ವರ್ಷರಾಣಿ ಎಡೆಬಿಡದೇ ಸುರಿ ನೀ...!
ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ
ಈಗ ತಾನೇ ಬಂದಳು
ಈಗ ಹೊರಟೆ ಎಂಬಳು
ಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು
||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||
ಮೋಡಗಳೇ ಕೊಂಚ ಕೇಳಿರಿ
ಮಿಂಚಿನ ಜೊತೆಗೊಮ್ಮೆ ಗುಡುಗಿರಿ
ಭಯದಿ ನನ್ನ ಸಖಿಯು ಎನ್ನ ಅಪ್ಪಿಕೊಂಬಂತೆ ಮಾಡಿರಿ
||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||
***************************
ದಿ. ಮುಕೇಶ್ ಹಾಡಿರುವ "ಭರಕಾ ರಾಣಿ ಜರಾ ಜಮ್ ಕೇ ಬರ್ಸೋ .."
ಎಂಬ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದ!
ಇದೀಗ ವಿವಿಧ ಭಾರತಿಯಲ್ಲಿ ಕೇಳಿಬಂದ ಈ ಹಾಡನ್ನು ಹಾಗೆಯೇ ಭಾವಾನುವಾದ ಮಾಡಿ ಪ್ರಕಟಿಸಿದ್ದೇನೆ.
ಚಿತ್ರ: ಸಬಕ್
ಬರ್ಖಾ ರಾಣೀ, ಜರ ಝಮ್ ಕೇ ಬರ್ ಸೋ
ಮೇರಾ ದಿಲ್ ಬರ್ ಜಾನಾ ಪಾಯೇ
ಜೂಮ್ ಕರ್ ಬರ್ ಸೋ
ಏ ಅಭೀ ತೋ ಆಯೇ ಹೈಂ
ಕಹ್ ತೇ ಹೈಂ ಹಮ್ ಜಾಯೇ ಹೈಂ
ತೂ ಬರಸ್, ಬರ್‍ಸೋಂ ಬರಸ್
ಏ ಉಮ್ರ್ ಭರ್ ನಾ ಜಾಯೇ ರೇ
||ಬರ್ಖಾ ರಾಣೀ, ಜರ ಝಮ್ ಕೇ ಬರ್ ಸೋ||
ಮಸ್ತ್ ಸಾವನ್ ಕೀ ಘಟಾ
ಬಿಜಿಯಾಂ ಚಮ್‍ಕಾ ಜರಾ
ಪ್ಯಾರ್ ಮೇರಾ ಡರ್ ಕೇ ಮೇರೆ
ಸೀನೇ ಪೆ ಲಗ್ ಜಾಯೇ ರೇ
||ಬರ್ಖಾ ರಾಣೀ, ಜರ ಝಮ್ ಕೇ ಬರ್ ಸೋ||









ಪ್ರತಿಕ್ರಿಯೆಗಳು
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
ಈ ಚಿತ್ರ ಆಗಿನ ಕಾಲದಲ್ಲಿ ಅಷ್ಟೇನೂ ಜನಪ್ರಿಯವಾಗಲಿಲ್ಲ. ಚಿತ್ರ ನೋಡಲು ಜನರು ಹೋದದು ಈ ಮೋಹಕ ಹಾಡಿಗಾಗಿಯೇ!
ಪ್ರಿಯ ಸುರೇಶ್, ಭಾವಾನುವಾದಕ್ಕೆ ಅಭಿನಂದನೆಗಳು. ಆದರೆ ಹಿಂದಿ ಹಾಡನ್ನು ಹಿಂದಿ ಅಥವಾ ಕನ್ನಡ ಲಿಪಿಯಲ್ಲಿ ಬರೆದರೆ ಓದಲು ಸುಲಭವೆಂದು ನನಗನ್ನಿಸುತ್ತದೆ...
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
ಪ್ರಭು ಕುಮಾರ್,
ತಮಗೆ ಅಭಿವಂದನೆಗಳು.
ಸಲಹೆ ಸ್ವೀಕೃತವಾಗಿದೆ.
ಮೂಲಗೀತೆಯನ್ನು ಕನ್ನಡಾಕ್ಷರಗಳಲ್ಲಿ ಬರೆದಿರುತ್ತೇನೆ.
