May 5, 2011 - 2:08pm
ಇಷ್ಟು ದಿನ ನಾ...!
ಇಷ್ಟು ದಿನ ನಾ ಏಕಾಂಗಿ
ಹೇಗೋ ಏನೋ ಬದುಕುತಲಿದ್ದೆ
ಬಾಳ ಪಥದಲಿ ನೀ ಜೊತೆಯಾಗಿ
ನನ್ನೀ ಪಯಣಕೆ ಹೊಸ ಗತಿಯ ತಂದೆ
ನನ್ನ ಮೊಗದಲಿ ನಗುವನು ತಂದೆ
ನನ್ನೀ ಮನಕೆ ಶಾಂತಿಯ ತಂದೆ
ತನು ಮನ ಅರಳಿಸೋ ಪ್ರೀತಿಯ ತಂದೆ
ನನ್ನೀ ಬಾಳಿಗೆ ಹೊಸ ಅರ್ಥವ ನೀ ತಂದೆ
||ಇಷ್ಟು ದಿನ ನಾ ಏಕಾಂಗಿ
ಹೇಗೋ ಏನೋ ಬದುಕುತಲಿದ್ದೆ||
ಎಡವಿದ ನನ್ನನು ಸಂಭಾಳಿಸಿದೆ
ತಪ್ಪುಗಳನ್ನು ಅರಿವಿಗೆ ತಂದೆ
ಒಳ್ಳೆಯ ಗುಣಗಳ ಮೆಚ್ಚುತಾ ಬಂದೆ
ಆತ್ಮ ವಿಶ್ವಾಸವ ತುಂಬುತ ನೀ ನಿಂದೆ
||ಇಷ್ಟು ದಿನ ನಾ ಏಕಾಂಗಿ
ಹೇಗೋ ಏನೋ ಬದುಕುತಲಿದ್ದೆ||
****************
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಇಷ್ಟು ದಿನ ನಾ...!
ಹೆಗ್ಡೆ ಅವರೇ ನವ ವಧೂ ವರರಿಗೆ ಸೂಕ್ತವಾಗಿದೆ ನಿಮ್ಮೀ ಕವನ
ಉ: ಇಷ್ಟು ದಿನ ನಾ...!
ಜಯಂತ್,
ಹೌದು... !
ತಮ್ಮ ಮಾತು ನಿಜ. ತಮಗೆ ಅನುಭವವಾಗುತ್ತಿರಲೂಬಹುದು! ಅಲ್ಲವೇ?
:)
ಜನಸಂದಣಿಯ ನಡುವೆಯಲ್ಲೂ ಆಪ್ತರ ಕೊರತೆಯಿಂದಾಗಿ ಮಾನಸಿಕವಾಗಿ ಏಕಾಂಗಿಯಾಗಿದ್ದವರಿಗೆ, ಆಪ್ತರ ಸಹವಾಸ ದೊರೆತಾಗಲೂ ಇದು ಸೂಕ್ತ ಅನಿಸಬಹುದು!
ಧನ್ಯವಾದಗಳು.
-ಆಸು.
ಉ: ಇಷ್ಟು ದಿನ ನಾ...!
ನಿಜ ಹೆಗ್ಡೆ ಅವರೇ :-)
ಉ: ಇಷ್ಟು ದಿನ ನಾ...!
ದಾಸರ ಪದವಾದ “ ಇಷ್ಟು ದಿನ ಈ ವೈಕು೦ಠ“ ಹಾಡನ್ನು ನಮ್ಮ ಶ್ರೀ ವಿದ್ಯಾಭೂಷಣರು ಹಾಡಿದ ರಾಗಕ್ಕೆ ಸೂಕ್ತವಾಗಿ ಹೊ೦ದಿಕೆಯಾಗುವ ಗೀತೆ ಇದು!!!
ಅದರ ಪರೀಕ್ಷೆಯನ್ನೂ ಮಾಡಿದ್ದಾಯ್ತು!!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಇಷ್ಟು ದಿನ ನಾ...!
ರಾಘವೇಂದ್ರ,
ನಿನ್ನೆ ಮುಂಜಾನೆ ೭.೩೦ ಕ್ಕೆ ಟಿವಿ೯ ವಾಹಿನಿಯಲ್ಲಿ ದೀಪಿಕಾ ಮಾಧವ್ ಅವರು ತಿರುಪತಿ ಶ್ರೀನಿವಾಸನ ಕಥೆ ಹೇಳುತ್ತಾ ಇರುವಾಗ ಕನಕದಾಸರ ಪದದ ಈ ನಾಲ್ಕು ಸಾಲುಗಳನ್ನು ಉದ್ಧರಿಸಿದರು.
"ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೇ ಶ್ರೀರಂಗಶಾಯಿ"
ಅದೇ ಗುಂಗಿನಲ್ಲಿ ಕಛೇರಿಗೆ ಬರುತ್ತಾ ಇದ್ದೆ.
ಕಛೇರಿಗೆ ಬರುತ್ತಿರುವಾಗಲೇ, ನನ್ನ ಮನದಲ್ಲಿ, ಅದೇ ಧಾಟಿಯಲ್ಲಿ, ಈ ಸಾಲುಗಳು ಮೂಡಿದವು.
"ನನ್ನ ಮೊಗದಲಿ ನಗುವನು ತಂದೆ
ನನ್ನೀ ಮನಕೆ ಶಾಂತಿಯ ತಂದೆ
ತನು ಮನ ಅರಳಿಸೋ ಪ್ರೀತಿಯ ತಂದೆ
ನನ್ನೀ ಬಾಳಿಗೆ ಹೊಸ ಅರ್ಥವ ನೀ ತಂದೆ"
ಕಛೇರಿಗೆ ಬಂದವನೇ ಅಕ್ಷರ ರೂಪಕೊಟ್ಟೆ.
ಜೊತೆಗೆ ಅನ್ಯಸಾಲುಗಳೂ ತಂತಾನೇ ಸೇರಿದವು
ಮೂಲಧಾಟಿಯನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಸಾರ್ಥಕವಾಯ್ತೆಂದು ತಮ್ಮಿಂದ ತಿಳಿದು ಸಂತೋಷವಾಗಿದೆ.
ಧನ್ಯವಾದಗಳು.
-ಆಸು ಹೆಗ್ಡೆ
ಉ: ಇಷ್ಟು ದಿನ ನಾ...!
ನಿಜ ಹೆಗ್ಡೆ ಸರ್, ಜನಗಳ ಮಧ್ಯೆ ಇದ್ದೂ ಆಪ್ತರು ಜೊತೆಯಲ್ಲಿಲ್ಲದಿದ್ದರೆ ಏಕಾಂಗಿತನ ಕಾಡುತ್ತದೆ.
ಉ: ಇಷ್ಟು ದಿನ ನಾ...!
ಶ್ರೀನಿವಾಸ್,
ಹೌದು,...ಅದರ ಅನುಭವ ಅನುಭವಿಸಿದವರಿಗಷ್ಟೇ ಗೊತ್ತು.
ಧನ್ಯವಾದಗಳು.
-ಆಸು ಹೆಗ್ಡೆ
ಇದನ್ನೂ ಓದಿ: ಸಂಬಂಧಗಳು (http://sampada.net/b...)