24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!

December 14, 2009 - 2:07pm
asuhegde

ನಿನ್ನೆ ಭಾನುವಾರ ವಿ-ಚಿತ್ರ ಪ್ರದರ್ಶನ
ಏರ್ಪಡಿಸಿ ಆಹ್ವಾನಿಸಿದರು ಮಂಸೋರೆ
ಚಿತ್ರ ಮತ್ತವುಗಳ ಹಿಂದಣ ಆಶಯಗಳು
ನಿಜಕೂ ಮಾಡಿದವು ನಮ್ಮ ಮನಸೂರೆ

ದೂರದಿಂದಲೇ ನನ್ನ ಮುಖದ (ತಲೆಯ?)
ಗುರುತು ಹಿಡಿದು ನಸುನಗೆ ಬೀರಿದರವರು
ಹತ್ತಿರವಾದಂತೆ ತುಂಬು ಮನದಿಂದ ನಕ್ಕು
ಕೈ ಕುಲುಕಿ ನಮ್ಮನ್ನು ಸ್ವಾಗತಿಸಿದರವರು

ಇಂತಹದೊಂದು ಪ್ರಯೋಗ ಅಭೂತಪೂರ್ವ
ಆಗಿರುವುದಕ್ಕೇನೋ ವಿ-ಚಿತ್ರ ಅನಿಸಿತ್ತೆನಗೆ
ಹೊಸದನ್ನು ಹುಟ್ಟು ಹಾಕಿ ಅದಕೊಂದು ಅರ್ಥ
ನೀಡುವುದು ಸುಲಭ ಸಾಧ್ಯ ಆಗಿರಲಿಲ್ಲವರಿಗೆ

ನಾವು ಹೋಗುವ ಮೊದಲು ವಸಂತ, ರಾಕೇಶ್,
ಓಂಶಿವ ಮತ್ತು ದೃಶ್ಯ ಬಂದಾಗಲೇ ಹೋಗಾಗಿತ್ತು
ರೂಪಾ ರಾಜೀವ ಬೈಗಿನಲಿ ಕರೆ ಮಾಡಿದಾಗ ನಾ
ನನ್ನ ಪತ್ನಿಯೊಂದಿಗೆ ಮನೆಗೆ ಹಿಂದಿರುಗಿಯಾಗಿತ್ತು

ಸಂಪದಿಗರೆಲ್ಲರೂ ಒಂದಾಗಿ ಅಲ್ಲಿಗೆ ಹೋಗಿದ್ದಿದ್ದರೆ
ಆ ಮೇಲು ಕಾಲು ಸೇತುವೆಯಲೂ ರಂಗೇರುತ್ತಿತ್ತು
ನಾವು ಹತ್ತಾರು ಮಂದಿ ನಿನ್ನೆ ಹೋಗಿದ್ದೆವಾದರೂ
ಒಬ್ಬರಿಗೊಬ್ಬರು ತಿಳಿಸದೇ ಇದ್ದುದು ತಪ್ಪಾಗಿ ಬಿಡ್ತು!!!

***************************

-ಆತ್ರಾಡಿ ಸುರೇಶ ಹೆಗ್ಡೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by inchara123 on

ಓ ಇಷ್ಟೊಂದು ಮಂದಿ ನೋಡಲು ಹೋಗಿದ್ದಾರೆ
ಛೇ ನಾನು ಹೋಗಿರುತ್ತಿದ್ದೆ ಊರಿನಲ್ಲಿ ಇದ್ದಿದ್ದರೆ!
ಮುಂದಿನ ಸಲ ಬಂದೇ ಬರುವೆ ನೀವು ಕರೆದರೆ
ಶುಭವಾಗಲಿ ನಿಮಗೆ ಮಂಸೋರೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ನನ್ನ ಪ್ರಾಸಬದ್ಧ ಕವನಗಳನ್ನು ಓದಿ ಓದಿ
ಇಂಚರ ನೀವೂ ಆಗಿದ್ದೀರಿ ಓರ್ವ "ಪ್ರಾಸಿ"

ಪ್ರತಿಕ್ರಿಯೆಗಳಲೇ ನಿಮ್ಮ ಕಲೆಯ ಹೀಗೆ
ಮೆರೆಸುವುದಕ್ಕಿಂತ ಕವನ ಬರೆದರೆ ವಾಸಿ!!

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on

ಕವನಗಳ ಉಸಾಬರಿ ನನಗೆ ಬೇಡಾ ಸರ್
ಅದನ್ನೋದಿದರೆ ಆಗುವುದು ಸಂಪದಿಗರಿಗೆ ಬೋರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಪರೋಕ್ಷವಾಗಿ "ಬೋರ್" ಎಂದು ಹೇಳಿ
ನನ್ನ ಹವ್ಯಾಸವನ್ನೇ ಹೀಗಳೆದಿರೀಗ ನೀವು

ನಮ್ಮ ಮೆಚ್ಚಿನ ಓದುಗರೇ ಹೀಗೆ ನುಡಿದರೆ
ಇನ್ನಾರಿಗಾಗಿ ಬರೆಯಬೇಕು ಇನ್ನು ನಾವು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on

ನಿಮ್ಮನ್ನು ಹೀಗಳೆಯಲು ನಾನು ಯಾರು?
ಹೇಳಲಿಲ್ಲವೆಂದೂ ನಿಮ್ಮ ಕವನಗಳು ಬೋರು
ನನ್ನ ಹವ್ಯಾಸ ಪ್ರತಿಕ್ರಿಯೆಗಳಿಗೆ ಸೀಮಿತ
ಸಿಗುತ್ತಿಲ್ಲ ಮುಂದುವರಿಸಲು ಪ್ರಾಸ ‘ತ’

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಇಲ್ಲಿಗೇ ಇತಿಶ್ರೀ ಹೇಳೋಣ ಇಂಚರ, ಇನ್ನು
ಓದುಗರಿಗೆ ಆದರಾಗಬಹುದೇನೋ "ಬೋರು"

ಮೆಟ್ಟಲೇರಿ ನೋಡಿ ಪ್ರತಿಕ್ರಿಯೆಗಳಿಂದ ಕವನದ
ಕಡೆಗೆ ಅಂದೆ, ನಾ ಮಾಡುತ್ತಿಲ್ಲ ನಿಮಗೆ ಜೋರು

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on

ರೀ ಇಂಚರ

<<ಛೇ ನಾನು ಹೋಗಿರುತ್ತಿದ್ದೆ ಊರಿನಲ್ಲಿ ಇದ್ದಿದ್ದರೆ!>>

ಆ ಸಾಲು ಹೀಗೆ ಆಗ್ಬೇಕಲ್ವಾ!?
ಛೇ ನಾನು ಹೋಗಿರುತ್ತಿದ್ದೆ 'ಇದ್ದಿದ್ದರೆ'! ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಅವರು ಬೆಂಗಳೂರಿನಲ್ಲಿ ಇದ್ದಿರಲಿಲ್ಲವಂತೆ, ರಾಕೇಶ್.
ಅದಕ್ಕೇ, ನಾನೂ ಹೋಗಿರುತ್ತಿದ್ದೆ, ಊರಿನಲ್ಲಿ ಇದ್ದಿದ್ದರೆ ಅಂತಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on

ನಿಮಗ್ಯಾಕೆ ಹೀಗೆ ಅನ್ನಿಸಿತೋ ಗೊತ್ತಿಲ್ಲ
ನಾನು ನಿಜವಾಗಿಯೂ ಊರಿನಲ್ಲಿ ಇರಲಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on

ನಾನು ಇವತ್ತು (ಹದಿನಾಲ್ಕು) ಹದಿಮೂರು ಅಂದುಕೊಂಡಿದ್ದೆ! ಹೋಗಿ ಫೋನ್ ಮಾಡಿ ಬೈಸಿಕೊಂಡಿದ್ದಾಯಿತು.
ಸಧ್ಯದಲ್ಲೇ ಇನ್ನೊಂದು ಇದೆಯಂತೆ. ಅದನ್ನು ಮಿಸ್ ಮಾಡಲ್ಲ. ಸಾರಿ ಮಂಜುನಾಥ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on

ಹೋಗಿ ಫೋನ್ ಮಾಡಿ ಬೈಸಿಕೊಂಡಿದ್ದಾಯಿತು.>>>>
ನಾನು ಬೈದಿಲ್ಲ....

ಸ್ಸಾರಿ ಕೇಳುವ ಅವಶ್ಯಕತೆಯಿಲ್ಲ... ಆದರೆ ಮುಂದಿನ ಪ್ರದರ್ಶನ ಮಿಸ್ ಮಾಡ್ಬೇಡಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thesalimath on

ಬೈದಿದ್ದರೆ ಸಲ್ಪ ಸಮಾಧಾನವಾದರೂ ಇರುತ್ತಿತ್ತು. ನೀವು ಬೈಯಲಿಲ್ಲ. ನನ್ನ ಪಾಪಪ್ರಜ್ಞೆ ಇನ್ನೂ ಹೆಚ್ಚಾಯಿತು! ಹಾಗಾಗಿ ನೀವು ಬೈಯದಿದ್ದರೂ ನಾನು ಬೈಸಿಕೊಂಡ ಹಾಗೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on

ಆಸು ಸರ್....

ಪತ್ನಿ ಸಮೇತರಾಗಿ ಬಂದು ಪ್ರದರ್ಶನದ ಯಶಸ್ಸಿಗೆ ಹಾರೈಸಿದಿರಿ...
ನನಗೆ ತುಂಬಾ ಖುಶಿಯಾಯಿತು...
ನನಗು ಯಾರ್ಯಾರು ಬರಬಹುದೆಂದು ತಿಳಿದಿರಲಿಲ್ಲ.... ಬರುತ್ತೇನೆಂದವರು ಬರಲಿಲ್ಲ...
ಬಂದವರೆಲ್ಲರ ಜೊತೆಗಿನ ಅಲ್ಲಿನ ಭೇಟಿ ತುಂಬ ಸಂತೋಷವನ್ನುಂಟು ಮಾಡಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on

ನಾನು ಬರ್ತೀನಿ ಅಂತಾ ಹೇಳಿರಲಿಲ್ಲ ರೀ ಮಂಸೋರೆ. ನಿಮ್ಮ ಫೋಟೋ ಬದಲಾಯಿಸಿಕೊಂಡಿದ್ದೀರಿ! ಮುಂದಿನ ಪ್ರದರ್ಶನಕ್ಕೆ ಮುಂಚಿತವಾಗಿಯೇ ತಿಳಿಸಿದರೆ ಖಂಡಿತವಾಗಿಯೂ ಬರುವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manjunath s reddy on

ಈ ಫೋಟೋ ಮಂಗಳೂರಿಗೆ ಹೋದಾಗ ಹರಿ ರಚಿಸಿದ್ದು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by drushya pradeep on

ಆಸು ಸರ್..
ಸವಿತ ರವರನ್ನೇ ಮರೆತುಬಿಟ್ಟೀದ್ದೀರಲ್ಲ...
ನನಗಿಂತ ಮೊದಲೇ ಅವರ ತಾಯಿಯವರೊಂದಿಗೆ ಬಂದಿದ್ದರು ಅವರು.. :)

ಮಂಜುರವರ ಮುಂದಿನ ಪ್ರದರ್ಶನ ಮಂಡ್ಯದಲ್ಲಿ.. :)
ಡಿ. ೨೦ನೇ ತಾರೀಖು.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ದೃಶ್ಯ,

>>ಸವಿತ ರವರನ್ನೇ ಮರೆತುಬಿಟ್ಟೀದ್ದೀರಲ್ಲ...<<

ಇಲ್ಲ ಇಲ್ಲ, ನಾನು ಸವಿತಳನ್ನು ಮರೆಯದೇ, ನನ್ನ ಜೊತೆಗೇ ಕರೆದೊಯ್ದಿದ್ದೆ.

