ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಲೇಖಕರು

asuhegde's picture

ಪೂರ್ಣ ಹೆಸರು
ಆತ್ರಾಡಿ ಸುರೇಶ ಹೆಗ್ಡೆ

ಪರಿಚಯ

ಇಲ್ಲಿ ನನ್ನ ಬರಹಗಳೇ ನೀಡಲಿ ಪರಿಚಯ,
ಆಸುಮನದಲ್ಲಿದೆ ನನ್ನ ಪೂರ್ಣ ಪರಿಚಯ;

ಆಸುಮನ (http://athradi.wordp...);

ನಾವು ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು,
ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು.

ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

ಸಖಿ, ನಂಬುಗೆಯೇ ದೀವಿಗೆಯು, ನಿನ್ನ ಆತ್ಮಬಲವು,
ಇರಲಿ ನಿನ್ನ ಬೆಂಬಲಕೆ ಸದಾ ನಿನ್ನೊಳಗಿನ ಛಲವು,


ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು,
ಎಷ್ಟೇ ಬಿಗಿಯಾಗಿ ಇದ್ದರೂ ನಿನ್ನ ಕೈಯ ಹಿಡಿತವು,


ಎದ್ದು ನಡೆ, ನೀ ಒದ್ದು ನಡೆ, ಬಂಧನದ ಗೋಡೆಗಳ,
ಸದಾ ತೆರೆದಿಟ್ಟುಕೊಂಡಿರು ನಿನ್ನ ಈ ಕಣ್ಣು ಕಿವಿಗಳ,


ಆತ್ಮಕ್ಕೆ ಪರಮಾತ್ಮನ ಆಸರೆಯೊಂದೇ ಶಾಶ್ವತವು,
ಪರಮಾತ್ಮ ಹೊರಗಿಲ್ಲ ಬೇಕು ಇದನರಿವ ಮನವು,


ಇಲ್ಲಿ ಸಿಕ್ಕ ಸಿಕ್ಕವರೆಲ್ಲಾ ತೋರಬಹುದು ಅನುಕಂಪ,
ಮಧುರ ಮಾತುಗಳಿಂದ ನಿನ್ನ ಮನಕೆ ನೀಡಿ ತಂಪ,


ನಿನ್ನ ಬುದ್ದಿಯು ಚಂಚಲ ಮನಸಿನ ಬಂಧಿ ಆಗದಿರಲಿ,
ಆ ಮನಸ್ಸು ಸದಾ ಇರಲಿ ನಿನ್ನ ಬುದ್ಧಿಯ ಹಿಡಿತದಲಿ,


ತಪ್ಪು ಒಪ್ಪುಗಳ ವಿಮರ್ಶಾ ಶಕ್ತಿಯು ಬೆಳೆಯುತಿರಲಿ,
ಅದಕ್ಕಾಗಿ ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ,


ಬುದ್ಧಿಯನು ಒರೆಗೆ ಹಚ್ಚುವ ವಿಚಾರ ವಿನಿಮಯ ಬೇಕು,
ಜ್ಞಾನಾರ್ಜನೆಯೂ ಈ ಜೀವನದ ಗುರಿ ಆಗಿದ್ದರೆ ಸಾಕು!
***************
ಆತ್ರಾಡಿ ಸುರೇಶ ಹೆಗ್ಡೆ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸದಾ ಸದ್ಗ್ರಂಥ ಸಜ್ಜನರ ಸಾಮಿಪ್ಯವಿರಲಿ!

ksraghavendranavada's picture

ಸು೦ದರ ಹಾಗೂ ಅನುಸರಿಸಬೇಕಾದ ಆಸುಮನದ ಮಾತುಗಳು. ಆಸುಮನಕ್ಕೊ೦ದು ನಮನ.
ನಮಸ್ಕಾರಗಳೊ೦ದಿಗೆ,

ಉ: ಸದಾ ಸದ್ಗ್ರಂಥ ಸಜ್ಜನರ ಸಾಮಿಪ್ಯವಿರಲಿ!

asuhegde's picture

ಓದುಗನ ಮನವ ತಟ್ಟಿ ಉಂಟುಮಾಡಿದರೆ ಸ್ಪಂದನ
ನಾನೇ ಸಲ್ಲಿಸುವೆ ನನ್ನ ಮಾತುಗಳಿಗೆ ನನ್ನ ನಮನ
ಧನ್ಯವಾದಗಳು
- ಆಸು

ಉ: ಸದಾ ಸದ್ಗ್ರಂಥ ಸಜ್ಜನರ ಸಾಮಿಪ್ಯವಿರಲಿ!

