Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › avlokana ರವರ ಬ್ಲಾಗ್

ಎಸ್. ಎಲ್. ಭೈರಪ್ಪನವರ ’ಆವರಣ’

March 8, 2007 - 3:31am — avlokana

ಎಸ್. ಎಲ್. ಭೈರಪ್ಪನವರ ಹೊಸ ಕಾದಂಬರಿ ಬಿಡುಗಡೆಯಾಗಿದೆಯಂತೆ. ’ಆವರಣ’ ಎಂಬ ಈ ಕಾದಂಬರಿ ಆಗಲೇ ಮಾರುಕಟ್ಟೆಯಲ್ಲಿ ಒಂದು ಪ್ರತಿಯೂ ಉಳಿಯದಂತೆ ಮಾರಾಟವಾಗಿರುವುದು ತುಂಬಾ ಆಸಕ್ತಿಕರ ವಿಷಯ. ನಾನು ಭೈರಪ್ಪನವರ ಒಂದೂ ಕೃತಿಯನ್ನು ಕೂಡ ಓದಿಲ್ಲ. ’ಆವರಣ’ವನ್ನು ಕೊಂಡು ಓದಬೇಕೆಂದು ತುಂಬಾ ಮನಸ್ಸಿದೆ. ಅಮೆರಿಕದಲ್ಲಿ ಈ ಕನ್ನಡ ಪುಸ್ತಕ ಎಲ್ಲಿ ಕೊಂಡುಕೊಳ್ಳಬಹುದೆಂದು ನಿಮಗೆ ಗೊತ್ತೇ? ಗೊತ್ತಿದ್ದರೆ ದಯವಿಟ್ಟು ತಿಳಿಸಿ.

Ornamental seperator
  • avlokana ರವರ ಬ್ಲಾಗ್
  • Login or register to post comments
  • 953 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 8, 2007 - 3:47am — Shyam Kishore

ಉ: ಎಸ್. ಎಲ್. ಭೈರಪ್ಪನವರ ’ಆವರಣ’

Shyam Kishore's picture

ನಿನ್ನೆ ದಟ್ಸ್ ಕನ್ನಡದಲ್ಲಿ ಈ ಬಗ್ಗೆ ಮಾಹಿತಿ ಪ್ರಕಟವಾಗಿದೆ. ಈ ಕೊಂಡಿ ಕ್ಲಿಕ್ಕಿಸಿ ಓದಿ. ಅದರಲ್ಲಿ ನಿಮಗೆ ಬೇಕಾದ ವಿವರಗಳಿವೆ.

ತಿದ್ದಿದ್ದು: ಎರಡು ಬಾರಿ ಕ್ಲಿಕ್ಕಿಸಿ ಓದುವ ಬದಲು ಈ ತಾಣಕ್ಕೆ ನೇರವಾಗಿ ಭೇಟಿ ನೀಡಬಹುದು. http://sahityabna.homestead.com/email.html 

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 3:52am — avlokana

Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’

avlokana's picture

ತುಂಬಾ ಧನ್ಯವಾದಗಳು ಶ್ಯಾಮ್ ಅವರೆ. ಇಷ್ಟು ವೇಗವಾಗಿ ನನ್ನ ಬ್ಲಾಗ್ಗ್ ಗೆ ಪ್ರತಿಕ್ರಿಯೆ ಬರುತ್ತದೆ ಎಂದುಕೊಂಡಿರಲಿಲ್ಲ. ಸಂಪದ ಸೂಪರ್.

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 4:22am — ಶ್ರೀನಿಧಿ

Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’

ಶ್ರೀನಿಧಿ's picture

ಆವರಣ ಪುಸ್ತಕ ಕೇಳಿ ಇ-ಮೈಲ್ ಮಾಡಿದ್ದೀನಿ. ಮೊದಲ ಪ್ರತಿ ಎಲ್ಲಾ ಮುಂಗಡ ಬುಕಿಂಗ್ ಆಗಿದೆಯಂತೆ. ಸದ್ಯಕ್ಕೆ ೨ನೇ ಮುದ್ರಣದ ಪ್ರತಿಗಳಿಗೆ ಕಾಯುತ್ತಿದ್ದೇನೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 4:35am — avlokana

Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’

avlokana's picture

ಶ್ಯಾಮ್ ಅವರಿಂದ ಕೇಳಿದ ತಕ್ಷಣ ಸಾಹಿತ್ಯ ಭಂಡಾರದವರಿಗೆ ಈ-ಮೇಲ್ ಮಾಡಿದ್ದೇನೆ. ೨ನೇ ಮುದ್ರಣವೋ, ೧ನೆಯದೊ ಗೊತ್ತಿಲ್ಲ. ಬೇಗ ಓದಲು ತವಕದಿಂದ ಕಾಯುತ್ತಿದ್ದೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 4:38am — anivaasi

Re: ಎಸ್. ಎಲ್. ಭೈರಪ್ಪನವರ ’ಆವರಣ’

anivaasi's picture

ನನ್ನ ಗೆಳೆಯರೊಬ್ಬರು ಬೆಂಗಳೂರಿನಿಂದ ಬರುವಾಗ 'ಆವರಣ' ತಂದಿದ್ದಾರೆ. ಅವರಿಂದ ಕಡ ತಂದಿದ್ದೇನೆ. ಇನ್ನೂ ಓದಿಲ್ಲ.
ಭೈರಪ್ಪನವರ ನಿರಾಕರಣ, ಧರ್ಮಶ್ರೀ ತುಂಬಾ ಹಿಂದೆ ಓದಿದ್ದೆ. ಯಾಕೋ ಸಾರ್ಥ ಮತ್ತು ಪರ್ವ ಶುರುಮಾಡಿ ಓದಲಾಗದೇ ಬಿಟ್ಟು ಬಿಟ್ಟೆ.
ನನ್ನ ಗೆಳೆಯರಿಗೆ 'ಆವರಣ' ಇಷ್ಟವಾಗಿಲ್ಲ. ಆದರೆ ನಾನಿನ್ನೂ ಓದಿಲ್ಲ.
ಯಾಕೋ ಅದರ ಬಗ್ಗೆ ತುಣುಕುಗಳನ್ನು ಓದಿದರೆ, ಪುಸ್ತಕದ ಹಿಂದಿರುವ ರೆಫೆರನ್ಸ್ ಪಟ್ಟಿ ನೋಡಿದರೆ ಭಯವಾಗುತ್ತದೆ Smiling

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 4:51am — hamsanandi

Re: ಎಸ್. ಎಲ್. ಭೈರಪ್ಪನವರ ’ಆವರಣ’

hamsanandi's picture

ಸಾಹಿತ್ಯಭಂಡಾರ (ಉತ್ತರ ಅಮೆರಿಕ) ಅವರು ತಿಳಿಸಿದಂತೆ, ಮಾರ್ಚ್ ೧೨ ರಂದು ಮೂರನೆಯ ಮುದ್ರಣದ ಆವೃತ್ತಿ ಬರುತ್ತಿದೆಯಂತೆ! ನಾನಂತೂ  ನನ್ನ ಪ್ರತಿಯನ್ನು ಕಾದಿರಿಸಿದ್ದೇನೆ.ಭೈರಪ್ಪನವರ ಹಿಂದಿನ ಕಾದಂಬರಿ ಮಂದ್ರ ನನಗೆ ಹಿಡಿಸಲಿಲ್ಲವಾದರೂ, ಆವರಣದ ಬಗ್ಗೆ ನಿರೀಕ್ಷೆಯಂತೂ ಇದೆ.

ಅವಲೋಕನ ಅವರೆ, ತುರ್ತಾಗಿ ಸಾಹಿತ್ಯ ಭಂಡಾರದ ಶುಭ ಅವರನ್ನು ಸಂಪರ್ಕಿಸಿ Smiling ಸಿಕ್ಕರೂ ಸಿಗಬಹುದು. ಭೈರಪ್ಪನವರ ಇತರ ಪುಸ್ತಕಗಳೂ ಅವರಲ್ಲಿ ದೊರೆಯುತ್ತವೆ. ಗೃಹಭಂಗ ಕನ್ನಡಸಾಹಿತ್ಯ.ಕಾಮ್ ನಲ್ಲು ಆನ್-ಲೈನ್ ಓದಬಹುದು ನೀವು.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 9:06am — ವೈಭವ

Re: ಎಸ್. ಎಲ್. ಭೈರಪ್ಪನವರ ’ಆವರಣ’

ವೈಭವ's picture

ಆಗಲೇ ೪ ನೇ ಮುದ್ರಣ ಕೂಡ ಆಯ್ತು ಸಾರ್...!! ಅದು ಒಂದೇ ವರ್ಷದ ೨ ತಿಂಗಳುಗಳಲ್ಲೆ. ನಾನು ಬೆಂಗಳೂರಿನಲ್ಲಿರುವುದರಿಂದ ಸಪ್ನ ಬುಕ್ ಹೌಸ್ ಗೆ ಹೋಗಿ ತಕೊಂಡೆ ..ಅಲ್ಲಿದ್ದ 'ಆವರಣ' ಗಳ ಸಂಖ್ಯೆ ಕೇವಲ ೪( ೪ ನೇ ಮುದ್ರಣದ್ದು)....ಬಹುಶಃ ೫ ನೇ ಮುದ್ರಣವಾಗುತ್ತಿರಬಹುದು.

ನಾನು ಮುನ್ನುಡಿ ಓದಿದೆ. ಅದನ್ನೆ ಇನ್ನು ಕನವರಿಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಇದನ್ನು ಮೊದಲು ಓದುವ ಪೈಪೋಟಿ ಇರುವುದರಿಂದ ನನಗೆ ಇನ್ನೂ ಓದಲು ಆಗಿಲ್ಲ!!.Smile

-----

"ದೇವ ಜೀವನ ಕೇಂದ್ರ, ಒಬ್ಬೊಬ್ಬನು ಇಂದ್ರ"  - ದ.ರಾ.ಬೇಂದ್ರೆ

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 4:47am — avlokana

Re: ಎಸ್. ಎಲ್. ಭೈರಪ್ಪನವರ ’ಆವರಣ’

avlokana's picture

ಅನಿವಾಸಿಅವರೇ, ತುಣುಕು ಮತ್ತು ರೆಫರೆನ್ಸ್ ಪಟ್ಟಿ ಬಗ್ಗೆ ಸ್ವಲ್ಪ ಹೇಳ್ತೀರಾ! ನೀವು ಭಯಪಡೋದು ನೋಡಿದ್ರೆ, ಕುತೂಹಲ ಜಾಸ್ತಿ ಅಗ್ತಾ ಇದೆ ಅಷ್ಟೆ.

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 5:10am — anivaasi

Re: ಎಸ್. ಎಲ್. ಭೈರಪ್ಪನವರ ’ಆವರಣ’

anivaasi's picture

ನಿಮ್ಮ ಕುತೂಹಲ ಕೆರಳಿಸಲಿಕ್ಕಾಗಿ ಹಾಗೆ ಹೇಳಿದ್ದಲ್ಲ. ದಯವಿಟ್ಟು ನೀವೇ ಕಾದಂಬರಿ ಓದಿ.ಹಿಂದೂ-ಮುಸ್ಲಿಮ್ ಸಂಬಂಧ ಮತ್ತು ಇತಿಹಾಸದ ವಿಷಯವಾಗಿ ಬರೆದಿರುವ ಕಾದಂಬರಿ.ಭೈರಪ್ಪನವರ "ವಿಶಿಷ್ಟ" ನಿಲುವು ಅದರಲ್ಲಿ ಇರಬಹುದು. ಕಾದಂಬರಿಯ ಪಾತ್ರವೇ ಕಡೆಯಲ್ಲಿ ಒಂದು ದೊಡ್ಡ ಪುಸ್ತಕದ ಪಟ್ಟಿ ಮಾಡುತ್ತದೆ.ಸುಮಾರು ೫೦ ಪುಸ್ತಕಗಳು! ಅದಕ್ಕೇ ಭಯವಾಗುತ್ತದೆ ಅಂತ ಹೇಳಿದ್ದು ಅಷ್ಟೆ

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 11:12pm — ismail

Re: ಎಸ್. ಎಲ್. ಭೈರಪ್ಪನವರ ’ಆವರಣ’

ismail's picture

ರೆಫರೆನ್ಸ್ ಬಗ್ಗೆ ತಲೆಕೆಡಿಸಿಕೊಳ್ಳುವ ಮೊದಲು ಈ ಲೇಖನ ಓದಿ
ಇಸ್ಮಾಯಿಲ್

ನನ್ನ ಬ್ಲಾಗ್: http://ismail.sampada.net

  • Login or register to post comments
  • link
  • Email this ಪ್ರತಿಕ್ರಿಯೆ
March 9, 2007 - 2:56am — Shyam Kishore

ಮಾಹಿತಿ: Re: ಎಸ್. ಎಲ್. ಭೈರಪ್ಪನವರ ’ಆವರಣ’

