July 28, 2010 - 3:10pm
ಸತ್ಯವನ್ನಾಡಿ
ನೀನೆನ್ನ
ನೋಯಿಸಿದರೂ
ಪರವಾಗಿಲ್ಲ,
ಸುಳ್ಳು
ಮಾತುಗಳಿಂದ
ರಮಿಸದಿರು
ಸಖಿ!
ನನ್ನ
ಮಾತುಗಳ
ನೀ ಸುಳ್ಳೆಂದರೂ
ಪರವಾಗಿಲ್ಲ,
ಅನ್ಯರನು ನಂಬಿ
ನೀನು ಮೋಸ
ಹೋಗದಿರು
ಸಖಿ!
ನನ್ನ ನೋವಿಗೆ
ನೀನು
ಮರುಗದಿದ್ದರೂ
ಪರವಾಗಿಲ್ಲ,
ನಿನ್ನ ಮನದ
ನೋವುಗಳ ನನ್ನಿಂದ
ಮುಚ್ಚಿಡದಿರು
ಸಖಿ!
********
ಆತ್ರಾಡಿ ಸುರೇಶ ಹೆಗ್ಡೆ
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಆದರೂ ಪರವಾಗಿಲ್ಲ...
ಕವನ ಚೆನ್ನಾಗಿದೆ. ಬರೀ ಒಂದೊಂದೆ ಪದಗಳಲ್ಲೂ ಬರೆಯಬಹುದು ಎಂದು ಅರಿತೆ.
ಉ: ಆದರೂ ಪರವಾಗಿಲ್ಲ...
ಸಖಿಯ ಮೂಲಕ ನೀಡುತ್ತಿರುವ ಸ೦ದೇಶ ಸೊಗಸಾಗಿದೆ ಹಾಗೂ ಬಾಳಿನ ದಾರಿದೀಪವಾಗಿದೆ.
ನಮಸ್ಕಾರಗಳೊ೦ದಿಗೆ,
ಉ: ಆದರೂ ಪರವಾಗಿಲ್ಲ...
ಅರ್ಥ ಗರ್ಭಿತ ಕವನ
ಉ: ಆದರೂ ಪರವಾಗಿಲ್ಲ...
ಆಸು ಹೆಗ್ಡೆಯವರಿಗೆ ವಂದನೆಗಳು.
ಸುಂದರ ಕವನದ ಮೂಲಕ ಸಖಿಯೆದುರು ಅಂತರಂಗದ ಭಾವನೆಯ ಬಿಚ್ಚಿಟ್ಟ ತಮ್ಮ ಶೈಲಿ ಇಷ್ಟವಾಯಿತು.
ಉ: ಆದರೂ ಪರವಾಗಿಲ್ಲ...
ಉತ್ತಮ ಅನಿಸಿಕೆ.
ಉ: ಆದರೂ ಪರವಾಗಿಲ್ಲ...
ಸುಂದರ ಕವಿತೆ.
ಉ: ಆದರೂ ಪರವಾಗಿಲ್ಲ...
ಸುಳ್ಳು
ಮಾತುಗಳಿಂದ
ರಮಿಸದಿರು
ಸಖಿ!
ನಿನ್ನ ಮನದ
ನೋವುಗಳ ನನ್ನಿಂದ
ಮುಚ್ಚಿಡದಿರು
ಸಖಿ!
ಅನ್ಯರನು ನಂಬಿ
ನೀನು ಮೋಸ
ಹೋಗದಿರು
ಸಖಿ!
---------------------
ಅಸು- ಹೆಗ್ಡೆ ಅವ್ರೆ-
ಏನಿವಾಗ - ಈ ನಡುವೆ ಸಂಪದದಲ್ಲಿ ಕಾಣಿಸುತ್ತಲೇ ಇಲ್ಲ?
ಸಂಪದಕ್ಕೆ ಶೀಘ್ರ ಮರಳಿ -
ನಿಮ್ಮ ಅರ್ಥಪೂರ್ಣ ಚುಟುಕವನಗಳಿಗಾಗಿ ನಾ ಎದುರು ನೋಡುತ್ತಿರುವೆ....
ಸಖಿಗೆ ಹಿತೋಪದೇಶ ಮಾಡುತ್ತಾ ಸಖ ತೋರುತ್ತಿರ್ವ ಕಾಳಜಿ
ಇಡೀ ಕವನದ ಸಾಲುಗಳಲ್ಲಿ ಸಖಿಯನ್ನ ಉದ್ದೇಶಿಸಿ ಹೇಳಿದ ಮಾತುಗಳಲಿ ವ್ಯಕ್ತವಾಗಿದೆ...
ನಂಗೆ ಕವನದ ಆಪ್ತತೆ ಹಿಡಿಸಿತು...
ಪ್ರತಿಕ್ರಿಯೆಗಳೂ ಓದಿದೆ...
ಮುದ ನೀಡಿದವು...
>>>>> ಯಾವುದಕ್ಕೂ ಈಗಲೇ ಹೇಳಿ ಬಿಡುವೆ...???
************ಯುಗಾದಿಯ ಶುಭಾಶಯಗಳು ************
ಶುಭವಾಗಲಿ