ಹಾಗೆ ಸುಮ್ಮನೆ...
ಹೇಳ್ಕೊಳಕ್ಕೊಂದೂರು, ತಲೆಮ್ಯಾಗೆ ಒಂದ್ಸೂರು, ಮಲ್ಕೊಳಕ್ ಭೂಮ್ತಾಯಿ ಮಂಚ....
ತಲೆಯಲ್ಲಿ ಒಂದ್ ಯೋಚ್ನೆ, ಪದಗಳಲ್ಲಿ ಮೂಡ್ದಾಗ, ಅಲ್ಲೊಂದು ಸುಮ್ನೆ ಪರ್ಪಂಚ...
"ಮಾಯಾ ಮೃಗ" ಮರಳಿ ಮೂಡಿದಾಗ....
ಎಲ್ಲಿಂದಲೋ ಹಾರಿ ಬಂತೊಂದು ಬಂಗಾರದ ಜಿಂಕೆ. ನೋಡು ನೋಡುತ್ತಲೇ ಹಾರಿ ಹೋಯಿತು. ಸೀತೆಯ ಮನಸ್ಸಿನಲ್ಲಿ ಆ ಜಿಂಕೆಯನ್ನು ಮುದ್ದಾಡುವ ಆಸೆ ಮೂಡಲು, ರಾಮನು ತನ್ನ ಸತಿಯ ಇಛ್ಛೆ ಪೂರೈಸಲು ಆ ಮಾಯಮೃಗದ ಬೆನ್ನಟ್ಟಿ ಓಡಿದನು....
ಇದೇನು ರಾಮಾಯಣದ ಕಥೆ ಶುರು ಮಾಡಿದೆ ಅನ್ಕೊಂಡ್ರಾ??? ಇಲ್ಲ, ಇಲ್ಲ, ಇದು ಕೆಲವು ವರ್ಷಗಳ ಹಿಂದೆ ಟಿ.ಎನ್.ಸೀತಾ"ರಾಮ" ಹೇಳಿದ "ಮಾಯಾ ಮೃಗ"ವೆಂಬ ಧಾರಾವಾಹಿಯ ಕಥೆ. ಇದು ಎಷ್ಟೊಂದು ಮನೆಯ "ಸೀತೆ"ಯರ ಮನ ಅಪಹರಿಸಿತ್ತು ಅಲ್ಲವೆ? ಇದು ಮರು ಪ್ರಸಾರವಾದರೆ ಎಷ್ಟು ಚೆನ್ನ? ಈ "ಮಾರೀಚ"ನ ಕೂಗು ಟಿ.ಎನ್.ಸೀತಾ"ರಾಮ"ರವರ ಕಿವಿಗೆ ಕೇಳಿಸುವಂತಾಗಲಿ....

- bachi ರವರ ಬ್ಲಾಗ್
- Login or register to post comments
- 446 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: "ಮಾಯಾ ಮೃಗ" ಮರಳಿ ಮೂಡಿದಾಗ....
ಮಾಯಾಮೃಗ ಡಿ ವಿ ಡಿ ರೂಪದಲ್ಲಿ ಸಿಗುತ್ತಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಮಾಯಾ ಮೃಗ" ಮರಳಿ ಮೂಡಿದಾಗ....
ನಾಡಿಗ್ ರವರೆ, ಮಾಹಿತಿ ನೀಡಿದ್ದಕ್ಕಾಗಿ ತುಂಬ ಥಾಕ್ಸ್. ಆದರೆ ಡಿ.ವಿ.ಡಿ ಬೆಲೆ ನೋಡಿ ಭಯ ಆಯ್ತು...ಕೇವಲ ರೂ.3900 ಮಾತ್ರ ಅಂತೆ! ಇದರ ಬದಲು ಟಿ.ವಿ. ನಲ್ಲಿ ಪ್ರಸಾರ ಆಗೋದು ಒಳ್ಳೇದು, ಅಲ್ವ?
ಬಾchi - www.sumneblog.com
ಉ: "ಮಾಯಾ ಮೃಗ" ಮರಳಿ ಮೂಡಿದಾಗ....
ಒಂದೇ ಡಿವಿಡಿ ಅಲ್ವಲ್ಲ
ಬಹಳಷ್ಟು ಡಿವಿಡಿಗಳು ಇದ್ದಂತಿವೆ. ಮಾಯಾಮೃಗ ಏನು ಕಡಿಮೆ ದಿನಗಳು ಪ್ರಸಾರವಾಯ್ತೆ? (ಅಷ್ಟೊಂದು ಎಪಿಸೋಡುಗಳು ತಕ್ಕ ಮಟ್ಟಿಗೆ sanity ಉಳಿಸಿಕೊಂಡದ್ದೇ ಹೆಚ್ಚು. ಈಗಿನ ನಿತ್ಯದ ದಾರಾವಾಹಿಗಳಲ್ಲಿ ಅಂಥದ್ದು ಬಹುಪಾಲು ಕಳೆದುಹೋಗಿದೆ.)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: "ಮಾಯಾ ಮೃಗ" ಮರಳಿ ಮೂಡಿದಾಗ....
ಹೌದು, ನಿಮ್ಮ ಮಾತು ನಿಜ. ಕಾಸಿಗೆ ತಕ್ಕಂತೆ ಕಜ್ಜಾಯ!
ಬಾchi - www.sumneblog.com