26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆಕಾಶ - ಭೂಮಿ!

May 4, 2010 - 9:46am
asuhegde

ಸಖೀ,

ನೀ ನಿಜವನ್ನೇ ನುಡಿದೆ

ನೀ ಭೂಮಿಯಾದರೆ

ನಾ ಆಕಾಶವೆಂದೆ!

 

ಭೂಮಿ ಆಕಾಶವನ್ನು

ಮುಟ್ಟುತ್ತಿದೆಯೆಂದೂ

ಆಕಾಶ ಭೂಮಿಯನ್ನು

ಎಲ್ಲಾ ಕಡೆಯಿಂದಲೂ

ತಬ್ಬಿಕೊಳ್ಳುತ್ತಿದೆಯೆಂದೂ

ಎಲ್ಲರಿಗೂ ಅನ್ನಿಸುತ್ತಿರುವುದು

ಅದು ಬರೀ ಭ್ರಮೆಯಷ್ಟೆ!


ಭೂಮಿ ಆಕಾಶಗೆಳೆಂದೂ

ಒಂದಾಗುವುದೇ ಇಲ್ಲ

ಅಂತೆಯೇ ನಾವೂ ಕೂಡ

ಇದೂ ಸರಿಯಷ್ಟೆ?

 

ಆದರೂ ಸಖೀ,

ಆ ಆಕಾಶದೊಳಗೇ

ಈ ಭೂಮಿಗಿದೆ ನೆಲೆ

ಈ ಭೂಮಿಯಿದ್ದರಷ್ಟೇ

ಆ ಆಕಾಶಕ್ಕೂ ಬೆಲೆ!

*****

ಆತ್ರಾಡಿ ಸುರೇಶ ಹೆಗ್ಡೆ

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by P.Ashwini on

>>ಭೂಮಿ ಆಕಾಶಗೆಳೆಂದೂ
ಒಂದಾಗುವುದೇ ಇಲ್ಲ
ಅಂತೆಯೇ ನಾವೂ ಕೂಡ
ಇದೂ ಸರಿಯಷ್ಟೆ?

ಇಷ್ಟೊಂದು ನಿರಾಸೆಯೇನ್ರೀ??
ಭಾಳ ಚೆನ್ನಾಗಿದೆ.

-ಅಶ್ವಿನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಅಶ್ವಿನಿ,
ಬರೀ ನಿರಾಸೆ ಅಂತ ಅಲ್ಲ. ವಾಸ್ತವದ ಅರಿವಿದ್ದರೆ ಚೆನ್ನ.

ಜೀವನವೇ ಆಸೆ - ನಿರಾಸೆಗಳ, ಸುಖ - ದುಃಖಗಳ, ಏಳು - ಬೀಳುಗಳ, ಸಂಗಮ

ವಾಸ್ತವವನ್ನು ಅರಿತು, ನಮ್ಮವರಿಗೂ ಅರ್ಥಮಾಡಿಸಿ, ನಡೆಸುವ ಜೀವನವೇ ಸುಗಮ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ಸು೦ದರ ಕವನ

ದೂರದವಕಾಶವ ನೋಡು,
ಮಳೆಬಿಲ್ಲು ಕಾಣ್ವುದು ಅಲ್ಲೇ;
ಮೋಡ ಗಡ್ಡೆ ಕಟ್ಟುವುದು ಅಲ್ಲೆ;
ಕಾಣುವುದು ನೆಲದ ಮೇಲೆ,
ಹನಿಯುವುದು ನೆಲದ ಮೇಲೆ,
ಒ೦ದಾಗದಿದ್ದರೇನು?
ನಿರ೦ತರ ಒಡನಾಟವಿಲ್ಲವೇನು?
ಹನಿಯಾಗಿ ,ಬೆಳಕಾಗಿ
ಉಸಿರಾಗಿ ,ಹಸಿರಾಗಿ

ನಿಮ್ಮವ
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಎಷ್ಟೇ ದೂರ ದೂರ ಅನಿಸಿದರೂ ಆಕಾಶ ಮತ್ತು ಭೂಮಿ ಎರಡೂ ಒಂದಕ್ಕೊಂಡು ಪೂರಕ ಅನ್ನುವ ಭಾವನೆಯಿಂದ ಬರೆದಿದ್ದೆ.
ಜೀವನದಲ್ಲೂ ಬಾಳಸಂಗಾತಿಗಳು ಪೂರಕವಾಗಿ ಬಾಳುವಂತಾಗಬೇಕು ಅನ್ನುವುದೇ ಆಶಯ.

ಓದಿ, ಮೆಚ್ಚಿ, ಕಾವ್ಯಾತ್ಮಕವಾಗಿ ಪ್ರತಿಕ್ರಿಯಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.