ಗುರುವಿನ ವಿಸ್ತರದ | ಪರಿಯ ನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗನವ ಬೆಳಗಿ |
ಪರಿಪೂರ್ಣನಿಪ್ಪ ಸರ್ವಜ್ಞ ||

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

ಕನ್ನಡಿಗರ ಮನೆಯಲ್ಲೇ ಇಂದು ಕನ್ನಡ ಸತ್ತು ನಾರುತ್ತಿದೆ
ಈ ನಾಡಿನನ್ಯ ಆಡುಭಾಷಿಗರ ಮೇಲೆ ದಬ್ಬಾಳಿಕೆ ಸಾಗುತಿದೆ

ಅಮ್ಮನನ್ನು "ಮಮ್ಮಿ" ಎಂಬ ಕಂದಮ್ಮಗಳ ಬಾಯಲ್ಲಿ
ದೊಡ್ಡಪ್ಪ ಚಿಕ್ಕಪ್ಪನವರನ್ನೆಲ್ಲಾ "ಅಂಕಲ್" ಎಂಬವರಲ್ಲಿ

"ರೋಡ"ಲ್ಲಿ ನಡೆದು "ಸರ್ಕಲ್ಲ"ನ್ನು ಸುತ್ತಿ "ಸ್ಕೂಲಿ"ಗೆ ಹೋಗಿ
ಕಲಿತ ನಾಲ್ಕಕ್ಷರಗಳು ಕಂಡಿವೆ ಕನ್ನಡಕ್ಕಿಂತಲೂ ಹೆಚ್ಚಾಗಿ

ಆಡು ಭಾಷೆಯ ಸೋಗಿನಲಿ ಆಂಗ್ಲ ಹಾಸುಹೊಕ್ಕಾಗಿಹುದು
ಅಲ್ಲಿಂದ ಬರಹಕ್ಕೆ ಬಂದು ಕನ್ನಡವನೇ ಈಗ ಓಡಿಸಿಹುದು

ಅಶ್ಟು ಇಶ್ಟು ಎಶ್ಟು ಎಂಬ ಭಾಶೆಯನು ಬಳಸಿ ಹಳೆಯದಿರಲಿ
ಎಂಬುವವರು ಚಡ್ಡಿಗಳ ಬಿಟ್ಟಿನ್ನು ಲಂಗೋಟಿಯನೇ ತೊಡಲಿ

ದೊಡ್ಡ ತಾರಾ ಉಪಾಹಾರ ವಸತಿ ಗೃಹಗಳಲಿ ಕನ್ನಡವಿಲ್ಲ
ಪಾಪದ ಕಾಕಾ ತನ್ನ ತಿಂಡಿಯ ಸ್ವಭಾಷೆಯಲಿ ಕರೆಬಹುದಲ್ಲ

ತಿಂಡಿಯ ನಾಮಕರಣ ಮಾಲೀಕನಲ್ಲದೆ ನಾ ಮಾಡಬಹುದೇ
ಕುಮಾರನನು ಗುಮಾರನೆಂದರೆ ಬರಿದೆ ಉರಿದಾಡಬಹುದೆ

ಅನ್ಯರು ಅಲ್ಲಿ ಬಳಸಿದಕ್ಷರಗಳು ಯಾವುದೆನ್ನುವುದಷ್ಟೇ ಮುಖ್ಯ
ಕನ್ನಡ ನಾಡಲ್ಲಿ ಕನ್ನಡದ ಫಲಕಗಳು ಇರುವುದು ಪ್ರಾಮುಖ್ಯ

ಅನ್ಯ ಭಾಷಿಗರ ಪರ ಮಾತಾಡಲೆನ್ನ ನಿರಭಿಮಾನಿ ಎಂಬರು
ಕನ್ನಡದ ಬಳಕೆ ಮಾಡದಲೇ "ಐ ಲವ್ ಕನ್ನಡ" ಎಂದೆಂಬರು

ಹುಟ್ಟು ಕನ್ನಡಿಗ ಅಚ್ಚ ಕನ್ನಡಿಗರೆಂದು ತಮ್ಮ ಬೆನ್ನ ತಟ್ಟಿಕೊಂಬರು
ಕನ್ನಡ ನಾಡಲ್ಲಿ ಹುಟ್ಟಿ ಕನ್ನಡದಲೇ ಬರೆಯುವವರ ಜರೆಯುವರು

ಕನ್ನಡದ ಹೆಸರಲ್ಲಿ ಹಗಲೆಲ್ಲಾ ನಾಡಲ್ಲಿ ವಸೂಲಿ ನಡೆಯುತಿಹುದು
ಕನ್ನಡ ಉಳಿಯದಿದ್ದರೂ ಅವರ ತಿಜೋರಿಗಳು ತುಂಬುತಿಹುದು

