19
June
2013

ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿವಾರಣೆ ಆದೀತೇ?!

December 17, 2009 - 9:59am
asuhegde

ಮಹಾರಾಷ್ಟ್ರದ ನಾಂದೇಡ್‍ನ  ಡಾ. ಸಂಜಯ್ ಗಾಯಕ್‍ವಾಡ್ ಏಳು ನೂರ ಐವತ್ತು ವರುಷಗಳ ಹಿಂದೆ, ೧೨೪೦ರ ದಶಕದಲ್ಲಿ ಮಂಗಳೂರಿನಲ್ಲಿ ಓರ್ವ ಬ್ರಾಹ್ಮಣನಾಗಿ ಜೀವಿಸುತ್ತಿದ್ದವರಂತೆ. ಆಗ ವಿಕ್ರಮಾದಿತ್ಯನ ರಾಜ್ಯಭಾರ ನಡೆಯುತ್ತಿತ್ತಂತೆ. ಆತನ ಕಣ್ಮುಂದೆ ಓರ್ವ ಪೂಜಾರಿ ಕಾಗೆಯ ಬಲಿ ನೀಡಿದ್ದನ್ನು ಕಣ್ಣಾರೆ ಕಂಡು ಆತ ನೊಂದುಕೊಂಡಿದ್ದರು. ಆತನ ಸ್ನೇಹಿತೆ, ಕೆಳಜನಾಂಗದವಳಾಗಿದ್ದ ಕಾರಣ ಆಕೆಗೆ ದೇವಸ್ಥಾನದ ಒಳಗೆ ಪ್ರವೇಶ ಇರಲಿಲ್ಲ. ಆಕೆ ಕದ್ದು ಮುಚ್ಚಿ ದೇವಸ್ಥಾನದ ಒಳಗೆ ಪ್ರವೇಶಿಸಿದ್ದನ್ನು ಕಂಡ ಆ ಪೂಜಾರಿ ಆಕೆಯನ್ನು ವಧೆ ಮಾಡುತ್ತಾನೆ. ತನ್ನನ್ನು ರಕ್ಷಿಸದೇ ಮೂಕ ಪ್ರೇಕ್ಷಕನಾದ ತನ್ನ ಸ್ನೇಹಿತನಿಗೆ ಆಕೆಯ ಆತ್ಮ ಶಾಪ ನೀಡುತ್ತದೆ. "ನೀನು ಯಾವ ಹೆಣ್ಣು ಮಗಳಿಗೆ ಉಪಕಾರ ಮಾಡಿದರೂ ನೀನು ಕೊನೆಗೆ ಆಕೆಯಿಂದ ಛೀಮಾರಿ ಹಾಕಿಸಿಕೊಂಡು ಆಕೆಯಿಂದ ದೂರವಾಗು". ಇತ್ತ ಪೂಜಾರಿಗೆ ಈತ ಕಾಗೆಯಾಗುವಂತೆ ಶಾಪನೀಡುತ್ತಾನೆ. ಕಾಗೆಯಾದ ಆ ಪೂಜಾರಿ ಈತನ ಜೀವನಾವಧಿವರೆಗೂ ಈತನ ಬೆನ್ನಹಿಂದೇ ಸುತ್ತುತ್ತಿರುತ್ತದೆ.

ಅಲ್ಲಿಂದಿತ್ತ ೮೪ ವಿವಿಧ ಜನ್ಮಗಳನ್ನು ಎತ್ತಿದ್ದ ಆತನ ಆತ್ಮ, ಈಗ ಸಂಜಯ್ ಗಾಯಕ್‍ವಾಡ್‍ನ ರೂಪದಲ್ಲಿ ಜನ್ಮವೆತ್ತಿರುತ್ತದೆ. ಮತ್ತೆ ಈ ಜನ್ಮದಲ್ಲಿ, ಈತನಿಗೆ ಕಾಗೆಗಳ ಕಾಟ ಶುರುವಾಗಿರುತ್ತದೆ. ಯಾವಾಗಲೂ, ಕಾಗೆಗಳು ಗುಂಪುಕಟ್ಟಿಕೊಂಡು ಈತನನ್ನು ಹಿಂಬಾಲಿಸ್ತುತ್ತಿರುತ್ತವೆ. ಅದೂ ಅಲ್ಲದೆ, ಈತ ಯಾವ ಹೆಣ್ಣಿನ ಸ್ನೇಹ ಬಯಸಿ ಹೋದರೂ, ಎಷ್ಟೇ ಒಳ್ಳೆದನ್ನು ಮಾಡಿದರೂ ಕೊನೆಗೂ ಆ ಹೆಣ್ಣಿನಿಂದ ಛೀಮಾರಿ ಹಾಕಿಸಿಕೊಂಡು ಅಪಮಾನಕ್ಕೀಡಾಗುತ್ತಿದ್ದಾರೆ.

ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಡಾ. ತೃಪ್ತಿ ಜೈನ್‍ರಲ್ಲಿಗೆ ಬಂದಿದ್ದ ಈತನಿಗೆ, ಎನ್‍ಡಿಟಿವಿ ಇಮಾಜಿನ್‍ನ ಕಾರಕ್ರಮವೊಂದರಲ್ಲಿ (ರಾಝ್ ಪಿಛ್‍ಲೇ ಜನಮ್ ಕಾ)
ಸಂಜಯ್‍ಗೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ದೊರೆಯುವಂತೆ, ಸಮ್ಮೋಹಿನಿ ವಿದ್ಯೆಯ ಮೂಲಕ, ಪರಿಹಾರ ನೀಡಿ (ಎಲ್ಲಾ ಸಮಸ್ಯೆಗಳಿಂದ ಆತನ ಆತ್ಮಕ್ಕೆ ಮುಕ್ತಿ ದೊರಕಿಸಿ) ಮನೆಗೆ ಕಳುಹಿಸಿರುತ್ತಾರೆ (ನಿನ್ನೆ ರಾತ್ರಿ ಪ್ರಸಾರವಾದ ಕಂತಿನಲ್ಲಿ) .

ಆದರೆ, ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿಜವಾಗಿಯೂ, ನಿವಾರಣೆ ಆದೀತೇ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by roopablrao on

ಹೌದು ಇದನ್ನೆ ನೆನ್ನೆ ಅಮ್ಮ ನೋಡುತ್ತಿದ್ದರು. ಅದೇನಾ ಇದು
ಆತನ ಸ್ನೇಹಿತೆ ಆತನತ್ತ ದೈನ್ಯವಾಗಿ ನೋಡುತ್ತಿದ್ದಂತೆ(ಮರುಸೃಷ್ಟಿಯಲ್ಲಿ) ಆಕೆಯ ವಧೆಯಾಗುತ್ತೆ
ನಾನು ಅಷ್ಟೇ ನೋಡಿದ್ದು. ಆತ ಬಡಬಡಿಸುತ್ತಿದ್ದ.ಬೋರ್ ಆಗಿ ಚಾನೆಲ್ ಚೇಂಜ್ ಮಾಡಿದೆ
ಸಮಸ್ಯೆ ಪರಿಹಾರ ಆಗುತ್ತಾ?
ಗೊತ್ತಿಲ್ಲ
ಸ್ವಲ್ಪ ದಿನ ಆದ ಮೇಲೆ ಅವರನ್ನೇ(ಸಂಜಯ್) ಕೇಳಬೇಕು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hejjenu on

ಕರ್ನಾಟಕದಲಿ ಕನ್ನಡಿಗರು ಕನ್ನಡ ಧಾರವಾಹಿ ನೋಡಬೇಕು, ಅದು ಬಿಟ್ಟು ಹಿಂದಿ ನೋಡಿ ಅದರ ಬಗ್ಗೆ ಕನ್ನಡದಲ್ಲಿ ಬರೆದಿದ್ದೀರ? ಒಂದೋ ಹಿಂದಿ ನೋಡೋದು ಬಿಡೀ, ಇಲ್ಲ ಹಿಂದಿ ಧಾರವಾಹಿಗಳು ಕನ್ನಡದಲ್ಲೆ ಬರುವಂತೆ ಮಾಡಿ.

ಹೀಗಂತ ನಿಮಗೆ ಯಾರದರು ಬರೆಯಬಹುದು ಎಂದು ಮುನ್ಸೂಚನೆ ಕೊಟ್ಟಿದ್ದೇನೆ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಮಂಗಳೂರಿನ ಬಗ್ಗೆ ಬರುತ್ತದೆ ಅಂತ ಸುದ್ದಿ ಸಿಕ್ತು ಹಾಗಾಗಿ ನೋಡಿದೆ ನಾನದನು
ನಮ್ಮೂರ ಬಗ್ಗೆ ಏನಾದರೂ ಅಪಚಾರ ಆಗುತ್ತೇನೋ ಅಂತ ನಾ ಕಾಯುತ್ತಿದ್ದವನು

ಹಾಗೆ ಏನಾನಾದರೂ ಆಗಿದ್ದರೆ ಇಂದು ನಮ್ಮ ರಾಜ್ಯದ ಉದ್ದಗಲಕ್ಕೂ ನಾವೆಲ್ಲಾ
ಧರಣಿ ಹೂಡಿ, ಭಾಷಣ ಬಿಗಿಯಬಹುದಿತ್ತು ವೇದಿಕಗಳನೇರಿ, ಅಂತ ಅನ್ಸೋಲ್ವಾ?

ನಮ್ಮ ಜಾಗ್ರತೆಯಲ್ಲಿ ನಾವಿರಬೇಕು, ಕಣ್ಣುಗಿವಿಗಳನ್ನು ಸದಾ ತೆರೆದಿರಬೇಕು ಕೇಳಿ
ಇಲ್ಲವಾದರೆ ಮಂಗಳೂರು ಕೇರಳಕ್ಕೆ, ಕಾರವಾರ ಗೋವಕ್ಕೆ ಜಾರಿಹೋದೀತು ತಾಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by haadu_kaadu on

ಬ್ರಾಂತುಗಳು, ಪೇತುಗಳು ವಾಸಿ ಆಗುತ್ತೆ ಅಂತಿರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sinchana on

ಸಂಜಯ್ ಗಾಯಕ್‍ವಾಡರ ಸಮಸ್ಯೆ ಪರಿಹಾರವಾಗದಿದ್ದರೂ, ಕಾಗೆಗಳ ಸಮಸ್ಯೆ ಪರಿಹಾರವಾದರೆ ಸಾಕು ;)
ಎಷ್ಟುಕಾಲ ಒಬ್ಬನ ಬೆನ್ನು ಹತ್ತುತ್ತವೆ? ಅಂದ ಹಾಗೆ ಸ್ಟುಡಿಯೋಗೆ ಕಾಗೆಗಳು ಬಂದಿದ್ದವೇನು?

<<<<ಡಾ. ಸಂಜಯ್ ಗಾಯಕ್‍ವಾಡ್ ಏಳು ನೂರ ಐವತ್ತು ವರುಷಗಳ ಹಿಂದೆ, ೧೨೪೦ರ ದಶಕದಲ್ಲಿ ಮಂಗಳೂರಿನಲ್ಲಿ ಓರ್ವ ಬ್ರಾಹ್ಮಣನಾಗಿ ಜೀವಿಸುತ್ತಿದ್ದವರಂತೆ. ಅಲ್ಲಿಂದಿತ್ತ ೮೪ ವಿವಿಧ ಜನ್ಮಗಳನ್ನು ಎತ್ತಿದ್ದ ಆತನ ಆತ್ಮ, ಈಗ ಸಂಜಯ್ ಗಾಯಕ್‍ವಾಡ್‍ನ ರೂಪದಲ್ಲಿ ಜನ್ಮವೆತ್ತಿರುತ್ತದೆ. >>>
ಲೆಕ್ಕ ಹಾಕಿ ಇದು ಸಾದ್ಯವೆ?
೭೫೦/೮೪ = ೮.೯೨೮೫೭೧೪ ಒಂದು ಜನ್ಮದಲ್ಲಿ ಸರಾಸರಿ ಆಯಸ್ಸು...:)

"ಸುಮ್ಮನೆ ನಮ್ಮನ್ನು ಮಂಗ ಮಾಡುತ್ತಾರೆ "

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

...ನಾವು ಸುಮ್ಮನೆ ಮಂಗ ಆಗದಿದ್ದರಾಯ್ತು.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿವಾರಣೆ ಆದೀತೇ?! ಎಂದು ಕೇಳುತ್ತಾ ಈಗ ಆಗಿರುವುದೇನು ಮತ್ತೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on

ಅಲ್ರೀ, ಎಲ್ಲಾವೂ ಮಾನವ ಹುಟ್ಟುಗಳು ಅಂತ್ಯಾಕ್ರೀ ಅಂದ್ಕೋತೀರಾ? ಕ್ರಿಮಿ ಕೀಟ ಪಶು ಪಕ್ಷಿಗಳನ್ನೆಲ್ಲಾ ಬಿಟ್ಬಿಟ್ರಲ್ಲಾ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

ಒಂದು ಟೀವಿ ಕಾರ್ಯಕ್ರಮವನ್ನು(ಅದೂ ಕೂಡ ಹೇಳೀ ಕೇಳಿ ಅದು ಎನ್.ಡಿ.ಟಿ.ವಿ.! ) ಇಷ್ಟು ಯುನಿವರ್ಸಲ್ ವಿಷಯ ಎಂಬಂತೆ ಈ ಬಗ್ಗೆ ಗಂಭೀರವಾಗಿ ಇಷ್ಟು ತಲೆಕೆಡಿಸಿಕೊಳ್ಳುವ ಅಗತ್ಯ ಇದೆಯೇ ಅನ್ನಿಸಿತು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

>>.....ಅಗತ್ಯ ಇದೆಯೇ ಅನ್ನಿಸಿತು!>>

ನಿಮಗೆ ಏನು ಅನ್ನಿಸಿತು ಅಂತ ಎಲ್ಲರಿಗೂ ಗೊತ್ತಾಯ್ತಲ್ಲಾ ಅದೇ ಸಾಕು, ಬಿಡಿ.

ಇಲ್ಲಿ ಯಾರು ತಲೆ ಕೆಡಿಸಿಕೊಳ್ತಿದಾರೆ ಅಂತಾನೇ ಗೊತ್ತಾಗ್ಲಿಲ್ಲ, ನಮಗೆ.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

<<<ಇಲ್ಲಿ ಯಾರು ತಲೆ ಕೆಡಿಸಿಕೊಳ್ತಿದಾರೆ ಅಂತಾನೇ ಗೊತ್ತಾಗ್ಲಿಲ್ಲ, ನಮಗೆ.>>

ಇನ್ಯಾರು.? ಶ್ರೀ asuhegdeಯವರು :) ಪುರಾವೆ:- ಈ ಪೋಸ್ಟ್.

<<ನಿಮಗೆ ಏನು ಅನ್ನಿಸಿತು ಅಂತ ಎಲ್ಲರಿಗೂ ಗೊತ್ತಾಯ್ತಲ್ಲಾ ಅದೇ ಸಾಕು, ಬಿಡಿ>>

ನೀವು ಬೇಕು ಅಂದರೂ ಕೂಡ ಬೇರೆ ಏನೂ ಉತ್ತರವಿಲ್ಲ. ನಮಗೆ ಏನು ಅನ್ನಿಸಿತು ಅಂತ ಬರೆಯುವುದಕ್ಕೇ ಈ ವೇದಿಕೆ ಇರುವುದು. ನೀವು ನಿಮಗನಿಸಿದ್ದು ಬರೆದಿರಿ, ನಾನು ನನಗನಿಸಿದ್ದು ಬರೆದೆ. so.. no problem. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhasip on

ಅದು ಹೇಗೆ ಗೊತ್ತಾಯಿತು ತಲೆ ಕೆಡಿಸ್ಕೊಂಡ್ರು ಅಂತ? J ಯಾವುದಾದ್ರ ಬಗ್ಗೆ ಬರೆದ್ರೆ ತಕೆ ಕೆಡಿಸಿಕೊಂಡಿದಾರೆ ಅಂತ ಆರ್ಥಾನೆ? ಹಾಗಿದಲ್ಲಿ ದಿನ ನಿತ್ಯ ಬ್ಲಾಗ್ ಬರೆಯೋರು ದಿನವೂ ತಲೆ ಕೆಡಿಸ್ಕೊತಾರೆಯೆ? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಈಗ ನೀವ್ಯಾಕೆ ತಲೆಕೆಡಿಸಿಕೊಳ್ತೀರಿ, ಗಂಭೀರವಾಗಿ, ಭಾಸ್ಕರ್?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhasip on

ಸಿ ಎಸ್ ಪಿ ಶೈಲಿಯಲ್ಲಿ..
"ಬಿಡಿ ಆ ವಿಷ್ಯ ಬಿಡಿ. ... ಕೆಡಿಸ್ಕೊಳ್ಳುವಂತ ತಲೆ ಇರಬೆಕು ಕೆಡಿಸ್ಕೊಳ್ಳಕ್ಕೆ....." :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಬ್ಲಾಗು ಬರೆಯುವವರು ತಲೆಕೆಡಿಸಿಕೊಂಡು ಬ್ಲಾಗು ಬರೆಯುತ್ತಾರೆ
ಪ್ರತಿಕ್ರಿಯಿಸುವವರು ತಲೆಕೆಡಿಸಿಕೊಳ್ಳದೇ ಪ್ರತಿಕ್ರಿಯಿಸುತ್ತಾರೆ

ಕೆಡಿಸಿಕೊಳ್ಳುವವರಿಗೆ ತಲೆ ಇದೆ ಹಾಗಾಗಿ ಕೆಡಿಸಿಕೊಳ್ತಾರೆ
ಕೆಡಿಸಿಕೊಳ್ಳದವರಿಗೆ ತಲೆ ಇಲ್ಲ ಹಾಗಾಗಿ ಕೆಡಿಸಿಕೊಳ್ಳೋಲ್ಲ
ಅಂತ ಹೇಳುತ್ತಿದ್ದೀರಾ, ಭಾಸ್ಕರ್?

ಹೊಸ ಹೊಸ ಆವಿಷ್ಕಾರಗಳು, ಈ ಸಂಪದದಂಗಳದಲ್ಲಿ. ಭೇಷ್!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhasip on

ಕೆಡಿಸಿಕೊಳ್ಳುವ ತಲೆ ಇಲ್ಲ ಅಂದೆ ಅಷ್ಟೆ :) ಆದು ಈ ರೀತಿ ತಿರುವು ತೆಗೆದುಕೊಳ್ಳುತ್ತೆ ಅನ್ನುವುದರ ಬಗ್ಗೆ "ತಲೆ ಕೆಡಿಸಿಕೊಂಡಿರಲಿಲ್ಲ "

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

ನಿಜ ನಿಜ. ಒಂದು ಟೀವಿ ಕಾರ್ಯಕ್ರಮದ ಬಗ್ಗೆ ಯುನಿವರ್ಸಲ್ ವಿಷಯ ಎಂಬಂತೆ ತಲೆಕೆಡಿಸಿಕೊಳ್ಳುವವರು ಮಾತ್ರ ತಲೆ ಇರುವವರು ಅನ್ನಿಸಿಕೊಳ್ಳುತ್ತಾರೆ! :) ಬೇರೆ ಯಾರಿಗೂ ತಲೆ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಬ್ಲಾಗುಗಳಲ್ಲಿ ಬರೆದ ವಿಷಯ "ಯೂನಿವರ್ಸಲ್" ಅಂತ ಅಂತೀರಾ?
ಹಲವಾರು ದೇಶಗಳಲ್ಲಿ ಬಿತ್ತರವಾಗುವ ದೂರದರ್ಶನದ ಕಾರ್ಯಕ್ರಮ "ಯೂನಿವರ್ಸಲ್" ಅಲ್ಲ ಅಂತೀರಾ?

