April 12, 2010 - 4:37pm
ನಿಂತಲ್ಲಿ ಕೂತಲ್ಲಿ
ಹಗಲಲ್ಲಿ ಇರುಳಲ್ಲಿ
ನಿನ್ನ ದಿನಚರಿಯ
ಪ್ರತಿ ಗಳಿಗೆಯಲ್ಲೂ
ನನ್ನ ನೆನಪೇ ನಿನ್ನನ್ನು
ಕಾಡತೊಡಗಿದಾಗ
ಅಲ್ಲಿ ನಡೆಯುವ ಚಿಕ್ಕಪುಟ್ಟ
ವಿಷಯವನ್ನೂ ನನ್ನೊಡನೆ
ಹಂಚಿಕೊಳ್ಳಬೇಕೆಂದು
ನಿನಗಿಚ್ಚೆ ಆಗತೊಡಗಿದಾಗ
ನೀ ಮೌನವಾಗಿದ್ದಾಗಲೂ
ನನ್ನೊಡನೆ ಸಂಭಾಷಣೆಯಲಿ
ಸದಾ ನಿರತಳಾಗಿರುವೆಯೇನೋ
ಎಂದು ನಿನಗನಿಸತೊಡಗಿದಾಗ
ಅರಿತುಕೋ ಸಖೀ ನಿನ್ನೊಡಲ
ಕೊಡದಲ್ಲಿ ನನಗಾಗಿ ಪ್ರೀತಿಯ
ಅಮೃತ ತುಂಬಿಕೊಂಡಿಹುದೆಂದು!
*****
ಆತ್ರಾಡಿ ಸುರೇಶ ಹೆಗ್ಡೆ
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅದು ಪ್ರೀತಿಯ ಕುರುಹು
ಸರ್,
ಸಖ- ಸಖಿಯ ಸಾಮೀಪ್ಯದ ಕಾತುರತೆಯಲ್ಲಿಯೇ ಪ್ರೀತಿಯು ತುಂಬಿರುತ್ತದೆ ಎನ್ನುವ ನಿಮ್ಮ ಕವನದ ಸಾಲುಗಳು ಚೆನ್ನಾಗಿವೆ ಸರ್.
ನೆನಪುಗಳ ಮಾತೆ ಮಧುರ... :)
ಸಾತ್ವಿಕ್
ಉ: ಅದು ಪ್ರೀತಿಯ ಕುರುಹು
ಜೋಡಿ "ಸರ್" ಗಳ ನಡುವಣ ಪದಪುಂಜಗಳ ಮೂಲಕ, ಆಸುಮನದ ಮಾತುಗಳ ವಿಮರ್ಶಿಸಿ, ಮೆಚ್ಚಿ, ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸಾತ್ವಿಕ್.
ನೆನಪುಗಳ ಮಾತೇ ಮಧುರ
ಮಾತುಗಳ ನೆನಪೇ ಮಧುರ!