May 12, 2010 - 11:57am
ತತ್ವ ಆದರ್ಶದ ಹಿತನುಡಿಗಳು
ಗಾದೆಗಳೆಲ್ಲಾ ಬರಿಯ
ದೂರವಾಣಿ ಸಂದೇಶಗಳಾಗಿ
ಉಳಿದುಬಿಟ್ಟಿವೆ
ತಮಗೆ ಸಹಕಾರಿಯಾಗಿ
ಇರುವುದಕ್ಕಿಂತಲೂ ಹೆಚ್ಚಾಗಿ
ಮುಂದಿನ ಮನೆಯಂಗಳಕೆ
ತಳ್ಳಿಬಿಡುವ ಸರಕುಗಳಾಗಿ ಬಿಟ್ಟಿವೆ
ರಾತ್ರಿ ಬೇಗ ಮಲಗುವುದು
ಒಳ್ಳೆಯದು ಎಂದೆನ್ನುವ
ಸಂದೇಶಗಳೂ ಅಪರಾತ್ರಿಯಲ್ಲಿ
ನಮ್ಮ ನಿದ್ದೆಗೆಡಿಸುತ್ತವೆ!!!
****
ಆತ್ರಾಡಿ ಸುರೇಶ ಹೆಗ್ಡೆ
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!
'ವೇದ ಹೇಳೋಕೆ, ಬದನೆಕಾಯಿ ತಿನ್ನೋಕೆ' ಅಂತ ಗಾದೆ ಇರೋದ್ಯಾಕೆ?
ಉ: ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!
ಕಡೆಯಲ್ಲಿ ಬರೆದಿರುವ ಸಾಲುಗಳು ಬಹಳ punching ಆಗಿವೆ!ಸತ್ಯವಾದ ಮಾತು.....
_ವಾದಿರಾಜ
ಉ: ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!
ಹೆಗಡೆಯವರೇ
ಕವನ ಸಕತ್!!!
ಕೊನೆಯ ಸಾಲುಗಳಂತೂ.......ಸೂಪರ್ ಪಂಚ್!!!
ನನ್ನಿ
ಉ: ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!
[ರಾತ್ರಿ ಬೇಗ ಮಲಗುವುದು
ಒಳ್ಳೆಯದು ಎಂದೆನ್ನುವ
ಸಂದೇಶಗಳೂ ಅಪರಾತ್ರಿಯಲ್ಲಿ
ನಮ್ಮ ನಿದ್ದೆಗೆಡಿಸುತ್ತವೆ!!!]
ಇದೇ ಪರವಾಗಿಲ್ಲ; ಹೆಗಡೆಯವರೇ,
ಏಕೆಂದರೆ ...
ಮಲಗಿದ್ದವರೆನ್ನೆಬ್ಬಿಸಿ,
ನಿದ್ದೆ ಮಾತ್ರೆ ತಿನ್ನಿಸುವವರೂ ಇದ್ದಾರೆ!
ಉ: ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!
ಆಸುಮನದ ಮಾತುಗಳನ್ನು ಓದಿ, ಮೆಚ್ಚಿ, ವಿಮರ್ಶಿಸಿ, ಪ್ರತಿಕ್ರಿಯಿಸಿದ, ಕವಿನಾಗರಾಜ್, ವಾದಿರಾಜ ಆಚಾರ್ಯ, ಗೋಪೀನಾಥ ರಾವ್ ಮತ್ತು ಶಿವರಾಮ ಶಾಸ್ತ್ರಿಗಳಿಗೆ, ನನ್ನ ಹೃತ್ಪೂರ್ವಕ ಅಭಿವಂದನೆಗಳು.
ಉ: ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!
ಹೆಗ್ಡೆಯವರೇ
ತು೦ಬಾ ಚೆನ್ನಾಗಿದೆ.. ಕೊನೆಯ ಸಾಲುಗಳು ಸೂಪರ್ !!
ನನ್ನಿ