ಸಾಹಿತಿಗಳ ಚಿಕ್ಕ ಚಿತ್ರಗಳ ಜೊತೆಗೆ ನಾಯಕರ ದೊಡ್ಡ ಭಾವಚಿತ್ರ
ಕನ್ನಡಕ್ಕಿಂತಲೂ ಈ ನಾಯಕರ ಪ್ರಚಾರವೇ ನಡೆದಿದೆ ಸರ್ವತ್ರ

Your rating: None Average: 4 (4 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

vinideso's picture

ಚೆನ್ನಾಗಿದೆ ಗುರುಗಳೇ (ಸರ್ ).

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

bhasip's picture

ಚೆನ್ನಾಗಿದೆ ಹೆಗ್ಗಡೆ ಸಾರ್,

ಆಗಲೆ ಧ್ವಜವಂದನೆ ಕೂಡ ನಡೆದಿದೆ! ಏನು ಪುಣ್ಯ ಸಾರ್ ನಿಮ್ಮ ಕವನಕ್ಕೆ!!

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

Chikku123's picture

ಚೆನ್ನಾಗಿದೆ ಹೆಗ್ಡೆಯವರ

ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

somayaji's picture

ಚಿಕ್ಕದಾಗಿ, ಚೊಕ್ಕವಾಗಿ, ಮನ ಮುಟ್ಟುವಂತಿದೆ...

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

ಮಾಯ್ಸ೨'s picture

ಡಬ್ಬ ಕವನ.

ಅದೇನು ಹೊಗಳು ಭಟ್ಟರುಗಳೋ.. ಅವರವರೇ ನಮ್ಮೂರೋರು ಅಂತ ಹೊಗಳಿಕೊಳ್ಳೋದು.!

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

npradeepnp's picture

ಸರಿಯಾದ ಮಾತು ಮಾಯ್ಸ ಅವರೇ..ಆಹಾ..ಭಟ್ಟರೇ.."ಪರಭಾಷಿಗರ ಮೇಲೆಮ್ಮ ಸತತ ದಬ್ಬಾಳಿಕೆ ಸಾಗುತಿದೆ".. ನಿಮ್ಮಂಥವರು ಹೀಗೆ ಕವನಗಳಲ್ಲಿ ಕನ್ನಡದ ಬಗ್ಗೆ ರೋಧಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳೋದಕ್ಕೆ ಲಾಯಕ್ಕು..ಬೇರೆ ಏನಿಕ್ಕೂ ಲಾಯಕ್ಕಿಲ್ಲ..ಇದನ್ನ ಮೆಟ್ಟಿ ನಿಲ್ಲೊ ಧೈರ್ಯವಂತು ಇಲ್ಲ..ಮೆಟ್ಟಿ ನಿಲ್ಲೋ ಶಂಕರ ಅಂಥವರ ಮೇಲೆ ವ್ಯಂಗ್ಯವಾಡೋದು..ಕುಹುಕದ ಮಾತಾಡೋದು..ನಿಮ್ಮಂಥವರಿಗೆ ಆಶಾಡಭೂತಿಗಳು ಅನ್ನೊದು..ನೀವು ಹೀಗೆ ರೋಧಿಸೋ ದುರ್ಗತಿ ಇನ್ನು ಕನ್ನಡಕ್ಕೆ ಬಂದಿಲ್ಲ..ಮೊದಲು ನಿಮ್ಮ ಕವನದಿಂದ ಈ ಸಾಲನ್ನು ತೆಗೆಯಿರಿ.....ಈ ಕವನಕ್ಕೆ ಇಂಚರ,ನಾಗೇಂದ್ರ, ಬಾಳಿಗಾ,ವಿನಯ ಅವರ ಬಹೋಪರಾಕ್ ಬೇರೆ ಕೇಡು..ಸ್ವಾಭಿಮಾನಿಯಾದ ಯಾವ ಕನ್ನಡಿಗನೇ ಆದರೂ ಇವರ ಕವನಕ್ಕೆ ಛೀಮಾರಿ ಹಾಕುತ್ತಾನೆ...

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

uniquesupri's picture

>>> ಸ್ವಾಭಿಮಾನಿಯಾದ ಯಾವ ಕನ್ನಡಿಗನೇ ಆದರೂ ಇವರ ಕವನಕ್ಕೆ ಛೀಮಾರಿ ಹಾಕುತ್ತಾನೆ...

