20
June
2013

ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ

January 24, 2010 - 11:16pm
arshad
ಈಗ ಸೋಮಾರಿಗಳಾಗಿ ಮಲಗುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಏನು? ಸುಮ್ಮನೇ ಮಲಗುವುದೂ ಒಂದು ಉದ್ಯೋಗವೇ? ಹೌದು, ಹಾಲಿಡೇ ಇನ್ ಸಹಿತ ವಿಶ್ವದ ಹಲವು ಪ್ರತಿಷ್ಠಿತ ಹೋಟೆಲುಗಳು ಈ ಹೊಸ ಉದ್ಯೋಗವನ್ನು ಸೃಷ್ಟಿಸಿವೆ. ಉದ್ಯೋಗದ ಹೆಸರು - ಬೆಡ್ ವಾರ್ಮರ್.

ವಾಸ್ತವವಾಗಿ ಇದೊಂದು ಕೋರಿಕೆಯ ಸೇವೆ. ವ್ಯಕ್ತಿ ಶ್ರೀಮಂತನಾಗುತ್ತಾ ಹೋದಂತೆ ಆತನ ಬೇಕುಬೇಡಗಳೂ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಸ್ನಾನದ ನೀರು ಇಷ್ಟೇ ಬಿಸಿ ಇರಬೇಕು, ಇಷ್ಟೇ ಹೊತ್ತಿಗೆ ಸ್ನಾನ ಮಾಡಬೇಕು, ಚಹಾದಲ್ಲಿ ಸಕ್ಕರೆ ಇಷ್ಟೇ ಇರಬೇಕು, ಇದೇ ಬ್ರಾಂಡಿನ ಉತ್ಪನ್ನವಾಗಬೇಕು, ಇಷ್ಟೇ ಘಂಟೆಗೆ ತಲುಪಬೇಕು, ತಾನು ಕೊಠಡಿ ತಲುಪುವ ಮೊದಲು ಕೊಠಡಿಯ ಏಸಿ ಚಾಲೂ ಇರಬೇಕು ಇತ್ಯಾದಿ ಇತ್ಯಾದಿ. ಇದಕ್ಕೊಂದು ಹೊಸ ಸೇರ್ಪಡೆ ತಾವು ಮಲಗುವ ಹಾಸಿಗೆ ಅಹ್ಲಾದಕರವಾಗಿ ಬೆಚ್ಚಗಿರಬೇಕು, ಅಂದರೆ ಬರೋಬ್ಬರಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರಬೇಕು. ಬೇರೆ ವಿಧಾನಗಳಿಂದ ಈ ತಾಪಮಾನವನ್ನು ಪಡೆಯಬಹುದಾದರೂ ಸ್ವಾಭಾವಿಕವಾಗಿ ವ್ಯಕ್ತಿಯೊಬ್ಬ ಮಲಗಿ ಹೊರಬಂದ ಹಾಸಿಗೆ ಅತ್ಯಂತ ಕರಾರುವಕ್ಕಾಗಿ ಅರವತ್ತೆಂಟು ಡಿಗ್ರಿ ಫ್ಯಾರೆನ್ ಹೈಟ್ ಇರುತ್ತದೆಂದು ಸಂಶೋಧನೆಗಳಿಂದ ಧೃಢಪಟ್ಟಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಗ್ರಾಹಕ ಬಯಸಿದರೆ ಆತ ಬರುವ ಮೊದಲು ತನ್ನ ದೇಹದ ಬಿಸಿಯನ್ನು ಹಾಸಿಗೆಗೆ ವರ್ಗಾಯಿಸುವ ಸೇವೆಗೆ ಮುಡಿಪಾದ ವ್ಯಕ್ತಿ ಒಂದು ನಿಗದಿತ ಅವಧಿಯಲ್ಲಿ ಗ್ರಾಹಕನ ಹಾಸಿಗೆಯಲ್ಲಿ ಮಲಗಿ ಗ್ರಾಹಕ ಬರುವ ಕೊಂಚ ಹೊತ್ತಿನ ಮೊದಲು ಹಾಸಿಗೆ ಖಾಲಿ ಮಾಡುತ್ತಾನೆ. ಗ್ರಾಹಕ ಬಂದ ಕೂಡಲೇ ಅತ್ಯಂತ ಆಹ್ಲಾದಕರವಾದ ಬೆಚ್ಚನೆಯ ಹಾಸಿಗೆ ಲಭ್ಯ. ಈ ಸೇವೆ ಯೂರೋಪಿಯನ್ ರಾಷ್ಟ್ರಗಳಲ್ಲಿ ಗ್ರಾಹಕ ಹೊರಗೆ ಕೊರೆಯುವ ಚಳಿಯಿಂದ ಥಂಡಿಯಾಗಿ ಬಂದಾಗ ಆಹ್ಲಾದಕರ ತಾಪಮಾನ ತಲುಪಲು ಹೆಚ್ಚಿನ ಸಮಯ ಬೇಕಾಗುವುದರಿಂದ ತಕ್ಷಣ ಬೆಚ್ಚಗಿರುವ ಹಾಸಿಗೆಗೆ ಹೆಚ್ಚಿನ ಬೇಡಿಕೆ. ಸೋಮಾರಿಯಾಗಿ ಮಲಗುವವರಿಗೆ ಭಲೇ ಅದೃಷ್ಟ ಕಾದಿದೆ ಎನ್ನೋಣವೇ? ಕೃಪೆ: ದ ಟೆಲಿಗ್ರಾಫ್.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.1 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by shivaram_shastri on

<<<ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ>>>

ದಯವಿಟ್ಟು ಅರ್ಜಿ ಕಳುಹಿಸಬೇಕಾದ ವಿಳಾಸ ಕೊಡಿ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by arshad on

ಲೇಖನ ಓದಿದ ನನ್ನ ಹಲವು ಸ್ನೇಹಿತರೂ ಇದೇ ಪ್ರಶ್ನೆಯನ್ನು ಕೇಳಿದ್ದಾರೆ. ನಾವೆಲ್ಲಾ ಒಟ್ಟಿಗೇ ಹೋಗಿ ಶಾರ್ಜಾದ ಹಾಲಿಡೇ ಇನ್ನ್ ನಲ್ಲಿ ಅರ್ಜಿ ಗುಜರಾಯಿಸುವಾ ಎಂದು ಇದ್ದೇವೆ. ತಾವು ಬರುವಿರಾದರೆ ಒಟ್ಟಿಗೇ ಕೊಡಬಹುದು. - ಅರ್ಶದ್, ದುಬೈ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hariharapurasridhar on

ಇನ್ನೂ ಏನೇನು ಇದೆಯೋ ಯಾರಿಗೆ ಗೊತ್ತು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಹೀಗೂ ಉಂಟು ಅಂತ ಗೊತ್ತಾಯ್ತು..:))

ಹೌದು ನೆವ್ ಈ ಲೇಖನ ಬರದು ಇಷ್ಟು ದಿನ್ಗಲಾದವಲ್ಲ,
ಈಗಲೂ ಆ ಕೆಲಸ ಖಾಲಿ ಇದೆಯಾ?

ಅವತ್ತು ಮಲಗಿದವರು ಈಗಲಾದರೂ 'ಎದ್ದವರೋ' ಇಲ್ಲವೋ?...

ಒಳ್ಳೆ ಮಾಹಿತಿ ಅರ್ಷಾದ್... '

ಕುತೂಹಲಕಾರಿಯಾಗಿದೆ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.