ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಬರೆಯುವಾಗ ಕೆಲವರು ಏನನ್ನು ಬರೆಯುವುದು ಎನ್ನುವುದರ ಕಡೆಗೆ ಗಮನ ಕೊಟ್ಟು,ಹೇಗೆ ಬರೆಯುವುದು ಎನ್ನುವುದರ ಕಡೆಗೆ ನಿರ್ಲಕ್ಷ್ಯ ತೋರುತ್ತಾರೆ. ಆಗ ಬರವಣಿಗೆ ಸರಾಗವಾಗುತ್ತದೆ. ಎರಡನೆಯ ಅಂಶದ ಕಡೆಗೆ ಗಮನವಿತ್ತರೆ,ಅಂತವರು ಬರಹಗಾರರಾಗುವುದಕ್ಕೆ ಬದಲಾಗಿ "ಕರಡು ಪ್ರತಿ ತಿದುವವರು" ಆಗುವ ಸಂಭವವೇ ಹೆಚ್ಚು!
---------------------------------------------------------
ಗೂಗಲ್ ಫೋನ್ G1
ಗೂಗಲ್ ಕೂಡಾ ಐಪೋನ್ ಅಂತಹ ಮೊಬೈಲ್ ಬಿಡುಗಡೆ ಮಾಡಿದೆ.
-----------------------------------------------------
ಚುನಾವಣೆ ಬಂತು ಚುನಾವಣೆ
------------------------------------------------------------------


- ASHOKKUMAR ರವರ ಬ್ಲಾಗ್
- Login or register to post comments
- 272 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಬರವಣಿಗೆ ಕುರಿತಂತೆ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇದೆ. ಒಂದು ಬರಹವನ್ನು ನಾವು ಓದುವುದು ಅದರ ಧ್ವನಿಗೆ. ಅದು ಯಾವ ಧ್ವನಿ ಹೊಂದಿರುತ್ತದೆ ಎಂಬುದರ ಮೇಲೆ ಓದುವಿಕೆ ನಿರ್ಧಾರವಾಗುತ್ತದೆ. ಹೀಗಾಗಿ, ಬರವಣಿಗೆಗೂ ವ್ಯಾಕರಣಕ್ಕೂ ಯಾವಾಗಲೂ ಜಗಳ. ವ್ಯಾಕರಣಬದ್ಧವಾಗಿ ಬರೆದರೆ ಅದು ವ್ಯಾಕರಣಗ್ರಂಥಕ್ಕೆ ಆಕರವಾಗಬಹುದೇ ಹೊರತು ಜೀವಂತ ಬರವಣಿಗೆ ಆಗದು. ದುರಂತವೆಂದರೆ, ಮಾಧ್ಯಮದ ಹುದ್ದೆಗಳಿಗೆ ನಡೆಯುವ ಸಂದರ್ಶನ/ಲಿಖಿತ ಪರೀಕ್ಷೆ ಪ್ರೂಫ್‌ರೀಡರ್‌ಗೆ ಇರುವಂಥದು. ವಿಷಯ ಪ್ರಸ್ತುತಿಗಿಂತ ಭಾಷಾ ಶುದ್ಧಿಗೇ ಒತ್ತು ನೀಡಲಾಗುತ್ತದೆ.
ಹೀಗಾಗಿ, ಉತ್ತಮ ಅಭಿವ್ಯಕ್ತಿ ಹೊಂದಿದ್ದರೂ ಎಷ್ಟೋ ಜನ ಕೆಲಸ ಸಿಗದೇ ವಾಪಸಾಗಿದ್ದಾರೆ. ಚೆನ್ನಾಗಿ ಹಾಡಬಲ್ಲವನಾಗಿದ್ದರೂ ಸಂಗೀತ ಅಭ್ಯಾಸ ಆಗಿಲ್ಲ ಎಂಬ ಕಾರಣಕ್ಕೆ ಅವಕಾಶ ನಿರಾಕರಿಸಿದಂತಿದೆ ಇದು. ಇದನ್ನೆಲ್ಲ ನೋಡಿದರೆ, ಮನಮೋಹನ್ ಸಿಂಗ್‌ರಂತೆ ನಾವೂ ಚಂದ್ರನತ್ತ ಪರಾರಿಯಾಗುವ ಮನಸ್ಸು ಬರುತ್ತದೆ.
ಒಳ್ಳೆಯ ಕೊಂಡಿ ಕೊಟ್ಟಿದ್ದೀರಿ, ಧನ್ಯವಾದ.
- ಚಾಮರಾಜ ಸವಡಿ
http://chamarajsavadi@blogspot.com
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
>>ಇದನ್ನೆಲ್ಲ ನೋಡಿದರೆ, ಮನಮೋಹನ್ ಸಿಂಗ್‌ರಂತೆ ನಾವೂ ಚಂದ್ರನತ್ತ ಪರಾರಿಯಾಗುವ ಮನಸ್ಸು ಬರುತ್ತದೆ.
ಹಾಗೆಲ್ಲಾ ಹೇಳಿ ಚಂದ್ರನಿಗೆ ಅಂಜಿಕೆ ಹುಟ್ಟಿಸಬೇಡಿ ಸರ್
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಸ್ವಲ್ಪ ವರ್ಷದಿಂದ, ಇಂಟರ್ನೆಟ್ನಲ್ಲಿ ಚಂದ್ರನ ಮೇಲಿರೋ ಸೈಟ್ ಮಾರಾಟ ಮಾಡ್ತಿದ್ದಾರೆ, ಅಮೆರಿಕದವರು!
ಇಲ್ಲಿ ನೋಡಿ...
http://www.lunarlandowner.com/
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ನಮ್ಮ ರಾಜಕಾರಣಿಗಳು ಸ್ವಿಸ್ ಬ್ಯಾಂಕಿನಲ್ಲಿ ಹಣ ಕೂಡಿಡುವ ಕಾಲವಿತ್ತು. ಇನ್ನು ಚಂದ್ರನ ಮೇಲೆ ಸೈಟು ಖರೀದಿಗಿಳಿದ್ರೆ,ನಮ್ಮ ದೇಶ ಭ್ರಷ್ಟಾಚಾರದ ರೇಂಕ್ ಪಟ್ಟಿಯಲ್ಲಿ ತುತ್ತ ತುದಿಗೇರೀತು.
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಸದ್ಯ ಭಾರತ ಭ್ರಷ್ಟತೆಯಲ್ಲಿ ಹೊಂದಿದ rank ಎಷ್ಟು?
http://www.in.com/active18/readnow/storypage.php?docid=438d8a48d618d7d0d...
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಅಲ್ಲ...ಚಂದ್ರನ ಮೇಲೆ ಸೈಟ್ ಮಾರಕ್ಕೆ ಅದೇನು ಅಮೇರಿಕಾ ಆಸ್ತಿನಾ?
ಇದು ಒಂದು ರೀತಿ ದೊಡ್ಡ ಹಗರಣ...ಚಂದ್ರ ಇಡೀ ಭೂಮಿಗೆ ಉಪಗ್ರಹ ಅದು...
ಪಾಪ, ಸೈಟ್ ತೊಗೊಂಡವ್ರು ಬದುಕಿರೋ ತನಕ ಚಂದ್ರನ ಮೇಲೆ ಇರಲ್ಲ..

ಆಮೇಲೆ ಬೇರೆ ದೇಶಗಳೆಲ್ಲ ಕ್ಯಾತೆ ತೆಗೆಯತ್ವೆ, ನಿಮ್ಮಪ್ಪಂದಾ ಆಸ್ತಿ ಅಂತ
ಈಗ ನಮ್ಮವರು ಚಂದ್ರ ಯಾನ ಮಾಡಿ, ಮಾರಿರೋ ಸೈಟ್ ಮೇಲೆ ಇಳಿಸಿದರೆ, ಅತಿಕ್ರಮಣ ಅಂತ ಅಮೇರಿಕಾ ಸ್ಯಾಂಕ್ಷನ್ ಹಾಕ್ತಾರ, ಹೇಗೆ?
ಸದ್ಯಕ್ಕಂತೂ 'ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ' ...
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಅಮೆರಿಕಾದವರು ಚಂದ್ರನಲ್ಲಿಗೆ ಹೋದಾಗ, ಭೂಮಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿದ್ರು
*ಅಶೋಕ್
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಬರವಣಿಗೆಯಲ್ಲಿನ ಅಭಿವ್ಯಕ್ತಿ ಹಾಗೂ ಬರವಣಿಗೆಯ ವ್ಯಾಕರಣದ ಬಗ್ಗೆ ಒಂದು ಮಾತು ನೆನಪಾಯ್ತು.
ರವೀಂದ್ರನಾಥ ಠಾಗೋರರು ಗೀತಾಂಜಲಿಯನ್ನು ಇಂಗ್ಲೀಷಿಗೆ ಭಾಷಾಂತರಿಸಿ ಕೊಂಚ ಹಿಂಜರಿಕೆಯಿಂದಲೇ ವ್ಯಾಕರಣ ಪಂಡಿತರಿಗೆ ಅದನ್ನು ತೋರಿಸಿದರಂತೆ. ಒಬ್ಬರು ಅದರಲ್ಲಿ ಕೆಲವು ವ್ಯಾಕರಣ ದೋಷ ತಿದ್ದಿ ಕೊಟ್ಟರಂತೆ. ಮುಂದೆ ಇಂಗ್ಲೀಷ್ ಕವಿಯ(ಎಲಿಯಟ್ ಅಥವಾ ಯೀಟ್ಸ್, ನೆನಪಿಲ್ಲ) ಎದುರು ಅದನ್ನು ಓದುವಾಗ ಆತ ನಿಖರವಾಗಿ ಆ ವ್ಯಾಕರಣ ಪಂಡಿತ ತಿದ್ದಿದ ಪದಗಳು ಸರಿಯಾಗಿಲ್ಲ ಎಂದು ಹೇಳಿದ್ದನಂತೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
ಹೌದು,ವಿಕದ ಷಡಕ್ಷರಿ ಅವರ ಅಂಕನದಲ್ಲಿ ಇತ್ತೀಚೆಗೆ ಅದನ್ನು ಪ್ರಸ್ತಾಪಿಸಿದ್ದರು.
*ಅಶೋಕ್