂಡವನೃತ್ಯವನ್ನು ನಿಲ್ಲಿಸಲು ವಿಷ್ಣು ಸತಿಯ ಕಳೇಬರವನ್ನು ಐವತ್ತೆರೆಡು ಭಾಗಗಳನ್ನಾಗಿ ವಿಭಾಗಿಸಿ ಅಖಂಡ ಭಾರತದ ವಿವಿಧ ಸ್ಥಳಗಳಲ್ಲಿ ವಿಸರ್ಜಿಸಿದನಂತೆ. ಆಗ ತಲೆಯ ಭಾಗ ಬಿದ್ದ ಸ್ಥಳವನ್ನೇ ಇಂದು ಹಿಂಗ್ಲಾಜ್ ಮಂದಿರ್ ಅಥವಾ ನಾನಿ ಮಂದಿರ್ ಎಂದು ಕರೆಯಲಾಗುತ್ತಿದೆ.

ಈ ಸ್ಥಳದಲ್ಲಿ ಸಿಕ್ಕಿರುವ ಶಿಲಾಶಾಸನದ ಪ್ರಕಾರ ಬ್ರಾಹ್ಮಣ ಹಾಗೂ ಶಿವಭಕ್ತನಾಗಿದ್ದ ರಾವಣನನ್ನು ವಧಿಸಿದ ಪಾಪವನ್ನು ಪರಿಹರಿಸಿಕೊಳ್ಳಲು ರಾಮ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದ.
6) ಸಿಂಧ್ ಪ್ರಾಂತದಲ್ಲಿರುವ ಉಮರ್ ಕೋಟ್ ನ ದೇವಾಲಯ:

೭) ಪಂಜಾಬಿನ ಸಿಯಾಲ್ ಕೋಟ್ ನಲ್ಲಿರುವ ದೇವಾಲಯ:

8) ಸಿಂಧ್ ಪ್ರಾಂತದಲ್ಲಿರುವ ರೋಹ್ರಿಯ ಬಳಿಯ ಅರೋರೆಯ ಕಾಲ್ಕಾ ಗುಹಾ ದೇವಾಲಯ:

9) ಪಂಜಾಬಿನ ಜೋಗಿಯಾನ್ ಟಿಲ್ಲಾದಲ್ಲಿರುವ ದೇವಾಲಯ:
10) ಲಾಹೋರ್ ನಗರದಲ್ಲಿರುವ ಅನಾರ್ಕಲಿ ಬಾಜಾರ್ ನಲ್ಲಿರುವ ದೇವಾಲಯ:

11) ಪಂಜಾಬಿನ ರಾವಲ್ಪಿಂಡಿ ನಗರದಲ್ಲಿರುವ ಜುಮಾ ಮಸೀದಿಯ ಹಿಂಬದಿಯ ದೇವಾಲಯ:

12) ಕರಾಚಿ ನಗರದ ಮನೋರಾ ಕಂಟೋನ್ಮೆಂಟ್ ಪ್ರದೇಶದ ವರುಣದೇವನ ದೇವಾಲಯ

ಸುಮಾರು ನೂರಾಅರವತ್ತು ವರ್ಷಗಳ ಹಿಂದೆ ಕಟ್ಟಲಾದ ಈ ದೇವಾಲಯವನ್ನು ದೇಶ ವಿಭಜನೆಯಾದ ಕಾಲದಲ್ಲಿ ಪರಿತ್ಯಕ್ತಗೊಳಿಸಲಾಗಿತ್ತು. ಈ ಅವಕಾಶವನ್ನು ಅಲ್ಲಿನ ಭೂಮಾಲಿಕರು ಉಪಯೋಗಿಸಿಕೊಂಡು ದೇವಾಲಯವನ್ನು ಅತಿಕ್ರಮಿಸಿಕೊಂಡಿದ್ದರು. ಸುಮಾರು ಅರವತ್ತು ವರ್ಷಗಳ ಬಳಿಕ ಪಾಕಿಸ್ತಾನದ ಹಿಂದೂ ಕೌಂಸಿಲ್ ಈ ದೇವಾಲಯದ ಮೇಲೆ ತನ್ನ ಹಕ್ಕುಸ್ವಾಮ್ಯ ಸಾಧಿಸಿ ನವೀಕರಣಗೊಳಿಸಿದೆ.
13) ಪಂಜಾಬಿನ ತಕ್ಷಿಲಾ ದ ದೇವಾಲಯ:

14) ಸಿಂಧ್ ರಾಜ್ಯದಲ್ಲಿರುವ ಸಾಧು ಬೇಲಾ ದೇವಾಲಯ

15) ಪಂಜಾಬಿನ ಲಡ್ಡಾನ್ ಬಳಿಯ ವೆಹಾರಿಯಲ್ಲಿರುವ ದೇವಾಲಯ
16) ಥಾರ್ ನಗರದ ದೇವಾಲಯ
17) ಸಿಂಧ್ ರಾಜ್ನ್ಯದ ನಗರ್ ಪಾರ್ಕರ್ ನಲ್ಲಿರುವ ದೇವಾಲಯ:

18) ಪಂಜಾಬಿನ ಗುಜ್ರಾನ್ವಾಲಾದ ಘಕ್ಕರ್ ಮಂಡಿಯಲ್ಲಿರುವ ತೂಮ್ರಿ ದೇವಾಲಯ:

19) ಪಂಜಾಬಿನ ಮಲೋಟ್ ನಗರದ ದೇವಾಲಯ:

20)ಪಂಜಾಬಿನ ಗುಜ್ರಾನ್ವಾಲಾದಲ್ಲಿರುವ ಶ್ರೀ ಬಡೋಕಿ ದೇವಾಲಯ:

21) ಪಂಜಾಬಿನ ಲಾಹೋರ್ ನಗರದ ದೇವಾಲಯ:

22) ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ದೇವಿ ದೇವಾಲಯ:

ಭಾರತ ಪಾಕಿಸ್ತಾನ ಗಡಿಯ ಬಳಿಯಲ್ಲಿರುವ ನೀಲಂ ಕಣಿಯಲ್ಲಿದೆ ಈ ದೇವಾಲಯ. ಈ ಸ್ಥಳ ಬೌದ್ಧರ ಶಿಕ್ಷಣಾಕೇಂದ್ರವಾಗಿತ್ತು ಹಾಗೂ ಆದಿ ಶಂಕರಾಚಾರ್ಯರು ತಮ್ಮ ಪ್ರವಾಸದ ವೇಳೆ ಈ ಸ್ಥಳಕ್ಕೆ ಭೇಟಿ ನೀದಿದ್ದರು.

23)ಪಂಜಾಬಿನ ಚಿನಿಯೋಟ್ ನಲ್ಲಿರುವ ದೇವಾಲಯ:

24) ಥಾರ್ ನಲ್ಲಿರುವ ದೇವಾಲಯ:

25): ಇಸ್ಲಾಮಾದ್ ಸಮೀಪದ ಸಯೀದ್ಪುರ್ ಗ್ರಾಮದಲ್ಲಿರುವ ದೇವಾಲಯ:
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by praveena saya on

ಅರ್ಶದ್ ಅವರೇ ,
ತುಂಬಾ ನೆ ನನ್ನೀ, ಒಳ್ಳೆಯ collection .. ಹೆಂಗೆ collect ಮಾಡಿದ್ರಿ ಇದನ್ನ? ಇದರ ಬಗ್ಗೆ ಇನ್ನು ವಿಷಯಗಲಿದ್ದಲ್ಲಿ ತಿಳಿಸಿ . ಹಾಗೆ ಪಾಕಿಸ್ತಾನ ದ ಜನ ಜೀವನ ಅವರ ಬಗ್ಗೆ information ಇದ್ದಲ್ಲಿ ಬರೆಯಿರಿ. ನಮ್ಮ ಚಿಕ್ಕಮ್ಮನ ಮಕ್ಕಳಲ್ವ ಅವ್ರು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿ ಪ್ರತಿಕ್ರಿಯಿಸಿದ ತಮಗೆ ವಂದನೆಗಳು. ತಮ್ಮ ಅಪೇಕ್ಷೆಯ ಮೇರೆಗೆ ಕೆಲವು ವಿಷಯಗಳನ್ನು ಸಂಗ್ರಹಿಸಿ ಇನ್ನೊಂದು ಲೇಖನ ರೂಪದಲ್ಲಿ ಪ್ರಕಟಿಸಿರುವೆ. ಕೊಂಡಿ ಈ ಕೆಳಗಿನಂತಿದೆ:
http://sampada.net/b...
ತಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ
-ಅರ್ಶದ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bescom on

