26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನೂರಾನಲವತ್ತು ವರ್ಷ ವಯಸ್ಸಿನ ಲಾಬ್ಸ್ಟರ್ ಕಡಲ ಏಡಿಗೆ ಜೀವದಾನ

January 11, 2009 - 10:13pm
arshad
ಲಾಬ್ಸ್ಟರ್ ಅಥವಾ ಕಡಲ ಏಡಿ ಎಷ್ಟು ವರ್ಷ ಬಾಳಬಹುದು? ಬಲಗೆ ಸಿಕ್ಕಿಬಿದ್ದರೆ ಒಂದು ವರ್ಷ ಮಾತ್ರ. ಆದರೆ ನ್ಯೂಯಾರ್ಕ್ ನಗರದ ಸಿಟಿ ಕ್ರಾಬ್ ಅಂಡ್ ಸೀಫುಡ್ ಎಂಬ ರೆಸ್ಟೋರೆಂಟ್ ಒಂದಕ್ಕೆ ಲಭ್ಯವಾಗಿದ್ದ ಒಂಭತ್ತು ಕೇಜಿ ತೂಕದ ಲಾಬ್ಸ್ಟರ್ ಏಡಿ ಈಗ ಸುದ್ದಿಯಲ್ಲಿದೆ. ಎರೆಡು ವಾರಗಳ ಹಿಂದೆ ಹಿಡಿಯಲಾಗಿದ್ದ ಈ ಕಡಲ ಏಡಿಗೆ ನೂರು ಡಾಲರ್ ಬೆಲೆ ಕೊಟ್ಟು ಖರೀದಿಸಲಾಗಿದ್ದ ಈ ಕಡಲ ಏಡಿಯನ್ನು ಆಗಲೇ ಫ್ರೈ ಮಾಡಿ ಮಾರಿದ್ದರೆ ನೂರು ಡಾಲರ್ ಲಾಭ ಮಾಡಬಹುದಿತ್ತೇನೋ. ಆದರೆ ಜಾರ್ಜ್ ಎಂದು ನಾಮಕರಣ ಮಾಡಿ ಹೋಟೆಲ್ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಹಲವು ಭಾವಚಿತ್ರಗಳನ್ನು ತೆಗೆದು ಪ್ರಕಟಿಸಿದ್ದೇ ತಡ ಪೀಟಾ ( PETA (People for the Ethical Treatment of Animals) ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು ಕಡಲ ಏಡಿಯನ್ನು ಹಿಡಿಯುವುದು ಅಪರಾಧವೆಂದೂ ಆ ಏಡಿ ಹಿಡಿದ ಜಾಗವಾದ ಕೆನ್ನೆಬಂಕ್‍ಪೋರ್ಟ್ ನಲ್ಲಿ ಲಾಬ್ಸ್ಟರ್ ಹಿಡಿಯುವುದು ಕಾನೂನಿಗೆ ವಿರುದ್ಧವೆಂದೂ, ಅದನ್ನು ವಾಪಾಸು ಸಮುದ್ರಕ್ಕೆ ಬಿಡಬೇಕೆಂದೂ ಗಲಾಟೆ ಎಬ್ಬಿಸಿದರು. ಈ ಗಲಾಟೆಯ ಬಳಿಕ ನ್ಯೂಯಾರ್ಕ್ ನ್ಯಾಯಾಲಯ ಈ ಪ್ರಕರಣವನ್ನು ಕೈಗಿತ್ತಿಕೊಂಡು ಏಡಿಯನ್ನು ಅದರ ಮೂಲಸ್ಥಾನಕ್ಕೆ ಮರಳಿಸಬೇಕೆಂದು ತೀರ್ಪಿತ್ತ ಬಳಿಕ ಈಗ ಏಡಿಯನ್ನು ಮೈನೇ ಎಂಬ ಕಡಲತೀರದಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಏಡಿ ಒಟ್ಟು ಹತ್ತು ದಿನಗಳ ಕಾಲ ಟ್ಯಾಂಕ್ ಒಂದರಲ್ಲಿ ಕಾಲ ಕಳೆದಿತ್ತು. ಈ ಕಡಲ ಏಡಿಗಳಲ್ಲಿ ಒಂದು ವಿಷೇಶವಿದೆ. ಬೇರೆ ಜೀವಿಗಳ ಬೆಳವಣಿಗೆ ಒಂದು ಹಂತ ತಲುಪಿದ ಬಳಿಕ ಗರಿಷ್ಟ ಮಟ್ಟ ತಲುಪಿದರೆ ಏಡಿಗಳ (ಕ್ರಸ್ಟೇಶಿಯನ್ಸ್) ಬೆಳವಣಿಗೆಗೆ ಕೊನೆಯೇ ಇಲ್ಲ. ವಯಸ್ಸಾದಂತೆ ಅವುಗಳ ತೂಕ ಮತ್ತು ಗಾತ್ರ ಹೆಚ್ಚುತ್ತಾ ಹೋಗುತ್ತದೆ. ಆ ಏಡಿಯ ತೂಕದಿಂದ ಅದರ ಆಯಸ್ಸನ್ನು ಸ್ಥೂಲವಾಗಿ ಹೇಳಬಹುದಾಗಿದೆ. ಆ ಪ್ರಕಾರ ಜಾರ್ಜ್ ಏಡಿಯ ವಯಸ್ಸು ನೂರಾನಲವತ್ತು ವರ್ಷ! ಪೀಟಾ ಕಾರ್ಯಕರ್ತರ ಪ್ರಯತ್ನದಿಂದ ಜಾರ್ಜ್ ತನ್ನ ಸಮುದ್ರತಳದ ಸ್ವಸ್ಥಾನ ತಲುಪಿದೆ. ಈಗಾಗಲೇ ಶತಾಯುಶಿಯಾಗಿರುವ ಇದು ದ್ವಿಶತಕ ಬಾಳಲಿ ಎಂಬುದೇ ನಮ್ಮ ಹಾರೈಕೆ. ಕೃಪೆ: ಬಿಬಿಸಿ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurubaliga on
ಲೊಬ್ ಸ್ಟರ್ ಅನ್ನು ಏಡಿ ಎನ್ನುವುದಕ್ಕಿಂತ ಸಿಗಡಿ ಅಂದರೆ ಹೆಚ್ಚು ಒಪ್ಪುತ್ತದೆ. ಇದರ ಮಾಂಸ ಬಹಳ ಜನಪ್ರಿಯ. ಗೋವಾದ ಪಂಚ ತಾರ ರೆಸ್ಟುರಾ ಒಂದರಲ್ಲಿ ಒಂದು ಪ್ಲೇಟು ಲೊಬ್ ಸ್ಟರ್ ಮಂಚೂರಿಯನ್ ಗೆ ೪,೦೦೦ ರೂಪಾಯಿ ಎಂದು ಬೋರ್ಡು ಓದಿ ದಂಗಾಗಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on
ಮಾನ್ಯ ಗುರು ಬಾಳಿಗಾರವರೇ, ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಮೊದಲು ಎಲ್ಲೆಡೆ ಸೀಗಡಿ ಎಂಬ ಪದ ಉಪಯೋಗಿಸಿಯೇ ಲೇಖನ ಬರಿದಿದ್ದೆ. ಆದರೆ ಏಕೋ ಒಮ್ಮೆ ಲಾಬ್ಸ್ಟರ್ ಪದಕ್ಕೆ ಪ್ರೊ.ಜಿ. ವೆಂಕಟಸುಬ್ಬಯ್ಯನವರ ನಿಘಂಟಿನಲ್ಲಿ ಏನೆಂದು ವಿವರಿಸಲಾಗಿದೆ ಎಂದು ನೋಡುವ ಕುತೂಹಲವಾಯ್ತು. (http://www.baraha.co...) ಅದರಲ್ಲಿ ಕಡಲ ನಳ್ಳಿ, ಚೇಳೇಡಿ, ಕಡಲೇಡಿ ಎಂಬ ಮೂರು ವಿವರಣೆಗಳು ಸಿಕ್ಕವು. ಅದರಲ್ಲಿ ಕಡಲ ಏಡಿ ಹೆಚ್ಚು ಸಮರ್ಪಕವೆಂದು ಅನ್ನಿಸಿದ್ದರಿಂದ ಆ ಪದವನ್ನು ಉಪಯೋಗಿಸಿ ಇಡಿಯ ಲೇಖನದಲ್ಲಿ ಸೀಗಡಿ ಇದ್ದೆಡೆಯೆಲ್ಲಾ ಕಡಲ ಏಡಿ ಎಂದು ಕಾಪಿ ಪೇಸ್ಟ್ ಮಾಡಿದೆ. ಇಲ್ಲಿ (ದುಬೈಯಲ್ಲಿ) ಒಂದು ಕೇಜಿ ಲಾಬ್ಸ್ಟರ್ ಏಡಿಯ ಬೆಲೆ ಕೇಜಿಗೆ ನೂರಾನಲವತ್ತು ದಿರ್ಹಾಂ ವರೆಗೆ ಇದೆ (ಸುಮಾರು ಒಂದು ಸಾವಿರದ ಏಳುನೂರು ರೂಪಾಯಿ) ಆದರೆ ಅತಿದೊಡ್ಡದೆಂದರೆ ಸುಮಾರು ಮುಕ್ಕಾಲು ಕೇಜಿ ಮಾತ್ರ. ಒಂಭತ್ತು ಕೇಜಿ ತೂಗುವ ಏಡಿ ನಿಜಕ್ಕೂ ಅಪೂರ್ವ ಎಂದು ಅನ್ನಿಸಿದ್ದೇ ಈ ಲೇಖನಕ್ಕೆ ಸ್ಫೂರ್ತಿ.- ಅರ್ಶದ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithasr on
ಅಬ್ಬಬ್ಬಾ..!!! ನೂರಾನಲವತ್ತು ವರ್ಷದ ಏಡಿಯ ಚಿತ್ರವನ್ನ ತೋರಿಸಿದ್ದಕ್ಕೆ ಧನ್ಯವಾದಗಳು ಅರ್ಶದ್.. ಅತಿ ಹೆಚ್ಚು ವರ್ಷ ಬದುಕಿರುವ ಏಡಿ ಇದೊಂದೇನಾ ಅಥವಾ ಇನ್ನೂ ಇವೆಯಾ? -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on
ಸವಿತಾರವರೆ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಈ ಏಡಿಯನ್ನು ಹಿಡಿದಿರುವುದು ನಿರ್ಬಂಧಿತ ಪ್ರದೇಶದಲ್ಲಾದ್ದರಿಂದ ಇದಕ್ಕೂ ಹೆಚ್ಚಿನ ವಯಸ್ಸಿನ ಏಡಿಗಳಿರುವುದು ಖಂಡಿತಾ ಸಾಧ್ಯ. ಒಂದು ವೇಳೆ ಸಿಕ್ಕಿದ್ದು ವರದಿಯಾದರೆ ಖಂಡಿತಾ ಇನ್ನೊಂದು ಲೇಖನದ ಮೂಲಕ ತಿಳಿಸುವೆ. - ಅರ್ಶದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.