Shyam Kishore's picture

ಸಂಪದದಲ್ಲಿ "ಆವರಣ"ದ ಬಗ್ಗೆ ನಡೆಯುತ್ತಿರುವ ಚರ್ಚೆಗಳನ್ನು ನೋಡಿ (ಅಂದರೆ ಓದಿ) ನನ್ನ ಪರಿಚಯದವರೊಬ್ಬರು, ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ನಡೆದ ಭೈರಪ್ಪನವರ ಜತೆಗಿನ ಸಂವಾದವನ್ನು ಕುರಿತು ದಟ್ಸ್ ಕನ್ನಡದಲ್ಲಿ ಹಿಂದೊಮ್ಮೆ ಪ್ರಕಟವಾದ ಲೇಖನವೊಂದನ್ನು ವಿ-ಪತ್ರದ ಮೂಲಕ ಕಳುಹಿಸಿದರು. ನಾನದನ್ನು ಇದಕ್ಕೂ ಮೊದಲು ಓದಿರಲಿಲ್ಲ. ನಿನ್ನೆ ಓದಿದೆ. ಒಂದೇ ಸಂವಾದದ ಬಗ್ಗೆ ಎರಡು ಅನಿಸಿಕೆಗಳನ್ನು (ಇಸ್ಮಾಯಿಲರು ಹಾಕಿದ ಕೊಂಡಿ ಮತ್ತು ಇದು) ಓದಿದಂತಾಯಿತು. ಹಾಗೆ ಓದುವುದೂ ಒಂದು ರೀತಿಯ ಒಳ್ಳೆಯ ಅನುಭವವೇ ಸರಿ. ಬೇರೆ ಬೇರೆ "ಪಾಯಿಂಟ್ ಆಫ್ ವ್ಯೂ"ಗಳನ್ನು ಓದಿದಂತಾಗುತ್ತದೆ. ಬೇರೆಯವರೂ ಆಸಕ್ತಿಯಿದ್ದಲ್ಲಿ ಓದಲಿ ಅಂತ ಇಲ್ಲಿ ಕಾಕಿದ್ದೀನಿ. ಅದರ ಕೊಂಡಿ ಇಲ್ಲಿದೆ.

http://thatskannada.oneindia.in/nri/spotlight/wkc2006/050906bhairappa.html

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 5:10am — Shyam Kishore

ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?!

Shyam Kishore's picture

ದಯವಿಟ್ಟು ತಪ್ಪು ತಿಳಿಯದಿರಿ. ಯಾರದ್ದೇ ಆಗಲಿ, ಕೃತಿಯೊಂದನ್ನು ಓದುವ ಮೊದಲು "ಭಯ" ಅಥವಾ "ಹಿಂಜರಿಕೆಯ" ಅಗತ್ಯವಿದೆಯೇ? "ಇಲ್ಲ"ವೆಂದು ನನ್ನ ವೈಯಕ್ತಿಕ ಅಭಿಪ್ರಾಯ. ಓದಿದ ನಂತರ ಆ ಕೃತಿ ಇಷ್ಟವಾಗುವುದೂ ಬಿಡುವುದೂ ಅವರವರ ವೈಯಕ್ತಿಕ ರುಚಿಗೆ, ಆಸಕ್ತಿಗೆ ಸಂಬಂಧಪಟ್ತ ವಿಚಾರ. ಅದರ ಬಗ್ಗೆ ಇನ್ನೊಬ್ಬರು ಏನನ್ನೂ ಹೇಳುವಂತಿಲ್ಲ. ಆದರೆ ಓದುವ ಮುನ್ನ ಹಿಂಜರಿಕೆ ಅನಗತ್ಯ ಅಂತ ನನ್ನ ಅನಿಸಿಕೆ. ಈ ರೀತಿಯ ಭಾವನೆಗಳಿಂದಾಗಿ ನಮಗೆ ಕೃತಿಯ ಮೂಲ ಆಶಯವನ್ನು ಯಾವುದೇ ಪಕ್ಷಪಾತಗಳಿಲ್ಲದೆ ಗ್ರಹಿಸುವುದಕ್ಕೆ ಕಷ್ಟವೂ ಆಗಬಹುದಲ್ಲವೇ?

ನಾನೂ ಇನ್ನೂ "ಆವರಣ" ಓದಿಲ್ಲ. ಆದರೆ ನನ್ನ ತಮ್ಮ ಬೆಂಗಳೂರಿನಲ್ಲಿ ಕಷ್ಟಪಟ್ಟು ಒಂದು ಪ್ರತಿಯನ್ನು ಕೊಂಡು ಕಾದಿರಿಸಿದ್ದಾನೆ! ಸದ್ಯದಲ್ಲೇ ಓದಬೇಕು.

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 5:33am — hamsanandi

Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?!

hamsanandi's picture

 

ಅದೇಕೋ ಎಷ್ಟೋ ಓದುಗರಲ್ಲಿ, (ಹೆಚ್ಚಾಗಿ ಭೈರಪ್ಪನವರ ಬಗ್ಗೆ) ಈ ರೀತಿ ಪೂರ್ವಾಗ್ರಹವಿರುವುದನ್ನು ನಾನು ಗಮನಿಸಿದ್ದೇನೆ Surprised

ಉದಾಹರಣೆಗೆ "ನಾನು ಪರ್ವ ಓದಿಲ್ಲ (ಅಥವ ಸಾರ್ಥ ಅಂತಲೇ ಇಟ್ಟುಕೊಳ್ಳಿ), ಆದರೆ ಭೈರಪ್ಪ ಹೇಳುವುದು ಸರಿ ಇಲ್ಲ" ಇತ್ಯಾದಿ.

ಅವಲೋಕನ ಅವರೆ, ನೀವು ಇನ್ನೂ ಭೈರಪ್ಪ ಅವರ ಯಾವ ಕಾದಂಬರಿಯನ್ನೂ ಓದಿರದಿದ್ದರೆ, ನನ್ನ ಶಿಫಾರಸು - ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಧರ್ಮಶ್ರೀ, ಪರ್ವ ಮತ್ತು ತಂತು - ಇವುಗಳನ್ನು ತಪ್ಪದೇ ಓದಿ!

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 5:47am — avlokana

Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?!

avlokana's picture

ಕಳೆದ ಕೆಲವು ವರ್ಷಗಳಿಂದ ನಾನು ವಿಶ್ವದ ಹಲವೆಡೆ ಇರುವ ’ಇಸ್ಲಾಂ’ ಮತದ ಜನರ ಬಗ್ಗೆ ಇರುವ ಅನೇಕ ಪ್ರಶ್ನೆ-ಗೊಂದಲಗಳಿಗೆ ಅಲ್ಪ-ಸ್ವಲ್ಪ ಓದಿ-ನೋಡಿ-ಕೇಳಿ ಉತ್ತರಗಳನ್ನು ನಾನೇ ಅರಿಯಲು ಪ್ರಯತ್ನಿಸಿದ್ದೇನೆ, ಆದರೆ ಇದು ಒಂದು ಹಂತಕ್ಕಿಂತ ಮೀರಿ ಹೋಗಿಲ್ಲ. ’ಆವರಣ’ ಈ ಬಗ್ಗೆ ನನ್ನನ್ನು ಹೇಗೆ ಓದಿಸಿಕೊಂಡು ಹೋಗುತ್ತದೋ, ನೋಡಬೇಕು.

ಹೌದು. ಕೃತಿಯ ಮೂಲ ಆಶಯವನ್ನು ಯಾವುದೇ ಪಕ್ಷಪಾತಗಳಿಲ್ಲದೇ ನೋಡಬೇಕೆಂದರೆ ಬರೆದಿರುವವರ ಮತ್ತು ನಮ್ಮ ಓದುಗರ ದೃಷ್ಟಿಯ ಮೂಲಕ ನೋಡಬೇಕು. ಅನಿವಾಸಿ ಅವರು ಹಿಂಜರಿಕೆಯಿಂದ ಭಯಪಟ್ಟಿದ್ದಲ್ಲ, ಎನಿಸುತ್ತದೆ.

ಹಂಸಾನಂದಿ ಅವರೇ, ನಿಮ್ಮ ಓದು-ಸಲಹೆಗಳಿಗೆ ಧನ್ಯವಾದ, ನನಗೆ ಭೈರಪ್ಪನವರ ಬರವಣಿಗೆ, ವಸ್ತು ಇಷ್ಟವಾದರೆ (’ಆವರಣ’ ಓದಿ) ನೀವು ತಿಳಿಸಿದ ಎಲ್ಲಾ ಕಾದಂಬರಿಗಳನ್ನು ಓದುತ್ತೇನೆ, ಶ್ಯೂರ್. ಪ್ರಮುಖವಾಗಿ ನಾನು ದಿ.ಶಿವರಾಮ ಕಾರಂತರ ಅಭಿಮಾನಿ. ಅವರ ಬಹಳಷ್ಟು ಕೃತಿಗಳನ್ನು ಓದಿದ್ದೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 6:37am — ಶ್ರೀನಿಧಿ

Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?!

ಶ್ರೀನಿಧಿ's picture

ಆರ್ಕುಟ್‍ನಲ್ಲಿ ಭೈರಪ್ಪ ಕಮ್ಯೂನಿಟಿ ಇದೆ. ಅಲ್ಲಿ ಆವರಣದ ಬಗ್ಗೆ ಸ್ವಲ್ಪ ಮಾತು-ಕಥೆಗಳು ನಡೆದಿವೆ. ಬೇಕಿದ್ದರೆ ನೋಡಿ. ಬೆಂಗಳೂರಿನಲ್ಲಿಯೂ ಅನೇಕ ಚರ್ಚಾ ಗೋಷ್ಠಿಗಳು ನಡೆಯುತ್ತಿವೆ ಎಂದೂ ಕೇಳಿದ್ದೇನೆ. ಅಂತಹ ಒಂದು ಚರ್ಚೆಯ ರೆಕಾರ್ಡಿಂಗ್ ಕೂಡ ಅಪ್ಲೋಡ್ ಮಾಡಿದ್ದಾರೆ. ಲಿಂಕ್ ಕಮ್ಯೂನಿಟಿಯಲ್ಲೆ ಇದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 7:03am — hamsanandi

Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?!

hamsanandi's picture

ಶ್ರೀನಿಧಿ ಅವರೆ,

ಧನ್ಯವಾದಗಳು!

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 11:27am — pavanaja

Re: ಎಸ್. ಎಲ್. ಭೈರಪ್ಪನವರ ’ಆವರಣ’

pavanaja's picture

ಆವರಣ ಬಗ್ಗೆ ಬೇಳೂರು ಸುದರ್ಶನ ಅವರ ಅನಿಸಿಕೆ ಇಲ್ಲಿದೆ. ನಾನೂ ಆವರಣ ಓದಿದ್ದೇನೆ (ಭೈರಪ್ಪನವರ ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ). ಬೇಳೂರು ಅವರ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ. ಬ್ರಿಟಿಷರು ಬರೆದ ಇತಿಹಾಸವನ್ನೇ ನಂಬಿ ಅದನ್ನೇ ಮತ್ತೆ ಮತ್ತೆ ಹೇಳುವ, ಅದರ ಆಧಾರದ ಮೇಲೆಯೇ ಹಿಂದುಗಳನ್ನು ಹಳಿಯುವ ಎಲ್ಲ ಅರೆಬೆಂದ ಬುದ್ಧಿಜೀವಿಗಳನ್ನು ಭೈರಪ್ಪನವರು "ಆವರಣ"ದಲ್ಲಿ ಚೆನ್ನಾಗಿ ಜಾಡಿಸಿದ್ದಾರೆ. ಮೊದಲ ಬಾರಿಗೆ ಭೈರಪ್ಪನವರು ಕಲಾವಂತಿಕೆಯನ್ನು ಬದಿಗಿಟ್ಟು ಆಕ್ರೋಶದಲ್ಲಿ ಬರೆದಂತಿದೆ. ಅವರೇ ಹೇಳಿಕೊಳ್ಳುವಂತೆ ಸತ್ಯ ಮತ್ತು ಸೌಂದರ್ಯಗಳಲ್ಲಿ ಸತ್ಯಕ್ಕೇ ಪ್ರಾಶಸ್ತ್ಯ ನೀಡಿದ್ದಾರೆ. ಖಂಡಿತ ಎಲ್ಲರೂ ಓದಲೇಬಾಕಾದ ಪುಸ್ತಕ. ಈಗಾಗಲೇ ಐದನೆಯ ಮುದ್ರಣದಲ್ಲಿದೆ. ಇದೂ ಕನ್ನಡಕ್ಕೊಂದು ದಾಖಲೆಯೇ ಸರಿ.

ಸಿಗೋಣ,
ಪವನಜ
-----------
Vishva Kannada
Think globally, Act locally

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 12:11pm — Shyam Kishore

ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು

Shyam Kishore's picture

ಪವನಜ ಅವರೆ,

ನೀವು ತೋರಿದ ಬೇಳೂರು ಸುದರ್ಶನರವರ ಲೇಖನ ಓದಿದೆ. "ಆವರಣ"ವನ್ನು ಓದುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ನಿಜ, ಕೆಲವೊಂದು ವಿಚಾರಗಳಲ್ಲಿ ಭೈರಪ್ಪನವರು ಕೊಂಚ ಬದಲಾಗಿರುವುದು ಕಾಣುತ್ತದೆ. ತಮ್ಮದೇ ಚಿಪ್ಪಿನೊಳಗೆ ಹುದುಗಿರುತ್ತಿದ್ದ ಅವರು ಈಗೀಗ ಸಂದರ್ಶನಗಳು, ಸಂವಾದಗಳಲ್ಲಿ ಭಾಗವಹಿಸತೊಡಗಿದ್ದಾರೆ.