ಪ್ರದೀಪ್,
ಈ ಸಾಲು ಓದಿದ ಮೇಲೆ ನನಗಂತೂ ನಾ ಹಿಂದೆ ಕೇಳಿದ ಪ್ರಶ್ನೆಗಳಿಗೆ ನಿಮ್ಮ ಉತ್ತರ ಪಡೆಯಲೇ ಬೇಕು ಅನ್ನಿಸ್ತಿದೆ.

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

ಮಾಯ್ಸ೨'s picture

ಪ್ರದೀಪ..

ಇವಯ್ಯನ್ ತಾಯ್ನುಡಿಯೇ ಕನ್ನಡವಲ್ಲವೇನೋ..

ಸುಮ್ನೆ ಶೋಕಿಗೆ ಏನೋ ಗೀಚಿ ಕವನ ಅನ್ನೋದು. ಎಷ್ಟು ಕೆಟ್ ಕವನ ಇದು.. ಅಂದವಾಗೂ ಇಲ್ಲ. ಅವಲಕ್ಷಣ.

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

npradeepnp's picture

ನನ್ನ ಮುಂಚಿನ ವಿಮರ್ಶೆಯನ್ನು ಸ್ವಲ್ಪ ಸರಿಪಡಿಸಿ ಮತ್ತೆ ಹಾಕುತಿದ್ದೇನೆ..ಬಾಳಿಗಾ,ಇಂಚರ ಅವರ ಕ್ಶಮೆಯಾಚಿಸುತ್ತೇನೆ..
ಸರಿಯಾದ ಮಾತು ಮಾಯ್ಸ ಅವರೇ..ಆಹಾ..ರೀ ಹೆಗ್ಡೆ ಅವರೇ.."ಪರಭಾಷಿಗರ ಮೇಲೆಮ್ಮ ಸತತ ದಬ್ಬಾಳಿಕೆ ಸಾಗುತಿದೆ".. ನಿಮ್ಮಂಥವರು ಹೀಗೆ ಕವನಗಳಲ್ಲಿ ಕನ್ನಡದ ಬಗ್ಗೆ ರೋಧಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳೋದಕ್ಕೆ ಲಾಯಕ್ಕು..ಬೇರೆ ಏನಿಕ್ಕೂ ಲಾಯಕ್ಕಿಲ್ಲ..ಇದನ್ನ ಮೆಟ್ಟಿ ನಿಲ್ಲೊ ಧೈರ್ಯವಂತು ಇಲ್ಲ..ಮೆಟ್ಟಿ ನಿಲ್ಲೋ ಶಂಕರ ಅಂಥವರ ಮೇಲೆ ವ್ಯಂಗ್ಯವಾಡೋದು..ಕುಹುಕದ ಮಾತಾಡೋದು..ನಿಮ್ಮಂಥವರಿಗೆ ಆಶಾಡಭೂತಿಗಳು ಅನ್ನೊದು..ನೀವು ಹೀಗೆ ರೋಧಿಸೋ ದುರ್ಗತಿ ಇನ್ನು ಕನ್ನಡಕ್ಕೆ ಬಂದಿಲ್ಲ..ಮೊದಲು ನಿಮ್ಮ ಕವನದಿಂದ ಇಂಥ ಸಾಲುಗಳನ್ನು ತೆಗೆಯಿರಿ.....ಈ ಕವನಕ್ಕೆ ನಾಗೇಂದ್ರ, ಚೇತನ, ಭಾಸ್ಕರ ಅವರ ಬಹೋಪರಾಕ್ ಬೇರೆ..ಅದೇನು ಹೊಗಳು ಭಟ್ಟರೋ..ಸ್ವಲ್ಪನಾದ್ರು ತಮ್ಮ ತಲೆಗಳಲ್ಲಿರುವ ಬುದ್ಧಿ ಒರಗೆ ಹಚ್ಚಿ ಈ ಕವನವನ್ನು ವಿಮರ್ಶಿಸಿದರೆ ಸ್ವಾಭಿಮಾನಿಯಾದ ಯಾವ ಕನ್ನಡಿಗನೇ ಆದರೂ ಇವರ ಕವನಕ್ಕೆ ಛೀಮಾರಿ ಹಾಕುತ್ತಾನೆ...

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

inchara123's picture

ಏನೋಪ್ಪಾ ಒಂದು ಅರ್ಥವಾಗ್ತಿಲ್ಲಾ. ಒಂದು ಕಡೆ ಮೇಧಾವಿಗಳು ಅಂತಾ, ಇನ್ನೊಂದು ಕಡೆ ಬುದ್ಧಿಜೀವಿಗಳು ಅಂತಾ, ಮತ್ತೊಂದು ಕಡೆ ವಿಶಾಲ ಮನಸ್ಸಿನವಳು ಅಂತೆಲ್ಲಾ ಹೊಗಳ್ತಿದ್ದಾರೆ. ಇಲ್ಲಿ ನೋಡಿದ್ರೆ ನನ್ನ ಕ್ಷಮೆ ಬೇರೆ ಯಾಚಿಸ್ತಿದ್ದಾರೆ ಪ್ರದೀಪ್. ಏನು ಸಮಾಚಾರ ಪ್ರದೀಪ್? ;-)

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

vinideso's picture

ಲಾಯ ಅಂದ್ರೆ ಕುದುರೆ ಕಟ್ಟುವ ಜಾಗ ಅಂತ ಅಲ್ವಾ ಅರ್ಥ? ;) :)

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

npradeepnp's picture

ಮಾಯ್ಸಾ ಅವರೇ..ಅವಲಕ್ಶ್ಣ ಅಲ್ರೀ..ಇಂಥವರಿಗೆ ಅಸಡ್ಡೆ ಮತ್ತೆ ಏನು ಗೀಚಿದ್ರು ಜನ ಓದಿ ಬಹೊಪರಾಕ್ ಹಾಕುತ್ತಾರೆ ಅನ್ನೊ ಅಹಂ..ಇಂಥಹವರಿಗೆ ಇಲ್ಲಿ ಸಂಪದ ನಲ್ಲಿ ನೀರಿಳಿಸೋವ್ರು ಯಾರು ಇಲ್ವೆ?? ಸ್ವಾಭಿಮಾನಿ ಕನ್ನಡಿಗರಿಗೆ ಏನು ಕೊರತೆಯೇ ಇಲ್ಲಿ?? ನಂಗೆ ಯಾಕೋ ಈ ಸಂಪದನಲ್ಲಿ ಇರೋ ಬಹಳ ಸದಸ್ಯರು ಬಾವಿ ಒಳಗಿನ ಕಪ್ಪೆಗಳ ಹಾಗೆ ಕಾಣುತಿದ್ದಾರೆ..ಇವರು ಬರೆದಿದಕ್ಕೆ ಅವರು ಬಹೊಪರಾಕ್ ಹಾಕೊದು..ಅವರು ಬರೆದಿದಕ್ಕೆ ಇವರು ಬಹೊಪರಾಕ್ ಹಾಕೊದು..ಹೀಗೆ ಇಂಥವರಿಂದಾನೆ ನಮ್ಮ ಭಾರತ ಮತ್ತೆ ಕರ್ನಾಟಕ ಬೇರೆ ಅವರಿಗೆ ಸಸಾರ ಆಗೋದು..ಬೇರೆ ಭಾಶೆಯವರು ಯಾರದ್ರು ಬಂದು ಇದನ್ನ ಓದಿದ್ರೆ ನಮ್ಮನ್ನ ನೋಡಿ ಕೇಕೆ ಹಾಕೊಂಡು ನಗೋದಿಲ್ವೆ..ತನ್ನ ಮತ್ತೆ ತನ್ನ ಮನೆ ಅವರ ಬಗ್ಗೆ ಸಸಾರ ಮಾಡಿ ಹೀಗೆ ಕವನ ಗೀಚಿ ಇಲ್ಲಿ ಹಾಕಲಿ ನೋಡೊಣ..

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

ಮಾಯ್ಸ೨'s picture

ಏನೋಪ್ಪ.. ನಂಗೆ ಸಂಪದ ಹೆಂಗೆ ಅಂತ ಅಷ್ಟು ಚನ್ನಾಗಿ ಗೊತ್ತಿಲ್ವೇನೋ..

ಆದ್ರೆ ನೀವ್ ಹೇಳಿದ್ ಮೇಲೆ ಹಂಗೆ ಕೆಲವ್ರಿಗೆ ಅನ್ನಿಸಿರ್‍ಬೋದು.

ಇವರ ಬೇರೆ ಕವನಗಳನ್ನು ಓದಿ, ಆಸ್ವಾದಿಸಿ :) ಹಾಗೇ ಅದಕ್ಕೆಲ್ಲ ಕಮೆಂಟು ಹಾಕಿದ ಮಂದಿ ಯಾರ್‍ ಯಾರ್‍ ಎಂದು ಗಮನಿಸಿದ್ರೆ ಈ ’ಬಹುಪರಾಕ್’ ಸಿದ್ದಾಂತ ಅರ್ಥವಾಗಬೋದೇನೋ.. ನೋಡಣ.

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

npradeepnp's picture

ಮಾಯ್ಸ ಅವರೇ..ನಾಳೆ ನೋಡಿ ಬೇಕಾದರೆ..ಈ ಹಗ್ಡೆ ಮತ್ತೆ ಅವರ ಬಹೊಪರಾಕ್ ಭಟ್ಟಂಗಿಗಳು ಅವರು ಬರೆದ ಕವನವೇ ಸರಿ, ನಮ್ಮ ಕುವೆಂಪು ಅವರ ಕವನಗಿಂತಲೂ ಶ್ರೇಷ್ಟವಾದದ್ದು ಅಂತ ವಾದಿಸುತ್ತಾರೆ..ಅವರೇನಾದ್ರು ಈ ಕವನ ಇಲ್ಲಿಂದ ಎತ್ತಂಗಡಿ ಮಾಡದೇ ಹೋದರೆ ನಮ್ಮಂಥ ಸ್ವಾಭಿಮಾನಿ ಕನ್ನಡಿಗರು ಸೇರಿ ಸಂಪದ ಅವರಿಗೆ ಹೇಳಿ ಎತ್ತಂಗಡಿ ಮಾಡಿಸಬೇಕು..ಏನಂತೀರಾ?

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

inchara123's picture

ಯಾವ ಕವನ ಎತ್ತಂಗಡಿಯಾಗುತ್ತೋ? ಯಾರು ಎತ್ತಂಗಡಿಯಾಗುತ್ತಾರೋ? :-(

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

uniquesupri's picture

>>> ನಂಗೆ ಯಾಕೋ ಈ ಸಂಪದನಲ್ಲಿ ಇರೋ ಬಹಳ ಸದಸ್ಯರು ಬಾವಿ ಒಳಗಿನ ಕಪ್ಪೆಗಳ ಹಾಗೆ ಕಾಣುತಿದ್ದಾರೆ..ಇವರು ಬರೆದಿದಕ್ಕೆ ಅವರು ಬಹೊಪರಾಕ್ ಹಾಕೊದು..ಅವರು ಬರೆದಿದಕ್ಕೆ ಇವರು ಬಹೊಪರಾಕ್ ಹಾಕೊದು..

ಪ್ರದೀಪ್,
ಬಹಳ ಸದಸ್ಯರು ಎಂದರೆ ಎಷ್ಟು ಪರ್ಸೆಂಟು?

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

npradeepnp's picture

ಸುಪ್ರೀತ್ ಅವರೇ..ಸಂಖ್ಯೆಗಳ ಮಾತು ಬಿಡಿ ಈಗ..ನನಗೆ ಈ ಕವನದ ಮೊದಲ ಸಾಲು ಓದಿದ ಕೂಡಲೇ ಮೈಯೆಲ್ಲಾ ಉರಿದು ಹೋಯಿತು. ಹೆಗ್ಡೆಯವರ ಮನೆಯಲ್ಲಿ ಕನ್ನಡ ಸತ್ತು ಕೊಳೆತು ನಾರುತ್ತಿರಬಹುದು..ಏಕೆಂದರೆ ಮಾಯ್ಸ ಹೇಳಿದ ಹಾಗೆ ಅವರ ಮಾತೄಭಾಷೆ ಕೊಂಕಣಿ ಅಲ್ವೆ..ನಮ್ಮಂಥ ಅಪ್ಪಟ ಕನ್ನಡಿಗರ ಮನೆಗಳಲ್ಲಿ ಇನ್ನು ಕನ್ನಡ ಚೆನಾಗಿಯೇ ನಳನಳಿಸುತ್ತಿದೆ.. ಹೋಗಲಿ ಎಂದು ಎರಡೆನಯ ಸಾಲು ನೋಡಿದೆ..ಪರಭಾಷೆಯವರ ಕನ್ನಡದ ಮೇಲಿನ ದಬ್ಬಾಳಿಕೆ ಅಂತೆ..ಇದನ್ನೆ ನಮ್ಮ ಶಂಕರ ಅವರು ಮೊನ್ನೆ ಬ್ಲಾಗ್ ನಲ್ಲಿ ತೋಡಿಕೊಂಡು ಹೇಳಿದ್ರೆ..ಇವರು, ಬಾಳಿಗಾ, ವಿನಯ,ಇಂಚರ ಅಂಥವರು ತಲೆಗೊಂದು ಮಾತನಾಡಿ ಆತ ಇದರ ಬಗ್ಗೆ ಉಸಿರೆತ್ತಿದ್ದೆ ತಪ್ಪು ಅಂತ ಮಾಡಿಬಿಟ್ರು..ಈಗ್ ಇಲ್ಲಿ ದಬ್ಬಾಳಿಕೆ ಅಂತ ಕವನ ಬರೆದು ಯಾರನ್ನ ಮೋಡಿ ಮಾಡಲು ಹೊರಟಿದ್ದಾರೆ? ಏನು ಇಲ್ಲಿ ಬರೊ ಓದುಗರೆಲ್ಲಾ ವಿನಯ ಥರ "ಚೆನ್ನಾಗಿದೆ ಗುರುಗಳೆ" ಅಂತ ಬಹೊಪರಾಕ್ ಹಾಕುತ್ತಾರೆ ಅಂತ ತಿಳಿದಿದ್ದಾರೆ ಅನ್ನಿಸುತ್ತೆ..ಇವರು ಬರೆಯೋ ಇಂತ ಕೀಳು ಅಭಿರುಚಿಯ ಕವನಕ್ಕೆ ಬಜೊಪರಾಕ್ ಹೇಳಕ್ಕೆ ನಮ್ಮ್ಂಥ ಕನ್ನಡಿಗರಿಗೆ ಯಾವ ದರ್ದು ಸ್ವಾಮಿ?? ಇಂಥ ನಿರಭಿಮಾನಿಗಳು ಇರುವರಿಂದಲೇ ಆ ಹುಸ್ಸೇನ್ ಎಂಬ ಚಿತ್ರಕಾರನು ಭಾರತಾಂಬೆಯನ್ನು ನಗ್ನವಾಗಿ ಚಿತ್ರೀಕರಿಸಿ ಇಡೀ ಪ್ರಪಂಚದ ಮುಂದೆ ಭಾರತದ ಮಾನವನ್ನು ಹರಾಜು ಹಾಕಿದ್ದು..

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

uniquesupri's picture

ನಂಗೆ ಈ ಕನ್ನಡ ಹೋರಾಟವೆಲ್ಲ ಅರ್ಥವಾಗಲ್ಲ ಪ್ರದೀಪ್.
ನೀವು ಹೇಳಿ ಎಷ್ಟು ಪರ್ಸೆಂಟ್ ಸಂಪದದ ಸದಸ್ಯರು ಎಂದು...

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

msprasad's picture

ರೀ ಸುಪ್ರೀತ್,

ಎಷ್ಟು ಪ್ರತಿಶತ ಅನ್ನೋದು ಯಾಕೆ ನಿಮಗೆ ? ನಿಮ್ಮ ಧೋರಣೆ ಹೆಂಗಿದೆ ಅನ್ನೋದನ್ನ ಅರ್ಥ ಮಾಡ್ಕೊಳಿ.ಈ ವಿಚಾರವನ್ನೇ ಹಿಡಿದು ಒಳ್ಳೇ ರಬ್ಬರ್ ಥರ ಎಳೀತೀರಲ್ರೀ.

ಶಂಕ್ರ

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

uniquesupri's picture

>>>ಎಷ್ಟು ಪ್ರತಿಶತ ಅನ್ನೋದು ಯಾಕೆ ನಿಮಗೆ ?

ಶಾಂತಿ!
ನಿಮ್ಮನ್ನಲ್ಲ ಕೇಳಿದ್ದು.

>>> ನಿಮ್ಮ ಧೋರಣೆ ಹೆಂಗಿದೆ ಅನ್ನೋದನ್ನ ಅರ್ಥ ಮಾಡ್ಕೊಳಿ.ಈ ವಿಚಾರವನ್ನೇ ಹಿಡಿದು ಒಳ್ಳೇ ರಬ್ಬರ್ ಥರ ಎಳೀತೀರಲ್ರೀ.

ನಿಮ್ಮ ಹೆಸರು ಪ್ರದೀಪ್ ಎಂತಲೇ?

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

uniquesupri's picture

ಪ್ರದೀಪ್ ನಿಮ್ಮುತ್ರಕ್ಕೆ ಕಾಯ್ತಿದೀನಿ...

ಎಷ್ಟು ಪರ್ಸೆಂಟ್ ಸಂಪದದ ಸದಸ್ಯರು ಬಾವಿಯ ಕಪ್ಪೆಗಳು? ಹೊಗಳು ಭಟ್ಟರು?