ಥ್ಯಾಂಕ್ಸ್ - ಪಾಕಿಸ್ಥಾನದಲ್ಲಿ ಇಂಥ ಒಳ್ಳೆಯ ಹಿಂದೂ ದೆವಸ್ಥಾನ ಇದೆ ಅಂಥ ನಿಮ್ಮಿಂದ ಗೊತ್ಯಾತ್ತು. ಈ ಫೋಟೋ ನಿಮಗೆ ಎಲ್ಲಿಂದ ಸಿಕ್ಕಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by VeerendraC on

ಪಾಕಿಸ್ತಾನಲ್ಲಿರುವ ಹಿಂದು ದೇವಸ್ತಾನದ ಮಾಹಿತಿ ತುಂಬಾ ಚೆನ್ನಾಗಿದೆ ..
ಅಲ್ಲಿಯು ಪೂಜೆ, ಜಾತ್ರೆಗಳು ನಡೆಯುತ್ತಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by praveena saya on

ನಿಮಗೆ ಆ ದೇವಸ್ಥಾನ ದ ಶಿಥಿಲಾವಸ್ಥೆ ನೋಡಿದ್ರೆ ಏನನ್ನಿಸುತ್ತೆ :)

ಲಾಡೆನ್ ಗೆ ಪುರುಸೋತ್ತಿರ್ಬೇಕಲ್ಲವ ಎಲ್ಲ ಕಡೆ ನು ಜಾತ್ರೆ ಮಾಡೋಕೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Mahesh babu on

ನಮಗೂ ಪಾಕಿಸ್ತಾನವನ್ನ ಈ ರೀತಿಯಲ್ಲಿ ಪರಿಚಯ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿ ಪ್ರತಿಕ್ರಿಯಿಸಿದ ತಮಗೆ ವಂದನೆಗಳು. ತಮ್ಮ ಅಪೇಕ್ಷೆಯ ಮೇರೆಗೆ ಕೆಲವು ವಿಷಯಗಳನ್ನು ಸಂಗ್ರಹಿಸಿ ಇನ್ನೊಂದು ಲೇಖನ ರೂಪದಲ್ಲಿ ಪ್ರಕಟಿಸಿರುವೆ. ಕೊಂಡಿ ಈ ಕೆಳಗಿನಂತಿದೆ:
http://sampada.net/b...
ತಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ
-ಅರ್ಶದ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿ ಪ್ರತಿಕ್ರಿಯಿಸಿದ ತಮಗೆ ವಂದನೆಗಳು. ತಮ್ಮ ಅಪೇಕ್ಷೆಯ ಮೇರೆಗೆ ಕೆಲವು ವಿಷಯಗಳನ್ನು ಸಂಗ್ರಹಿಸಿ ಇನ್ನೊಂದು ಲೇಖನ ರೂಪದಲ್ಲಿ ಪ್ರಕಟಿಸಿರುವೆ. ಕೊಂಡಿ ಈ ಕೆಳಗಿನಂತಿದೆ:
http://kannadadhvani...
ತಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ
-ಅರ್ಶದ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Snigdha on

Bahala olleya baraha.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by praveena saya on

ಕನ್ನಡದಲ್ಲಿ ಬರೆದರೆ ಸುಂದರ ಇನ್ನೂ :)

ಇಲ್ಲಿದೆ ನೋಡಿ ಲಿಂಕ್ :

ಇದರಲ್ಲಿ ಬರೀಬಹುದು

http://google.com/tr...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿ ಪ್ರತಿಕ್ರಿಯಿಸಿದ ತಮಗೆ ವಂದನೆಗಳು. ಕೆಲವು ವಿಷಯಗಳನ್ನು ಸಂಗ್ರಹಿಸಿ ಇನ್ನೊಂದು ಲೇಖನ ರೂಪದಲ್ಲಿ ಪ್ರಕಟಿಸಿರುವೆ. ಕೊಂಡಿ ಈ ಕೆಳಗಿನಂತಿದೆ:
http://sampada.net/b...
ತಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ
-ಅರ್ಶದ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿ ಪ್ರತಿಕ್ರಿಯಿಸಿದ ತಮಗೆ ವಂದನೆಗಳು. ಕೆಲವು ವಿಷಯಗಳನ್ನು ಸಂಗ್ರಹಿಸಿ ಇನ್ನೊಂದು ಲೇಖನ ರೂಪದಲ್ಲಿ ಪ್ರಕಟಿಸಿರುವೆ. ಕೊಂಡಿ ಈ ಕೆಳಗಿನಂತಿದೆ:
http://sampada.net/b...
ತಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ
-ಅರ್ಶದ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ರಘುನಂದನ on

