April 11, 2011 - 6:11pm
ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!

ಬೆಳ್ಳಿ ಮೋಡಗಳ
ಹೊದಿಕೆಯಡಿಯಲ್ಲಿ
ಬೆಚ್ಚಗೆ ಮಲಗಿ
ನನ್ನದೇ ಕನಸು
ಕಾಣುತಿರುವೆಯೇನೊ
ನೀನು...ಎಂಬ
ಭ್ರಮೆಯಲ್ಲಿಹೆ
ಕಣೇ ನಾನು!
ಗಾಳಿಯದು ಜೋರಾಗಿ
ಬೀಸಿದಾಗ ಆ ಹೊದಿಕೆ
ಸರಿದು ನಿನ್ನ ಚಿನ್ಮಯ
ಮುಖಾರವಿಂದಕ್ಕೆ
ಭಾಸ್ಕರನ ಕಿರಣಗಳು
ಕಚಗುಳಿಯಿಡುವಾಗ,
ಕನಸಿನ ಲೋಕದಿಂದ
ವಾಸ್ತವಕ್ಕಿಳಿಯಲಾಗದ,
ಆ ಕಚಗುಳಿಯನ್ನೂ
ಸಹಿಸಲಾಗದ,
ನಿನ್ನ ಆ ಮುಗ್ಧ
ಚಡಪಡಿಕೆಯ
ಕಾಯುವಿಕೆಯಲ್ಲಿ
ಇಹೆನೀಗ ನಾನು!
*********
ಚಿತ್ರ ಕೃಪೆ: ಛಾಯಾ ಚಿತ್ತಾರ
ಪ್ರಕಾಶ ಹೆಗಡೆಯವರ ಛಾಯಾ ಚಿತ್ತಾರದಲ್ಲಿನ ಈ ಚಿತ್ರವನ್ನು ಕಂಡಾಗ ಹೊರಹೊಮ್ಮಿದ ಮಾತುಗಳು!
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಚಡಪಡಿಕೆಯಲ್ಲಿಹೆನೀಗ ನಾನು!
ಕಲ್ಪನೆಗಿಂತ ಸುಂದರವಾದ ಛಾಯಚಿತ್ರ....
ಛಾಯಚಿತ್ರಕ್ಕಿಂತ ಸುಂದರವಾದ ಕವನ...
ಕವನಕ್ಕಿಂತ ಸುಂದರವಾದ ಕಲ್ಪನೆ...
....
......
ಕಲ್ಪನೆಗಿಂತ ಸುಂದರವಾದ ಛಾಯಚಿತ್ರ....
ಛೇ ! ನಿರ್ದರಿಸಲಾಗದ ಚಡಪಡಿಕೆಯಲ್ಲಿಹೆ ನಾನು...
...
ಪಾರ್ಥಸಾರಥಿ
ಉ: ಚಡಪಡಿಕೆಯಲ್ಲಿಹೆನೀಗ ನಾನು!
ನಿಮ್ಮ ಈ ಸೊಗಸಾದ ಭಾವಪೂರಿತ ಕವನಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆ೦ಬುದರ ಅರಿವಾಗದೇ ಚಡಪಡಿಸುತಿಹೆನೀಗ ನಾನು!!!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಚಡಪಡಿಕೆಯಲ್ಲಿಹೆನೀಗ ನಾನು!
ಆಹಾ ಏಂತಹ ಸುಂದರವಾದ ಪದಗಳು.
ಇವು ಪದಗಳೋ ಅಥವಾ ಭಾವನೆಗಳೋ
ಅಥವಾ ಭಾವನೆಯೊಳಗಣ ಪದಗಳೋ ತಿಳಿಯಲಾಗದೇ
ಭಾವನೆಗಳ ಲೋಕದಿ ಓಲಾಡಿದೆ ನಾನು
ಪದಗಳಿಂದ ಕವನವೊ
ಕವನಕ್ಕಾಗಿ ಪದಗಳೋ ಅರಿಯದೇ
ಪದಗಳು ಸುರಿಸಿದ ಜೊನ್ನನನುಭವಿಸಿದೆ ನಾನು
ನಿಮ್ಮ ಕವನ ಕವಿಗಳ ಮಾಡಿತೋ ನಮ್ಮನ್ನೆಲ್ಲಾ
ಅಥವಾ ನಮ್ಮಲ್ಲಿ ಕವಿ ಅಡಗಿದ್ದನೋ ಮುನ್ನವೇ
ಎಂದು ತಿಳಿಯದೇ ಗೊಂದಲಗಳ ಸುಳಿಯಲಿ ಸಿಲುಕಿದೆ ನಾನು
ನಮ್ಮನ್ನೆಲ್ಲ ಕ್ಷಣಕಾಲ ಭಾವನಾ ಪ್ರಪಂಚದಲ್ಲಿ ಓಲಾಡಿಸಿದ್ದಕ್ಕಾಗಿ ಧನ್ಯವಾದಗಳು.ಮಧುರ ಚಿತ್ರಣ ಮನೊಹರ ಚಿತ್ರ.
ಅಭಿನಂದನೆಗಳು
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಪಾರ್ಥಸಾರಥಿ, ರಾಘವೇಂದ್ರ ಹಾಗೂ ನಾಗರತ್ನ,
ತಮ್ಮ ಮೆಚ್ಚುಗೆ ಮತ್ತು ಕಾವ್ಯಾತ್ಮಕ ಪ್ರತಿಕ್ರಿಯೆಗಳಿಗಾಗಿ ಧನ್ಯವಾದಗಳು.
ಶೀರ್ಷಿಕೆ ಮತ್ತು ಕವನದ ಭಾವಕ್ಕೂ ನಡುವೆ ಇದ್ದ ವ್ಯತ್ಯಾಸವನ್ನರಿತು "ಚಡಪಡಿಕೆಯಲ್ಲಿಹೆನೀಗ ನಾನು" ಎನ್ನುವ ಶೀರ್ಷಿಕೆಯನ್ನು ಬದಲಾಯಿಸಿದ್ದನೆ.
-ಆಸು
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಸುಂದರ ಕವನ
ಅತಿ ಸುಂದರ ಹೋಲಿಕೆ
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಧನ್ಯವಾದಗಳು ಗೋಪೀನಾಥ್!
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
+1
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಸಾರ್ ನಮಸ್ಕಾರ ಸಾರ್, ಆ ಭಾವ ತರಂಗಗಳಿಂದ ಹೊರಗೆ ಹೊರ ಬರಲು ನನಗೆ ಸುಮಾರು ಸಮಯ ಹಿಡಿಯಿತು.
-ರಾಮಮೋಹನ
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ನಮಸ್ಕಾರ ರಾಮಮೋಹನ್,
ನೀವು ಸುಮಾರು ಸಮಯದ ನಂತರವಾದರೂ ಹೊರಗೆ ಬಂದಿದ್ದೀರಿ...
ನಾನಿನ್ನೂ ಬಂದಿಲ್ಲ...
:)
ಧನ್ಯವಾದಗಳು.
-ಆಸು
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಅಲ್ಲೆ ಇರಿ ಆಸು ಅವರೆ, ಆ ಆನಂದ ಇಲ್ಲಿ ಕಾಣುತ್ತಿಲ್ಲ, ಅಲ್ಲಿಂದ ಹೊರ ಬಂದ ನನಗೆ ಇಲ್ಲಿ ಮುಂದೇನು ಮಾಡಬೇಕೇಂಬುದೆ ತಿಳಿಯುತ್ತಿಲ್ಲ, ಅತ್ತ ಇತ್ತ ಎತ್ತಲೂ ಇಲ್ಲದೆ ಸ್ತಬ್ದನಾಗಿದ್ದೇನೆ.
-ರಾಮಮೋಹನ
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಚಡಪಡಿಕೆ ಭಾವಜೀವಿಗಳ ಆಸ್ತಿ!
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಬರಹಗಾರರಿಗೆ ಸಹೃದಯ ಓದುಗರೇ ಆಸ್ತಿ.
ಧನ್ಯವಾದಗಳು.
-ಆಸು
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
+++++++++++++++++++++++++++1
ಹೆಗಡೆಯವರೇ ಪದಗಳೇ ಸಿಗ್ತಿಲ್ಲ ಎಷ್ಟು ಚೆನ್ನಾಗಿದೆ ಅಂತ ಹೇಳಲಿಕ್ಕೆ.
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
... ಮೊದಲ ಪ್ರತಿಕ್ರಿಯೆ ಗಂಭೀರ ಮೌನ!
ಹೆಚ್ಚಿನ ಸಂದರ್ಭಗಳಲ್ಲಿ ಆಗುವುದು ಹೀಗೆಯೇ.
ನನಗೇ ಗೊತ್ತಾಗಿಲ್ಲ ಇನ್ನೂ "ಎಷ್ಟು ಚೆನ್ನಾಗಿದೆಯೆಂದು"!
ಧನ್ಯವಾದಗಳು.
-ಆಸು
ಇದನ್ನೂ ಓದಿ.
ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!
http://sampada.net/b...
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ತೀರಾ ಆಡುಮಾತಿನ ಪದಗಳ ಶೈಲಿ, ಕವನಗಳಲ್ಲಿ ಹುದುಗಿರುವ ಆಪ್ತತೆ... ತೀರಾ ನಮ್ಮ ನಲ್ಲೆಗೇ ಹೇಳುವ೦ಥ, ಅವಳೊ೦ದಿಗೆ ಸ೦ಭಾಷಿಸುವ೦ಥಹ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವ ಮಟ್ಟದವರೆಗಿನ ಭಾವನೆಗಳ ನರ್ತನ... ಇಲ್ಲಿಯೇ ಎಲ್ಲೋ ನಡೆದಿದ್ದು, ನಡೆಯುತ್ತಿದೆ ಎ೦ಬ೦ಥ ಭಾವನೆಗಳನ್ನು ಓದುಗರ ಮನಸ್ಸಿಗೆ ಕಟ್ಟಿಕೊಡುವಲ್ಲಿ ಆಸುಮನದ ಹೆಚ್ಚಿನ ಮಾತುಗಳು ಯಶಸ್ಸನ್ನು ಗಳಿಸಿವೆ. ಅದೇ ಆಸುಮನದ ಹೆಗ್ಗಳಿಕೆ ಕೂಡಾ..!
ನಿಮ್ಮ ಸಾಹಿತ್ಯ ಯಾತ್ರೆ ಮು೦ದುವರೆಯಲಿ!
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ರಾಘವೇಂದ್ರ,
ಎರಡೆರಡು ಬಾರಿ ಪ್ರತಿಕ್ರಿಯಿಸಿರುವ ತಮ್ಮ ಹಾರೈಕೆಗಳಿಗಾಗಿ ಕೃತಜ್ಞತೆಗಳು.
ಬರಹಗಾರನ ಗಳಿಕೆ (ಹೆಗ್ಗಳಿಕೆಯೋ... ಏನೋ...) ಆತನ ಸಹೃದಯಿ ಓದುಗರು.
-ಆಸು
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
:) :)
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಪ್ರಿಯ ಆಸು-ರವರೇ,
ತುಂಬಾ ಬೆರಗುಗೊಳಿಸುವ ಕಲ್ಪನೆ, ಕವಿತೆ, ಭಾವ.
ಮತ್ತೆ ಮತ್ತೆ ಓದಿಸಿತು!
ಆಭಿನಂದನೆಗಳೊಂದಿಗೆ...
ಆತ್ರೇಯ.
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
"ಜಿ ಮೈಲಿನ ಬಝ್" ನಲ್ಲಿ ಚಿತ್ರ ನೋಡಿದಾಕ್ಷಣ ಥಟ್ಟನೇ ನೀಡಿದ ಪ್ರತಿಕ್ರಿಯಾ ರೂಪದ ಮಾತುಗಳಿವು.
ಬರೆದು ಮುಗಿಸಿದಾಗ, ನಾನೇ ಬೆರಗಾಗಿದ್ದೆ, ಮತ್ತೆ ಮತ್ತೆ ಓದಿದ್ದೆ, ಚಿಕ್ಕ ಮಗುವಿನ ತರಹ.
ಅಭಿವಂದನೆಗಳು.
-ಆಸು
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
:)
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ಆಸುಮನದ ಕಲ್ಪನಾವಿಲಾಸಕ್ಕೆ ಬೆರಗಾದೆ.ಬಹಳ ಆತ್ಮೀಯ ಕಾಯುವಿಕೆಯೇ ಸರಿ.
ಉ: ಚಡಪಡಿಕೆಯ ಕಾಯುವಿಕೆಯಲ್ಲಿಹೆನೀಗ ನಾನು!
ರಘು,
ಆತ್ಮೀಯವಾದಾಗ ಕಾಯುವಿಕೆಯೂ ಸುಖಾನುಭವ ನೀಡುತ್ತದೆ, ಇಲ್ಲವಾದರೆ ಕ್ಷಣ ಕ್ಷಣವೂ ನಮ್ಮನ್ನು ಕೊಲ್ಲುತ್ತಿರುತ್ತದೆ..
ಧನ್ಯವಾದಗಳು.
-ಆಸು