ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಆತ್ರಾಡಿ ಸುರೇಶ ಹೆಗ್ಡೆ
ಪರಿಚಯ
ಇಲ್ಲಿ ನನ್ನ ಬರಹಗಳೇ ನೀಡಲಿ ಪರಿಚಯ,
ಆಸುಮನದಲ್ಲಿದೆ ನನ್ನ ಪೂರ್ಣ ಪರಿಚಯ;
ಆಸುಮನ (http://athradi.wordp...);
ನಾವು ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು,
ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು.
ಹೆಮ್ಮಕ್ಕಳ ಹರಸೋಣ!!!
ಇಂದು ಹೊಸ ದಿನ
ಇಂದು ಹೊಸ ತಿಂಗಳು
ಇಂದು ಹೊಸ ವಿಚಾರ ಬರಲಿ
ಇಂದು ಮನಕೆ ಹೊಸ ತಿನಿಸು ಸಿಗಲಿ
ಹಳಸಲು ವಿಚಾರ ಹಳಸಲು ತಿಂಡಿಯ ಮೆಲುಕು
ಹಾಕಿ ಕಳೆದಾಯ್ತು ಆ ಆರನೆಯ ತಿಂಗಳು
ಈ ವರುಷವೂ ಹಳತಾಗುವ ಮೊದಲು
ಈ ವರುಷವೂ ಹಳಸಲಾಗುವ ಮೊದಲು
ಹೆಮ್ಮಕ್ಕಳ ಈ ದಿನದಂದು ನಾವೆಲ್ಲಾ
ಹೆಮ್ಮಕ್ಕಳ ಹರಸೋಣ
ಹೆಮ್ಮಕ್ಕಳನು ಪಡೆದ ಹೆಮ್ಮೆಯ
ಮಾತಾಪಿತರನು ಸಂಪದಿಗರೆಲ್ಲಾ ಸೇರಿ
ಅಭಿನಂದಿಸೋಣ!!!
"ಇದು ಯಾವುದೋ ಪಾಶ್ಚಾತ್ಯ ಆಚರಣೆಯ ನಕಲು ಮಾಡುವುದಕ್ಕಷ್ಟೇ ಅಲ್ಲ
ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ನಾವದನು ಅನುಸರಿಸಬಹುದಲ್ಲಾ?"
- asuhegde's blog
- Login or register to post comments
- 472 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹೆಮ್ಮಕ್ಕಳ ಹರಸೋಣ!!!
ಆತ್ಮೀಯ
ಹೆಮ್ಮೆಯ ಮಕ್ಕಳಿಗೂ ಶುಭವಾಗಲಿ
ಅವರ ಹೆತ್ತವರಿಗೊ೦ದು ಅಭಿನ೦ದನೆ
ಹರೀಶ ಆತ್ರೇಯ
ಉ: ಹೆಮ್ಮಕ್ಕಳ ಹರಸೋಣ!!!
ನಿಮ್ಮ ಆಶೀರ್ವಾದಕ್ಕೆ ನನ್ನ ಧನ್ಯವಾದಗಳು....ಹೆಗ್ಡೆಯವರೆ
ಉ: ಹೆಮ್ಮಕ್ಕಳ ಹರಸೋಣ!!!
>>>"ಒಳ್ಳೆಯದು ಯಾವ ದಿಕ್ಕಿನಿಂದ ಬಂದರೂ ನಾವದನು ಅನುಸರಿಸಬಹುದಲ್ಲಾ?"<<<
ನಿಮ್ಮ ಈ ಮಾತಿಗೆ ಎರಡು ಮಾತಿಲ್ಲ.
ನಿಮ್ಮ ಹಾರೈಕೆ ನಮ್ಮನ್ನು ತಲಪಿದೆ. ಅನಂತಾನಂತ ಧನ್ಯವಾದಗಳು.
