ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಲೇಖಕರು

asuhegde's picture

ಪೂರ್ಣ ಹೆಸರು
ಆತ್ರಾಡಿ ಸುರೇಶ ಹೆಗ್ಡೆ

ಪರಿಚಯ

ಇಲ್ಲಿ ನನ್ನ ಬರಹಗಳೇ ನೀಡಲಿ ಪರಿಚಯ,
ಆಸುಮನದಲ್ಲಿದೆ ನನ್ನ ಪೂರ್ಣ ಪರಿಚಯ;

ಆಸುಮನ (http://athradi.wordp...);

ನಾವು ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು,
ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು.

ಮಗೂ, ಅಂದು ನಾ ದಾರಿ ಬಿಡುವೆ!

"ನಿನ್ನ ಮೋಹದಿ ನನ್ನ ಬಂಧಿಸಿ
ಈ ಕತ್ತಲಲಿ ಕೂರಿಸದಿರು
ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು"


"ಸುಳ್ಳಲ್ಲ ಮಗು ನಿನ್ನ ಮಾತು
ಅಪ್ಪಂದಿರ ಆಂತರಿಕ ಆತಂಕ
ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು


ಮಗೂ ಸ್ವಾತಂತ್ರ್ಯ ಬೇಕು
ಸ್ವತಂತ್ರರಿಗೂ ಬೇಲಿ ಬೇಕು
ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು


ಎಲ್ಲವನೂ ಹರಿದೊಗೆದು
ಒದ್ದು ನಡೆದರೆ ಮುಂದೆ
ಸಮಾಜದ ಮುಂದೆ ಬತ್ತಲಾಗಿ ನಿಲಬೇಕು


ನಿನ್ನ ಅರಿವಿನ ಮಟ್ಟ
ನೀನರಿತದ್ದೇ ಅಲ್ಲ ಈ ಅಪ್ಪನೂ
ಅರಿಯಬೇಕು ಅರಿತಂದು ನಿನಗೀತ ದಾರಿ ಬಿಡಬೇಕು"
****************
ಆತ್ರಾಡಿ ಸುರೇಶ ಹೆಗ್ಡೆ



 

Your rating: None Average: 4.5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಗೂ, ಅಂದು ನಾ ದಾರಿ ಬಿಡುವೆ!

gopinatha's picture

ಹೆಗಡೆಯವರೇ
ಒಳ್ಳೆ ಅಂತರೀಕ ಮದ್ದು ಕೊಟ್ಟಿರಿ ತಂದೆಯವರಿಗೆ

ಉ: ಮಗೂ, ಅಂದು ನಾ ದಾರಿ ಬಿಡುವೆ!

asuhegde's picture

ಇದು ಬೆಳೆದು ನಿಂತ ಮಗಳಪ್ಪನ ಮನದ ಕೂಗು...

:)

ಧನ್ಯವಾದಗಳು, ಗೋಪೀನಾಥ್
- ಆಸು

ಉ: ಮಗೂ, ಅಂದು ನಾ ದಾರಿ ಬಿಡುವೆ!

kamalap09's picture

ನಮಸ್ಕಾರ ಸುರೇಶ್ ಅವರಿಗೆ,

ಒಂದಕ್ಕಿಂತ ಒಂದು ಅಂತಾರಲ್ಲ ಹಾಗೆ ಎಲ್ಲ ಸಾಲುಗಳು ಅರ್ಥಗರ್ಭಿತವಾಗಿದೆ.

"ನಿನ್ನ ಮೋಹದಿ ನನ್ನ ಬಂಧಿಸಿ
ಈ ಕತ್ತಲಲಿ ಕೂರಿಸದಿರು
ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು" -

ಈ ಮೇಲಿನ ಸಾಲುಗಳನ್ನು ಓದಿ ಇತ್ತೀಚೆಗೆ ಟಿ.ವಿ ೯ ಚಾನೆಲ್ ನಲ್ಲಿ ತೋರಿಸುತ್ತಿದ್ದರು. ಎರಡು ವರ್ಷದ ಹಿಂದೆ ಒಬ್ಬ ತಾಯಿ ಮಗುವನ್ನು ಹೆತ್ತು (ಯಾವ ಕಾರಣಕ್ಕಾಗಿಯೋ ಗೊತ್ತಿಲ್ಲ) ಆಸ್ಪತ್ರೆಯಲ್ಲೆ ಬಿಟ್ಟು, ಆ ಆಸ್ಪತ್ರೆಯವರು ಎರಡು ವರ್ಷದಿಂದ ಒಂದು ಕೋಣೆಯಲ್ಲೆ ಕೂಡಿಟ್ಟಿದ್ದರು. ಆ ಮಗು ಬೆಳಕನ್ನೇ ನೋಡಿರಲಿಲ್ವಂತೆ.

ಕಮಲ

ಉ: ಮಗೂ, ಅಂದು ನಾ ದಾರಿ ಬಿಡುವೆ!

asuhegde's picture

ಬೇಡೀಕೆಗಳು ನ್ಯಾಯ ಸಮ್ಮತವೇನೋ ಸರಿ
ಆದರೆ ನಿನ್ನ ಅಪ್ಪನ ಮನದ ದುಗುಡವನ್ನೂ ಅರಿ

ಎನ್ನುವುದೇ ಬೆಳೆದು ನಿಂತ ಮಗಳಪ್ಪನ ಮನದ ಮಾತು, ಅಲ್ಲವೇ ಕಮಲ?

ಧನ್ಯವಾದಗಳು ನಿಮಗೂ.

- ಆಸು.

ಉ: ಮಗೂ, ಅಂದು ನಾ ದಾರಿ ಬಿಡುವೆ!

sudhichadaga's picture

ಗುರುಗಳೇ, ಮಧು ಅವರ ಕವನಕ್ಕೆ ಉತ್ತರ ಚೆನ್ನಾಗಿದೆ.
ನನಗೆ ಇಷ್ಟವಾದ ಸಾಲುಗಳು...
<<ಎಲ್ಲವನೂ ಹರಿದೊಗೆದು
ಒದ್ದು ನಡೆದರೆ ಮುಂದೆ
ಸಮಾಜದ ಮುಂದೆ ಬತ್ತಲಾಗಿ ನಿಲಬೇಕು>>

ಉ: ಮಗೂ, ಅಂದು ನಾ ದಾರಿ ಬಿಡುವೆ!

asuhegde's picture

ನನ್ನ ಮಗಳೇ ನನ್ಮುಂದೆ ನಿಂತು ಬೇಡಿಕೆ ಇಟ್ಟಂತಾಯ್ತು
ಹಾಗಾಗಿ ನನ್ನ ಮನದ ಮಾತನ್ನೇ ಬರೆಯಬೇಕಾಯ್ತು

ಧನ್ಯವಾದಗಳು ಸುಧೀಂದ್ರ.

- ಆಸು