May 12, 2008 - 10:08am
ಭಾವಾಭಿಷೇಕ
ಬಂದುಬಿಡು ನಲ್ಲೆ
ನೀನೊಮ್ಮೆ ಕನಸಿನಲಿ ನನ್ನ
ಆ ಸೂರ್ಯರಶ್ಮಿಗಳು ಸೋಕಿ
ನಾ ಎಚ್ಚರಾಗುವ ಮುನ್ನ
ಹೇಗೆ ನಾ ಅರಿಯಲಿ
ನೀ ಅಡಗಿರುವ ಮೂಲೆ
ಹೀಗೆ ನೀ ಕಾಡದಿರು
ಆಡುತ ಕಣ್ಣಾಮುಚ್ಚಾಲೆ
ಬರುವೆಯೊ, ಬಾರೆಯೊ
ನೀ ನನ್ನ ಕನಸಿನಲಿ
ನನ್ನ ಏಕಾಂತದೊಡತಿಯ
ನೆನಪುಗಳ ನಾ ಹೇಗೆ ಮರೆಯಲಿ?
ಬಂದುಬಿಡು ಓ ನಲ್ಲೆ
ನೀನೊಮ್ಮೆ ನನ್ನೆದೆಗೆ
ನಿನಗಾಗಿ ನಡೆದಿಹ
ಈ ಭಾವಗಳ ಜಾತ್ರೆಗೆ.
ವಿಧವಿಧದ ಭಾವಗಳು
ಕಾದಿಹವು ನಿನಗಾಗಿ
ನನ್ನೊಲವ ದೇವತೆಯ
ಪೂಜಾರತಿಗಾಗಿ
ಹೃದಯ ದೇವತೆಗೆ
ಭಾವಗಳ ಅಭಿಷೇಕವಿಂದು
ಎಂದರಸಿ ಕಾಯುತಿರುವೆ ದಿನವೂ
ನಲ್ಲೆ, ನೀ ಬರುವೆಯಾದರೂ ಎಂದು?
-- ಅರುಣ ಸಿರಿಗೆರೆ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಭಾವಾಭಿಷೇಕ
ಉ: ಭಾವಾಭಿಷೇಕ
ಉ: ಭಾವಾಭಿಷೇಕ
ಉ: ಭಾವಾಭಿಷೇಕ
ಉ: ಭಾವಾಭಿಷೇಕ