ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಲೇಖಕರು

asuhegde's picture

ಪೂರ್ಣ ಹೆಸರು
ಆತ್ರಾಡಿ ಸುರೇಶ ಹೆಗ್ಡೆ

ಪರಿಚಯ

ಇಲ್ಲಿ ನನ್ನ ಬರಹಗಳೇ ನೀಡಲಿ ಪರಿಚಯ,
ಆಸುಮನದಲ್ಲಿದೆ ನನ್ನ ಪೂರ್ಣ ಪರಿಚಯ;

ಆಸುಮನ (http://athradi.wordp...);

ನಾವು ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು,
ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು.

ಪರಾವಲಂಬಿಯಾದರೆ ಕೊನೆಗೂ ಸೋಲು!!!

ವಿಧವೆಯನು ವರಿಸಿದನಂದು ಆ ಮಹಾನ್ ಪುರುಷ

ಆತನ ದೃಷ್ಟಿಯಲಿ ಇದ್ದದ್ದು ಬರೀ ತನ್ನದೇ ಹರುಷ

  

ವಿಧವೆಯ ಪುತ್ರನನು ಒಲವಿಲ್ಲದೇ ನಿರ್ಲಕ್ಷ್ಯದಿ ಸಾಕಿ

ತನ್ನ ಪುತ್ರನ ಕಾಳಜಿಯಿಂದ ಬೆಳೆಸಿ ಮಾಡಿದ ಶೋಕಿ

  

ಹಿರಿಯ ಮಗನಾದರೆ ತನ್ನ ಬಲದಿಂದಲೇ ಜಗವ ಗೆದ್ದ

ಕಿರಿಯವನು ಸದಾ ಪರಾವಲಂಬಿಯಾಗಿಯೇ ಇರುತ್ತಿದ್ದ

  

ಕಿರಿಯನ ಬೆಳೆಸಿ ಚಕ್ರವರ್ತಿಯಾಗಿಸುವಾಸೆ ಆತನಿಗಿತ್ತು

ಹಿರಿಯನನು ಕೊನೆಗೆ ಒಳಸಂಚಿನಿಂದ ಮುಗಿಸ ಬೇಕಿತ್ತು

  

ತಾನೆಣಿಸಿದ ಕಾರ್ಯ ನಡೆಯಲೇ ಇಲ್ಲ ನೋಡಿ ಹೇಗೂ

ಹಿರಿಯನೆದುರು ಕಿರಿಯ ಸೋತು ಮರೆಯಾದ ಕೊನೆಗೂ

 

- ಆತ್ರಾಡಿ ಸುರೇಶ ಹೆಗ್ಡೆ

ಟೈಂಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆ ಇಂದಿನಿಂದ ಪ್ರಕಟವಾಗುವುದಿಲ್ಲ ಎಂಬ ಸುದ್ದಿ ಓದಿದಾಗ ಆಸುಮನದಲ್ಲಿ ಮೂಡಿದ ಭಾವನೆಗಳು ಅಕ್ಷರ ರೂಪ ತಾಳಿದ್ದು ಹೀಗೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪರಾವಲಂಬಿಯಾದರೆ ಕೊನೆಗೂ ಸೋಲು!!!

ಅರವಿಂದ್'s picture

ಚಿಂತೆಯಿಲ್ಲ, ಹೆಗಡೆಯವರೇ

ಆ ಪತ್ರಿಕೆಯ ಬಗ್ಗೆ ನನ್ನ ವಿರೋಧ ಇತ್ತು. ಯಾವುದೇ ಒಂದು ಸುದ್ದಿಗಳನ್ನು ಹೇಳುವ ರೀತಿಯಲ್ಲಾಗಲಿ ಮತ್ತು ಪರಿಣಾಮಕಾರಿ ವಿಚಾರಗಳಲ್ಲಾಗಲಿ ಹೊಸತನವನ್ನು, ಮತ್ತು ವಿಚಾರತೆಯನ್ನು ಕಾಣಲಿಲ್ಲ.

--

ಅರವಿಂದ್

ಉ: ಪರಾವಲಂಬಿಯಾದರೆ ಕೊನೆಗೂ ಸೋಲು!!!

asuhegde's picture

ಚಿಂತೆ ನನಗೂ ಇಲ್ಲ...
:)

ಉ: ಪರಾವಲಂಬಿಯಾದರೆ ಕೊನೆಗೂ ಸೋಲು!!!

Chikku123's picture

ಹೆಗಡೆಯವರೇ, ಆ ಪೇಪರ್ ನಮ್ಮ ಕನ್ನಡ ಉದ್ಧಾರ ಮಾಡೋದು ಅಷ್ಟರಲ್ಲೇ ಇತ್ತು.....ವಿಷಯ ಕೇಳಿ ಖುಷಿಯಾಯ್ತು

ಉ: ಪರಾವಲಂಬಿಯಾದರೆ ಕೊನೆಗೂ ಸೋಲು!!!

asuhegde's picture

ಅವರು ಉದ್ಧಾರ ಮಾಡುತ್ತಿದ್ದುದು ರಾಷ್ತ್ರೀಯ ಮಟ್ಟದ ಆಂಗ್ಲ ಅಂಕಣಕಾರರನ್ನು.
ಖುಷಿಯಿಂದಲೇ ತಾನೇ ಆಸುಮನದಲ್ಲೂ ಈ ಭಾವನೆಗಳು ಮೂಡಿದ್ದು...

:)

ಉ: ಪರಾವಲಂಬಿಯಾದರೆ ಕೊನೆಗೂ ಸೋಲು!!!

Harish Athreya's picture

ಹಿರಿಯ ಮಗನ ಪ್ರಬುದ್ಧತೆಯೆದುರು
ಕಿರಿಯ ಮಗನ ಶೋಕಿ ಸೋತಿತು
ಬರಿಯ ಪಾರ್ಟಿ ಪಬ್ಬುಗಳನ್ನೇ
ಕ೦ಡವಗೆ ಜವಾಬ್ದಾರಿಯೇನು ತಿಳಿದೀತು
ಅ೦ತೂ ಮಲಗಿದ ಸೋತು
ಹರಿ

ಉ: ಪರಾವಲಂಬಿಯಾದರೆ ಕೊನೆಗೂ ಸೋಲು!!!

Tejaswi_ac's picture

ಈ ಪತ್ರಿಕೆ ಕೇವಲ ಬೆಂಗಳೂರಿನಲ್ಲಿ ನೆಲೆಸಿದ್ದ ಹೊರ ರಾಜ್ಯದವರನ್ನು ಗುರಿ ಇಟ್ಟುಕೊಂಡು ಸುದ್ದಿ ಪ್ರಕಟಿಸುತ್ತಿತ್ತು. ರಾಜ್ಯ, ಭಾಷೆ ಸಂಪೂರ್ಣ ನಿರ್ಲಕ್ಷ.