ನನ್ನ ಕವನಗಳು
ನನ್ನ ಕವನಗಳು, ಬರೀ ನನ್ನ ಕನಸುಗಳಲ್ಲ, ಅವು ಬರೀ ಜೀವನ ಪಾಠಗಳು ಅಥವಾ ಅನುಭವಗಳೂ ಅಲ್ಲ, ಅವು ಕೇವಲ ನನ್ನ ಕಣ್ಣ ಬಿಂಬಗಳಲ್ಲ.
ಇವುಗಳಾಚೆಗೆ ನನ್ನ ಕವನಗಳು, ನನಗೆ ಬೇರೆಯ ಅನುಭವವನ್ನೇ ನೀಡುತ್ತವೆ, ಹಾಗೆಂದು ನನ್ನ ಕವನಗಳು ನನಗೆ ತುಂಬಾ ಖುಷಿ ನೀಡಿವೆ ಎಂದಲ್ಲ.. ಕೆಲವೊಮ್ಮೆ, ನನ್ನ ಕೆಲವು ಕವನಗಳೊಂದಿಗೆ ನಾನು ಅಸಂತುಷ್ಟನೆ..... ನಾ ಬರೆದ ಆ ಕವನ ಹೇಳುವುದರಾಚೆಗೂ ಇನ್ನೂ ಉಳಿದಿದೆ ಎಂದೆನಿಸಿ ನನ್ನ ಕವನ ನನಗೆಯೇ ಅಪೂರ್ಣ ಎಂದೆನಿಸಿ ಬಿಡುತ್ತದೆ.
ಆ ಅಪೂರ್ಣತೆ ಏನೆಂಬುದನ್ನ ತೋರಿಸುವ ಹೊಣೆ ನಿಮ್ಮದಾಗಿದೆ...
ನನ್ನ ಕವನಗಳನ್ನ ಓದಿ, ನಿಮ್ಮ ಸಲಹೆ ಅಥವಾ ವಿಮರ್ಷೆಗಳನ್ನ ನೀಡಿ......
ಭಾರತದ [ಪ್ರ]ಗತಿ
ಭಾರತದ [ಪ್ರ]ಗತಿ
ಭಾರತ ಭಾರತ ಭಾರತ ದೇಶ
ಬಡವರಿಂದ ಕೂಡಿದ ಶ್ರೀಮಂತ ದೇಶ
ಇಲ್ಲಿನ ಜನ ಜಗತ್ತಿನ ಶೇಷ
ಬಡತನ ಆಗಬೇಕು ನಿಶೇಷ
ನಮ್ಮ ಬಡತನಕೆ ಕಾರಣ ಇಂಗ್ಲೀಷರು
ಎಂದು ಹೇಳುವರು ಭಾರತೀಯರು
ಜಪಾನ್ ದೇಶವೂ ಕೂಡಿತ್ತು ಬಡತನದಿಂದ
ಈಗ ಅದು ನಲಿಯುತಿದೆ ಅಭಿವೃದ್ಧಿಯಿಂದ
ಇರುಳಲ್ಲಿ ದೊರಕಿದ ಸ್ವಾತಂತ್ರ್ಯ
ಮಾಡಿದೆ ನಮ್ಮನ್ನೆಲ್ಲಾ ಅತಂತ್ರ
ಶ್ರೀಮಂತರಿಗೆ ಹಣದ ಮೋಹ
ಬಡವನಿಗೆ ಹಸಿವು ದಾಹ
ಅವನ ಮೇಲೆ ಇವನು ಬಿದ್ದು ಕುರ್ಚಿಗಾಗಿ ಸಮರ
ಇವರಾರೂ ಆಗುವುದಿಲ್ಲ ಜೀವನದಲ್ಲಿ ಅಮರ
ಭಾರತದ ಜನಸಂಖ್ಯೆ ಮುಟ್ಟಿತು ನೂರು ಕೋಟಿ
ಯಾರಾದರೂ ಇರುವರೆ ಜನಸಂಖ್ಯೆಯಲ್ಲಿ ಭಾರತಕ್ಕೆ ಸಾಟಿ?
-- ಅರುಣ ಸಿರಿಗೆರೆ

- arunasirigere ರವರ ಬ್ಲಾಗ್
- Login or register to post comments
- 175 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: