ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಲೇಖಕರು

asuhegde's picture

ಪೂರ್ಣ ಹೆಸರು
ಆತ್ರಾಡಿ ಸುರೇಶ ಹೆಗ್ಡೆ

ಪರಿಚಯ

ಇಲ್ಲಿ ನನ್ನ ಬರಹಗಳೇ ನೀಡಲಿ ಪರಿಚಯ,
ಆಸುಮನದಲ್ಲಿದೆ ನನ್ನ ಪೂರ್ಣ ಪರಿಚಯ;

ಆಸುಮನ (http://athradi.wordp...);

ನಾವು ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು,
ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು.

ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

ಅವನು - ಅವರು


ನೀನು - ನೀವು


ಮನುಜ


ಮನುಜರ


ನಡುವೀ


ಏಕವಚನ


ಬಹುವಚನಗಳ


ಗೊಂದಲವದೇಕೆ?


 


ಬಹುವಚನದಲೇ


ಗೌರವ


ಅಡಗಿಹುದಾದರೆ


ಆ ದೇವರಿಗೆ


ಅಗೌರವವದೇಕೆ?


 


ದೇವರನ್ನು


ಹೆಚ್ಚಿನೆಲ್ಲಾ


ಮನುಜರೂ


ಏಕವಚನದಲ್ಲೇ


ಸಂಬೋಧನೆ


ಮಾಡುತ್ತಿರುವುದನ್ನು


ಮರೆತಿರುವರೇಕೆ?


 


ಮಂತ್ರಿ


ಮಹೋದಯರನ್ನು


ಬೆನ್ನ ಹಿಂದೆ


ನಾವೆಲ್ಲಾ


ಏಕವಚನದಲೇ


ನೆನಪಿಸಿಕೊಳ್ಳುವುದೇಕೆ?


*****


ಆತ್ರಾಡಿ ಸುರೇಶ ಹೆಗ್ಡೆ


http://athradi.wordpress.com


 

Your rating: None Average: 1.3 (3 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

rennie606's picture

ಕರ್ನಾಟಕದ ರಾಮ ತಮಿಳುನಾಡಿನಲ್ಲಿ ರಾಮರ್
ಕರ್ನಾಟಕದ ಆಂಜನೇಯ ತಮಿಳುನಾಡಿನಲ್ಲಿ ಆಂಜನೇಯರ್
ಅವರವರ ಭಾವ ಬಕುತಿ ಅಷ್ಟೆ ಮರ್ಯಾದೆ ಇಲ್ಲ ಎಂದಲ್ಲವಲ್ಲ

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

mpneerkaje's picture

ತಾಯಿಯ ಮೇಲೆ ಗೌರವಕ್ಕಿಂತಲೂ ಪ್ರೀತಿ ಹೆಚ್ಚು. ಅದಕ್ಕೆ ತಾಯಿಯನ್ನು ಏಕವಚನದಲ್ಲಿ ಕರೆಯುವುದು. ದೇವರ ಮೇಲೆ ಪ್ರೀತಿಯಿದ್ದರೆ (ಭಕ್ತಿಯಿದ್ದರೆ) ಏಕವಚನದಲ್ಲಿ ಕರೆಯುವುದರಲ್ಲಿ ತಪ್ಪೇನು? ಇದರ ಮೇಲೆ ಯಾರೋ ಹೇಳಿದಂತೆ 'ಅವರವರ ಭಾವಕ್ಕೆ ತಕ್ಕಂತೆ'.

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

devaru.rbhat's picture

ವ್ಯಾಜ ನಿಂದೆ, ವ್ಯಾಜ ಸ್ತುತ್ಯಲಂಕಾರಗಳಿಗೆ ಉದಾಹರಣೆ ಇದರಲ್ಲಿ ಹುಡುಕಬಹುದೇ?

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

asuhegde's picture

ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

roshan_netla's picture

<ಮಂತ್ರಿ ಮಹೋದಯರನ್ನು ಬೆನ್ನ ಹಿಂದೆ ನಾವೆಲ್ಲಾ ಏಕವಚನದಲೇ ನೆನಪಿಸಿಕೊಳ್ಳುವುದೇಕೆ?>

ಅವರವರು ಮಾಡಿರುವ ಘನ ಕಾರ್ಯಗಳಿಗೆ ಅನುಗುಣವಾಗಿ ಅವರನ್ನು ನೆನಪಿಸಿಕೊಳ್ಳುವುದು... ;)

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

venkatesh's picture

ಅಮ್ಮ ಎನ್ನುವ ವ್ಯಕ್ತಿಯಷ್ಟು ಆಪ್ತರು ಬೇರೆ ಯಾರು ಇರಲು ಸಾಧ್ಯ ? ಮತ್ತೊಬ್ಬ ಅಮ್ಮ ಎನ್ನುವ ಪದವಲ್ಲದೇ ! ಅವಳನ್ನು ಏಕವಚನದಲ್ಲಿ ಸಂಭೋದಿಸಲು ನನಗೆ ಬಹಳ ಇಷ್ಟ. ಆದರೆ ನಮ್ಮ ತಂದೆಯವರನ್ನು ಹಾಗೆ ಕರೆಯಲು ಕಷ್ಟಪಡಬೇಕಾಗಿತ್ತು. ಒಟ್ಟಿನಲ್ಲಿ ಹೃದಯಕ್ಕೆ ಅಂಟಿದ ಸಂಬಂಧ ಆ ಮಾತೆಗೆ ಮಾತ್ರ ಸೀಮಿತ. ಇನ್ನು ಒಂದಕ್ಷರವನ್ನೂ ಉಪಯೋಗಿಸಬಾರದೇಕೆ ? ಮಾ, ಎನ್ನಬಹುದಲ್ಲವೇ?

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

gopinatha's picture

ಪ್ರೀತಿ ಜಾಸ್ತಿಯಿದ್ದಲ್ಲಿ ಏಕವಚನ ಸಾಮಾನ್ಯ.

ಹೌದು ಅವರವರ ಭಾವಕ್ಕೆ ಅವರವರ ಭಕುತಿಗೇ,
ಅವರವರ ತೆರನಾಗಿ.......

ಉ: ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

R. Srinath's picture

ಅದಕ್ಕೇ ಸ್ವಾಮೀ, ಆ ಪ್ರೀತಿ ಜಾಸ್ತಿಯಾಗಿರುವುದಕ್ಕೇ, ನಮ್ಮ ದೇವೇಗೌಡರು ಯಡ್ಯೂರಪ್ಪನವರನ್ನು ಏಕವಚನದಲ್ಲಿ ಕರೆಯುವುದು, ಜೊತೆಗೆ ವಿಶೇಷ `ಹೊಗಳಿಕೆ' ಪದಗಳನ್ನು ಉದುರಿಸುವುದು. ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಪ್ರತಿಯೊಬ್ಬರನ್ನೂ ಏಕವಚನದಲ್ಲೇ ಸಂಬೋಧಿಸುತ್ತಿದ್ದುದು.

ಬಂ, ಗುಂ, ಮೂಗಿಲಿ, ಮ್ಯಾಗಿ, ಇತ್ಯಾದಿ..