19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!

November 6, 2009 - 9:25am
asuhegde

ಕವಿತೆ ಗರ್ಭಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ

ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ

ಕವಿ ನನಸಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ,

ಭಗ್ನ ಪ್ರೇಮಿಯೋ ಎಂದರಿತ ನಂತರವೇ ಹೊರ ಬರುವುದಲ್ಲ

ಪ್ರೀತಿಯನ್ನು ಹುಡುಕುತ್ತಿದ್ದಾನೋ, ಇಲ್ಲ ಪ್ರೀತಿಯ ಮುಂಗಾರಿನಲ್ಲಿ

ಕವಿ ತೊಯ್ದಿರುತ್ತಾನೋ ಎಂದು ತಿಳಿದು ಕವಿತೆ ಹೊರ ಬರುವುದಿಲ್ಲ

ಕವಿಯ ಆಂತರಿಕ ಹೊಯ್ದಾಟಗಳು ಪದಗಳ ರೂಪ ತಳೆವಾಗಲೆಲ್ಲಾ

ಬಾಹ್ಯದ ಆಗುಹೋಗುಗಳಿಗೆ ಕವಿ ಭಾವ ಸ್ಪಂದನ ಆಗುವಾಗಲೆಲ್ಲಾ

ನವಮಾಸ ತುಂಬಿದ ಗರ್ಭಿಣಿಯ ಗರ್ಭವನು ಬಿಟ್ಟು ಹೊರ ಜಗತ್ತಿಗೆ

ಕಾಲಿಡುವ ಶಿಶುವಿನಂತೆ ಮನದಿಂದ ಹೊರ ಹೊಮ್ಮುವುದೇ ಕವಿತೆ

ಒಂದು ಮನದಿಂದ ಹೊರ ಹೊಮ್ಮಿ ಇನ್ನೊಂದು ಮನವನ್ನು ಸ್ಪರ್ಶಿಸಿ

ಅಲ್ಲೂ ಭಾವ ಸ್ಪಂದನಕ್ಕೆ ಆಸ್ಪದ ಮಾಡಿಬಿಡುವ ಸಾಧನವೇ ಕವಿತೆ

ಕವಿತೆ ಮನವ ಮುಟ್ಟಲು ಮನ ಮುದಗೊಂಡರೆ ಆನಂದದನುಭಾವ

ಭಾವನೆಗಳನ್ನರಿಯಲು ಓದುಗನಿಗಿರಬೇಕು ವಿಶಾಲ ಮನೋಭಾವ   

ಕವಿತೆ ಓದುವಾಗ ಕವಿ ಯಾರೆಂಬುದು ಯಾವಾಗಲೂ ಅಲ್ಲಿ ಗೌಣ

ಯಾವುದೇ ಕವಿತೆಗಾದರೂ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!

-ಆಸು ಹೆಗ್ಡೆ, ಬೆಂಗಳೂರು

 

ಇದು ಆನಂದರಕವಿತೆಗೆ ನನ್ನ ಪ್ರತಿಕ್ರಿಯೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ksraghavendranavada on

ಇಷ್ಟು ಚೆ೦ದದ ಕವಿತೆಗೆ ೨೧೨ ಹಿಟ್ಸುಗಳಾದರೂ ಒ೦ದೂ ಪ್ರತಿಕ್ರಿಯೆ ಬಾರದಿರುವುದು ಆಶ್ಚರ್ಯ ತ೦ದಿದೆ..!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಕಾರಣವಿದೆ !
ಆಗ ನಾನಿನ್ನು ಸಂಪದ ಸೇರಿರಲಿಲ್ಲವೆ !
:-))))))))))))))))))))

-ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಹತ್ತಿಪ್ಪತ್ತು ಪ್ರತಿಕ್ರಿಯೆಗಳ ಜೊತೆಗೆ
ಮೂರು-ನಾಲ್ಕುನೂರು ಪೆಟ್ಟು ತಿಂದ
ಬರಹಗಳಿಗಿಂತ ಪ್ರತಿಕ್ರಿಯೆಗಳಿಲ್ಲದೆಯೇ
ನೂರಾರು ಪೆಟ್ಟುಗಳ ತಿಂದ ಬರಹವೇ
ಬಹು ಪಾಲು ಲೇಸೆಂದ ಈ ಅಲ್ಪಜ್ಞ!!!

(“ಪೆಟ್ಟು ತಿಂದ” ಅನ್ನುವ ಪದಗಳನ್ನು “hits ಪಡೆದ” ಅನ್ನುವ ಪದಗಳಿಗೆ ಪರ್ಯಾಯವಾಗಿ ಬಳಸಿದ್ದೇನೆ )
:)

-ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಆಸು ಸಾರ್
ಬಿಡಿ ಹಾಗಿದ್ದಲ್ಲಿ ಪ್ರತಿಕ್ರಿಯೆಯಿಲ್ಲದ ಪೆಟ್ಟುತಿಂದ ! ಲೇಸಿನ ಅಲ್ಪಜ್ಞರ ಗುಂಪಿನಲ್ಲಿ ನಾನು ಇರುವೆ ಅನ್ನುವುದೆ ಸಂತಸ
(ನಿಮ್ಮ ಹೆಸರು ಹೇಳಿ ನಿಮ್ಮ ಗುಂಪಿನಲ್ಲಿ ಸೇರಿ ನನ್ನ ಬೆನ್ನು ತಟ್ಟಿಕೊಂಡ ಕ್ರಿಯೆಗೆ ತಮ್ಮ ಸಮ್ಮತಿಯನ್ನು ಉಹಿಸಿ ಬರೆದಿರುವೆ)
-ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಅರ್ಥಪೂರ್ಣ ಕವಿತೆ. ಆದರೆ ಇಷ್ಟು ಕಾಲ ಕಣ್ಣಿಗೆ ಬೀಳದೆ ಮರೆಯಾಗಿತ್ತೇಕೆ? ಬಹುಶಃ ಎಲ್ಲ ಮಾಣಿಕ್ಯಗಳೂ ಹೀಗೇ ಮರೆಯಲ್ಲಿಯೇ ಇರುತ್ತವೆಯಲ್ಲವೇ?? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಆಸು ಹೆಗ್ಡೆ ಅವ್ರೆ-

ಈ ನಡುವೆ ನನ್ನ ಉತ್ಖನನದಲಿ ಹಲ ಅರ್ಥಾವತಾದ-
ಒಳ್ಳೋಲೆ ಬರಹಗಳೂ ಮತ್ತ್ತೆ ಹೊರ ಬರುತ್ತಿವೆ...

ಇದರಲ್ಲಿ ಈ ನಿಮ್ಮ ಬರಹವೂ ಒಂದು,

ಅದೊಮ್ಮೆ ಮಧ್ಯರಾತ್ರಿ ನಾ ಕವಿತೆಗೆ ಕಾರಣ ಹುಡುಕುತ್ತಾ ಏನೋ ತೋಚಿದ್ದು ಬರ್ದಿದ್ದೆ,

ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು) | ಸಂಪದ - Sampada
http://sampada.net/%...

ಈಗ ನಿಮ್ಮ ಈ ಕವನ ಓದಿ, ನನ್ ಕೆಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು...

ಪ್ರತಿಕ್ರಿಯೆಗಳು ಮುದ ನೀಡಿದವು..
ಅದರಲ್ಲೂ ಗುರುಗಳದು(ಪಾರ್ಥ ಸಾರಥಿ) ......

ಕವನ ನಂಗೆ ಬಹು ಹಿಡಿಸಿತು..

ಅದರ ಅರ್ಥ ವ್ಯಾಪ್ತಿಯಿಂದಾಗಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Premashri on

ಉತ್ತಮವಾಗಿದೆ. ಮತ್ತೆ ಮತ್ತೆ ಓದಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.