ಭಾಗ್ವತ's picture

ಅನುಕರಣೀಯವಾದ ಮನದ ಮಾತುಗಳನ್ನು ಕವನ ರೂಪದಲ್ಲಿಟ್ಟ ನಿಮಗೆ ವಂದನೆಗಳು.

ಉ: ಸದಾ ಸದ್ಗ್ರಂಥ ಸಜ್ಜನರ ಸಾಮಿಪ್ಯವಿರಲಿ!

Harish Athreya's picture

ಆತ್ಮೀಯ
ಏತಕೋ ಈ ಸಾಲುಗಳು ನೆನಪುಗೆ ಬ೦ದವು
ಆತ್ಮಾಮೇ ಶುಧ್ಯ೦ತಾ೦ ಜ್ಯೋತಿರಹ೦ ವಿರಜಾ ವಿಪಾತ್ಮಾ ಭೂಯಾಸ೦||
ನಿಮ್ಮ ಕವನದ ಪ್ರತಿಯೊ೦ದು ಸಾಲುಗಳು ಕಾಡುತ್ತೆ .
ಹರಿ

ಉ: ಸದಾ ಸದ್ಗ್ರಂಥ ಸಜ್ಜನರ ಸಾಮಿಪ್ಯವಿರಲಿ!

asuhegde's picture

ಹರೀಶ್,
ನನ್ನ ಸಂಸ್ಕೃತ ಜ್ಞಾನ ಇಲ್ಲವೆನ್ನುವಷ್ಟು ಕಡಿಮೆ.
ಹಾಗಾಗಿ ದಯವಿಟ್ಟು ಅದರ ಅರ್ಥವನ್ನು ಬರೆಯುವ ಕೃಪೆತೋರುತ್ತೀರಾ?

ಬಹಳ ಪ್ರಯತ್ನ ಮಾಡಿದ ನಂತರ ಈ ಬೇಡಿಕೆ ಇಡುತ್ತಿದ್ದೇನೆ.

<<ನಿಮ್ಮ ಕವನದ ಪ್ರತಿಯೊ೦ದು ಸಾಲುಗಳು ಕಾಡುತ್ತೆ >>

ಪ್ರತಿಯೊಂದು - ಬಹುವಚನ ಆಗಲಾರದು,

"ಪ್ರತಿಯೊಂದು ಸಾಲೂ ಕಾಡುತ್ತದೆ".

ಉ: ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

manju787's picture

ಸುರೇಶ್, ನಿಮ್ಮ ಕವನ ಓದಿದ ನ೦ತರ ನನಗೆ ಏನೆ೦ದು ಪ್ರತಿಕ್ರಿಯಿಸಬೇಕೆ೦ದೇ ಗೊತ್ತಾಗುತ್ತಿಲ್ಲ, ಪ್ರತಿಯೊ೦ದು ಸಾಲನ್ನೂ ಮತ್ತೊಮ್ಮೆ, ಮಗದೊಮ್ಮೆ ಓದಬೇಕು ಅನ್ನಿಸುವಷ್ಟು ಅರ್ಥಗರ್ಭಿತವಾಗಿದೆ.

ಉ: ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

gopaljsr's picture

ಸುಂದರ ಕವಿತೆ

ಉ: ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

gopinatha's picture

ಅರ್ಥವತ್ತಾದ ಸುಂದರ ನುಡಿಗಳ ಸಾಲು

ಉ: ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!

asuhegde's picture

ಪ್ರತಿಕ್ರಿಯಿಸಿದ ಎಲ್ಲ ಸಜ್ಜನರಿಗೂ ಅಭಿವಂದನೆಗಳು!

- ಆಸು.