ಒಟ್ಟಾರೆ ನೀವೇನಂತೀರಾ?
ನಾ ಬರೆಯಲೇ ಬಾರದಂತೀರಾ?
ಅಲ್ಲಾ ನಾನ್ಯಾವ್ಯಾವ ವಿಷಯದ ಬಗ್ಗೆ ಮಾತ್ರಾ ಬರೆಯಬೇಕು ಅಂತ ತಿಳಿಸಿ ಹೇಳ್ತೀರಾ?
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

<<ಬ್ಲಾಗುಗಳಲ್ಲಿ ಬರೆದ ವಿಷಯ "ಯೂನಿವರ್ಸಲ್" ಅಂತ ಅಂತೀರಾ?>>

ಇರಬಹುದು, ಇಲ್ಲದಿರಬಹುದು

<<ಹಲವಾರು ದೇಶಗಳಲ್ಲಿ ಬಿತ್ತರವಾಗುವ ದೂರದರ್ಶನದ ಕಾರ್ಯಕ್ರಮ "ಯೂನಿವರ್ಸಲ್" ಅಲ್ಲ ಅಂತೀರಾ>>

ಆಗಿರಲೇ ಬೇಕು ಅಂತಿಲ್ಲ.

<<ಒಟ್ಟಾರೆ ನೀವೇನಂತೀರಾ?
ನಾ ಬರೆಯಲೇ ಬಾರದಂತೀರಾ?
ಅಲ್ಲಾ ನಾನ್ಯಾವ್ಯಾವ ವಿಷಯದ ಬಗ್ಗೆ ಮಾತ್ರಾ ಬರೆಯಬೇಕು ಅಂತ ತಿಳಿಸಿ ಹೇಳ್ತೀರಾ?
:)>>

ಇದೇನಿದು ಒಂದು ಪ್ರಶ್ನೆ , ಅದಕ್ಕೆ ಉತ್ತರವಾಗಿ ಎರಡು ಪ್ರಶ್ನೆಗಳೇ ಮತ್ತೆ ಆಯ್ಕೆಗಳು! :)
ಇರಲಿ. ಉತ್ತರವಾಗಿ ನಂದೂ ೪ ಪ್ರಶ್ನೆಗಳಿವೆ. ನೀವು ಬರೆದ ವಿಷಯಗಳಿಗೆ ನಾನು ತಲೆಬಾಗಿ ಒಪ್ಪಲೇಬೇಕು ಅಂತೀರಾ? ಅಥವಾ ಇದು ಚರ್ಚೆ ಮಾಡಲು ಅನರ್ಹವಾದ ವಿಷಯ ಅಂತ ನನಗೆ ಅನ್ನಿಸಿದರೆ ಅದು ತಪ್ಪು ಅಂತೀರಾ? ಅಥವಾ ನಾನೇನಾದ್ರೂ ಬರ್ಕೋತೀನಿ ನೀನು ದೂರ ಇರು ಅಂತೀರಾ. ನೀವೇನಂತೀರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಏನ್ರೀ, ನೀವು ಬ್ಲಾಗುಗಳನ್ನೂ ಚರ್ಚೆಗಳಂತೀರಾ ?

ಹಾಗಾದರೆ ಚರ್ಚೆಗಳೆಂದೇ ವರ್ಗೀಕೃತವಾಗಿ ("Forum") ಪ್ರಕಟವಾಗುವವುಗಳನ್ನು ನೀವೇನಂತೀರಾ?

>>"ನೀವು ಬರೆದ ವಿಷಯಗಳಿಗೆ ನಾನು ತಲೆಬಾಗಿ ಒಪ್ಪಲೇಬೇಕು ಅಂತೀರಾ? "<<
ನಾನು ಬರೆದದ್ದು ನಿಮಗೊಬ್ಬರಿಗಲ್ಲವಾಗಿತ್ತು. ಅದು ಬರೇ ಬ್ಲಾಗಾಗಿತ್ತು.
ಆದರೆ ನಿಮ್ಮ ಪ್ರತಿಕ್ರಿಯೆ ಬರೇ ನನಗಾಗಿತ್ತು.

>>ಅಥವಾ ಇದು ಚರ್ಚೆ ಮಾಡಲು ಅನರ್ಹವಾದ ವಿಷಯ ಅಂತ ನನಗೆ ಅನ್ನಿಸಿದರೆ ಅದು ತಪ್ಪು ಅಂತೀರಾ? <<

ಚರ್ಚೆ ಮಾಡುವ ವಿಷಯ ಹೌದೋ ಅಲ್ಲವೋ ಅಂತ ನಿರ್ಧರಿಸುವವರು ಯಾರು?

>>ಅಥವಾ ನಾನೇನಾದ್ರೂ ಬರ್ಕೋತೀನಿ ನೀನು ದೂರ ಇರು ಅಂತೀರಾ. ನೀವೇನಂತೀರಾ?<<

ದೂರ ಇರಿ ಅನ್ನೋಕೆ ನಾನ್ಯಾರು? ಬಂದು ಮೈಮೇಲೆ ಬೀಳಿ ಅನ್ನೋಕೂ ನಾನ್ಯಾರು?
ನಿಮ್ಮ ಪ್ರತಿಕ್ರಿಯೆಗುತ್ತರವಾಗಿ ಪ್ರತಿಕ್ರಿಯೆ ನೀಡ್ತಿದೀನಿ ಅಷ್ಟೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

<<ಏನ್ರೀ, ನೀವು ಬ್ಲಾಗುಗಳನ್ನೂ ಚರ್ಚೆಗಳಂತೀರಾ ?>>

ಬ್ಲಾಗ್ ಎನ್ನುವುದು ಒಂದು general ಪದ. ಅದು ಏನು ಬೇಕಾದರೂ ಆಗಿರಬಹುದು.

<<ಅದು ಬರೇ ಬ್ಲಾಗಾಗಿತ್ತು.
ಆದರೆ ನಿಮ್ಮ ಪ್ರತಿಕ್ರಿಯೆ ಬರೇ ನನಗಾಗಿತ್ತು.>>

ಸಹಜವಾಗಿ ಪ್ರತಿಕ್ರಿಯೆ ಬ್ಲಾಗ್ ಬರೆದವರಿಗೇ ತಲುಪುತ್ತದೆ.

<<ಚರ್ಚೆ ಮಾಡುವ ವಿಷಯ ಹೌದೋ ಅಲ್ಲವೋ ಅಂತ ನಿರ್ಧರಿಸುವವರು ಯಾರು?>>

ಯಾರೂ ಇಲ್ಲ. ಆದ್ದರಿಂದ ನನಗೆ ಅರ್ಹವಲ್ಲ ಅನ್ನಿಸಿದರೆ ತಪ್ಪೇನಿಲ್ಲವಲ್ಲ.

<<ದೂರ ಇರಿ ಅನ್ನೋಕೆ ನಾನ್ಯಾರು? ಬಂದು ಮೈಮೇಲೆ ಬೀಳಿ ಅನ್ನೋಕೂ ನಾನ್ಯಾರು?>>
’ಸಾಕು ಬಿಡಿ’ ಅಂದಿದ್ದರಲ್ಲ ಅದಕ್ಕೇ ಕೇಳಿದ್ದೆ. ದೂರಿ ಇರಿ ಮತ್ತು ಮೈಮೇಲೆ ಬನ್ನಿ ಅನ್ನೋಕೂ ಯಾರು ಯಾರೂ ಅಲ್ಲ ಇಲ್ಲಿ.

<<ನಿಮ್ಮ ಪ್ರತಿಕ್ರಿಯೆಗುತ್ತರವಾಗಿ ಪ್ರತಿಕ್ರಿಯೆ ನೀಡ್ತಿದೀನಿ ಅಷ್ಟೇ.>>
ನಾನೂ ಅದೇ ಮಾಡುತ್ತಿರುವುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ವಿಕಾಸ್,

ನಿಮ್ಮದೇ ಮಾತಿನಲ್ಲಿ ಹೇಳೋದಾದರೆ "ಬ್ಲಾಗು ಅನ್ನೋದರಲ್ಲಿ ಏನನ್ನಾದರೂ ಬರೆಯಬಹುದು"

ಆದರೆ, ಬರೆದ ನಂತರ ಅದನ್ನು "ಕವನ", "ಲೇಖನ" ಅಥವಾ "ಚರ್ಚೆ" ಅಂತ ವರ್ಗೀಕರಿಸಲೂಬಹುದೇನೋ.

ಅದನ್ನು ವರ್ಗೀಕರಿಸಬೇಕಾದವನು ಬರೆದವನು. ಓದುವವನಲ್ಲ.

ನಾನು ಇದನ್ನು ಚರ್ಚೆ ಅಂತ ವರ್ಗೀಕರಿಸಿಲ್ಲ.

ನಾನು ನನ್ನ ಯಾವುದೇ ಬರಹಗಳನ್ನು ಆಸುಮನದ ಮಾತುಗಳು ಅಂತ ಮಾತ್ರ ವರ್ಗೀಕರಿಸುತ್ತೇನೆ.

ನೀವು ಇದನ್ನು ಚರ್ಚೆ ಅಂತ ವರ್ಗೀಕರಿಸಿಕೊಂಡಿದ್ದೀರಿ. ಅದು ನಿಮ್ಮ ತಪ್ಪು.

ಆ ನಂತರ, ನೀವೇ ಅದನ್ನು ಚರ್ಚೆಗೆ ಅನರ್ಹ ಅಂತ ನಿರ್ಧರಿಸಿದ್ದೀರಿ.

ಹಾಗಾಗಿ ಏನೂ ಅನ್ನಲಾಗದು ನಾನು.

ಇತಿಶ್ರೀ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhasip on

:) ಅದನ್ನ ದೊಡ್ಡ ವಿಷಯ ಮಾಡಿದ್ದಾರೆ ಎಂದು ಭಾವಿಸಿ ತಲೆ ಕೆಡಿಸ್ಕೊಂಡವರು ಕೆಡುವಂತಹ ತಲೆ ಉಳ್ಳವರೋ/ ಅಲ್ಲವೋ? J

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

ತಲೆ ಇದ್ದವರು ತಲೆಕೆಡಿಸಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಅಂದರೆ ನಾನು ತಲೆಕೆಡಿಸಿಕೊಂಡಿದ್ದೇನೆ ಅಂತೀರಾ ಅಥವಾ ತಲೆಕೆಡಿಸಿಕೊಂಡು ಬರೆದಿಲ್ಲ ಅಂದವರಿಗೆ ತಲೆ ಇಲ್ಲ ಅಂತೀರ? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhasip on

ಕೆಡೆಸಿಕೊಳ್ಳುವ ತಲೆ ಎಂದು ಸೇರ್ಸಿಬಿಡಿ :) ಉತ್ತಮ.. ಇಲ್ಲ ಅಂದರೆ ಪುನಃ ಎಲ್ಲರಿಗೂ ತಲೆ ಕೆಡಿಸಿಕೊಳ್ಳುವ ಅವಕಾಶ ಕೊಟ್ಟಂತಾಗುತ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಬ್ಲಾಗುಗಳು ತಲೆಕೆಡುಕತನದ ಪುರಾವೆ ಅನ್ನುವುದು ನಾನರಿಯದಿದ್ದ ಹೊಸ ವಿಚಾರ ವಿಕಾಸ್.

ನಿಮ್ಮ ಈ ಈ ಹೊಸ ಆವಿಷ್ಕಾರಕ್ಕೆ ಧನ್ಯವಾದಗಳು.

ಅಥವಾ ನಾನು ಬರೆದಾಗ ಮಾತ್ರ ಅದು ನಿಮಗೆ ತಕೆಡುಕತನ ಅಂತ ಅನಿಸ್ತದೆಯೋ ಹೇಗೆ?

ಎಲ್ಲೋ ನಮ್ಮಿಬ್ಬರ ನಡುವೆ ಏನಾದರೂ ಪೂರ್ವಜನ್ಮದ ನಂಟಿರಬಹುದೇ?

ನಾವಿಬ್ಬರೂ ಕೂಡ ಅಲ್ಲಿಗೇ ಹೋಗಿ ಇದಕ್ಕೆ ಉತ್ತರ ಹುಡುಕಿಕೊಳ್ಳಹುದೇ?
:)

ನಾನು ನನಗನಿಸಿದ್ದನ್ನು ಬರೆಯಬಹುದು ಅಂತಾದರೆ ನಾ ತಲೆಕೆಡಿಸಿಕೊಂಡಿದ್ದೇನೆ ಅನ್ನುವ ಮಾತೇಕೆ? ನೀವು ಪ್ರತಿಕ್ರಿಯೆ ನೀಡುತ್ತಿರುವುದನ್ನು ನೋಡಿದರೆ, ನಾ ಬರೆದದ್ದಕ್ಕೆ ನೀವೂ ತಲೆಕೆಡಿಸಿಕೊಳ್ಳುತ್ತಿದ್ದೀರೋ ಹೇಗೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

ಸುರೇಶ್, ತಲೆಕೆಡಿಸಿಕೊಳ್ಳುವುದು ಅಂದರೆ ನೀವು ವಿಪರೀತ ಅರ್ಥದಲ್ಲಿ ಭಾವಿಸಿಕೊಂಡ್ರಿ ಅನ್ನಿಸುತ್ತೆ. ತಲೆಕೆಡಿಸಿಕೊಳ್ಳುವುದು ಅಂದರೆ mad ಆಗಿದ್ದೀರ ಅಂತ ಅಲ್ಲ ಮಾರಾಯ್ರೆ.
ಹಳೆ ಮೈಸೂರಿನ ಭಾಷೆಯಲ್ಲಿ ಒಂದು ವಿಷಯದ ಬಗ್ಗೆ ಜಾಸ್ತಿ ಯೋಚಿಸುವುದಕ್ಕೆ ಮಾತಾಡುವುದಕ್ಕೆ ’ತಲೆಕೆಡಿಸಿಕೊಳ್ಳುವುದು’ ಅಂತ ಅತೀ ಸಾಮಾನ್ಯವಾಗಿ ಬಳಸುತ್ತೇವೆ. ನೀವು ಆ ಕಾರ್ಯಕ್ರಮ ಟೀವಿಯಲ್ಲಿ ನೋಡಿ ಅದನ್ನು ನೆನಪಿಟ್ತುಕೊಂಡು ಅದರ ಬಗ್ಗೆಯೇ ಯೋಚಿಸಿ ಇಲ್ಲಿ ಬಂದು ಸಂಪದದಲ್ಲಿ ಪೋಸ್ಟ್ ಹಾಕಿ ಚರ್ಚೆ ಮಾಡುತ್ತಾ ಇರುವುದನ್ನು ನೋಡಿ ಜಾಸ್ತಿ ಯೋಚಿಸುತ್ತಿದ್ದೀರ ಅಂದುಕೊಂಡೆ. ಅಲ್ಲವಾದರೆ ನೀವು ’ತಲೆಕೆಡಿಸಿಕೊಂಡಿಲ್ಲ’ ಬಿಡಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ವಿಕಾಸ್,

ಯಾವುದಕ್ಕೋ ಬರೆದ ಪ್ರತಿಕ್ರಿಯೆಯನ್ನು ಜನರು ಜ್ಞಾಪಕದಲ್ಲಿ ಇಟ್ಟುಕೊಂಡು ಹಲವು ದಿನಗಳ ಮೇಲೆ, ಬೇರೆ ಲೇಖನದಲ್ಲಿ ಅದನ್ನು ಉಲ್ಲೇಖಿಸುವಾಗ, ನಾನು ನಿನ್ನೆ ನೋಡಿದ ಧಾರಾವಾಹಿಯನ್ನು ಇಂದು ಕೂಡ, ಜ್ಞಾಪಕದಲ್ಲಿ ಇಟ್ಟುಕೊಳ್ಳದೇ ಇದ್ರೆ ಹೇಗೆ ಹೇಳಿ.

ಅಷ್ಟೇನೂ ಕೆಟ್ಟ ತಲೆ ಅಲ್ಲ ತಾನೆ ನಂದು...?

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

<<ಅಷ್ಟೇನೂ ಕೆಟ್ಟ ತಲೆ ಅಲ್ಲ ತಾನೆ ನಂದು...?>>

ಸದ್ಯಕ್ಕೆ ನನ್ನ ಉತ್ತರ ’ಅಲ್ಲ’ ಅಥವ ’ಗೊತ್ತಿಲ್ಲ’ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Vyasraj on

ಡಾ. ಸಂಜಯ್ ಗಾಯಕ್‍ವಾಡರ ಸಮಸ್ಯೆ ನಿವಾರಣೆ ಆದೀತೇ?! ಈ ಪ್ರಶ್ನೆಗೆ ಉತ್ತರ 'ರಾಝ್ ಅಗಲೇ ಜನಮ್ ಕಾ' ಅನ್ನೊ ಹೊಸ ಕಾರ್ಯಕ್ರಮ ಶುರು ಮಾಡಿ, ಅದ್ರಲ್ಲಿ ಹೇಳ್ತಾರೆ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

...ಅಲ್ಲೀವರೆಗೂ ನಮ್ ಆತ್ಮ ಕಾಯ್ಬೇಕಂತೀರಾ...?

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayak.mdesai on

ವ್ಯಾಸರಾಜ ಅವರು ಕಾಯಿರಿ ಅಂದ್ರೆ ನೀವು ಕಾಯ್ತೀರಾ? :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ನಾವು ಅಲ್ಲ ನಮ್ ಆತ್ಮ ಕಾಯುತ್ತೇನೋ...ಅಲ್ಲಾ ಕಾಡುತ್ತೇನೋ...
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on

ಕಳೆದ ಜನ್ಮದಲ್ಲಿ ನಮ್ಮ ಸೆಲೆಬ್ರಿಟಿಗಳು, ಬಿಟ್ಟಿ ಪಬ್ಲಿಸಿಟಿ ಭಕ್ತರು ಕಾಗೆ, ಹಂದಿ, ನಾಯಿ, ಕುರಿ, ಹಸು, ಮನುಷ್ಯ ಆಗಿರ್ತಾರೆ. ಇರುವೆ, ಗೊದ್ದ, ನೊಣ, ಜಿರಲೆ, ಹಲ್ಲಿ, ಬ್ಯಾಕ್ಟೀರಿಯ, ಫಂಗೈ, ಎರೆಹುಳು ಆಗಿದ್ದರ ನೆನಪು ಯಾರಿಗೂ ಬಾರದು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on

