ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು
ಕಾಫಿ ಕುಡಿಯುವುದು ಮಾದಕ ಪದಾರ್ಥ ಸೇವನೆಯಂತಲ್ಲ. ಆದರೆ ಕುಡಿಯುವ ಪ್ರಮಾಣ ಹೆಚ್ಚಾದರೆ ಮಾತ್ರ ಪರಿಣಾಮ ವಿರುದ್ಧವಾಗಬಹುದು. ಪ್ರತಿದಿನ ಏಳು ಕಪ್ ಗಳಿಗೆ ಹೆಚ್ಚಿನ ಕಾಫಿ ಸೇವನೆಯಿಂದ ಒಂದು ರೀತಿಯ ಮಿಥ್ಯಾದರ್ಶನ (hallucination) ಪರಿಣಾಮ ಬೀರಬಹುದೆಂದೂ, ಇದರಿಂದಾಗಿ ಇಲ್ಲದ ವಸ್ತುಗಳನ್ನು ಕಾಣುವ ಅಥವಾ ಇಲ್ಲದ ಧ್ವನಿಗಳನ್ನು ಕೇಳುವ ಭ್ರಮೆಯುಂಟಾಗಬಹುದು. ಈ ಭ್ರಮೆಯನ್ನು ಹೆಚ್ಚಿನವರು ಭೂತಕ್ಕೆ ಕಲ್ಪಿಸಿಕೊಂಡು ಭಯಭೀತರಾಗುತ್ತಾರೆಂದು ಒಂದು ಸಂಶೋಧನೆ ತಿಳಿಸಿದೆ.
ನಮ್ಮ ಶರೀರ ತಾಳಿಕೊಳ್ಳಬಹುದಾದ ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ರಕ್ತದಲ್ಲಿ ಸೇರಿದಾಗ ಈ ಪರಿಣಾಮಗಳಾಗುತ್ತವೆ ಎಂದು ಸಂಶೋಧನೆ ತಿಳಿಸಿದೆ. ಹಾಗಾದರೆ ಯಾರಾದರೂ ಭೂತ ನೋಡಿದ್ದಾರೆಂದು ತಿಳಿಸಿದರೆ ಮೊದಲು ಎಷ್ಟು ಕಪ್ ಕಾಫಿ ಕುಡಿದಿದ್ದೀಯಾ ಎಂದು ಮೊದಲು ವಿಚಾರಿಸುವುದು ಒಳಿತು.
ಕೃಪೆ: http://www.thesun.co.uk
- arshad's blog
- Login or register to post comments
- 291 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು
ಅರ್ಶದ್,
ಕುತೂಹಲಕಾರಿ ಬರಹ.
*ಅಶೋಕ್
ಉ: ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು
ಮಾನ್ಯ ಅಶೋಕ್ ರವರೇ,
ತಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು- ಅರ್ಶದ್
ಉ: ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು
ನೀವು ಭೂತವನ್ನ ಕಂಡಿದ್ದೀರಾ?? :)
-ಸವಿತ
ಉ: ಭೂತ ನೋಡಬೇಕೇ? ಸ್ವಲ್ಪ ಜಾಸ್ತಿ ಕಾಫಿ ಕುಡಿಯಿರಿ ಸಾಕು
ಸವಿತಾರವರೇ, ದುಬೈಯಲ್ಲಿ ಜನಪ್ರಿಯ ಪೇಯ ಟೀ. ಹಾಗಾಗಿ ಭೂತ ನೋಡುವ ಅವಕಾಶ ಇನ್ನೂ ಸಿಕ್ಕಿಲ್ಲ- ಅರ್ಶದ್