ನಾನಿ ಮಂದಿರ (ಹಿಂಗೋಲ್ರಾಜ್) ಎಂದು ಹೆಸರಾಗಿರುವ ಈ ಮಂದಿರದ ಬಗ್ಗೆ ವೇದಗಳಲ್ಲಿ ಉಲ್ಲೇಖವಿದ್ದು, ದೇವಿಯು ಹಿಂಗ್ಲಜಾದೇವಿ ಎಂದು ಕರೆಸಿಕೊಂಡಿದ್ದಾಳೆ. ವಿಷ್ಣುವಿನ ಅವತಾರವಾದ ವೃಷಭದೇವರು ಈ ಮಂದಿರದಲ್ಲಿ ಅನೇಕ ಕಾಲ ತಪಸ್ಸು ಮಾಡಿದ್ದರೆಂದು ಸಹ ತಿಳಿದುಬರುತ್ತದೆ. ನಂತರ ಈ ಹಿಂಗ್ಲಜಾದೇವಿಯ ಆರಾಧಕರು ದೇಶದೆಲ್ಲೆಡೆ ವ್ಯಾಪಿಸಿದ್ದಾರೆ. ಹೀಗೆ ವ್ಯಾಪಿಸಿ ದಕ್ಷಿಣಭಾರತದ ಎಲ್ಲೆಡೆ ವ್ಯಾಪಿಸಿರುವ ಭಾವಸಾರಕ್ಷತ್ರಿಯವರ್ಗದ ಜನರಿಗೆ ಈ ಹಿಂಗುಲಾಂಬಿಕೆಯೇ ಮನೆದೈವ. ಜಿಲ್ಲೆಯ ಸನ್ನತಿಯ ಬಳಿ ಇರುವ ಹಿಂಗುಲಾಂಬಾ ದೇವಿಯು ಬಲೂಚಿಸ್ಥಾನದಿಂದ (ಬಾಹ್ಲೀಕ ರಾಜ್ಯವೆಂದು ರಾಮಾಯಣ/ಮಹಾಭಾರತದಲ್ಲಿ ಕರೆಸಿಕೊಂಡಿರುವ ಪ್ರಾಂತ್ಯ) ಇಲ್ಲಿಗೆ ಬಂದಿದ್ದಾಳೆಂಬುದು ಇತಿಹಾಸ.

ಲೇಖನ ತುಂಬಾ ತುಂಬಾ ಸಂತಸವನ್ನು ಕೊಟ್ಟಿತು. ಅರ್ಷದರಿಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿ ಪ್ರತಿಕ್ರಿಯಿಸಿದ ತಮಗೆ ವಂದನೆಗಳು. ಕೆಲವು ವಿಷಯಗಳನ್ನು ಸಂಗ್ರಹಿಸಿ ಇನ್ನೊಂದು ಲೇಖನ ರೂಪದಲ್ಲಿ ಪ್ರಕಟಿಸಿರುವೆ. ಕೊಂಡಿ ಈ ಕೆಳಗಿನಂತಿದೆ:
http://sampada.net/b...
ತಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ
-ಅರ್ಶದ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Divya Bhat Balekana on

ಹೀಗೂ ಉಂಟೇ?? :O!!
ಉತ್ತಮ ಮಾಹಿತಿಗಾಗಿ ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿ ಪ್ರತಿಕ್ರಿಯಿಸಿದ ತಮಗೆ ವಂದನೆಗಳು. ಇನ್ನೂ ಕೆಲವು ವಿಷಯಗಳನ್ನು ಸಂಗ್ರಹಿಸಿ ಇನ್ನೊಂದು ಲೇಖನ ರೂಪದಲ್ಲಿ ಪ್ರಕಟಿಸಿರುವೆ. ಕೊಂಡಿ ಈ ಕೆಳಗಿನಂತಿದೆ:
http://sampada.net/b...
ತಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತ
-ಅರ್ಶದ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on

ಉತ್ತಮ ಮಾಹಿತಿ....

ಮೂರನೆಯ ಚಿತ್ರ ಎಡಿಟ್ ಆದಂಗೆ ಕಾಣುತ್ತಿದೆ.... ಅಥವ ಮಂದಿರ ಇರೋದೆ ಹಾಗಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಚಿತ್ರ ಯಾವುದೂ ಎಡಿಟ್ ಆಗಿಲ್ಲ. ಆ ಸ್ಥಳ ಇರುವುದೇ ಹಾಗೆ.