ತಾವೇನಾಗಿದ್ದಿರಬಹುದು ಸಾಮ್ರಾಟರೇ? ಬಹುಶಃ ನೀವು ಯಾರದೋ ತಲೆಯನ್ನು ತೆಗೆದಿರಬಹುದೇ? ಮುಂದಿನ ಜನ್ಮದಲ್ಲಿ ನೀವು ಹೃದಯವೇ ಇಲ್ಲದೇ ಹುಟ್ಟುವಿರಿ! ಅದಂತೂ ಗ್ಯಾರಂಟಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on

ತೆಗೆಯೋಣವೆಂದು ಕಾತರಿಸುತ್ತಿದ್ದೆ. ಆದರೆ ತಲೆಯಿದ್ದವರು ಒಬ್ಬರೂ ಸಿಕ್ಕಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

NIMHANS ಎಂಬ ಹುಚ್ಚರಾಸ್ಪತ್ರೆಯಲ್ಲಿ Dept. of Clinical Parapsychology ಯಲ್ಲಿ ಡಾ. ಸತ್ವಂತ್ ಪಸ್ರೀಚಾ ಎನ್ನುವವರು ಸುಮಾರು ೩೦ ವರ್ಷದಿಂದ ಪುನರ್ಜನ್ಮ, ಇತ್ಯಾದಿಗಳ ಬಗ್ಗೆ ಸಂ ಶೋಧನೆ ಮಾಡುತ್ತಿದ್ದು, ಸುಮಾರು ೫೦೦ ಇಂತಹ ಕೇಸ್ ಗಳನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.

ನೋಡಿ.
http://en.wikipedia....

ಹಾಗೆಯೇ ಇದನ್ನೂ ನೋಡಿ.
the parapsychology department closed. Now one of the psychology Professors of NIMHANS Bangalore was given a Ph.D. for her thesis for proving life after ...
www.indiansceptic.in...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

plz note, nimhans ಎಂಬುದು ಹುಚ್ಚರ ಆಸ್ಪತ್ರೆಯಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

ವಿಕಾಸ ಹೆಗಡೆಯವರೇ,

ತಪ್ಪನ್ನು ತೋರಿಸಿಕೊಟ್ಟದ್ದಕ್ಕಾಗಿ ನನ್ನಿ.

ಹುಚ್ಚರ ಆಸ್ಪತ್ರೆ ಎನ್ನುವ ತಪ್ಪು ಪದಗಳು ಹುಚ್ಚರು ನಡೆಸುವ ಆಸ್ಪತ್ರೆ ಎನ್ನುವ ಅರ್ಥವನ್ನು ನಿಮ್ಮಲ್ಲಿ ಧ್ವನಿಸಿರಲೂ ಸಾಕು. ಇದು ತಪ್ಪು.

ನನ್ನ ಅಣ್ಣನ schizophrenia ಹುಚ್ಚನ್ನು ನಿಮ್ಹಾನ್ಸ್ ನವರು ಚಿಕಿತ್ಸೆಯಿಂದ, ಗುಣಪಡಿಸಿದ ನಂತರ ಕಾಲೇಜು ಓದಿ, ಅವನು physical chemistry ಯಲ್ಲಿ doctorate ಗಳಿಸುವಂತಾಯಿತು.

ಆದ್ದರಿಂದ ಹುಚ್ಚರನ್ನು, ಹುಚ್ಚುಗಳನ್ನು ಗುಣ ಪಡಿಸುವ ಆಸ್ಪತ್ರೆ ಎನ್ನುವ ಅರ್ಥದಲ್ಲಿ ನಾನು ಬರೆದದ್ದು.

NIMHANS ನಮ್ಮ ದೇಶದಲ್ಲೇ ಪ್ರಖ್ಯಾತಿ ಪಡೆದ ಒಂದು ಉತ್ತಮ ಸಂಸ್ಥೆ.

ಹಾಗೆಯೇ, ಹುಚ್ಚು ಎಂದು ಕೀಳಾಗಿ, ಹಾಸ್ಯ ಮಾಡುವ ಕಾಲವೊಂದಿತ್ತು.

ಈಗ ನಮ್ಮಲ್ಲಿ ಬಹಳಷ್ಟು ಮಂದಿ ಒಂದಲ್ಲ ಒಂದು ಹುಚ್ಚು ತಗಲಿಸಿಕೊಂಡಿರುವಾಗ ಯಾರು ಹುಚ್ಚರು, ಯಾರು ಅಲ್ಲ ಎಂಬುದು ಅಮುಖ್ಯವೆನಿಸುತ್ತದೆ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vikashegde on

ಶ್ರೀಕರ್, ನಿಜವಾಗಿಯೂ ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ನಾನು ನಿಮ್ಮಿಂದ ಖಾರವಾದ ಇಲ್ಲವೆ ವ್ಯಂಗ್ಯವಾದ ಪ್ರತಿಕ್ರಿಯೆ ಬರಬಹುದೆಂದು ನಿರೀಕ್ಷಿಸಿದ್ದೆ. ನೀವು ಹೇಳಿದ್ದು ಹುಚ್ಚರು ನಡೆಸುವ ಆಸ್ಪತ್ರೆ ಎಂದು ದ್ವನಿಸಿಲ್ಲ. ಬದಲಾಗಿ ಅಲ್ಲಿ ಚಿಕಿತ್ಸೆ ಪಡೆಯುವವರು ಹುಚ್ಚರಾದವರು ಎಂದು ದ್ವನಿಸಿದೆ.

ಮಾನಸಿಕ ರೋಗಿಗಳು ಎಂದರೆ ಹುಚ್ಚರಲ್ಲ ಎಂಬುದು ನಮ್ಮ ಜನರು ತಿಳಿದುಕೊಳ್ಳಬೇಕು. ಎಲ್ಲಾ ಮಾನಸಿಕ ರೋಗಗಳೂ ಹುಚ್ಚಿನಲ್ಲಿ ಕೊನೆಗೊಳ್ಳುವುದಿಲ್ಲ. NIMHANS ಎಂಬುದು ನರವಿಜ್ಞಾನ(neural science ಎಂಬುದಕ್ಕೆ ಈ ಪದ ಸರಿಯೋ ಇಲ್ಲವೋ ಗೊತ್ತಿಲ್ಲ) ಮತ್ತು ಮಾನಸಿಕ ಆರೋಗ್ಯ ಸಂಸ್ಥೆ ಮತ್ತು ಅದರ ಚಿಕಿತ್ಸೆಯ ಆಸ್ಪತ್ರೆ. ಬಹುಶ: ನಿಮಗೆ ನಿಮ್ಮ ಅಣ್ಣನವರ ದೆಸೆಯಿಂದಾಗಿ ಈ ಬಗ್ಗೆ ಅನುಭವ ಇದ್ದುದರಿಂದ ತಿಳಿದುಕೊಂಡಿರಿ ಅನ್ನಿಸುತ್ತದೆ

’ಮನಸಾರೆ’ ಚಿತ್ರದಲ್ಲಿ ಇದನ್ನು ವಿಪರೀತವಾಗಿ ಅವೈಜ್ಞಾನಿಕವಾಗಿ ಅವಾಸ್ತವಿಕವಾಗಿ ತೋರಿಸಿದ್ದರ ಬಗ್ಗೆ ಮಾನಸಿಕ ರೋಗಗಳ ವೈದ್ಯರಾಗಿ ಖ್ಯಾತರಾಗಿರುವ ಡಾ.ಶ್ರೀಧರರು ಬರೆದ ಪತ್ರ ಒಂದು ವಾರದ ಹಿಂದೆ ವಿಜಯಕರ್ನಾಟಕದಲ್ಲಿ ಪ್ರಕಟವಾಗಿತ್ತು. ಆಸಕ್ತಿಯಿದ್ದರೆ ಓದಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on

ಶ್ರೀಕರರೇ,
ಪುನರ್ಜನ್ಮದ ಬಗ್ಗೆ ನೀವು ಒದಗಿಸಿದ ಮಾಹಿತಿಯನ್ನು ನಾವು ಹತ್ತು ಹದಿನೆಂಟು ಜನ್ಮ ಎತ್ತಿ ಬಂದಾದರೂ ಓದಿ ಅರಿಯುವೆವು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

@ ನಗೆಸಾಮ್ರಾಟ್

ಅಸಲು ಮಾತೆಂದರೆ, ಪುನರ್ಜನ್ಮದ ಬಗ್ಗೆ ಕೊಟ್ಟ ಮಾಹಿತಿಯನ್ನು ನಾನೇ ಓದಿಲ್ಲ, ಓದುವ ಇರಾದೆಯೂ ಇಲ್ಲ.
ಪ್ರತಿಕ್ರಿಯಿಸಿದ ಅನೇಕರು ತಲೆ ಕೆಡಿಸಿಕೊಳ್ಳುವ, ಕೆಡಿಸಿಕೊಂಡ ಮಾತು ಗಳನ್ನಾಡಿದ್ದರಿಂದ ಅವರಿಗೆ NIMHANS ನ ದಾರಿ ತೋರಿಸಿದೆ, ಅಷ್ಟೇ! :-)

ಪುನರ್ಜನ್ಮ ಇದೆಯೋ ಇಲ್ಲವೋ, ದೇವರು ಇದ್ದಾರೋ ಇಲ್ಲವೋ,
ಈ ಕಲ್ಪನೆ, concept ಗಳಂತೂ ಬಹಳ ಚೆನ್ನಾಗಿವೆ.

ನಾಯಿ ನೆರಳು ಕಾದಂಬರಿ, ಚಿತ್ರ ಎರಡೂ ಬಹಳ ಚೆನ್ನಾಗಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on

ಓಹೋ ನಮ್ಮನ್ನು ನಿಮ್ಹಾನ್ಸ್ ದಾರಿಗಿಳಿಸುವ ಹುನ್ನಾರವಾಗಿ ಆ ಮಟ್ಟದ ಸಾಮಗ್ರಿಯನ್ನು ಓದಲು ಕೊಟ್ಟಿರೋ!

<<ಪುನರ್ಜನ್ಮ ಇದೆಯೋ ಇಲ್ಲವೋ, ದೇವರು ಇದ್ದಾರೋ ಇಲ್ಲವೋ,
ಈ ಕಲ್ಪನೆ, concept ಗಳಂತೂ ಬಹಳ ಚೆನ್ನಾಗಿವೆ.>>

ಅದನ್ನೊಂದು ಕಲ್ಪನೆ, ಕಾನ್ಸೆಪ್ಟ್ ಎಂದೊಡನೆ ಅದು ಅಸ್ತಿತ್ವದಲ್ಲಿ ಇಲ್ಲ ಎಂದು ಇಂಪ್ಲೈ ಆಗುತ್ತದೆಯಲ್ಲವೇ? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreekar on

<< " ಅದನ್ನೊಂದು ಕಲ್ಪನೆ, ಕಾನ್ಸೆಪ್ಟ್ ಎಂದೊಡನೆ ಅದು ಅಸ್ತಿತ್ವದಲ್ಲಿ ಇಲ್ಲ ಎಂದು ಇಂಪ್ಲೈ ಆಗುತ್ತದೆಯಲ್ಲವೇ? ;) " >>

ಅಸ್ತಿತ್ವದಲ್ಲಿ ಇದೆಯೋ, ಇಲ್ಲವೋ, ಅದು ಈ ಕಲ್ಪನೆ, ನಂಬಿಕೆಗಳ ಮುಂದೆ ಅಮುಖ್ಯ. Faith can move mountains? If you think you can, you can; if you think you can't you can't! :-)

"ಸ್ವಘಟ್ಟಿ ಎಂಬ ಎರಡನೇ ದರ್ಜೆಯ ಲೇವಡಿ ಸರಕೇ" ಸಂಪದಿಗರೊಬ್ಬರ ನಡವಳಿಕೆಯನ್ನೇ ಬದಲಾಯಿಸಬಹುದಾದರೆ ಉಳಿದ 33 + ಕೋಟಿ ದೇವರುಗಳ, ದೇವಪುತ್ರರ ಪ್ರಭಾವ ಎಷ್ಟಿರಬಹುದು? "ಮಾನಸಿಕ ರೋಗಿ" ಗಳ ಆಸ್ಪತ್ರೆಯವರು parapsychology ಬಗ್ಗೆ ಸಂಶೋಧನೆ ಮಾಡುವುದು ಸರಿ ಎನಿಸದೇ? :-)

ಸ್ವಘಟ್ಟಿ ಮಾಡಿದ ಈ ಪ್ರಭಾವ ಯಾವುದು? ಸ್ಪರ್ಧೆಯಲ್ಲಿ ಭಾಗವಹಿಸಿ ಸಾವಿರ ರೂಪಾಯಿಯ, ನಿಮ್ಮಾಯ್ಕೆಯ ಪುಸ್ತಕಗಳನ್ನು ಗೆಲ್ಲಿರಿ. ವಿಜಯ ನಿಮ್ಮದಾಗಲಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.