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

inchara123's picture

ಪ್ರದೀಪ್ ನಿಮಗೆ ಸ್ವಂತಿಕೆಯೇ ಇಲ್ಲವೇ? ನಿಮ್ಮ ಎಲ್ಲಾ ಪ್ರತಿಕ್ರಿಯೆಗಳಲ್ಲೂ ನಿಮ್ಮ ಅಭಿಪ್ರಾಯ ತಿಳಿಸುವುದಿಲ್ಲಾ, ಅದು ಬಿಟ್ಟು ‘ಮಾಯ್ಸ ಹೇಳಿದ ಹಾಗೆ, ಶಂಕರ್ ಹೇಳಿದ ಹಾಗೆ, ಇಂಚರ ಹೇಳಿದ ಹಾಗೆ’ ಅಂತಾ ಹೇಳ್ತಾ ಹೋಗ್ತೀರಿ. ನಾನು ತಲೆಗೊಂದು ಮಾತನಾಡ್ತೀನಿ ಅಂತಾ ಹೇಳ್ತೀದ್ದೀರಿ. ನನಗೆ ಎಷ್ಟು ತಲೆ ಇದೆ ಅಂತಾ ಹೇಳ್ತೀರಾ ಪ್ಲೀಸ್ :-)

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

somayaji's picture

<< ಹೆಗ್ಡೆಯವರ ಮನೆಯಲ್ಲಿ ಕನ್ನಡ ಸತ್ತು ಕೊಳೆತು ನಾರುತ್ತಿರಬಹುದು..ಏಕೆಂದರೆ ಮಾಯ್ಸ ಹೇಳಿದ ಹಾಗೆ ಅವರ ಮಾತೄಭಾಷೆ ಕೊಂಕಣಿ ಅಲ್ವೆ.. >>
:D :D :D :D
ಇನ್ನೇನೆಲ್ಲ ಹೇಳವ್ರೆ, ವಸಿ ನಮ್ಗು ಯೋಳಿ ಬುದ್ದಿ..

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

Aravind M.S's picture

ಹೆಗಡೆಯವರೆ,

ನಾ ಕಂಡಂತೆ ದ. ಕ ಪ್ರಾಂತ್ಯದ ಹಲವರ (ವಿಶೇಷವಾಗಿ ತುಳುವರ) ಧೋರಣೆ ಹೀಗಿನದ್ದು :
೧) ಘಟ್ಟದ ಮೇಲಿನವರು ಮೂಢರು - ಅದಕ್ಕೆ ದ.ಕ ದವರ ಗುಂಪುಗಾರಿಕೆ ಸಾಮಾನ್ಯ ಎಲ್ಲ ಕಡೆ. ಎಲ್ಲಾ ಘಟ್ಟದ ಮೇಲಿನವರು ಗೌಡ / ಗೌಡೆ (ಅವಹೇಳನದ ರೀತಿಯಲ್ಲಿ ಸಂಬೋಧಿಸುವುದು). ನಮ್ಮ ಮೇಡಮ್ ಹೇಳ್ತಿದ್ದರು - ಎಸ್.ಎಸ್.ಎಲ್.ಸಿ ಮಾಪನ ಮೈಸೂರಿಯನ್ಸ್ ತಪ್ ತಪ್ಪಾಗಿ ಮಾಡ್ತಾರೆ (ಅವರು ಮೂಢರಲ್ವೇ) ಜೋಪಾನವಾಗಿ / ಚೆನ್ನಾಗಿ ಬರೆಯಿರಿ ಎಂದು. ಮೂಢರು ಎಂಬ ಸಂಬೋಧನೆಯನ್ನ ಸಾರ್ವಜನಿಕ ಭಾಷಣದಲ್ಲಿ ಕೇಳಿದವನು ನಾನು.
೨) ಮಂಗಳೂರು ಕನ್ನಡವೇ ಶ್ರೇಷ್ಟ - ಅದಿರದ ಕನ್ನಡದ ಚಿತ್ರಗಳನ್ನು ಸಹಿಸುವುದಿಲ್ಲ (ವಿಶೇಷವಾಗಿ ಉಡುಪಿಯಿಂದ ಮಂಗಳೂರ ಕಡೆಗೆ), ಬದಲಿಗೆ ಹಿಂದಿ, ತಮಿಳಿನ ಓಲೈಕೆ.
೩) ನಮ್ಮ ಊರುಗಳ ಪರಿಸರ ಉಳಿಸಬೇಕು - ಅದಕ್ಕಾಗಿ ಕೈಗಾರಿಕೆಗಳನ್ನು ಬರಲು ಬಿಡುವುದಿಲ್ಲ. ಕೆಲಸಕ್ಕೆ ಕನ್ನಡದ ಬೇರೆ ಊರಿನ ಉದ್ದಿಮೆಗಳು ಬೇಕು, ಅಲ್ಲಿನ ಪರಿಸರ ಹಾಳಾದರೆ ನನಗೇನು ? ಎಂಬ ಧೋರಣೆ
೪) ಕರ್ನಾಟಕದ ಬೇರೆ ಊರಿಂದ ಬಂದವರು ಪರವೂರಿನವರು / ಕುಡ್ಲದವರಲ್ಲ (ಕುಡ್ಲ ಎಂದರೆ ನಮ್ಮೂರು ಅಂತ ತುಳುದಲ್ಲಿ). ಅದಕ್ಕೆ ಅವರು ಅವಹೇಳನೆಗೆ ಪಾತ್ರರು

