ಮೀರಾ ಮಾಧವ ರಾಘವ ಚಿತ್ರದ ಹಾಡುಗಳು
ಟಿ. ಎನ್. ಸೀತಾರಾಂ ನಿರ್ದೇಶನದ ಬಹು ನಿರೀಕ್ಷಿತ ಮೀರಾ ಮಾಧವ ರಾಘವ ಚಿತ್ರದ ಹಾಡುಗಳು ಹಂಸಲೇಖರವರ ಸಾರಥ್ಯದಲ್ಲಿ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಎಲ್ಲವನ್ನೂ ಕನ್ನಡಿಗರೇ ಹಾಡಿರುವುದು ವಿಶೇಷ.
೧.
ವಸಂತ ವಸಂತ (ರಾಜೇಶ್ ಕೃಷ್ಣನ್, ಅನುರಾಧಾ ಭಟ್ (ಎದೆ ತುಂಬಿ ಹಾಡುವೆನು ಗಾಯಕಿ!!!) ) : ಇದು ತುಂಬ ಮೆಲೋಡಿಯಸ್ ಹಾಡು. ಕಿವಿಗೆ ಬಹಳ ಇಂಪನ್ನು ಕೊಡುತ್ತದೆ. ನನ್ನ ಫೇವರಿಟ್೨.
ಒಳ್ಳೆ ಟೈಂ ಬಂತಮ್ಮ (ಹೇಮಂತ್, ಸುಪ್ರಿಯಾ ಆಚಾರ್ಯ, ಇಂದು ನಾಗರಾಜ್, ಲಕ್ಷ್ಮಿ ನಾಗರಾಜ್ (ಎದೆ ತುಂಬಿ ಹಾಡುವೆನು ಗಾಯಕಿಯರು ಕಂ ಸೋದರಿಯರು. !!!) ) - ಇದೊಂದು ಚೌ ಚೌ ಹಾಡು. ಅನೇಕ ಜನಪ್ರಿಯ ಹಳೆಯ ಚಿತ್ರಗೀತೆಗಳ ರೀಮಿಕ್ಸ್ ಆಗಿರೋದ್ರಿಂದ ಕೇಳಲು ಸೊಗಸಾಗಿದೆ.೩. ನಿನ್ನ ನೆನಪೆ - (ಸುಪ್ರಿಯಾ ಆಚಾರ್ಯ, ಫಯಾಜ್ ಖಾನ್) - ಶಾಸ್ತ್ರೀಯ ಸಂಗೀತ ಶೈಲಿಯ ಹಾಡು. ಸಾಹಿತ್ಯ, ಸಂಗೀತ ಎರಡರಲ್ಲೊ ಹಂಸಲೇಖ ಮಿಂಚಿದ್ದಾರೆ. ಉತ್ತಮ ಹಾಡು.
೪.
ಬೆಳ್ಳುಳ್ಳವ್ವ ಬೆಳ್ಳುಳ್ಳಿ - (ಚೈತ್ರಾ) - ಲಯ ಪ್ರಧಾನ ಹಾಡು. ಚೈತ್ರ ಚೆನ್ನಾಗಿ ಹಾಡಿದ್ದಾರೆ. ಐಟಂ ನಂಬರ್ ಥರ ಇದೆ!!! ಟಿ.ಎನ್. ಸೀತಾರಾಂ ಇರನ್ನು ಹೇಗೆ ಚಿತ್ರೀಕರಿಸಿದ್ದಾರೆ ಅನ್ನೋದನ್ನು ನೋಡಬೇಕು.೫.
ಭೂಮಿ ಬಾನು - (ಅನುರಾಧಾ ಭಟ್) - ಬಹಳ ಇಂಪಾದ ಗೀತೆ.ನನ್ನ ಎರಡನೇ ಫೇವರಿಟ್೬.
ರಾಧೆಯ ನೋಡಲು ಬಂದೆ - (ಹರ್ಷ, ಅನುರಾಧಾ ಭಟ್) - ನಾಯಕಿ ನಾಯಕನಿಗೆ ಸಂಗೀತ ಹೇಳಿಕೊಡುವ ಚಿಕ್ಕ ಹಾಡು. ನನ್ನ ಒಟ್ಟು ಅಂಕ - 4/5ಎದೆ ತುಂಬಿ ಹಾಡುವೆನು ಟಿ.ವಿ. ಕಾರ್ಯಕ್ರಮದಲ್ಲಿ ಹೊರಹೊಮ್ಮಿದ ಮಂಗಳೂರಿನ ಅನುರಾಧಾ ಭಟ್, ಮೈಸೂರಿನ ಸೋದರಿಯರಾದ ಇಂದು ನಾಗರಾಜ್ ಮತ್ತು ಲಕ್ಷ್ಮಿ ನಾಗರಾಜ್ ಅವರುಗಳಿಗೆ ಹಾಡಲು ಅವಕಾಶ ಕೊಟ್ಟ ಹಂಸಲೇಖ ಕ್ರಮ ಶ್ಲಾಘನೀಯ.

- arunhegde ರವರ ಬ್ಲಾಗ್
- Login or register to post comments
- 437 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಮೀರಾ ಮಾಧವ ರಾಘವ ಚಿತ್ರದ ಹಾಡುಗಳು
ಅರುಣ ಹಗಡೇರು ಹಿಂಗೆ ಬೊಂಬೆ ಹಚ್ಚಿ ಬರೆಯೋದು ಬಲು ಚಂದಾಗಯ್ತೆ!!
ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !