ಬೂದಿಯಾಗುವವರು!!!
ಸಖೀ,
ಕಂಡಿರಬಹುದು
ನೂರಾರು ಬಗೆಯ
ನಗುವ ಹೂಗಳನು ನೀನು;
ಆದರೆ,
ಆ ನಗೆಯ ಹಿಂದಡಗಿರುವ
ನೋವ ನೀ ಅರಿತಿರುವೆಯೇನು?
ಅವುಗಳೊಳಗೂ ಇವೆ ಬಯಕೆಗಳು,
ಅಸಹಾಯಕತೆಯಿಂದಾಗಿ
ಸುಡುತ್ತಿರುವ ಬೇಗೆಗಳು;
ದೇಗುಲದಿ ಹರಿಯ ಪಾದ
ಸೇರಿ ಮುಕ್ತರೆನಿಸಿಕೊಂಬ
ಬಯಕೆಗಳಿರುವಂತೆಯೇ,
ಮುತ್ತೈದೆಯರ ಮುಡಿಯೇರಿ
ಹೆಮ್ಮೆ ಪಡಬೇಕೆಂಬ
ಬಯಕೆಗಳೂ ಇವೆ.
ಆದರೆ,
ದೇಗುಲವ ಸೇರಿದವುಗಳೆಷ್ಟೋ?
ಶವಗಳ ಜೊತೆ ಸೇರಿ
ಚಿತೆಯೇರಿದವುಗಳೆಷ್ಟೋ?
ರಾಜಕೀಯ ಪುಡಾರಿಗಳ
ಕೊರಳ ಬಳಸಿ,
ಉಸಿರುಗಟ್ಟಿಸಿಕೊಂಡು
ಸತ್ತವುಗಳೆಷ್ಟೋ?
ಮದುವೆ - ಸಮ್ಮಾನ
ಸಮಾರಂಭಗಳಲಿ,
ಜನರ ಕಾಲಡಿಯಲಿ ಬಿದ್ದು
ನರಳಾಡಿದವುಗಳೆಷ್ಟೋ?
ಇನ್ನು, ಇದ್ದಲ್ಲೇ ಇದ್ದು,
ಬಿಸಿಲ ಬೇಗೆಯಲಿ ಉರಿದು
ಬೂದಿಯಾದವುಗಳೆಷ್ಟೋ?
ಅಂತೆಯೇ ನಾವೂ ಕೂಡ,
ನಮ್ಮೆಲ್ಲಾ ಬಯಕೆಗಳ
ಬಚ್ಚಿಟ್ಟುಕೊಂಡು
ನಮ್ಮ ಅಸಹಾಯಕತೆಯಿಂದಾಗಿ
ಒಳಗೊಳಗೆ ನೊಂದು,
ಬಡತನದ ಬೇಗೆಯಲಿ ಬೆಂದು,
ಬೂದಿಯಾಗುವವರೇ
ಮುಂದೊಂದು ದಿನ.
ಆದರೂ, ನೋವ ಮರೆತು
ನಗುತಿರುವ ಆ ಹೂಗಳಂತೆ,
ನಗುತಿರಬಾರದೇ
ನಾವೂ, ದಿನ - ಪ್ರತಿದಿನ?
*-*-*-*-*-*-*-*
- asuhegde's blog
- Login or register to post comments
- 233 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಬೂದಿಯಾಗುವವರು!!!
ಸಕತ್
ಉ: ಬೂದಿಯಾಗುವವರು!!!
ನಿಮ್ಮ ದೃಷ್ಟಿ ತುಂಬಾ ವಿಭಿನ್ನ .ಕವನ ತುಂಬಾ ಚೆನ್ನಾಗಿದೆ
ಉ: ಬೂದಿಯಾಗುವವರು!!!
ಹೌದು ನನಿಗು ಒಂದೆರಡು ದಿನದ ಹಿಂದೆ ಹೀಗೆ ಯೋಚನೆ ಬಂತು ....ಒಂದು ಗಿಡದಲ್ಲಿ ತುಂಬಾ ಗುಲಾಬಿಗಳನ್ನು ನೋಡಿದೆ ಆಗ ಇದೆ ರೀತಿ ನೆನಪಾಯಿತು...ಇಷ್ಟೊಂದ್ ಹೂಗಳಿದೆ ಅದ್ರಲ್ಲಿ ಯಾವ್ ಯಾವ್ ಹೂ ದೇವ್ರಿಗೆ ಅರ್ಪಿತವಾಗುತ್ತೊ,..ಯಾವ ಹೂ ಯಾರ ಮುಡಿಯೇರುತ್ತು..ಯಾವ ಹೂ ಯಾರ ದೇಹವನ್ನು ಸೇರುತ್ತೊ ಯಾವ್ ಹೂ ಬಾಡಿ ಉದುರತ್ತದೆಯೊ ಎಂದು ....ನಮ್ಮ್ ಜೀವನಾನು ಹಾಗೆ ಅಲ್ವ...