ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮುರಿದು ಬಿಡು, ಮೌನ!

ಸಖೀ,

"ನೀನೆಂದೂ ಇಂತಿದ್ದವಳಲ್ಲ,
ಸುಮ್ಮನಂತೂ ಇದ್ದವಳೇ ಅಲ್ಲ;
ಏಕೆ ಹೇಳು ಈ ಸುದೀರ್ಘ ಮೌನ?
ಎನ್ನೊಡನೆ ಮಾತಾಡಲೆಳಸದೆ ನಿನ್ನ ಮನ?

ನನ್ನೀ ಒಂಟಿ ಜೀವಕೆ ನಿನ್ನ ಸವಿ ನುಡಿಗಳೇ
ಆಸರೆಯಾಗಿದ್ದವೆಂದು ನೀನು ಬಲ್ಲೆ,
ಆದರೆ, ಇಂದು ಮುನಿಸಿಕೊಂಡು ಮೂಲೆ
ಹಿಡಿದು ತೆಪ್ಪಗೇ ಕುಳಿತು ಬಿಟ್ಟೆಯಲ್ಲೆ?

ಮರಳುಗಾಡಿನಲಿ ಅಪರೂಪಕ್ಕೆ
ಕಂಡು ಬರುವ ಓಯಸಿಸ್‌ನಂತೆ,
ನನ್ನೀ ನಿರ್ಜೀವ ಬಾಳಿನಲಿ ನೀನು
ಜೀವ ತುಂಬೋ ಸಂಜೀವಿನಿಯಂತೆ;

ತಪ್ಪು ನನ್ನದೇನಿಲ್ಲವೆಂಬುದ ಅರಿತು,
ಮುನಿಸ ಮರೆತು, ಮೌನವ ಮುರಿದು ಬಿಡು,
ಹೆಚ್ಚಲ್ಲದಿದ್ದರೂ ಒಂದೆರಡು ಸವಿ ಮಾತ
ನನ್ನೀ ಕಿವಿಗಳಲಿ ಮುದದಿಂದ ಆಡಿ ಬಿಡು;"

ಅಂತ ಹೀಗೆಲ್ಲ ನಾನಿಂದು ಅನ್ನುತಿರುವುದು
ನಿಜವಾಗಿ ಅಲ್ಲ ಸಖೀ, ನಿನ್ನೊಡನೆ,
ಅದೆಲ್ಲಾ, ಈಗ್ಗೆ ಒಂದು ವಾರದಿಂದ ಕೆಟ್ಟು
ತೆಪ್ಪಗಾಗಿರುವ ನನ್ನೀ ಫೋನಿನೊಡನೆ!
*-*-*-*-*-*-*-*-*-*-*-*

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮುರಿದು ಬಿಡು, ಮೌನ!

Chandrashekharss's picture

ಚೆನ್ನಾಗಿದೆ..ಒಳ್ಳೆ ತಿರುವು ಕೊನೆಯಲ್ಲಿ!

:-):-):-):-):-):-):-)

ಹುಡುಗಿರು ಹಾಗೂ ಗ್ರಹಿಣಿಯರೆ...ಕೊನೆಯ ಸಾಲನ್ನು ಬಿಟ್ಟು ಒದಿಕೊಳ್ಳಿ ಖುಶಿಯಾಗಿರ್ತಿರಾ.....

ಉ: ಮುರಿದು ಬಿಡು, ಮೌನ!

bhavanilokesh mandya's picture

ಗ್ರಹಿಣಿಯರಾ .... ? ಯಾರದು ಚಂದ್ರಶೇಖರ್ .....

ಆಸು ಅವರೇ, ಕವನ ಚೆನ್ನಾಗಿದೆ . ಸಸ್ಪೆನ್ಸ್ ಇಟ್ಟಿದ್ದರಿಂದಾಗಿ ಅದಿನ್ನೂ ಸೊಗಸಾಗಿದೆ.

ಉ: ಮುರಿದು ಬಿಡು, ಮೌನ!

Chandrashekharss's picture

<<<ಗ್ರಹಿಣಿಯರಾ .... ? ಯಾರದು ಚಂದ್ರಶೇಖರ್ ..... >>>>>:-(

ಅಂದರೆ ಮದ್ವೆ ಆದ ಹೆಂಗಸರು ಎಂದು ನನ್ನರ್ಥ...ಸರಿಯಾಗೆ ಇದೆ ಅನ್ಸುತ್ತೆ ಭವಾನಿಯವರೆ...ಸುಮ್ನೆ ತಮಾಶೆಗೆ ಅಂದದ್ದು...:-)

ಉ: ಮುರಿದು ಬಿಡು, ಮೌನ!

bhavanilokesh mandya's picture

ಅದು " ಗೃಹಿಣಿ " ಆಗ್ಬೇಕಿತ್ತು ಅಲ್ವಾ .... ಗೃಹಿಣಿಗೆ ಅರ್ಥ ಗೊತ್ತು ಚಂದ್ರ ಅವರೇ...

ಉ: ಮುರಿದು ಬಿಡು, ಮೌನ!

Chandrashekharss's picture

ಕ್ಸಮಿಸಿ ಭವಾನಿ ಯವರೆ....:-)

ಉ: ಮುರಿದು ಬಿಡು, ಮೌನ!

bhavanilokesh mandya's picture

ಕ್ಷಮಿಸಿದ್ದೇನೆ.... ಹೋಗಿ ... :)

ಉ: ಮುರಿದು ಬಿಡು, ಮೌನ!

Chandrashekharss's picture

ಧನ್ಯವಾದ...

<<<<ಕ್ಷಮಿಸಿದ್ದೇನೆ.... ಹೋಗಿ ... >>>>

ಎಲ್ಲಿಗೆ ಹೋಗ್ಲಿರಿ???
ಎಲ್ಲೂ ಹೊಗಲ್ಲಪ್ಪ ಸಂಪದ ಬಿಟ್ಟು...:-)

ಉ: ಮುರಿದು ಬಿಡು, ಮೌನ!

bhavanilokesh mandya's picture

:)

ಉ: ಮುರಿದು ಬಿಡು, ಮೌನ!

asuhegde's picture

ಧನ್ಯವಾದಗಳು ಭವಾನೀ.

ಉ: ಮುರಿದು ಬಿಡು, ಮೌನ!

asuhegde's picture

ಧನ್ಯವಾದಗಳು ಚಂದ್ರಶೇಖರ್.

(ಹಾಗೇ ನಿಮ್ಮ ಹೆಸರಿನಲ್ಲಿರುವ ಮೂರು ಪೂರ್ಣ ವಿರಾಮಗಳಲ್ಲಿ ಒಂದನ್ನು ಎತ್ತಿ ಬಿಸಾಕಿ ಬಿಡಿ - ಚಂದ್ರಶೇಖರ್ ಎಸ್. ಎಸ್. ಸಾಕು)

ಉ: ಮುರಿದು ಬಿಡು, ಮೌನ!

ambika's picture

ಹೆಗ್ಡೆ ಸರ್,
ಭಾರಿ ಮೋಸ. ಏನೋ ಮಡದಿಯನ್ನೇ ಹೊಗಳುತ್ತಿದ್ದೀರೆಂದು ಭಾವಿಸಿ ಖುಷಿ ಪಡುವ ವೇಳೆಗೆ ನಿಮ್ಮ ಮೋಸ ಬಯಲಾಯಿತು. ಕೊನೆಗೆ ಭಾರಿ ಕ್ಲೈಮ್ಯಾಕ್ಸ್ ಬರೆದಿರಿ.(ಮೋಸ ಪದ ಬಳಸಿದ್ದು ತಮಾಷೆಗಾಗಿ)
ಕವನ ಸುಂದರವಾಗಿದೆ. ಧನ್ಯವಾದಗಳು.

ಉ: ಮುರಿದು ಬಿಡು, ಮೌನ!

asuhegde's picture

ಅಂಬಿಕಾ,

ಎರಡು ತಿಂಗಳು ತಡವಾಗಿ ನಿಮ್ಮ ತಮಾಷೆಯ ಮಾತುಗಳನ್ನು ಓದಿದೆ.
ಹಾಗಾಗಿ ನಿಮಗೆ ನನ್ನ ಧನ್ಯವಾದವೂ ಈ ರೀತಿ ತಡವಾಗೆ ಬಂದಿದೆ.
:-)

ಉ: ಮುರಿದು ಬಿಡು, ಮೌನ!

ambika's picture

ತಡವಾಗಿಯಾದರೂ ತೊಂದರೆಯಿಲ್ಲ. ಎಲ್ಲಿ ತಪ್ಪು ಬರೆದಿದ್ದೇನೋ, ಅದಕ್ಕೆಂದೇ ಪ್ರತಿಕ್ರಿಯಿಸಿಲ್ಲವೇನೋ ಎಂಬ ಆತಂಕವನ್ನು ದೂರಮಾಡಿದ್ದೀರಿ.ವಂದನೆಗಳು.(ಅದೇಕೋ ನನ್ನ ಈ ಆತಂಕಪಡುವ ಸ್ವಭಾವವನ್ನು ಬದಲಿಸಿಕೊಳ್ಳಲಾಗುತ್ತಿಲ್ಲ.)

ನಿಮ್ಮ ಇನ್ನೊಂದು ಲೇಖನಕ್ಕೆ ಪ್ರತಿಕ್ರಿಯೆಯೆಂಬಂತೆ ನಿಮ್ಮ ಮಿಂಚಂಚೆಗೆ ಪತ್ರ ಕಳುಹಿಸಿರುತ್ತೇನೆ. ಅದನ್ನೂ ಒಮ್ಮೆ ನೋಡಿಬಿಡಿ.