ಈಗಿನಂತೆ 6 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನೆನಪಿನ ಚಿತ್ರಕಲಾ ಶಾಲೆ: ಭಾಗ ೧೧--ಕಾಲದ ಯು-ಟರ್ನ್
anilkumar's picture
ಎಚ್.ಎ. ಅನಿಲ್ ಕುಮಾರ್
26
Aug
2011
ಲೇಖನ

 ...

ಪ್ರತಿಕ್ರಿಯೆಗಳು: 1
ಹಿಟ್ಸ್ : 138
ನೆನಪಿನ ಮಳೆಯಲ್ಲಿ...ಮರೆಯಲಾಗದ ದಿನದ ನೆನಪು
rashmi_pai's picture
Rashmi Pai
23
Jan
2010
ಬ್ಲಾಗ್ ಬರಹ

ನಾನು ನಿರೀಕ್ಷಿಸಿದ್ದ ದಿನ ಇಷ್ಟು ಬೇಗ ಬಂದು ಬಿಡುತ್ತೆ ಎಂದು ನೆನೆಸಿರಲಿಲ್ಲ. ಕಳೆದ ವರ್ಷದ ಕ್ರಿಸ್್ಮಸ್್ಗೆ ಮುನ್ನ ಊರಿಗೆ ಹೋಗಿದ್ದಾಗ ನಮ್ಮೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,107
ನಾರಿನಿಂದ ಕ್ಯಾನ್ಸರ್ ಗೆ ತಡೆ.
Satyaprakash.H.K.'s picture
ಸತ್ಯಪ್ರಕಾಶ್ ಹೆಚ್ ಕೆ
19
Apr
2006
ಬ್ಲಾಗ್ ಬರಹ
ನಾರಿನಿಂದ ಸ್ತನ ಕ್ಯಾನ್ಸರ್ ಗೆ ತಡೆ ಬಾಲಕಿಯರು ಬೇಗನೇ ಋತುಮತಿಯಾಗುವುದಕ್ಕೂ ಸ್ತನ ಕ್ಯಾನ್ಸರ್ ಗೂ ಏನಾದರೂ ಸಂಬಂಧವಿದೆಯಾ ? ಕೆನಡಾದ ಟೊರಂಟೋ ವಿವಿಯ ತಜ್ನರ ಪ್ರಕಾರ ಉತ್ತರ 'ಹೌದು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,498
ಕಾಲಙ್ಞಾನ
modmani's picture
ಮೊದ್ಮಣಿ
22
Feb
2011
ಬ್ಲಾಗ್ ಬರಹ

ಅಲ್ಪಾಯುಧಸ್ತರೇ ಅವನಿಗೆ ದೊರೆಯಾಗಿ
ಭೂದೇವಿಗೆನಿತೋ ಹೊರೆಯಾಗಿ
ಮೊರೆಯಿಡುತಿಹಳಿಲ್ಲಿ ಹೊರಲಾರೆ ನಾನೆಂದು
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ

...

ಪ್ರತಿಕ್ರಿಯೆಗಳು: 6
ಹಿಟ್ಸ್ : 780
ನನ್ನ ಇತ್ತೀಚಿನ ಓದು -ಡಾ||ಶಾಂತಿನಾಥ ದೇಸಾಯಿ ಅವರ ಸಮಗ್ರ ಕಥೆಗಳು
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
16
Jul
2011
ಬ್ಲಾಗ್ ಬರಹ

                 ಇತ್ತೀಚೆಗೆ ’ಡಾ||ಶಾಂತಿನಾಥ  ದೇಸಾಯಿ ಅವರ ಸಮಗ್ರ...

ಪ್ರತಿಕ್ರಿಯೆಗಳು: 2
ಹಿಟ್ಸ್ : 356
ಕಾಯಕ ಯೋಗಿ ಹುಲಿಕೆರೆಯ ಎಂ.ಷಡಕ್ಷರಿ
siddharam's picture
ಸಿದ್ಧರಾಮ ಹಿರೇಮಠ
19
Nov
2009
ಪುಟ

ವಯಸ್ಸಿರುವಾಗ ವೃತ್ತಿಯನ್ನು ಕೈಗೊಂಡು ಕಾಯಕ ನಡೆಸುವುದು ಸಾಮಾನ್ಯ ಸಂಗತಿ. ವಯಸ್ಸಾದ ನಂತರ ಮೊದಲಿನ ಉತ್ಸಾಹ ಕಳೆದುಕೊಳ್ಳುವುದು, ನಿವೃತ್ತಿಯಾದ ನಂತರವಂತೂ ಜೀವನ ನಶ್ವರ...