ಆದರೆ ನನಗನ್ನಿಸಿದಂತೆ ನಮ್ಮ ಭಾರತೀಯ (ಹೌದು ಕನ್ನಡ ಮಾತ್ರವಲ್ಲ, ಇಡಿಯ ಭಾರತೀಯ) ಸಾರಸ್ವತ ಲೋಕದ ವಿಚಿತ್ರವೆಂದರೆ, ಯಾರದ್ದಾದರೂ ಬರಹವನ್ನು ಖಂಡಿಸುವವರು (ಭೈರಪ್ಪ ಅಂತಲ್ಲ, ಸಾಮಾನ್ಯವಾಗಿ ಕೆಲವೊಂದು ಸತ್ಯಗಳನ್ನು ಹೊರಹಾಕಲು ಯಾರೇ ಪ್ರಯತ್ನಪಟ್ಟರೂ) ಆ ಲೇಖಕ ತನ್ನ ಕೃತಿಯಲ್ಲಿ ಬರೆದಿರುವ ವಿಚಾರಗಳ ಬಗ್ಗೆ ಇನ್ನೂ ವ್ಯಾಪಕ ಅಧ್ಯಯನ ಮಾಡಿ, ಇನ್ನಷ್ಟು ಪುರಾವೆಗಳನ್ನು ಕಲೆಹಾಕಿ, "ನೋಡಯ್ಯಾ, ನೀನು ಬರೆದದ್ದು ಬರೀ ಪೊಳ್ಳು, ಸುಳ್ಳಿನ ಕಂತೆ. ನಿಜ ಇಲ್ಲಿದೆ; ತಾಕತ್ತಿದ್ದರೆ ಈಗ ವಾದ ಮಾಡು ಬಾ" ಎಂದು ತಾವು ಗುಡ್ಡೆಹಾಕಿದ ಪುರಾವೆಗಳನ್ನು ಆ ಲೇಖಕನ ಮುಂದಿಟ್ಟು, ತಾತ್ವಿಕವಾಗಿ ವಿರೋಧಿಸುವುದೇ ಇಲ್ಲ. ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಯಾಕೆ ಈ ನೇರವಾದ ಮಾರ್ಗ ಅನುಸರಿಸುವುದಿಲ್ಲ ಎಂಬ ಪ್ರಶ್ನೆ ಬಹಳ ದಿನಗಳಿಂದ ನನ್ನನ್ನು ಕಾಡುತ್ತಿದೆ. "ಆ ಲೇಖಕ ಕೋಮುವಾದಿ", "ಇವನು ಜಾತಿವಾದಿ", "ಇವನು ಆ ಬಣ್ಣದ ಗುಂಪಿಗೆ ಸೇರಿದವನು" ಅಂತೆಲ್ಲ ಬರಹಗಾರನನ್ನೇ ಮೂದಲಿಸಿ, ಆತನಿಗೊಂದು ಹಣೆಪಟ್ಟಿ ಕಟ್ಟಿ, ಹೋರಾಟಕ್ಕಿಳಿಯುತ್ತಾರೆ. ಒಂದು ರೀತಿಯಲ್ಲಿ ಇಂತಹ ಬೆಳವಣಿಗೆಗಳು ಜನರನ್ನು ಭಾವೋದ್ವೇಗಗಳಿಗೆ ಒಳಪಡಿಸಿ ದಾರಿ ತಪ್ಪಿಸುತ್ತೆ ಅಲ್ಲವೆ? ಅಂತೆಯೇ ಲೇಖಕರ ಪರವಾಗಿ ಕೇವಲ "ಅಭಿಮಾನದಿಂದ" (ಲೇಖಕರ ಬಗೆಗಿನ ಅಭಿಮಾನ, ಅವರು ಬರೆದಿದ್ದರ ಬಗೆಗಲ್ಲ!) ವಾದಿಸುವ ಗುಂಪೂ ಸಹ ಅಷ್ಟೇ ಅಪಾಯಕಾರಿಯಾದದ್ದೇನೋ?

ಯಾವ ಲೇಖಕರೇ ಆಗಿರಲಿ, ಅವರು ಬರೆದಿದ್ದರ ಸತ್ಯಾಸತ್ಯಗಳ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದ ಚರ್ಚೆ ನಡೆದು, ಲೇಖಕನದ್ದು ತಪ್ಪು ಗ್ರಹಿಕೆ ಎಂದು ತೀರ್ಮಾನವಾದಲ್ಲಿ, ಆಗ ಎಲ್ಲರೂ ಆ ಬರಹಗಾರರನ್ನು "ನಿಮ್ಮ ಬರಹವನ್ನು ವಾಪಸು ತಗೊಳ್ಳಿ" ಎಂದು ಒತ್ತಾಯ ಮಾಡುವುದರಲ್ಲಿ ಅರ್ಥವಿದೆ. ಅಥವಾ ಈ ರೀತಿಯ ಸ್ಥಿತಿ ಒಂದು "ಯುಟೋಪಿಯಾ" ಮಾತ್ರವೇನೋ? ಸತ್ಯ ನಮಗೆ ಅಷ್ಟು "ಕಹಿ" ಎನ್ನುವ ಹಂತಕ್ಕೆ ನಾವೇಕೆ ಬಂದು ತಲುಪಿದ್ದೇವೆ?

ಇನ್ನಷ್ಟು ಅನ್ನಿಸಿದ್ದನ್ನು ಬರೆಯೋಣವೆನಿಸಿದರೂ, "ಸಂಪದ"ದಂತಹ ವೇದಿಕೆಯಲ್ಲಿ ಅವುಗಳ ಬಗ್ಗೆ ಉಲ್ಲೇಖ ಮಾಡಬಹುದೇ ಬೇಡವೇ, ಮಾಡಿದರೂ ಅದರ ಔಚಿತ್ಯವೇನು, ಎಂಬ ಗೊಂದಲಗಳು ಕಾಡುತ್ತಿವೆ.  

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 7:24pm — vasista2k

Re: ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು

vasista2k's picture

ನಮಸ್ಕಾರ,

"ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಯಾಕೆ ಈ ನೇರವಾದ ಮಾರ್ಗ ಅನುಸರಿಸುವುದಿಲ್ಲ ಎಂಬ ಪ್ರಶ್ನೆ ಬಹಳ ದಿನಗಳಿಂದ ನನ್ನನ್ನು ಕಾಡುತ್ತಿದೆ. "ಆ ಲೇಖಕ ಕೋಮುವಾದಿ", "ಇವನು ಜಾತಿವಾದಿ", "ಇವನು ಆ ಬಣ್ಣದ ಗುಂಪಿಗೆ ಸೇರಿದವನು" ಅಂತೆಲ್ಲ ಬರಹಗಾರನನ್ನೇ ಮೂದಲಿಸಿ, ಆತನಿಗೊಂದು ಹಣೆಪಟ್ಟಿ ಕಟ್ಟಿ, ಹೋರಾಟಕ್ಕಿಳಿಯುತ್ತಾರೆ. ಒಂದು ರೀತಿಯಲ್ಲಿ ಇಂತಹ ಬೆಳವಣಿಗೆಗಳು ಜನರನ್ನು ಭಾವೋದ್ವೇಗಗಳಿಗೆ ಒಳಪಡಿಸಿ ದಾರಿ ತಪ್ಪಿಸುತ್ತೆ ಅಲ್ಲವೆ? ಅಂತೆಯೇ ಲೇಖಕರ ಪರವಾಗಿ ಕೇವಲ "ಅಭಿಮಾನದಿಂದ" (ಲೇಖಕರ ಬಗೆಗಿನ ಅಭಿಮಾನ, ಅವರು ಬರೆದಿದ್ದರ ಬಗೆಗಲ್ಲ!) ವಾದಿಸುವ ಗುಂಪೂ ಸಹ ಅಷ್ಟೇ ಅಪಾಯಕಾರಿಯಾದದ್ದೇನೋ?"

ನೀವು "ಆವರಣ"ವನ್ನು ಓದಿ, ನಂತರ ಮಾತಾಡಿ ಗುರುಗಳೆ.ಅದರಲ್ಲಿ ಅವರು ಬಹಳ ಸಂಶೋದನೆ ಮಾಡಿದ್ದಾರೆ, ಹಾಗು ಅದರಲ್ಲ್ಲಿ ಮುಸ್ಳೀಮ್ ಜನಾಂಗದವರು ಅಥವ ಮೊಘಲರು ಧರ್ಮವನ್ನು ಹೇಗೆ ತಪ್ಪಾಗಿ ತಿಳಿದಿದ್ದರು, ಪಾಳಿಸುತಿದ್ದರು ಅಂಥ.. ಅವರು ಹೇಗೆ ಹಿಂದುಗಳನ್ನು ನಡೆಸಿಕೊಳ್ಳುತಿದ್ದರು..ಅಂಥ..

ನಾನು ಸಹ ಪೂರ್ತಿ ಓದಿಲ್ಲ.. ಅರ್ಧ ಓದಿದ್ದೆನೆ.. ಅದರಲ್ಲಿ ಮನ ಮುಟ್ಟುವ ಹಾಗೆ ಬರೆದಿದ್ದಾರೆ...

ಹಾಗಾಗಿ ಈ ಲೇಖಕರ ಮೇಲೆ ಈ ಹಣೆಪಟ್ಟಿ....

vasista
9945694337

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆವರಣ ಸಂವಾದ - ೧೮ ಮಾರ್ಚ್ ೨೦೦೭, ಭಾನುವಾರ
  • ಆವರಣಾಭಿಮಾನ
  • ಆವರಣ ಹೊಸ ದಾಖಲೆ
  • ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ
  • `ಓವಿ ' ಪದದ ಅರ್ಥವೇನು?
Syndicate content

ಲೇಖಕರು

avlokana's picture

ಪೂರ್ಣ ಹೆಸರು
ವಿನಾಯಕ್

ಪರಿಚಯ

ನಾನೊಬ್ಬ ಕನ್ನಡಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator