18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮತ್ತೆ ನನ್ನ ಮೂರ್ಖನನ್ನಾಗಿಸಬೇಡಿ!

April 1, 2009 - 3:32pm
asuhegde
ಮೂರ್ಖರ ದಿನದಂದು ನನ್ನ ಮತ್ತೆ ಮೂರ್ಖನನ್ನಾಗಿಸಬೇಡಿ ನಿಮ್ಮ ಸಮಯ ನಿಮ್ಮ ಶಕ್ತಿಯ ಹೀಗೆ ವ್ಯರ್ಥಗೊಳಿಸಲೇ ಬೇಡಿ ಮೂರ್ಖನೇ ಹಿಂದಿನಿಂದಲೂ ನಿಜ ಇಂದು ಉಳಿದಿಲ್ಲ ಬಾಕಿ ಮೂರ್ಖನಾಗುತ್ತ ಬಂದಿದ್ದೇನೆ ನಾಯಕರುಗಳಿಗೆ ಮತ ಹಾಕಿ ನಮ್ಮ ತಲೆಗೆ ಹೊಸ ಹೊಸ ಟೋಪಿ ಪ್ರತೀ ಚುನಾವಣೆಯಲ್ಲೂ ನಮ್ಮದೇ ಪ್ರತೀಬಾರಿ ಸೋಲು ನಮ್ಮ ನಾಯಕರ ಗೆಲುವಿನಲ್ಲೂ ಮತ್ತೆ ಬಂದಿದ್ದಾರೆ ನಮ್ಮ ಮತ ಯಾಚನೆಗೆ ಮೂರ್ಖರ ಮಾಸದಲ್ಲಿ ನಮ್ಮೆಲ್ಲರ ಮೂರ್ಖರನ್ನಾಗಿಸಲು ಮುಖದಲ್ಲಿ ಮಂದಹಾಸ ಚೆಲ್ಲಿ ಒದ್ದು ಓಡಿಸಬೇಕು ದೂರ ಎಂದು ನನ್ನ ಮನದೊಳಗಿದೆ ಹಂಬಲ ಯಾರಲ್ಲಿ ಹೇಳಲಿ ಯಾರು ಬಂದು ನೀಡುವರು ನನಗೆ ಇಲ್ಲಿ ಬೆಂಬಲ ಚುನಾವಣೆಗೇ ಹಾಕಬಾರದೇಕೆ ನಾವೆಲ್ಲಾ ಈ ಬಾರಿ ಬಹಿಷ್ಕಾರ ಎಂಬ ಕರೆ ನೀಡಿದರೆ ನನಗೆ ಸಜೆ ಯಾಕೆಂದರದು ಸಂವಿಧಾನ ಬಾಹಿರ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by manjunath s reddy on
ಆಸು ಕವನ ರಾಜಕೀಯ ಜತನ ಕವನಗಳಿಗೆ ಅರ್ಪಿಸಿದ್ದಾರೆ ತಮ್ಮ ತನು ಮನ... ಕವನ ಸೂಪರ್ರ್... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ಧನ್ಯವಾದಗಳು ನಿಮ್ಮ ಪ್ರಾಸಬದ್ಧ ಪ್ರಶಂಸೆಗೆ ತನು ಮನ ಅರ್ಪಿಸಿದ್ದೇನೆ ಧನವಿಲ್ಲ ಜೊತೆಗೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srani on
ಹೌದು ಹೆಗ್ಡೆ ಸರ್ ನಾವೆಲ್ಲರೂ ಮೂರ್ಖರೆ! ಯಾರಿಗ್ ಮತ ಹಾಕಿದ್ರು ಮೂರ್ಖರೆ.. ಯಾರಲ್ಲೂ ನಂಬಿಕೆ, ವಿಶ್ವಾಸವಿಲ್ಲ. ಎಲ್ಲ ನಾಯಕರೂ ಬ್ರಷ್ಟರೆ. -ಶೋಭಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on
ಹೂಂ...ಕಣ್ರೀ...ಶೋಭಾ.. ಎಲ್ಲರೂ ಭ್ರಷ್ಟರೇ .. ಏನು ಮಾಡೋದು... ಇದು ನಮ್ಮ ಅಸಹಾಯಕತೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on
ನಿಮಗೆ ಯಾವ ಕ್ಯಾಂಡಿದೇಟ್ ಗೂ ಮತ ಹಾಕೋಕೆ ಇಸ್ಟ ಇಲ್ಲ ಅಂದ್ರೆ, ಮತ ಹಾಕದಿರುವ ಹಕ್ಕು ಇದೆ ಅಂತೆ, ಡಿಟೇಲ್ಸ ಗೊತ್ತಿಲ್ಲ, ತಿಳಕೊಂಡು ಹೇಳ್ತಿನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.