ಪ್ರತಿಕ್ರಿಯೆಗಳು: 1
ಹಿಟ್ಸ್ : 884
ಡಾ ಎಚ್ ಎಸ್ ವೀಯವರ ಅಭ್ಯಾಸ ೧೪ ಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ
gopinatha's picture
ಬೆಳ್ಳಾಲ ಗೋಪೀನಾಥ ರಾವ್
28
Aug
2011
ಲೇಖನ

ಡಾ ಎಚ್ ಎಸ್ ವೀಯವರ ಅಭ್ಯಾಸ ೧೪
೨೧.೦೮.೨೦೧೧ ರಂದು ಶ್ರೀಕಾಂತ್ ಉಡುಪರ ಮನೆಯಲ್ಲಿ
ಪು ತಿ ನರಶಿಂಹಾಚಾರ್ ಅವರ ಗೋಕುಲ ನಿರ್ಗಮನ...

ಪ್ರತಿಕ್ರಿಯೆಗಳು: 5
ಹಿಟ್ಸ್ : 229
ತೇಜಸ್ವಿ ಅವರ "ಪರಿಸರದ ಕತೆ"
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
21
Dec
2011
ಬ್ಲಾಗ್ ಬರಹ

 

ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"...

ಪ್ರತಿಕ್ರಿಯೆಗಳು: 6
ಹಿಟ್ಸ್ : 205
ಉಗಾದಿ, ವಸಂತ ನವರಾತ್ರಿ ಹಾಗೂ ಪ್ರಕೃತಿ
naasomeswara's picture
ನಾ.ಸೋಮೇಶ್ವರ
15
Mar
2010
ಬ್ಲಾಗ್ ಬರಹ

 

  ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,064
ಮಾತು, ಮಾತು, ಮಾತು ...
bhalle's picture
ಶ್ರೀನಾಥ್ ಭಲ್ಲೆ
19
Dec
2010
ಲೇಖನ


ಆರ್ಕಿಮಿಡಿಸ್’ಗೆ ಸ್ನಾನದ ತೊಟ್ಟಿಯಲ್ಲಿದ್ದಾಗ ಮಹಾ ಆಲೋಚನೆ ಬಂತಂತೆ. ನಾನೂ ದಿನಾ ಸ್ನಾನ ಮಾಡ್ತೀನಿ... ಮೈ’ಯಿಂದ ಕೊಳೆ ಹೊರಗೆ ಬಂತೇ ವಿನಹ ತಲೆಯಿಂದ ಹೊಸ ಆಲೋಚನೆ ಹೊರಗೆ...

ಪ್ರತಿಕ್ರಿಯೆಗಳು: 41
ಹಿಟ್ಸ್ : 1,153

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73-ಶಾಂತಿ ನಿವಾಸ - ಒಂದು ಸುಂದರ ಅನುಭವ!

73- ಶಾಂತಿ ನಿವಾಸ - ಸುದೀಪ್ ನಿರ್ದೇಶನದ ಎರಡನೇ ಚಿತ್ರ. ಹೃಷೀಕೇಶ್ ಮುಖರ್ಜಿಯವರ "ಬಾವರ್ಚಿ" ಚಿತ್ರವನ್ನು ಕನ್ನಡ ಪರದೆಯ ಮೇಲೆ ಹೇಗೆ ತಂದಿದ್ದಾರೋ ಎಂಬ ಸಣ್ಣ ಭಯದ ನಡುವೆಯೇ ಚಿತ್ರಮಂದಿರ ಪ್ರವೇಶಿಸಿದೆ... ಆರಂಭದಲ್ಲೇ ಒಂದು ಆಶ್ಚರ್ಯ ಕಾದಿತ್ತು... ಮೊದಲ ದೃಶ್ಯದಲ್ಲೇ ಶಿವಣ್ಣ ಪ್ರತ್ಯಕ್ಷ!!!. ಪಾತ್ರಗಳ ಪರಿಚಯಿಸುವ ರೀತಿ ಅತ್ಯಂತ ವಿಶಿಷ್ಟವಾಗಿ ಬಂದಿದೆ... ಈ ಕೆಲಸವನ್ನು ಶಿವಣ್ಣ ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಎಲ್ಲೂ ಬೇಸರ ತರಿಸದ ರೀತಿಯಲ್ಲಿ ಎರಡೂ ಮುಕ್ಕಾಲು ಗಂಟೆಗಳಲ್ಲಿ ಒಂದು ಕೌಟುಂಬಿಕ ಕಥಾ ಹಂದರವನ್ನು ನವಿರಾಗಿ ನಿರೂಪಿಸಿದ್ದಾರೆ ಕಿಚ್ಚ ಸುದೀಪ್.. ಪ್ರತಿಯೊಂದು ಪಾತ್ರವೂ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದೆ. ಯಾವೊಂದು ಪಾತ್ರವೂ, ಸನ್ನಿವೇಶವೂ ಅನವಶ್ಯಕವೆನಿಸುವುದಿಲ್ಲ... ಚಿತ್ರಕಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವಲ್ಲಿ ಸುದೀಪ್ ಸಫಲರಾಗಿದ್ದಾರೆ. ಚಿತ್ರದ ಕಥೆ ಸರಳವಾದರೂ ಸುಂದರವಾದುದು. "73-ಶಾಂತಿ ನಿವಾಸ" -ಇದು ಹೆಸರಿಗೆ ಮಾತ್ರ ಶಾಂತಿ ನಿವಾಸ.. ಒಳಗಿರುವುದು ಬರೀ ಜಗಳ, ಅಶಾಂತಿ. ಇಂತಹ ಗಲಾಟೆ ಸಂಸಾರದಲ್ಲಿ ಅಡುಗೆ ಭಟ್ಟರಾಗಿ ಬಂದವರ್ಯಾರೂ ಬಹಳ ದಿನ ಉಳಿಯುವುದೇ ಇಲ್ಲ... ಈ ಅವಿಭಕ್ತ ಕುಟುಂಬದ ಮುಖ್ಯಸ್ಥ ಕೈಲಾಶನಾಥರಿಗೆ (ಮಾಸ್ಟರ್ ಹಿರಣ್ಣಯ್ಯ) ನಾಲ್ವರು ಗಂಡು ಮಕ್ಕಳು. ಹಿರಿಯ ಮಗ ರಾಮನಾಥ (ಶ್ರೀನಿವಾಸ ಮೂರ್ತಿ) ಮತ್ತು ಸೀತಾ ದೇವಿ (ವೈಶಾಲಿ ಕಾಸರವಳ್ಳಿ) ದಂಪತಿಗಳಿಗೆ ಒಬ್ಬಳು ಮಗಳು ನೀತಾ (ಅನು ಪ್ರಭಾಕರ್). ಎರಡನೇ ಮಗ ಮತ್ತು ಸೊಸೆ ಕಾರು ಅಪಘಾತದಲ್ಲಿ ಅಸು ನೀಗಿರುತ್ತಾರೆ. ಅವರ ಮಗಳು ರಾಧಾ (ದೀಪು) ಈ ಚಿತ್ರದ ನಾಯಕಿ.ಮೂರನೆಯವನು ಕಾಶೀನಾಥ (ರಮೇಶ್ ಭಟ್) ಮತ್ತು ಆತನ ಮಡದಿ ಶೋಭಾ (ಚಿತ್ರಾ ಶಣೈ) ದಂಪತಿಗಳಿಗೆ ಒಬ್ಬನೇ ಮಗ. ಇನ್ನು ನಾಲ್ಕನೆಯ ಸುಪುತ್ರನೇ ಜಗನ್ನಾಥ (ಕೋಮಲ್) - ಸ್ವಯಂ ಘೋಷಿತ ಸಂಗೀತ ನಿರ್ದೇಶಕ!. ತನ್ನ ಚಿತ್ರ ವಿಚಿತ್ರ ರಾಗ ಸಂಯೋಜನೆಗಳಿಂದ ಮನೆಯವರ ತಲೆ ತಿಂದು ನೋಡುಗರಿಗೆ ನಗೆ ಬುಗ್ಗೆಯನ್ನು ತರಿಸುವಾತ!!!ಈ ಕುಟುಂಬದ ಜನರಲ್ಲಿ ಸಾಮರಸ್ಯವೇ ಇಲ್ಲ!!. ಸೊಸೆಯರಿಬ್ಬರೂ ಮೈಗಳ್ಳಿಯರು. ಮನೆಗೆಲಸ ಮಾಡದ ಗಂಡು ಮಕ್ಕಳು... ನಾಟ್ಯಕಲಿಕೆಯಲ್ಲಿ ನಿರತಳಾದ ಅಹಂಕಾರೀ ಮೊಮ್ಮಗಳು ನೀತು (ಅನು ಪ್ರಭಾಕರ್) ಇವರುಗಳ ನಡುವೆ ಪಾಪ ಬೆಳಗಿನ ಕಾಫಿಯನ್ನು ಕೇಳುವವರೂ ಇಲ್ಲದ ಹಿರಿಯ ತಲೆ ಕೈಲಾಶನಾಥರು!. ಅಡುಗೆಯವರಿಲ್ಲದೇ ಇವರ ದಿನಚರಿಯೇ ಓಡುವುದಿಲ್ಲ.. ಆದರೆ ಈ ರೀತಿ ಕಲಹಪ್ರಿಯ, ಅಶಾಂತಿ ನಿಲಯದಲ್ಲುಳಿಯಲು ಯಾವ ಅಡುಗೆ ಭಟ್ಟನೂ ತಯಾರಿಲ್ಲ!!!ಹೀಗಿರುವ ಕುಟುಂಬಕ್ಕೆ ಅಡುಗೆ ಭಟ್ಟನಾಗಿ ನಾಯಕ ರಘು (ಸುದೀಪ್) ಪ್ರವೇಶಿಸುತ್ತಾನೆ. ಒಡೆದ ಮನಗಳನ್ನು ಬೆಸೆದು ಒಂದು ಮಾಡುತ್ತಾನೆ. ಎಲ್ಲರ ಹೃದಯದಲ್ಲೂ ಸ್ಥಾನ ಪಡೆಯುತ್ತಾನೆ. ದ್ವೇಷತುಂಬಿರುವ ಮನೆಯಲ್ಲಿ ಪ್ರೀತಿಯ ಕಂಪನ್ನು ಹರಡುತ್ತಾನೆ. ಸಕಲ ಕಲಾ ಪ್ರವೀಣನಾದ ಈತ ಅಡುಗೆಯ ಜೊತೆಗೆ, ಹಾಡುತ್ತಾನೆ, ನೃತ್ಯ ಕಲಿಸುತ್ತಾನೆ, ಮನೆಗೆಲಸ ಮಾಡುತ್ತಾನೆ, ಮನೆ ಪಾಠವನ್ನೂ ಹೇಳುತ್ತಾನೆ.. ಹೀಗೆ ಎಲ್ಲರ ಮನ ಗೆದ್ದು ಮನೆಯನ್ನು ನಿಜವಾದ ಶಾಂತಿನಿವಾಸವನ್ನಾಗಿಸುತ್ತಾನೆ... ಹೀಗಿರುವಾಗ, ತಾತ ಕೈಲಾಶನಾಥರು ಸದಾ ಕಾಪಾಡಿಕೊಂಡು ಬಂದಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಒಡವೆ, ನಗ ನಾಣ್ಯಗಳಿದ್ದ ಪೆಟ್ಟಿಗೆಯ ದರೋಡೆಯಾಗುತ್ತದೆ!!!! ಜೊತೆಗೆ ಅಡುಗೆ ಭಟ್ಟ ರಘು ಕೂಡ ನಾಪತ್ತೆ!!! ಮುಂದೇನಾಗುತ್ತದೆ??? ರಘು ಕಳ್ಳನೇ??? ಅವನೇಕೆ ಈ ಮನೆಗೆ ಬಂದ??? ಒಡವೆಗಳು ಕಾಣೆಯಾಗಲು ಕಾರಣವೇನು??? ತೆರೆಯ ಮೇಲೆ ವೀಕ್ಷಿಸಿ... ಚಿತ್ರದ ಅಂತ್ಯ ವಿಶಿಷ್ಟವಾಗಿ, ಸುಂದರವಾಗಿ, ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಚಿತ್ರ ಆರಂಭಗೊಳ್ಳುವುದು ಶಿವಣ್ಣನಿಂದಾದರೆ ಅಂತ್ಯಗೊಳ್ಳುವುದು ಸಾಹಸ ಸಿಂಹ ವಿಷ್ಣುವರ್ಧನರಿಂದ!!!... ಸಕಲ ಕಲಾ ಪ್ರವೀಣನಾದ ಅಡುಗೆ ಭಟ್ಟ ರಘುವಿನ ಪಾತ್ರದಲ್ಲಿ ಸುದೀಪ್ ಪರಕಾಯ ಪ್ರವೇಶ ಮಾಡಿದ್ದು, ಬಹುಕಾಲ ನೆನಪಿನಲ್ಲುಳಿಯುವ ಅಭಿನಯವನ್ನು ನೀಡಿದ್ದಾರೆ. ಬಹಳ ಕಾಲದ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿರುವ ಕನ್ನಡ ರಂಗಭೂಮಿಯ ಹಿರಿಯ ನಟ, ನಟ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರ ಭಾವಪೂರ್ಣ ಅಭಿನಯವನ್ನು ಮನಃ ಪೂರ್ತಿಯಾಗಿ ಸವಿಯಬಹುದು. ಶ್ರೀನಿವಾಸಮೂರ್ತಿ, ರಮೇಶ್ ಭಟ್, ದೀಪು, ಅನು ಪ್ರಭಾಕರ್, ವೈಶಾಲಿ ಕಾಸರವಳ್ಳಿ, ಚಿತ್ರ ಶಣೈ ಎಲ್ಲರ ಅಭಿನಯವೂ ಸೂಪರ್!. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಬಾಲಿವುಡ್, ಟಾಲಿವುಡ್, ಕಾಲಿವುಡ್‍ಗಳಿಂದ ನಟಿಯರನ್ನು ಆಮದು ಮಾಡಿಕೊಳ್ಳುವ ನಮ್ಮ ನಿರ್ಮಾಪಕ, ನಿರ್ದೇಶಕರ ಕಪಾಳಕ್ಕೆ ಹೊಡೆಯುವ ರೀತಿಯಲ್ಲಿ ನಮ್ಮ ದೀಪು ನಟಿಸಿದ್ದಾಳೆ.ನಾಟ್ಯ ಗುರುವಾಗಿ ಅರುಣ್ ಸಾಗರ್, "ಸಂಗೀತ ನಿರ್ದೇಶಕ"ನಾಗಿ ಕೋಮಲ್ ಕುಮಾರ್ ಚೆನ್ನಾಗಿ ನಗಿಸುತ್ತಾರೆ.ಹಾಡುಗಳು ಅತ್ಯುತ್ತಮವಲ್ಲದಿದ್ದರೂ ತೀರಾ ಕಳಪೆಯೂ ಅಲ್ಲ... ಆದರೆ ಸಂಗೀತ ಇನ್ನೂ ಸ್ವಲ್ಪ ಚೆನ್ನಾಗಿ ಬರಬಹುದಾಗಿತ್ತು.. ಹಾಡುಗಳ ಚಿತ್ರೀಕರಣ ಚೆನ್ನಾಗಿ ಬಂದಿದೆ. ರಾಜೇಶ್ ಕೃಷ್ಣನ್ ಹಾಡಿರುವ "ಪ್ರೀತಿ ಎಂದರೆ ಹೀಗೇನೆ" ಶಾಸ್ತ್ರೀಯ ಸಂಗೀತವಾಗಿದ್ದು ಇದರ ಚಿತ್ರೀಕರಣ ಚನ್ನಾಗಿ ಬಂದಿದೆ. ಮೇಲುಕೋಟೆಯಲ್ಲಿ ರಾತ್ರಿ ಹೊತ್ತು ದೀಪಗಳ ಮಧ್ಯೆ ಚಿತ್ರೀಕರಣಗೊಂಡ ಇನ್ನೊಂದು ಹಾಡೂ ಸಹ ಮನ ಗೆಲ್ಲುವಂತಿದೆ. ಒಟ್ಟಿನಲ್ಲಿ 73-ಶಾಂತಿ ನಿವಾಸ ಮನೆ ಮಂದಿಯೆಲ್ಲ ಕುಳಿತು ಆನಂದಿಸಬಹುದಾದ ಸುಂದರ ಕೌಟುಂಬಿಕ ಚಿತ್ರ.ಇಂತಹ ಸುಂದರ ಚಿತ್ರ ಮೊದಲು ಕನ್ನಡದಲ್ಲಿ ಬರದೇ ಹಿಂದಿಯಲ್ಲಿ ಬಂತಲ್ಲಾ ಎಂಬುದೊಂದೇ ಕೊರಗು. ಆದರೂ ಇದು ಅತ್ಯಂತ ಸುಂದರವಾಗಿ ಕನ್ನಡೀಕರಣಗೊಂಡಿದೆ. ರೀಮೇಕ್, ಸ್ವಮೇಕ್‍ಗಳೆಂಬ ಚರ್ಚೆಯನ್ನು ಬದಿಗೊತ್ತಿ ಎಲ್ಲರೂ ನೋಡಿ ಸವಿಯಬಹುದಾದ ಚಿತ್ರ. 73-ಶಾಂತಿ ನಿವಾಸಕ್ಕೆ ಶುಭವಾಗಲಿ.
No votes yet
1399 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
veena's picture
25
Jun
2007
5:03

ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! veena. ನಿಮ್ಮ ಚಿತ್ರ ವಿಮರ್ಶೆಯನ್ನು ಓದಿ ನನಗೂ ಶಾಂತಿ ನಿವಾಸಕ್ಕೊಂದು ಭೇಟಿ ಕೊಡಬೇಕೆನಿಸುತ್ತಿದೆ. ಬರೆಯುವುದು ನನ್ನ ಹವ್ಯಾಸ ಎಂದು ಪರಿಚಯಿಸಿಕೊಂಡಿದ್ದೀರ, ಆದರೆ ಸದಸ್ಯರಾಗಿ ೧ ವರ್ಷವಾದರೂ ಇದೀಗ ಬರೆಯುತ್ತೀದ್ದೀರ. ನಿಮ್ಮ ಬರವಣಿಗೆಯನ್ನು ಬಿಡದೆ ಮುಂದುವರಿಸಿ.
arunhegde's picture
25
Jun
2007
5:11

ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! ವೀಣಾರವರಿಗೆ ನನ್ನ ನಮಸ್ಕಾರಗಳು. ನನಗೆ ಬಹಳ ಸಮಯದಿಂದ ಕಾರಣಾಂತರಗಳಿಂದ ಬರವಣಿಗೆ ಮಾಡಲು ಸಾಧ್ಯವಾಗಿರಲಿಲ್ಲ. ಇನ್ನುಮುಂದೆ ಬರೆಯುತ್ತೇನೆ. - ಅರುಣ್
mahesha's picture
25
Jun
2007
6:53

ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! "ಚಿತ್ರ ಆರಂಭಗೊಳ್ಳುವುದು ಶಿವಣ್ಣನಿಂದಾದರೆ ಅಂತ್ಯಗೊಳ್ಳುವುದು ಸಾಹಸ ಸಿಂಹ ವಿಷ್ಣುವರ್ಧನರಿಂದ!!!..." :) ಸಾರ್‍, ಗುಟ್ಟನ್ನ ರಟ್ಟು ಮಾಡಿಬಿಟ್ರಲ್ಲ!! :) ನಂಗಂತೂ! ಇದೇನಿದು ಅಂತ ಅವಕ್ಕಾಗಿ ಹೋದೆ. ಶಿವರಾಜಕುಮಾರ್‍ ಬರೋದು ಒಂತರಾ ಸೂಪರಾಗಿ ಬಂದಿದೆ!! :)
ಶಿವ's picture
25
Jun
2007
7:05

ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! ಈ ಸಿನೆಮಾ ನಂಗೂ ಇಷ್ಟವಾಯಿತು.ಮುಖ್ಯವಾಗಿ ಹಾಡುಗಳು ಮತ್ತು ಅದರ ಚಿತ್ರೀಕರಣ.'ತಯ್ಯ ತಯ್ಯ ತಾ'-ಮೇಲುಕೋಟೆಯಲ್ಲಿ ಚಿತ್ರೀಕರಿಸಿದ ಈ ಹಾಡು ಸುದೀಪ್‍ನ ಪ್ರತಿಭೆಗೆ ಸಾಕ್ಷಿ. ಕುಣಿಯೋದನ್ನು ಹೇಳಿಕೊಡುವ ಅರುಣ್ ಸಾಗರ್, ದೀಪು ಮತ್ತು ಕೋಮಲ್ ಇಷ್ಟವಾಗುತ್ತಾರೆ.ಅಲ್ಲಲ್ಲಿ ಬರುವ ತುಳು ಮಾತುಕತೆ ನಗೆ ತರಿಸುತ್ತದೆ.
mahesha's picture
25
Jun
2007
7:09

ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! "ತುಳು ಮಾತುಕತೆ" ಇದರ ಬಗ್ಗೆ ಹಾಸ್ಯವಿದೆಯೇ ಹೊರತು ಅಪಹಾಸ್ಯವಲ್ಲ!! ( ತುಳು ಮಂದಿ ಬೇಸರ ಮಾಡಿಕೋಬೇಡಿ! ) ಅರುಣ್ ಸಾಗರ್ ಅವರು ಯಕ್ಷಗಾನದ ಹೆಣ್ಣುವೇಷದವರಂತೆ ಬೊಂಬಾಟಾಗಿ ಮಾತಾಡ್ತಾರೆ! ನಂಗೆ ನಕ್ಕೂ ನಕ್ಕೂ ಸಾಕಾಯ್ತು! :)
madhu_s1's picture
27
Jun
2007
11:22

ಉ: 73-ಶಾಂತಿ ನಿವಾಸ - ಒಂದು ಸುಂದರ ಅನುಭವ! "ರೀಮೇಕ್, ಸ್ವಮೇಕ್‍ಗಳೆಂಬ ಚರ್ಚೆಯನ್ನು ಬದಿಗೊತ್ತಿ" ಆಹ್, ಅದೇ ನನ್ನ ಕಯ್ಯಲ್ಲಿ ಮಾಡಕ್ಕೆ ಆಗಲ್ವಲ್ಲ ಅರುಣ್? ಹೃಷಿಕೇಶ್ ಮುಖರ್ಜಿ ಅವರ ಕ್ಲಾಸಿಕ್ ಚಿತ್ರವನ್ನು ರೀಮೇಕ್ ಮಾಡಲು ಹೊರಟಿದ್ದೇ ಅಕ್ಷಮ್ಯ ಎಂದು ನಾನು ವಾದಿಸುತ್ತೇನೆ. ಈ ವಿಷಯದಲ್ಲಿ ನನ್ನ ವಿಚಾರಗಳು ತುಸು ಕಠಿಣ ಎಂದು ಬಲ್ಲೆ. ಆದರೆ ನೀವೇ ಹೇಳಿ, ಕನ್ನಡ ಸಿನೆಮಾ ವೀಕ್ಷಕರು ಪ್ರಪಂಚದ ಬೇರೆ ಸಿನೆಮಾ ನೊಡೋದೇ ಇಲ್ಲ ಅಂತ ಹೇಗೆ ಅಸ್ಯೂಮ್ ಮಾಡಿಕೊಳ್ತಾರೆ ಸುದೀಪ್ ಅಂಥ ೦.೦% ಸ್ವಂತಿಕೆ ಇರುವ "ನಿರ್ದೇಶಕರು"? ಸ್ವಾತಿ ಮುತ್ತು, ಆಟೊಗ್ರಾಫ್, ಈಗ ಶಾಂತಿ ನಿವಾಸ. ನನಗೆ ಯೋಚಿಸಿದರೆ ಜಿಗುಪ್ಸೆ ಆಗತ್ತೆ. What a waste of talent, if any!? ಬಾವರ್ಚಿ ಚಿತ್ರ ಬಂದರೆ ಟೀವಿ ನಲ್ಲಿ, ಮಾಡೊ ಕೆಲಸ ಬಿಟ್ಟು ಬಂದು ನೋಡ್ತೀವಿ, ಅದೇ ಶಾಂತಿ ನಿವಾಸಕ್ಕೂ ಅನ್ವಯಿಸುತ್ತಾ? ನೀವು ಇಷ್ಟು ಹೇಳಿದ್ದೀರಲ್ಲ ಅಂತ ಚಿತ್ರ ನೋಡಿ ಬಂದು ನನ್ನ ಪ್ರಶ್ನೆಗೆ ನಾನೆ ಉತ್ತರಿಸುತ್ತೇನೆ.