April 6, 2010 - 12:12pm
ಅವರಿವರಿಂದ
ಬರುವ ಸಂದೇಶಗಳನ್ನು
ನಾನೂ ನಿನಗೆ ಮರು
ರವಾನಿಸಬಹುದು
ಓ ನನ್ನ ಚೆಲುವೆ,
ಆದರೆ,
ನನ್ನತನವಿಲ್ಲದ
ಆ ಉದ್ದುದ್ದ
ಸಂದೇಶಗಳಿಗಿಂತ
ನಿನಗೆ ನನ್ನೀ
ಮನದಿಂದ ಬರುವ
ಎರಡಕ್ಷರಗಳ
"ಹಾಯ್"
ಬಲು ಇಷ್ಟವೆಂದು
ನಾ ಅರಿತಿರುವೆ!!!
*****
- ಆತ್ರಾಡಿ ಸುರೇಶ ಹೆಗ್ಡೆ.
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: "ಹಾಯ್"!
ಹಾಯ್!!??
ಮೊದಲು
ಉದ್ದುದ್ದ ಪತ್ರ
ಬರೆಯುತ್ತಿದ್ದಿರಿ..
ಈಗ
ನೋಡಿದರೆ
ಬರೀ
ಹಾಯ್??
ನಾ ಅರಿತಿರುವೆ
ನಿಮಗೆ
ನಾ
ಇಷ್ಟವಿಲ್ಲ..
(ಹೆಗ್ಡೆಯವರೆ, ನಿಮ್ಮ ಚಲುವಿ ಬೇಸರದಿಂದ ಬರೆದ ಪತ್ರ -ನಿಮಗೆ ತಲುಪಿಸಲು ಹೇಳಿದರು )
-ಗಣೇಶ.
ಉ: "ಹಾಯ್"!
ಹೋಯ್ ಚೆನ್ನಾಗಿದೆ ಮಾರಾಯ್ರೆ ’ಹಾಯೆ’
ಉ: "ಹಾಯ್"!
ಧನ್ಯವಾದಗಳು ಗಣೇಶ,
ನೀವೂ "ಟಪ್ಪಾಲ್ ಗಣೇಶ" ಅಂತ ಈಗ ಗೊತ್ತಾಯ್ತು.
:)
ಉ: "ಹಾಯ್"!
>>> ನೀವೂ "ಟಪ್ಪಾಲ್ ಗಣೇಶ" ಅಂತ ಈಗ ಗೊತ್ತಾಯ್ತು. :)
-(ಕವಿತೆಗಳ)ಗಣಿಧಣಿಗಳೇ,
ನಿಮ್ಮ ಚಲುವೆಗಾಗಿ ಈ ಕವಿತೆ
ಸ(ರಿ)ರ್ವೆ ಮಾಡಿ....
ಅಂದ್ರೆ,
ನನ್ನ ಮೇಲೇ ಧಾಳಿ ಮಾಡಿದಿರಲ್ಲಾ?
-ಗಣೇಶ.
ಉ: "ಹಾಯ್"!
ಬೆಸ್ಟ್ ..ಇದ್ದು
ಉ: "ಹಾಯ್"!
ಹಾಯ್
ಚೆನ್ನಾಗಿದೆ ಅಶೂ ಅವರೇ
ಉ: "ಹಾಯ್"!
ಹಾಯ್! ಹೆಗ್ಡೇರೇ,
ಚಿಕ್ಕ, ಚೊಕ್ಕ ಪ್ರೇಮ ಕವನ.
ನಮಸ್ಕಾರ, ನನ್ನಿ.
ಉ: "ಹಾಯ್"!
ಮಾನ್ವಿ, ಮಧು, ಗೋಪಿನಾಥ ಹಾಗೂ ರಾಘವೇಂದ್ರ,
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.
ಉ: "ಹಾಯ್"!
ಸತ್ಯವಾದ ಮಾತು ಹೆಗಡೆಯವರೇ
ಉ: "ಹಾಯ್"!
ಆಸುಮನದ ಮಾತುಗಳೇ ಹಾಗೆ, ಚೇತನ್
:)
ಉ: "ಹಾಯ್"!
ಹ್ವಾಯ್ ,
ಹಾಯ್ ಮಿನಿ ಕವನ ಲಾಯ್ಕಿತ್ತು ..