June 29, 2010 - 12:12pm
ಸಖೀ,
ನಿನಗಾಗಿ ನಾನು
ನನ್ನತನವನೇ
ತೊರೆಯಬಹುದು,
ಆರಾಮ-ಆಹಾರ
ಎರಡನ್ನೂ ಬಿಡಬಹುದು,
ನೀ ಕುಡಿಸಿದರೆ
ನಾ ವಿಷವನ್ನೇ
ಕುಡಿಯಬಹುದು,
ನೀ ಮರೆಯಾಗೆಂದರೆ
ಈ ಜಗವನೇ ತೊರೆದು
ಕಣ್ಮರೆಯಾಗಬಹುದು,
ಆದರೆ,
ಗೆಳೆಯಾ, ನೀ ತೊರೆದು ಬಿಡು,
ನನ್ನ ನೀ ಮರೆತು ಬಿಡು ಎಂದರೆ,
ನನ್ನಿಂದಾಗದು,
ನಿನ್ನ ನಾ ತೊರೆಯಲಾಗದು
ಎಂದಿಗೂ ಮರೆಯಲಾಗದು!
*-*-*-*-*-*-*-*
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮರೆಯಲಾಗದು ನಿನ್ನ!
ಸರ್ ಚೆನ್ನಾಗಿದೆ....ಮನಸ್ಸಿಗೆ ಹತ್ತಿರವಾದ ಸಾಲುಗಳು........
ಉ: ಮರೆಯಲಾಗದು ನಿನ್ನ!
ಪವಿತ್ರಾ,
<<ಮನಸ್ಸಿಗೆ ಹತ್ತಿರವಾದ ಸಾಲುಗಳು>>
ಮನಸ್ಸುಗಳ ಹತ್ತಿರವಾಗಿಸುವ ಸಾಲುಗಳೂ...!
ಧನ್ಯವಾದಗಳು
- ಆಸು
ಉ: ಮರೆಯಲಾಗದು ನಿನ್ನ!
ಪ್ರೀತಿ ಕಷ್ಟ ಕಷ್ಟ
ಉ: ಮರೆಯಲಾಗದು ನಿನ್ನ!
ನನಗದು ಇಷ್ಟ ಇಷ್ಟ
:)
ಉ: ಮರೆಯಲಾಗದು ನಿನ್ನ!
ನೀ ನನ್ನ ತೊರೆದರೂ ನಾ ನಿನ್ನ ತೊರೆಯೆನೆಂಬುದೇ/ತೊರೆಯಲಾರೆನೆಂಬುದೇ ಪ್ರೀತಿ! ಚೆನ್ನಾಗಿದೆ, ಸುರೇಶರೇ.
ಉ: ಮರೆಯಲಾಗದು ನಿನ್ನ!
ಅದೇ ಅಲ್ವೇ ಪ್ರೀತಿ ಅಂದ್ರೆ?
ಧನ್ಯವಾದಗಳು.
ಉ: ಮರೆಯಲಾಗದು ನಿನ್ನ!
ಆತ್ಮೀಯ
ನಿಜ ಸರ್ ಹಿ೦ಸೆ ಕೊಡ್ಬೇಕು, ಸಾಯಿಸ್ಬೇಕು ಅ೦ದ್ರೆ ವಿಷ ಕೊಡ್ಬೇಕಿಲ್ಲ ನೀನ್ ಬೇಡಹೋಗ ಅನ್ನೋ ಒ೦ದು ಮಾತು ಸಾಕು
ಚೆನ್ನಾಗಿದೆ ಚೆನ್ನಾಗಿದೆ…
ಗೆಳತಿ
ನೀ ತೊರೆದು ಹೋಗೆನ್ನುವ ಮೊದಲು
ನನ್ನನ್ನೊಮ್ಮೆ ನೋಡು
ನಿನ್ನ ಪ್ರತಿಬಿ೦ಬ ನನ್ನ ಕಣ್ಣ ಹನಿಯಲಿ ಕಾಣುವೆ
ನೀ ಮರೆತುಹೋಗೆನ್ನುವ ಬದಲು
ನನ್ನನ್ನೊಮ್ಮೆ ಕೊ೦ದುಬಿಡು
ಉಸಿರುನಿ೦ತ ದೇಹದಲಿ ನನ್ನ ಪ್ರೀತಿ ಕಾಣುವೆ
ಹರಿ
ಉ: ಮರೆಯಲಾಗದು ನಿನ್ನ!
:)
ಉ: ಮರೆಯಲಾಗದು ನಿನ್ನ!
ಪ್ರೀತಿಯ ಬಗ್ಗೆ ತುಂಬಾ ಉತ್ತಮವಾದ ಸಾಲುಗಳು ಚೆನ್ನಾಗಿದೆ ಧನ್ಯವಾದಗಳು.
ವಸಂತ್