ಎರಡು ಅರ್ಥವೇ ಈ ಪದಕ್ಕೆ ? ಹೆಮ್ಮೆಯ ಮಕ್ಕಳು, ಹೆಣ್ಣು ಮಕ್ಕಳು. ಸರಿಯಾದ ಅರ್ಥ ಯಾವುದು ?
ನನಗೆ ತಿಳಿದಂತೆ ಹೆಣ್ಣು ಮಕ್ಕಳು ಎಂಬುದು ಸರಿ. ಆದರೆ ಹೆಮ್ಮೆಯ ಮಕ್ಕಳು ಅಂದರೆ ತಪ್ಪಿಲ್ಲ. ನಿಮ್ಮ ಅಭಿಪ್ರಾಯ ?
ಇದರೊಂದಿಗೆ ನನ್ನದೊಂದು ಹಾರೈಕೆ ಸಂಪದಿಗರಿಗೆ, (ನಿಮಗೂ)
ಉ: ಹೆಮ್ಮಕ್ಕಳ ಹರಸೋಣ!!!
ಅಂಬಿಕಾ,
ಹೆಣ್ಣು ಮಕ್ಕಳಿಗೆ ಹೆಮ್ಮಕ್ಕಳು ಎನ್ನಲೂ ಬಹುದು ಎನ್ನುವುದು ನನ್ನ ಅನಿಸಿಕೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಹೆಮ್ಮಕ್ಕಳ ಹರಸೋಣ!!!
ಆತ್ಮೀಯ
ಹೆಣ್ನುಮಕ್ಕಳ ಹೆಮ್ಮೆಯ ಮಕ್ಕಳೂ ಹೌದು ಹೆಮ್ಮೆಯ ಮಕ್ಕಳು ಅ೦ದರೇನೇ ಸರಿ ಅನ್ಸುತ್ತೆ. (ಹಿರುದು ಮಗು--- ಹೆಮ್ಮಗು ಹಾಗೂ ಅನ್ನಬಹುದು ಹಿರಿದು ದೊಡ್ಡ (ಮನಸಿನ) ಎ೦ಬರ್ಥದಲ್ಲಿ)
ಹರೀಶ ಆತ್ರೇಯ
ಉ: ಹೆಮ್ಮಕ್ಕಳ ಹರಸೋಣ!!!
ಅರ್ಥ ವಿವರಣೆಗೆ ನನ್ನಿ
ಉ: ಹೆಮ್ಮಕ್ಕಳ ಹರಸೋಣ!!!
>>ಹೆಮ್ಮಕ್ಕಳ ಈ ದಿನದಂದು ನಾವೆಲ್ಲಾ
ಹೆಮ್ಮಕ್ಕಳ ಹರಸೋಣ
ಗಂಡು ಮಕ್ಕಳ ದಿನ ಯಾವಾಗ?
-ಅನಿಲ್
ಉ: ಹೆಮ್ಮಕ್ಕಳ ಹರಸೋಣ!!!
ಉಳಿದ ೩೬೪ (೩೬೫) ದಿನಗಳು ಆಗಿರಬಹುದೇ...?
:)
ಉ: ಹೆಮ್ಮಕ್ಕಳ ಹರಸೋಣ!!!
ಹೀಗೆ, 'ಹೆಣ್ಣು ಮಕ್ಕಳ ದಿನ', 'ಗಂಡು ಮಕ್ಕಳ ದಿನ', 'ಅಮ್ಮಂದಿರ ದಿನ', 'ಅಪ್ಪಂದಿರ ದಿನ', ಇತ್ಯಾದಿ... ಅಂತ ವರ್ಷದ ಒಂದು ದಿನಕ್ಕೆ ಮಾತ್ರ ಮೀಸಲಿಡಬಾರದು.
-ಅನಿಲ್
ಉ: ಹೆಮ್ಮಕ್ಕಳ ಹರಸೋಣ!!!
<<ಹೀಗೆ, 'ಹೆಣ್ಣು ಮಕ್ಕಳ ದಿನ', 'ಗಂಡು ಮಕ್ಕಳ ದಿನ', 'ಅಮ್ಮಂದಿರ ದಿನ', 'ಅಪ್ಪಂದಿರ ದಿನ', ಇತ್ಯಾದಿ... ಅಂತ ವರ್ಷದ ಒಂದು ದಿನಕ್ಕೆ ಮಾತ್ರ ಮೀಸಲಿಡಬಾರದು>>
ಒಪ್ಪುವಂತ ಮಾತಾದರು , ಈ ರೀತಿ ವರ್ಷದ ಒಂದೂ ದಿನ ಆಚರಿಸುವ ಬಹಳ ದಿನಗಳಿವೆ .
ಅಂದಹಾಗೆ ಕವನ ಚೆನ್ನಾಗಿದೆ ಗುರುಗಳೇ (ಸರ್ ).
ಉ: ಹೆಮ್ಮಕ್ಕಳ ಹರಸೋಣ!!!
>>ಈ ರೀತಿ ವರ್ಷದ ಒಂದು ದಿನ ಆಚರಿಸುವ ಬಹಳ ದಿನಗಳಿವೆ .
ಗೊತ್ತು.
ಅದಕ್ಕೇ ಇತ್ಯಾದಿ ಅಂತ ಕೊನೆಯಲ್ಲಿ ಸೇರಿಸಿದ್ದು.
ಆಗ ನೆನಪಾದ ದಿನಗಳನ್ನು ಬರೆದೆ.
-ಅನಿಲ್
ಉ: ಹೆಮ್ಮಕ್ಕಳ ಹರಸೋಣ!!!
ಮೀಸಲು ಕೊಡದಿದ್ದರೆ ಮುಷ್ಕರ ಹೂಡಿ ಬಿಡುತ್ತಾರೆ ಅಣ್ಣ ;) (ತಮಾಷೆಗೆ )
ಇಂತಿ
ವಿನಯ
ಉ: ಹೆಮ್ಮಕ್ಕಳ ಹರಸೋಣ!!!
>>ಮೀಸಲು ಕೊಡದಿದ್ದರೆ ಮುಷ್ಕರ ಹೂಡಿ ಬಿಡುತ್ತಾರೆ ಅಣ್ಣ Eye-wink (ತಮಾಷೆಗೆ )
ತಮಾಷೆಗೆ ತಾನೇ ಮುಷ್ಕರ ಮಾಡೋದು? ಸೀರಿಯಸ್ಸಾಗಿ ಮುಷ್ಕರ ಮಾಡೋದಿಲ್ವಲ್ಲ... :)
-ಅನಿಲ್
ಉ: ಹೆಮ್ಮಕ್ಕಳ ಹರಸೋಣ!!!
<<ತಮಾಷೆಗೆ ತಾನೇ ಮುಷ್ಕರ ಮಾಡೋದು? ಸೀರಿಯಸ್ಸಾಗಿ ಮುಷ್ಕರ ಮಾಡೋದಿಲ್ವಲ್ಲ>>
ನೀವು ಬಹಳ ತಮಾಷೆ ಮಾಡ್ತಿರ ಬಿಡಿ ;)
ಉ: ಹೆಮ್ಮಕ್ಕಳ ಹರಸೋಣ!!!
>>ನೀವು ಬಹಳ ತಮಾಷೆ ಮಾಡ್ತಿರ ಬಿಡಿ
ತಮಾಷೆ ಮಾಡೋದು ಬಿಡಕ್ ಆಗಲ್ಲ.
ಅನಿಲ್
ಉ: ಹೆಮ್ಮಕ್ಕಳ ಹರಸೋಣ!!!