:)

ಕ್ಷಮಿಸಿ, ನನಗೆ ಮಂಜುನಾಥ್ ತಿಳಿಸಿದ ಹೆಸರುಗಳಷ್ಟು. ಜೊತೆಗೆ ಸಂಪದಿಗರೊಬ್ಬರ ಭಾವಿಯವರ ಬಗ್ಗೆಯೂ ಹೇಳಿದ್ದರು. ಆದರೆ ಅದನ್ನು ನಾನು ಬರೆದಿಲ್ಲ ಅಷ್ಟೇ.

:)

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by drushya pradeep on

ಅದನ್ನ ಬರೆಯಕ್ಕೆ ಇನ್ನೂ ಸ್ವಲ್ಪ ಟೈಮ್ ಇದೆ ಸರ್.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on

>>ಸಂಪದಿಗರೆಲ್ಲರೂ ಒಂದಾಗಿ ಅಲ್ಲಿಗೆ ಹೋಗಿದ್ದಿದ್ದರೆ
ಹೌದು ಚೆನ್ನಾಗಿರುತ್ತಿತ್ತು.
ಚಿತ್ರ ವಿಚಿತ್ರದ ಬಗ್ಗೆ ಓದಿದ್ದೆ ಆದರೆ ಭಾನುವಾರ ನೆನೆಪೇ ಆಗಲಿಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Harish Athreya on

ಆತ್ಮೀಯ
ಸ೦ಪದವನ್ನ ರೆಗ್ಯುಲರ್ ಆಗಿ ನೋಡಕ್ಕಾಗಲಿಲ್ಲ.ನೋಡಿದಿದ್ದರೆ ಬರ್ತಿದ್ದೆ.
ಚಿತ್ರ ಕಲೆಯ ಬಗ್ಗೆ ಆಸಕ್ತಿ ಇದೆ.ಆ ದಿನ ಮ೦ಜು ಸಿಕ್ಕಾಗ ತು೦ಬಾ ಖುಷಿ ಆಯ್ತು ಆದ್ರೆ ಅವರ ಚಿತ್ರಗಳನ್ನ ನೋಡೂ ಭಾಗ್ಯ ಸಿಗಲಿಲ್ಲ
ಬಹುಷಃ ಕಮ್ಯುನಿಕೇಶನ್ ಪ್ರಾಬ್ಲ೦ ಅಸುರವರು ಹೇಳಿದ೦ತೆ ಒಬ್ಬರಿಗೊಬ್ಬರು ಹೇಳಿದ್ದಿದ್ದರೆ ಎಲ್ಲಾರೂ ಸೇರಬಹುದಿತ್ತು
ಮ೦ಸೋರೆಯವರ ಕಲೆಯನ್ನ ಮತ್ತೆ ಸ೦ಪದಿಗರನ್ನ ನೋಡೋ ಛಾನ್ಸ್ ಮಿಸ್ ಆಯ್ತು.ಮ೦ಜು ಶುಭವಾಗ್ಲಿ ನಿಮಗೆ
ಮ೦ಡ್ಯಕ್ಕೆ ಬರಕ್ಕಾಗಲ್ಲ.ಸ೦ಪದಿಗರೆಲ್ಲರೂ ಒ೦ದೆಡೆ ಸೇರೋ ಪ್ಲಾನ್ ಏನಾದ್ರೂ ಇದ್ರೆ ದಯವಿಟ್ಟು ನನಗೊ೦ದು ಮೈಲ್ ಮಾಡಿ
athreya.1984@gmail.com
ನಿಮ್ಮವ
ಹರೀಶ ಆತ್ರೇಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.