ಇಂಥ ಪಕ್ಷಪಾತಿ ಧೋರಣೆಗಳ ದುರಂತದ ಒಂದು ಮೊದಲ ಉದಾಹರಣೆ ಎಂದರೆ ಡಾ. ರಾಜ್ ರಂಥ ಮಹಾನ್ ನಟರೇ ಮಂಗಳೂರಿನ ಕಡೆ ಮಾನ್ಯರಾಗಿರಲಿಲ್ಲ. ಘಟ್ಟದ ಮೇಲಿನ ನಾನು ಬೆಳೆದದ್ದೆಲ್ಲಾ ದ.ಕ ದಲ್ಲಿ ಉಡುಪಿ ಹತ್ತಿರ. ಅದಕ್ಕೆ ಈ ಮೇಲಿನದ್ದೆಲ್ಲಾ ಸ್ವತಃ ಅನುಭವಿಸಿದ್ದು.

ಸ್ವತಃ ಇಂತಹ ದೊಡ್ಡ ಸಂಚನ್ನೇ ಇಟ್ಟುಕೊಂಡಿರುವವರು ಅದು ಹೇಗೆ ಕನ್ನಡ ಪರ ಮಾತಾಡುವಿರಿ ? ಶಂಕರ ಬರೆದ ಬ್ಲಾಗ್ ನಲ್ಲಿ ಅವರ ಭಾಷೆ ಟೀಕಿಸಿದಿರಲ್ಲ, ಈಗ ನಿಮ್ಮದೇ ಬ್ಲಾಗುಗಳಲ್ಲಿ ಅದೆಷ್ಟು ಪರಭಾಷಾ ಪದಗಳು ಸಿಕ್ಕವು.

- ಅರವಿಂದ

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

vinideso's picture

<<ಸ್ವತಃ ಇಂತಹ ದೊಡ್ಡ ಸಂಚನ್ನೇ ಇಟ್ಟುಕೊಂಡಿರುವವರು ಅದು ಹೇಗೆ ಕನ್ನಡ ಪರ ಮಾತಾಡುವಿರಿ ? ಶಂಕರ ಬರೆದ ಬ್ಲಾಗ್ ನಲ್ಲಿ ಅವರ ಭಾಷೆ ಟೀಕಿಸಿದಿರಲ್ಲ, ಈಗ ನಿಮ್ಮದೇ ಬ್ಲಾಗುಗಳಲ್ಲಿ ಅದೆಷ್ಟು ಪರಭಾಷಾ ಪದಗಳು ಸಿಕ್ಕವು>>
ಅವು ಬೇಕಂತಲೇ ಬರೆದಿದ್ದು ಇರಬೇಕು ಅರವಿಂದ ಅಣ್ಣ ;)

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

Aravind M.S's picture

ಬೇಕಂತಲೇ ಮಾಡಿದ್ರೆ ಅದು ಇನ್ನೂ ಅಧಮ

ಉ: ಕಲಿತ ನಾಲ್ಕಕ್ಷರಗಳು ಕನ್ನಡಕ್ಕಿಂತಲೂ ಹೆಚ್ಚಾಗಿ!!!

vinideso's picture

<<ಬೇಕಂತಲೇ ಮಾಡಿದ್ರೆ ಅದು ಇನ್ನೂ ಅಧಮ>>
ಅಷ್ಟು ದೊಡ್ಡ ಪದ ನನ್ ತಲಿ ಒಳಗ ಹೋಗಕ್ಕಿಲ್ರಿ ಯಪ್ಪಾ , ಏನೋ ನನಗೆ ಹಾಗೆ ಅನಿಸ್ತು ಹೇಳಿದೆ . ಇನ್ನು ಅವರ ಕವನ ನಿಮ್ಮ ಪ್ರತಿಕ್ರಿಯೆ (ಕಾಮೆಂಟ್ ) ಮಧ್ಯೆ ನನ್ನದು ಯಾಕೆ ಅಲ್ವರ , ಬರ್ಲಾ ;) :) :)