ಧನ್ಯವಾದಗಳು
-ಆಸು
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
प्रभो खुश हुआ! ह ह ह्हा!
ಇಷ್ಟು ಬೇಗನೇ ಪ್ರತಿಕ್ರಿಯಿಸಿದ್ದು ಅನಿರೀಕ್ಷಿತ! ಧನ್ಯವಾದಗಳು!
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
ಪ್ರಿಯ ಸುರೇಶ್
ಈ ಹಾಡನ್ನು ಹೋಲುವ ಬಿ. ಆರ್ ಲಕ್ಷ್ಮಣ್ ರಾವ್ ಬರೆದಿರುವ ಕನ್ನಡದ ಭಾವಗೀತೆ,ಈಚೆಗೆ ಈ ಹಾಡನ್ನು ಆಕ್ಸಿಡೆಂಟ್ ಎನ್ನುವ ಚಲನಚಿತ್ರದಲ್ಲಿ ಬಳಸಿಕ್ಕೊಳಲಾಗಿದೆ.
ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು, ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ, ಬಿಡದೆ ಬಿರುಸಾಗಿ ಸುರಿ
ಬಾ ಮಳೆಯೇ ಬಾ
ಓಡು ಕಾಲವೇ ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ ಅವಳಿಲ್ಲಿ ಬಂದೊಡನೆ
ನಿಲ್ಲು ಕಾಲವೇ ನಿಲ್ಲು, ನಮ್ಮ ತಕ್ಕೆ ಸಡಿಲಾಗದಂತೆ
ಬಾ ಮಳೆಯೇ ಬಾ
ಬೀಸು ಗಾಳಿಯೇ ಬೀಸು, ನಿನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು , ಹಾಸುಗಳ ಹಾಸು
ಅವಳು ಬರುವ ದಾರಿಯಲ್ಲಿ ಕಲ್ಲುಗಳು ತಾಕದಂತೆ
ಬಾ ಮಳೆಯೇ ಬಾ
ಬೀರು ದೀಪವೇ ಬೀರು, ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ, ಆರು ಬೇಗನೆ ಆರು
ಶೃಂಗಾರ ಛಾಯೆಯಲ್ಲಿ ನಾಚಿ ನೀರಾಗದಂತೆ
ಬಾ ಮಳೆಯೇ ಬಾ
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
ಹೂಂ... ಕೇಳಿದ್ದೇನೆ ನಾನೂ...
:)
ಅದಕ್ಕೂ ಸ್ಪೂರ್ತಿ ಹಿಂದೀಯ ಈ ಮಾತುಗಳು ಅನ್ಸುತ್ತೆ.
"ತು, ಇತ್ನಾ ನ ಬರಸ್, ಇತ್ನಾ ನ ಬರಸ್, ಕೀ ವೋ ಆ ನ ಸಖೇ
ವೋ ಆಯೇ ತೋ,
ತು ಇತ್ನಾ ಬರಸ್ , ಇತ್ನಾ ಬರಸ್, ಕೀ ವೋ ಜಾ ನ ಸಖೇ"
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
:-):-):-)
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
ವರ್ಷರಾಣಿ.. ವ್ಹಾ ವ್ಹಾ..
ಎಡೆಬಿಡದೇ ಸುರಿ ನೀ... ಸೂಪರ್
ಸೀನೇ ಪೆ ಲಗೀ ರೇ..
-ಗಣೇಶ.
(ಬರ್ಖಾ ಅಂದರೆ ವರ್ಷ ಎಂದು ಈಗ ಗೊತ್ತಾಯಿತು. ವರ್ಷಗಟ್ಟಲೆ ಬರ್ಖಾದತ್ ಬರ್ಖಾದತ್ ಹೆಸರು ಕೇಳುತ್ತಿದ್ದರೂ ಅರ್ಥ ಗೊತ್ತಿರಲಿಲ್ಲ.)
ಉ: ವರ್ಷರಾಣಿ ಎಡೆಬಿಡದೇ ಸುರಿ ನೀ...!
ಗಣೇಶ,
ಓದಿ, ಮೆಚ್ಚಿ, ತಮ್ಮ "ಸೀನೇ ಪೆ ಲಗಾಯಿಸಿ"ಕೊಂಡಿದ್ದಕ್ಕಾಗಿ ಧನ್ಯವಾದಗಳು.
-ಆಸು