<<ತಮಾಷೆ ಮಾಡೋದು ಬಿಡಕ್ ಆಗಲ್ಲ>>
ಏನಿದು ಭಯಾನಕ ರಹಸ್ಯ ಹೀಗೆ ಎಲ್ಲರ ಮುಂದೆ ಹೇಳಿಬಿಡೋದೇ ;)
ಮತ್ತಿನ್ಯಾರದ್ರು ತಮಾಷೆ ಮಾಡಿ ಬಿಟ್ರೆ :)
ಉ: ಹೆಮ್ಮಕ್ಕಳ ಹರಸೋಣ!!!
ವಿಷಯಾಂತರ ಮಾಡಿದ್ದು ಸಾಕು. ಇದನ್ನು ಇಲ್ಲೇ ನಿಲ್ಲಿಸೋಣ.
-ಅನಿಲ್
ಉ: ಹೆಮ್ಮಕ್ಕಳ ಹರಸೋಣ!!!
ಖಂಡಿತ , ವಿಷಯಾಂತರಕ್ಕೆ ಕ್ಷಮೆ ಇರಲಿ
ಇಂತಿ
ವಿನಯ
ಉ: ಹೆಮ್ಮಕ್ಕಳ ಹರಸೋಣ!!!
ಎಷ್ಟು ಬೇಗ ಮುಗಿದಿರೆ (ಮುಗಿಯಿತು)
ಈ ೨೦೦೯ ರ ಆರು ತಿಂಗಳು
ಒಳ್ಳೆಯ ಹೊಸ ವಿಚಾರ ಬರಲಿ
ಅದೇ ಮನಸಿಗೆ ಹೊಸ ತಿನಿಸಾಗಲಿ
ಹೀಗೆ ಹರಸುತ್ತಿರಿ ಹೆಮ್ಮಕ್ಕಳನ್ನು
ಒಳ್ಳೆಯ ದಾರಿಯಲ್ಲಿ ಸಾಗಲೆಂದು
ಹಾಗೆ ಹರಸುವುದು ಮರೆತುಬಿಡಬೇಡಿ ಗಂಡುಮಕ್ಕಳನ್ನು (ಆಮೇಲೆ ಕೋಪಿಸಿಕೊಂಡರೆ ಕಷ್ಟ)
ಒಳ್ಳೆಯ ಗುರಿ ಮುಟ್ಟಲೆಂದು
ಉ: ಹೆಮ್ಮಕ್ಕಳ ಹರಸೋಣ!!!
ಕಮಲ,
ಧನ್ಯವಾದಗಳು.
>>ಹೀಗೆ ಹರಸುತ್ತಿರಿ ಹೆಮ್ಮಕ್ಕಳನ್ನು
ಒಳ್ಳೆಯ ದಾರಿಯಲ್ಲಿ ಸಾಗಲೆಂದು
ಹಾಗೆ ಹರಸುವುದು ಮರೆತುಬಿಡಬೇಡಿ ಗಂಡುಮಕ್ಕಳನ್ನು (ಆಮೇಲೆ ಕೋಪಿಸಿಕೊಂಡರೆ ಕಷ್ಟ)
ಒಳ್ಳೆಯ ಗುರಿ ಮುಟ್ಟಲೆಂದು<<
ಹೆಮ್ಮಕ್ಕಳು ಒಳ್ಳೆಯ ದಾರಿಯಲಿ ಸಾಗುತಿರಬೇಕು
ಗಂಡು ಮಕ್ಕಳು ಒಳ್ಳೆಯ ಗುರಿ ಮುಟ್ಟಬೇಕು
ಗೂಢಾರ್ಥ ಏನಾದರೂ ಇದೆಯೇ?
:)
ಉ: ಹೆಮ್ಮಕ್ಕಳ ಹರಸೋಣ!!!
ಇದು ಯಾಕೋ ಜಾಸ್ತಿಯಾಯ್ತು ಅನ್ಸುತ್ತೆ..ನಾಳೆ ಬಂದು ಗಂಡು ಮಕ್ಕಳನ್ನು ಗಬ್ಬುನನ್ಮಕ್ಳು ಅಂತ ಹೊಸ ಆವಿಷ್ಕಾರ ಮಾಡ್ತಾರೆ..ಕವನ ಬರೀಲಿಕ್ಕೆ ಕನ್ನಡ ನಿಘಂಟಿನಲ್ಲಿ ಶಬ್ದಗಳಿಗೆ ಬರ ಏನೋ..ಈ ಕಾಮೆಂಟ್ ಗಳನ್ನು ಓದುವ ತನಕ ಇದು ಏನು ಅಂತಾನೇ ನನ್ನ ತಲೆಗೆ ಹೊಕ್ಕಿರಲಿಲ್ಲ..
ಉ: ಹೆಮ್ಮಕ್ಕಳ ಹರಸೋಣ!!!
ಅದು ಹೊಕ್ಕಿದ್ದರೆ ನೀವು ಈ ರೀತಿ ಪ್ರತಿಕ್ರಿಯೆ (ಕಾಮೆಂಟ್ ) ಬರೆಯುತ್ತಿರಲಿಲ್ಲ ;) :)
ಇಂತಿ
ವಿನಯ
ಉ: ಹೆಮ್ಮಕ್ಕಳ ಹರಸೋಣ!!!
ನೀವೇನ್ರಿ ಪ್ರದೀಪ್ ಹೀಗೆ ಹೇಳ್ತಿದ್ದೀರಿ? ಕನ್ನಡ ನಿಘಂಟಿನಲ್ಲಿ ಕವನ ಬರೆಯೋದಿಕ್ಕೆ ಜಾಗ ಇಲ್ವಲ್ಲಾ :-) ಅದರಲ್ಲಿ ಹೇಗೆ ಬರೆಯೋದಿಕ್ಕೆ ಆಗುತ್ತೆ?
ಉ: "ಹೆಮ್ಮಕ್ಕಳ" ಈ ಶಬ್ದದ ಬಳಕೆ ಇದೆ!!!
http://www.google.co...
http://www.google.co...
ಉ: "ಹೆಮ್ಮಕ್ಕಳ" ಈ ಶಬ್ದದ ಬಳಕೆ ಇದೆ!!!
:D
ಉ: "ಹೆಮ್ಮಕ್ಕಳ" ಈ ಶಬ್ದದ ಬಳಕೆ ಇದೆ!!!
ನಗುವ ತೋರುತಿಹ ನಿಮ್ಮ ಮುಖಕೆ
ನಾನೂ ತೋರುವೆ ನಗುವ ಮುಖವ
ಇದೇ ಸಾಕಲ್ವೇ? ----------------------------------------------------------->
ಉ: "ಹೆಮ್ಮಕ್ಕಳ" ಈ ಶಬ್ದದ ಬಳಕೆ ಇದೆ!!!
ಇದಕ್ಕೆ ನನ್ನ ಸಹಮತ ಇದೆ... :)
ನಮ್ಮಲ್ಲಿ ಹೆಮ್ಮಕ್ಕಳ ಅನ್ನೋ ಪದದ ಅಪಭ್ರಂಶ ಯೆಮಕ್ಳ ಅನ್ನೋ ಬಳಕೆ ಇದೆ.
ಉದಾಹರಣೆಗೆ "ದನ ನುಗ್ಗೊಂಗೆ ನುಗ್ತೀಯಲ್ಲ ಮುದೇವಿ, ಯೆಮಕ್ಳು ಇಳಿಯೋದು ಕಾಣಕಿಲ್ವಾ" :)
ಉ: ಹೆಮ್ಮಕ್ಕಳ ಹರಸೋಣ!!!
ಮತ್ತೆ ಹೆಮ್ಮಕ್ಕಳ ದಿನ ಬಂದಿದೆ.
ಹೆಮ್ಮಕ್ಕಳ ಹರಸೋಣ!
-ಆಸು ಹೆಗ್ಡೆ