May 10, 2010 - 4:54pm
ವಿಶ್ವ ಅಮ್ಮಂದಿರ ದಿನದಂದು ನಾನು
ಅಮ್ಮನವರಿಗೆ ಕರೆಮಾಡಿದ್ದೆ ಎಂದಿನಂತೆ
ಅವರಿಂದ "ಯಾವಾಗ ಬರ್ತೀಯಾ?"
ಎನ್ನುವ ಅದೇ ಪ್ರಶ್ನೆ ಮಾಮೂಲಿನಂತೆ
ಎಲ್ಲಾ ಮಾತ ಮುಗಿಸಿದರೂ ನನ್ನಿಂದ
"ಇಂದು ನಿಮ್ಮ ದಿನ" ಎಂದು ಹೇಳಲಾಗಲಿಲ್ಲ
ನನ್ನ ದಿನಗಳೆಲ್ಲಾ ಆ ಅಮ್ಮನ ದಿನಗಳೇ
ಅನ್ನುವ ಭಾವನೆಯಿಂದ ಹೊರಬರಲಾಗಲಿಲ್ಲ
ವರ್ಷಕ್ಕೊಂದೇ ಬಾರಿ ಬರಲೇಕೆ ಹೇಳಿ
ನಮಗೆ ಜನ್ಮ ನೀಡಿರುವ ಅಮ್ಮಂದಿರ ದಿನ
ನಮ್ಮ ಅಮ್ಮಂದಿರ ಕೊಡುಗೆಯಲ್ಲದೆ ಬೇರೆ
ಇನ್ನೇನು ನಮ್ಮೀ ಬಾಳಿನ ಪ್ರತಿಯೊಂದು ದಿನ!
*****
ಆತ್ರಾಡಿ ಸುರೇಶ ಹೆಗ್ಡೆ
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ವರ್ಷಕ್ಕೊಂದೇ ಬಾರಿ ಅಮ್ಮಂದಿರ ದಿನ?
ನವಿರಾದ ಸಾಲುಗಳು ಖಂಡಿತ ಸರ್ ,ಎಲ್ಲವೂ ಅವಳ ದಿನಗಳೇ .........ನಮಗೆ ಜನ್ಮ ಕೊಟ್ಟ ಗಳಿಗೆ ಅವಳದ್ದು ಮತ್ತೊಂದು ಮರುಹುಟ್ಟು......
ಉ: ವರ್ಷಕ್ಕೊಂದೇ ಬಾರಿ ಅಮ್ಮಂದಿರ ದಿನ?
ಹೆಗಡೆಯರೇ
ವರ್ಷವಿಡೀ ನೆನೆವ ಅಮ್ಮನ ಹಾಡು
ಉತ್ತಮ ಕವನ
ನೆನೆಕೆಗಳು
ಉ: ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ?
ಸುರೇಶ್..
ನಿಮ್ಮ ಬ್ಲಾಗ್ ನೋಡಿ ಅಲ್ಲಿ ಪ್ರತಿಕ್ರಿಯಿಸಿದ್ದೆ.... ಆದರೆ ಇಲ್ಲಿ ನೋಡಿದಾಗ ಮತ್ತೆ ಹೇಳ್ಬೇಕು ಅನ್ನಿಸ್ತು.... ತುಂಬಾ ಸುಂದರವಾದ ಕವನ. ವರ್ಷಕ್ಕೊಂದು ದಿನವಾದರೂ ಅಮ್ಮನಿಗಾಗಿ ಮೀಸಲಾಗಿದೆಯಲ್ಲಾಂತ ಖುಷಿ. ಮಕ್ಕಳ ಯಶಸ್ಸು ನೋಡಿ ಹಿಗ್ಗುವ ಅಮ್ಮನಿಗೆ ಅವಳದೇ ಆದ ರೀತಿಯಲ್ಲಿ, ದಿನವೂ ಹಬ್ಬವೇ... ಮಕ್ಕಳು ಅಮ್ಮನ ಹತ್ತಿರ ಬಂದಾಗಲೆಲ್ಲಾ ಅವಳಿಗೆ ಅಮ್ಮನ ದಿನದ ಸಂಭ್ರಮವೇ.... ತಾಯಿ ಪ್ರೀತಿಯ ಆಳ ಕಂಡವರು ಯಾರು ಸುರೇಶ್...? ನಾನು ತಾಯಿಯಾದ ನಂತರವೇ ನನಗದರ ಅರಿವು ಆಗಿದ್ದು.... ವರ್ಷಪೂರ್ತಿ ಅಮ್ಮನ ದಿನವೇ ಎಂದ ನಿಮ್ಮ ಹೃದಯಾಂತರಾಳದ ಮಾತು ಕೇಳಿ, ಅಮ್ಮನಾಗಿ ನಾನೂ ತುಂಬಾ ಸಂತೋಷಪಟ್ಟೆ..... ಧನ್ಯವಾದಗಳು........
ಉ: ವರ್ಷಕ್ಕೊಂದೇ ಬಾರಿ ಬರಲೇಕೆ ಅಮ್ಮಂದಿರ ದಿನ?
ಈ ಜಗದ ಅಮ್ಮಂದಿರೆಲ್ಲಾ ಒಂದೇ
ಅಮ್ಮಂದಿರೆಲ್ಲರ ಪ್ರೀತಿಯೂ ಒಂದೇ
ಅದನ್ನರಿತ ಮಕ್ಕಳೆಲ್ಲರ ಭಾವನೆಗಳೂ ಒಂದೇ!
ಶ್ಯಾಮಲಾ, ಗೋಪೀನಾಥ್ ಮತ್ತು ಪವಿತ್ರ ಮೂವರಿಗೂ ಧನ್ಯವಾದಗಳು.