20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮದುವೆ ಯಾರಿಗೆ ಬೇಕು...

March 25, 2008 - 9:27am
bachi
ಮದುವೆಯಾಗದೆ ಜೊತೆಗೆ ಇರೊದು ಇವಾಗ ಹುಡುಗ-ಹುಡುಗಿಯರಿಗೆ ಕಾಮನ್. ಕಾಮನ ಆಟ ಆಡೊರಿಗೆ ಎಲ್ಲಾ "ಕಾಮನ್"ನೆ! ಅಂದಹಾಗೆ, ನಿನ್ನೆ ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ತನ್ನ ಹೆಂಡತಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಇವರು ಸುಮಾರು 3 ವರ್ಷಗಳಿಂದ ಜೊತೇಗೇ ಇದ್ದರಂತೆ, ಮದುವೆಯಾಗದೆ! ಕೆಲದಿನಗಳ ಹಿಂದಷ್ಟೆ ಮದುವೆಯಾದದ್ದು (ಯಾಕೋ?). ಮದುವೆಯಾದ ಸ್ವಲ್ಪ ದಿನಗಳಲ್ಲೆ ಆ ಹುಡುಗಿ ಇನ್ನೊಬ್ಬನ ಜೊತೆ ಸರಸ ಆಡ್ತಾ ಇದ್ದದ್ದು ಗೊತ್ತಾಯಿತು. ಏಕಿರಬಹುದು? ಇವಳಿಗೆ ಈ ಹುಡುಗ "ಬೋರ್" ಆದನಾ? ಅಥವಾ, ಐ.ಟಿ. ಕೆಲಸದ ಒತ್ತಡದಿಂದ, ಇವಳ ಬಗ್ಗೆ ಅವನ ಗಮನ (ಶಕ್ತಿ!?) ಕಡಿಮೆ ಆಯ್ತಾ? ಅಥವಾ,ಇದು modern ಹುಡುಗಿಯರ "ಫ್ಯಾಷನ್"ನ? ಅಥವಾ,ನಮ್ಮ ಹಿರಿಯರು (ತಮ್ಮ ಅನುಭವದಿಂದ?!) ಹೇಳಿದ "ಮದುವೆ" ಎಂಬ ಪವಿತ್ರ ಸಂಭಂಧವನ್ನು ತಿರಸ್ಕರಿಸಿ, "live-in relationship" ಪ್ರಯೋಗಿಸಲು ಹೋದ ಪರಿಣಾಮವೆ? ವೇದ ಕಾಲದಲ್ಲಿ "ಮದುವೆ"ಅನ್ನೊ concept ಟೆ ಇರ್ಲ್ಲಿವಂತೆ! ಮಕ್ಕಳಮೇಲೆ, ಸಮಾಜದಮೇಲೆ ಆಗೊ ದುಷ್ಪರಿಣಾಮವನ್ನು ನೋಡಿ ಬದಲಾವಣೆಗಳನ್ನು ತಂದರು. ಈಗ ಮತ್ತೆ ಅದೇ ತಪ್ಪು ಮಾಡ್ತಾ ಇದೀವಿ. ಇತಿಹಾಸದ ಪುನರಾವರ್ತನೆ ಅಂತೀರೆನೋ! ಇರಬಹುದು. ಇಂಥಾ ಗಟನೆಗಳು ಇತ್ತೀಚಿಗೆ ಹೆಚ್ಚಾಗಿ ನಡೀತಾ ಇರೊದು ಗಮನಾರ್ಹ. ಸ್ತ್ರೀ ಸ್ವಾತಂತ್ರ ಅಂದ್ರೆ ಇದೇನಾ??? ಬಾchi - www.sumneblog.com
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by roopablrao on
ರಿಂಕು ಹಾಗೆ ಮಾಡಿದ್ದು ಯಾಕಿರಬಹುದು ಎಂದು ಯೋಚಿಸಿದರೆ ಈಗಿನ ಒತ್ತಡದ ಜೀವನವೇ ಕಾರಣ ಎಂದು ತಿಳಿಯುತ್ತದೆ. ಆ ಎಂಜಿನಿಯರ್ ಹೆಂಡತಿಯ ಕಡೆಗೂ ಗಮನ ಕೊಟ್ಟಿದ್ದರೆ ಇದು ಹೀಗಾಗುತ್ತಿರಲಿಲ್ಲ . ಹೆಣ್ಣು ವೈವಾಹಿಕ ಲಕ್ಷಣ ರೇಖೆಯನ್ನು ಸುಲಭವಾಗಿ ದಾಟಳು. ಹಾಗೆ ಮಾಡಿದ್ದರೆ ಅದು ಗಂಡನ ನಿರ್ಲಕ್ಷವೇ ಕಾರಣವಾಗಿರುತ್ತದೆ. ಅದೇ ಅವಳ ಗಂಡ ಅನ್ನಿಸಿಕೊಂಡವನು ಹೀಗೆ ಬೇರೆ ಅಫೈರ್ ಇಟ್ಟುಕೊಂಡಿದ್ದರೆ ಅವಳೇನು ಮಾಡಬೇಕಿತ್ತು. ಇನ್ನು ಸ್ತ್ರೀ ಸ್ವಾತಂತ್ರ್ಯ ಎಂಬ ಮಾತೇ ಇಲ್ಲಿ ಬರುವುದಿಲ್ಲ. ಯಾಕೆಂದರೇ ಸ್ತ್ರೀ ಇನ್ನೂ ಸ್ವತಂತ್ರಳಲ್ಲ ಇದು ಏನೆ ಆಗಲಿ ಆ ಹುಡುಗ ಮಾಡಿದ್ದು ಸರಿ ಅಲ್ಲ ಅವನದು ರಿಯಲ್ ಲವ್ ಆಗಿದ್ದಲ್ಲಿ ಅವಳನ್ನು ಬದುಕಲು ಬಿಡಬೇಕಿತ್ತು ಹೇಗೊ ಒಂದು ಕಡೆ ಹಾಯಾಗಿರಲಿ ಎಂದು. ತಾನು ಬದುಕಬಹುದಿತ್ತು. ಸುಪ್ತ ಮನಸಿನ ಕನವರಿಕೆಗಳೊಂದಿಗೆ ರೂಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bachi on
ರೂಪ ಮೇಡಮ್, ಆ ಹುಡುಗಿ ಏನು ನಿಮ್ಮ ಅಜ್ಜಿ ಕಾಲದವಳು ಅನ್ಕೊಂಡ್ರಾ? 3 ವರ್ಷ ಮದುವೆ ಆಗದೆ ಅವನ ಜೊತೇಗೇ ಇದ್ಲು. ಇದಕ್ಕಿಂತಲೂ ಸ್ತ್ರೀ ಸ್ವಾತಂತ್ರ ಬೇಕಾ? ಬಾchi - www.sumneblog.com
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by createam on
ಬಾಚಿಯವರೆ, ಸರಿಯಾಗಿ ಹೇಳ್ದ್ರಿ, ನನ್ಗು ಈ ಸ್ತ್ರೀ ಸ್ವಾತಂತ್ರ್ಯ ಅಂದ್ರೆ ಏನು ಅಂತ ಇನ್ನು ಅರ್ಥ ಆಗಿಲ್ಲ. ಎಲ್ಲಾರು ಹೇಳ್ತಾರೆ, ಹೆಣ್ಣಿಗೆ ಸ್ವಾತಂತ್ರ ಇಲ್ಲ ಅಂತ, ಆದ್ರೆ ಈ ಸ್ವಾತಂತ್ರ್ಯ ಅಂದ್ರೆ ಏನು ಅಂತ ಮಾತ್ರ ಹೇಳಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bachi on
"ರಾತ್ರಿ 10.30ರ ಮೇಲೆ ರೂಪ sorry ಹೆಂಗಸರು ಬೀದಿನಲ್ಲಿ ಓಡಾಡೊದಕ್ಕೆ 'ಸ್ತ್ರೀ ಸ್ವಾತಂತ್ರ' ಅಂತ ಕರೀತಾರೆ"...:) ಬಾchi - www.sumneblog.com
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ವ್ಯಂಗ್ಯವಾ ? ತಮಾಷೆಯಾ? :) ರೂಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಅದೇ ರೀತಿ ಅವನೂ ಇದ್ದನ್ನಲ್ಲ ಅವನದೂ ತಪ್ಪಲ್ಲವಾ? ಅದನ್ನು ಸಮಾಜ ಕೇಳೊದಿಲ್ಲ. ಹೆಣ್ಣಿನದು ಮಾತ್ರ ತಪ್ಪು ಎಂದರೆ ಸರಿಯಾ? 3 ವರ್ಷ ಇದ್ದದ್ದಲ್ಲದೇ ಅವಳನ್ನೇ ಕೊಂದದ್ದು ಏಕೆ . ಅವಳನ್ನು ಅವಳ ಪಾಡಿಗೆ ಬಿಡಬಹುದಿತ್ತು. ರೂಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ಬಾಚಿ, ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಸ್ವಲ್ಪ ನಿಖರವಾಗಿ ತಿಳಿದುಕೊಂಡು ಅನಂತರ ಮಾತನಾಡಿ ಎಂದಷ್ಟೆ ಹೇಳಬಲ್ಲೆ ನಾನು. ನಿಮ್ಮ್ಮದು ವ್ಯಂಗ್ಯವೂ ಅಲ್ಲ, ಟೀಕೆಯೂ ಅಲ್ಲ, ವಿಕೃತಿ ಅಷ್ಟೇ! ಇನ್ನು ನಿಮ್ಮ ವಾದದ ಬಗ್ಗೆ... ಮದುವೆಯಿಲ್ಲದೆ ಆಕೆ ಮೂರು ವರ್ಷ ಅವನೊಂದಿಗಿದ್ದ ಮಾತ್ರಕ್ಕೆ ಅವಳನ್ನು ‘ಅಂಥವಳು’ ಎಂದು ಕರೆಯುವ ಹಕ್ಕನ್ನು ನಿಮಗೆ ಯಾರು ಕೊಟ್ಟವರು. ಅವನು ಎಂಥವನು ಅಂತ ನಿಮಗೇಕೆ ಅನ್ನಿಸುವುದಿಲ್ಲ? ಈ ಬಗೆಯ ಮನೋಭಾವದ ಸಂಕೋಲೆಯಿಂದ ಬಿಡುಗಡೆಯನ್ನು ಬಯಸುವುದೇ ಸ್ತ್ರೀ ಸ್ವಾತಂತ್ರ್ಯದ ಆಶಯ. ಇನ್ನು ಮದುವೆಯ ಬಗ್ಗೆ... ಅವರಿಬ್ಬರೂ ಮದುವೆಯಾಗದೆ ಜೊತೆಗಿದ್ದಾಗ ತಲೆದೋರದ ಸಮಸ್ಯೆಗಳು ಮದುವೆಯಾದಾಗಲೇ ಬಂದವು. ಮದುವೆಯಿಂದಾಗಿಯೇ ಅವರಿಬ್ಬರೂ ಪ್ರಾಣ ಕಳೆದುಕೊಂಡರು ಎನ್ನುವುದಾದರೆ ಈಗಿನ ಜೀವನ ಪದ್ಧತಿಯಲ್ಲಿ ಮದುವೆಯೆಂಬುದು ಅಪ್ರಸ್ತುತವಾಗಿದೆ ಎಂದು ಆಲೋಚಿಸಬಹುದಲ್ಲವೇ? ಏನು ಹೇಳುತ್ತೀರಿ... _______________________ ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://uniquesupri.w... http://kalaravapatri... http://ekshanadasaty...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಬಚಿ ಯೋ ಬಾಚಿ, ಬಾಛೀಯೋ ದೇವರೇ ಕಡವಳ ಆಂಡವ!! ಯಾರ್‍ಯಾರ ಇದ್ರೇನು, ಯಾರ್‍ಯಾರ್‍ ಜೊತೆ ಏನ್ ಮಾಡಿದ್ರೇನು? ಅವರಿಬ್ರುಗೂ ಒಪ್ಪಿಗೆ ಇದ್ಯ.. ಅಲ್ಲಿಗೆ ಮುಗಿತು... ಬೇರೆಯೋರು ಅದಕ್ಕೆ ತಲೆ, ಮೂಗು ತೂರಿಸೋದು ಸರಿಯಲ್ಲ... ನೀವ್ ಯಾ ಕಾಲದಾಗಿದ್ದೀರಿ? ಈಗ ಲಿಂಗ-ಗಿಂಗ ಅನ್ನೋ ಬೇದಬಾವ ಇಲ್ಲ.. ಯಾರ್ಯರ್‍ ಹೆಂಗ್ ಬೇಕಾದ್ರೂ ಇರಬೋದು ಅಂತ ಇಂದು ಮುಂದುವರಿದ( ನಮ್ಮ ಬಡ, ಕಚಡ ದೇಶದ ಮಂದಿ ಹೇಳುವ) ದೇಶಗಳೇ ಹೇಳಿವೆ.. :) ಮೊನ್ನೆ ಇಲ್ಲಿ ಸಂಸ್ಕೃತದೋರಿಗೆ- ಕನ್ನಡದೋರಿಗೂ ದೊಡ್ಡ ಜಗಳ ನಡೀತಲ್ಲ.. ಆಗ ಮಹಾನ್ ಮಾಧ್ಹವರು.. "ಇಂಗ್ಲೇಂಡಲ್ಲಿ ಸಂಸ್ಕೃತ ಕಲೀತಾರೆ" ಅಂತ ಏನೋ ೧೧ ಅದ್ಬುತ ಅಂತ ಹೇಳಿದ್ರು.. ಅವರಿಗೆ ಗೊತ್ತೋ ಗೊತ್ತಿಲ್ವ.. ಇಂಗ್ಲೇಂಡಲ್ಲಿ ಒಂದೇ ಲಿಂಗದ ಮದುವೆಗೆ ಕಾನೂನು ಒಪ್ಪಿಗೆ ಇದೆ. ಹಾಗೂ ಮಕ್ಕಳು ಓದುವ ಹೊತ್ತಗೆಗಳಲ್ಲೂ ಅದರ ಬಗ್ಗೆ ಒಳ್ಳೆಯ ಅನಿಸಿಕೆ ಬರೋ ಹಾಗೆ ಬರೀತಾರೆ.[ ಇದು ದಿಟ.. ಪುಂಗಿ ಅಲ್ಲ.. ಸಂಸ್ಕೃತ-ಲಾಬಿ ವೋಲ್/ಓಳ್ ಬೊಗಳೆಯಲ್ಲ ]... ಅವರು ಮದುವೆಯೋ ಆಗ್ತಾರೆ. ನಿಮ್ಮ ಪ್ರೆಶ್ನೆ "ಮದುವೆ ಯಾರಿಗೆ ಬೇಕು" ಅದಕ್ಕೆ ಉತ್ತರ ಇಶ್ಟ.. ಯಾರ್ಯಾರ್‍ ಮಾಡ್ಕೋತಾರೋ ಅವರಿಗೆ.. ಇಬ್ರು ಬೇಕು. ಹಲವರೂ ಬೇಕು [ ನಮ್ಮ ದೇಶದ ಒಂದು ಬುಡಕಟ್ಟಲ್ಲಿ ಒಂದು ಹೆಣ್ಣು ಅಣ್ಣತಮ್ಮಂದಿರೆಲ್ಲರನ್ನು ಮದುವೆ ಮಾಡಿಕೋಬೋದು, ಹಲಹೆಂಡಿತಿ, ಹಲಗಂಡ, ಒರ್‍-ಹೆಂಡತಿ, ಒರ್‍-ಗಂಡ.. ]. ಉವರ್‍ ಹೆಂಗ್ ಬೇಕಾದ್ರು ಅವರ್‍ ಇರೋ ನೆಲದ ಕಾನೂನಂತೆ ಮದುವೆ ಮಾಡಿಕೊಳ್ಳಬೋದು ಮೊನ್ನೇ ಆತ ಮಾಡಿದ್ದು ಹೊಸತ? ರಾಮನೇ ಸೀತೆಯ ಶೀಲದಲ್ಲಿ ಅಯ್ಬೆಣಿಸಿ ಬೆಂಕಿ ತಳ್ಳಲಿಲ್ವ? ನಿಮ್ಮ ಬರಹದಲ್ಲಿ "ಅಯ್ಯೋ ಕಾಲ ಕೆಟ್ಟೋಯ್ತು. ನಮ್ ಸನಾಥನ ಸಂಸ್ಕೃತಿ ಹಾಳಾಯ್ತು" ಎಂದು ಸುಮ್-ಸುಮ್ನೆ ಇರುವೆ ಬಿಟ್-ಕೊಂಡೋರಂಗೆ ಕೊರಗೋರ ಮಾತಿನಂತಿದೆ.. "ಸ್ತ್ರೀ ಸ್ವಾತಂತ್ರ ಅಂದ್ರೆ ಇದೇನಾ???" ಈ ಪ್ರೆಶ್ನೆ ಸರಿಯಿಲ್ಲ.. ಅದಕ್ಕೆ ಮಾದರಿಯೂ ಸರಿಯಿಲ್ಲ.. ಹೆಣ್ಣಿಗೆ ಸ್ವಾತಂತ್ರ್‍ಯ ಕೊಡೋದು ಅಂದ್ರೇನು? ಅದು ಅವಳ ಹತ್ತಿರವೇ ಇಲ್ಲವಾ?.. ಅದನ್ನು ಅವಳು ಹೇಗೆ ಬೇಕಾದ್ರು ಬಳಸಬೋದು.. ಅವಳ ಬದುಕಲ್ವೇ.. ಯಾರನ್ನೇ ಕೊಲೆ ಮಾಡೋದು ತಪ್ಪು.. [ ಅದು ಪುರಾಣಗಳ ಸಂಹಾರ, ದುಶ್ಟ ನಿಗ್ರಹ ಯಾವುದೇ ಮಣ್ಣಂಗಟ್ಟಿಯಾಗಲಿ ]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ಯಾಮ ಕಶ್ಯಪ on
@uniquesupri, @mahesha ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ (probably ಮೊದಲ ಸಾರಿ ಇದು!) @roopa, ಒಂದು ಕಿವಿಮಾತು: ಕೆಲವರ ಜೊತೆ ವಾದ ಮಾಡಿ ಉಪಯೋಗವಿಲ್ಲ. -- ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಶ್ಯಾಮ್... ಹೀಗಂತೀನಿ ಅಂತ ಬೇಸರ ಮಾಡಿಕೊಬೇಡಿ... ನಿಮ್ ಹಲವು ಬರಹಗಳು, ಕಮೆಂಟ್ಗಳನ್ನ ಗಮನಿಸಿ ಹೇಳ್ತೀನಿ.... ಕಾರಣ ಕೊಡ್ತಿಲ್ಲ, ನೀವೇ ತಿಳಿದ್ಕೋತೀರ ಅಂತ... ಹೀಗೆ ಕೊನೆಯಲ್ ಬಂದು ಇವರ್‍ ಇವರು ಚನ್ನಾಗಿ ಕಮೆಂಟ್ ಹಾಕಿದ್ದಾರೆ, ಅದಕ್ಕೆ ನನ್ ಒಪ್ಪಿಗೆ, ನೀವ್ ಹಿಂಗೆ ಮಾಡಿ ಅಂತ ಹೇಳೋದು ನಿಮ್-ತನಕ್ಕೆ ಒಪ್ಪಲ್ಲ.... @mahesha ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ (probably ಮೊದಲ ಸಾರಿ ಇದು!) ಇಲ್ಲಿ "probably ಮೊದಲ ಸಾರಿ ಇದು!" ಅಂತ ಬೇರೆ ಇದೆ( ಹಿನ್ನಲೆ, ಒಳತಿಳಿವು ಏನೇ ಇರಲಿ".. ಅದಕ್ಕೆ ನಾನ್ ನನ್ನ "Do I care?" ಎಂದು ಕೇಳಿಕೊಳ್ಳೋ ಹಾಗೆ ಮಾಡಿತು.!! "ಕೆಲವರ ಜೊತೆ ವಾದ ಮಾಡಿ ಬಾಳಿಕೆ ಇಲ್ಲ.." ೧) ವಾದದಲ್ಲಿ ಸೋತು, ತನ್ನನ್ನು ತಾನೇ ಬೆನ್ನು ತಟ್ಟಿಕೊಂಡು, ಸಂತಯ್ಸಿಕೊಂಡು, ಬೆನ್ನು ತೋರಿಸುಸುವವರ ಮಾತು; ೨) ಸಿಕ್ಕಾಪಟ್ಟೆ ತಿಳಿದಿರುವವರು, ತಿಳಿದಿದ್ದರೂ ಏನೂ ಮಾಡಕ್ಕೆ ಹಂಬಲ ಇಲ್ಲದೇ ಇರುವವರ ಮಾತು ೩) ತಿಳಿದಿರುವವರು, ಆ ಕಡೆಯವರೇ ತಿಳಿದುಕೊಳ್ತಾರೆ ಎಂದು ಕೊಂಚ ಹೊತ್ತು ಕೊಡುವವರು. ೧) ಕ್ಕೆ ಸೇರಿದರೆ ಬಲು ಕೀಳು.. ೨)ಕ್ಕೆ ಸೇರಿದರೆ ಪೋಲು/ವೇಸ್ಟು.. ೩)ಕ್ಕೆ ಸೇರಿದರೆ ಒಳ್ಳೇದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ಯಾಮ ಕಶ್ಯಪ on
ಮಹೇಶ, ಇದು offtopic. ಆದರೂ ನಿಮ್ಮನ್ನು ಸಂಪರ್ಕಿಸುವ ಬೇರೆ ವಿಧಾನವಿರಲಿಲ್ಲ. ಅದಕ್ಕೆ ಇಲ್ಲೇ ಸೇರಿಸಿದ್ದೇನೆ. "@mahesha ನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ (probably ಮೊದಲ ಸಾರಿ ಇದು!) ಇಲ್ಲಿ "probably ಮೊದಲ ಸಾರಿ ಇದು!" ಅಂತ ಬೇರೆ ಇದೆ( ಹಿನ್ನಲೆ, ಒಳತಿಳಿವು ಏನೇ ಇರಲಿ".. ಅದಕ್ಕೆ ನಾನ್ ನನ್ನ "Do I care?" ಎಂದು ಕೇಳಿಕೊಳ್ಳೋ ಹಾಗೆ ಮಾಡಿತು.!!" -- ಸಂಪದ ಬೇರೆ ಟೈಮ್ ಪಾಸ್ ಪೋರ್ಟಲ್‍ಗಳ ತರಹ ಅಲ್ಲ, ಇದರಲ್ಲಿ, ಹಲವು ವಿಷಯಗಳ ಬಗ್ಗೆ ವಿಷಯತಜ್ಞರು ಆಳವಾದ ಒಳನೋಟವುಳ್ಳ ಲೇಖನಗಳನ್ನು ಬರೆದಿದ್ದಾರೆ. ಆ ತರಹದ ಲೇಖನಗಳನ್ನು ನೀವೂ ಓದಿದ್ದೀರ, ಪ್ರಶಂಸಾರ್ಹವಾಗಿ ಕಾಮೆಂಟ್ ಮಾಡಿದ್ದೀರ. ಒಬ್ಬ ಓದುಗ ಸಂಪದದ ಲೇಖನಗಳನ್ನು ಓದುತ್ತ, ನಮ್ಮ ಸಮಾಜ, ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ಹಲವು ವಿಷಯಗಳನ್ನು ತಿಳಿಯಬಹುದು. ಇದರಿಂದ ಓದುಗನಿಗೆ ಸಂಪದದಲ್ಲಿ ಒಂದು ಬಗೆಯ learning curve ಇರುತ್ತದೆ ಎಂದು ನನಗನಿಸುತ್ತದೆ. ಯೂನಿಕ್‍ಸುಪ್ರಿಯವರ ಕಾಮೆಂಟುಗಳನ್ನು ನಾನು ನೋಡಿದ್ದೇನೆ. ನನ್ನ ನೆನಪು ಸರಿಯಿದ್ದರೆ ಅವರ ಜೊತೆ ನಾನು ವಾದ ಕೂಡಾ ಮಾಡಿದ್ದೇನೆ. ಯೂನಿಕ್‍ಸುಪ್ರಿಯವರ ಇತ್ತೀಚಿನ ಲೇಖನಗಳು ಮತ್ತು ಅನಿಸಿಕೆಗಳು ಅವರ ಯೋಚನೆಗಳಲ್ಲಾದ ಬದಲಾವಣೆಗಳನ್ನು ಬಿಂಬಿಸುತ್ತವೆ. ಇದೇ ಬದಲಾವಣೆಗಳನ್ನು ನನ್ನ ಬರಹಗಳಲ್ಲೂ ಕಂಡಿದ್ದೇನೆ. ನಿಮ್ಮ ಸಂಪದದ ಬರಹಗಳನ್ನು ನೋಡಿದರೆ ನಿಮಗೂ ಹೀಗೆ ಅನ್ನಿಸಬಹುದೇನೋ. ಗಂಭೀರ ವಿಚಾರಗಳನ್ನು ಅರ್ಥೈಸುವಲ್ಲಿ ಬರುವ ಈ ಬದಲಾವಣೆ, ಸಮಾಜದ ಬಗ್ಗೆ ನಮ್ಮೆಲ್ಲರಿಗೂ ಒಂದು ’higher level of common understanding' ತರಲು ಸಹಾಯಕಾರಿ. ಸಂಪದವನ್ನು ಹುಟ್ಟಿದಾಗಿನಿಂದ ನೋಡುತ್ತಿರುವ ನನಗೆ ಇದು ಮುಖ್ಯ. ಇದು ಸಂಪದದ ತರಹದ ಪೋರ್ಟಲ್‍ನ ಒಂದು ಉದ್ದೇಶವೂ ಆಗಿರಬೇಕು. ನಿಮ್ಮಿಬ್ಬರ ಕಾಮೆಂಟುಗಳನ್ನು ನೋಡಿದಾಗ ನನಗೆ ಖುಷಿ ಎನಿಸಿದ್ದು ಇದಕ್ಕೆ. ಮದುವೆ, ಸ್ತ್ರೀ ಸ್ವಾತಂತ್ರ್ಯ ಮುಂತಾದ ವಿಷಯಗಳಲ್ಲಿ ನಿಮಗೆ, ಅವರಿಗೆ ಮತ್ತು ನನಗೆ ಒಪ್ಪಿಗೆಯಾಗಬಹುದಾದ ಒಂದು ದೃಷ್ಟಿಕೋನವಿದೆಯಲ್ಲ ಎನ್ನುವ ಕಾರಣಕ್ಕೆ ಖುಷಿಯಾದದ್ದು. ಆದ್ದರಿಂದ ನೀವು ಕೇರ್ ಮಾಡದೇ ಇರಬಹುದು. ಆದರೆ ನನಗಿದರಲ್ಲಿ ಆಸಕ್ತಿಯಿದೆ. ಈ ದೃಷ್ಟಿಕೋನಕ್ಕೆ ಸಂಪದ ನೇರ ಕಾರಣವಲ್ಲದಿರಬಹುದು, ಇದು ಬದಲಾವಣೆಯೇ ಅಲ್ಲರಿದರಬಹುದು. ಸಂಪದ ಎನ್ನುವ ಪ್ರಯೋಗದಲ್ಲಿ ಇವೆಲ್ಲವನ್ನೂ ನಾವು ಕಾದು ನೋಡಬೇಕು. ಮೇಲೆ ಹೇಳಿದಂತಹ ಬದಲಾವಣೆಗಳನ್ನು ನಾನು ವೈಯುಕ್ತಿಕವಾಗಿ ’ವ್ಯಕ್ತಿಯ ವಿಕಸನ’ ಎಂದು ನಂಬುತ್ತೇನೆ. ನನ್ನಲ್ಲೂ ಸಂಪದದಿಂದ ಈ ತರಹದ ವಿಕಸನ ಆಗುತ್ತಿದೆ. ಇದು ವಾದ ಮಾಡುವುದರಿಂದ ಬರುವುದಿಲ್ಲ. ಒಬ್ಬ ಪಂಡಿತ, ಪಾಮರನಿಗೆ ಭೋದಿಸಲಾಗುವುದಿಲ್ಲ. ಇದು ಕಾಲಾವಧಿಯಲ್ಲಿ ತಾನಾಗಿಯೇ ಆಗುವಂತಾದ್ದು. ಇದು ನಿಮ್ಮ ಪಟ್ಟಿಯಲ್ಲಿ ಮೂರನೆಯದು ಎಂದು ತಿಳಿಯುತ್ತೇನೆ.ಸಮಾಜದ ಬಗ್ಗೆ ಒಂದು ಪ್ರಬುದ್ಧವಾದ ತಿಳುವಳಿಕೆಯನ್ನು ತರುವಲ್ಲಿ ಸಂಪದ ಒಂದು ಸಹಾಯಕಾರಿ ಸಾಧನ ಎಂದಷ್ಟೇ ನನ್ನ ಅನಿಸಿಕೆ. ಇಷ್ಟೇ ನನ್ನ ಆಸಕ್ತಿ. -- ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಈ ಮೇಲಣ ಕಮೆಂಟು ನನ್ ತಲೇಲಿದೆ... ’ವ್ಯಕ್ತಿ ವಿಕಸನ’( ಆಳು ಅರಳುವಿಕೆ ) ಅನ್ನೋದು ಇದೆಯಾ ಅಂತ ನನ್ ಯೋಚನೆ.!! ನನಗನ್ನಿಸ್ತದೆ ಯಾರೂ ಬೆಳೆಯಲ್ಲ, ಅರಳಲ್ಲ, ಬರೀ ಮಾರ್ಪಡ್ತಾರೆ. ಮರ ಬೆಳೆಯಲ್ಲ.. ಅದು ಚೇಂಜಾಗ್ತದೆ.. ಯಾವ ಮಾರ್ಪನ್ನು ಬೆಳೆವಣಿಗೆ ಅಂತಾರೆ ಅನ್ನೋದು.. ದೊಡ್ಡ ಗೊಂದಲ... ನನ್ನಿ! ನನಗೆ ಅರುಹಲು ಮಿನ್ನೋಲೆ ಹಾಕಬೋದು. ಸಂಪದದಿಂದೇ ಆರುವುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by SURESH BHAT 79 on
ಮಾನ್ಯರೇ, ಸ್ತ್ರೀ ಸ್ವಾತಂತ್ರ್ಯದ ವಿಷಯದ ಬಗ್ಗೆ........ಒಂದಿಷ್ಟು ನನ್ನ ಅನಿಸಿಕೆಗಳು.. ಸಂಸ್ಕೃತ ಭಾಷೆಯಲ್ಲಿ ಒಂದು ಮಾತಿದೆ " ಯತ್ರ ನಾರ್ಯಂತು ಪೂಜ್ಯಂತೆ ತತ್ರ ರಮಂತೆ ದೆವತಾ:" ಅಂದರೆ "ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೆಯೊ ಅಲ್ಲಿ ದೇವತೆಗಳು ನೆಲೆಸುವರು ". ಇಂತಹ ಒಂದು ಮಹಾನ್ ಸಂಸ್ಕೃತಿಯನ್ನು ಹೊಂದಿರುವಂತಹ ದೇಶ ನಮ್ಮದು. ಈ ಮಾತನ್ನು ನಾವು ಅರ್ಥ ಮಾಡಿಕೊಳ್ಳುವಾಗ ನಾವು ಒಂದು ವಿಷಯನ್ನು ಸೂಕ್ಷ್ಮವಾಗಿ ಗಮನಿಸಬೇಕು...ಮೊದಲನೆಯದಾಗಿ...ನಾರಿಯರನ್ನು ಪೂಜಿಸುವಂತಹ ಮನೋಭಾವನೆಯನ್ನು ಪುರುಷರು ಹೊಂದಿರಬೆಕು....ಮಿಗಿಲಾಗಿ ಪುರುಷರಿಂದ ಪೂಜೆಯನ್ನು ಪಡೆಯತಕ್ಕಂತಹ ನಡತೆಯನ್ನು, ಸಚ್ಚಾರಿತ್ರ್ಯವನ್ನೂ ಸ್ತ್ರೀಯರು ಹೊಂದಿರಬೇಕು.ಈ ವಿಷಯದಲ್ಲಿ ಸ್ತ್ರೀಯರಿಗೇ ಹೆಚ್ಚಿನ ಜವಾಬ್ದಾರಿಯಿದೆಂದು ನನಗೆ ಅನಿಸುತ್ತಿದೆ...ಯಾಕೇಂದ್ರೆ....ಒಬ್ಬಳು ಸ್ತ್ರೀ ನಡತೆಗೆಟ್ಟರೆ...ಅಲ್ಲಿಯ ಸಮಾಜದ ನಡತೆಗೆಡಲಿಕ್ಕೆ ಬಹಳ ಸಮಯ ಬೇಕಾಗಲಿಕ್ಕಿಲ್ಲ...ಕಾರಣ ನಮ್ಮಲ್ಲಿ ದುರ್ನಡತೆಯ ಪುರುಷರನ್ನು ಸಾಕಷ್ಟು ನೋಡಬಹುದು..ಆದರೆ ಆ ತರಹದ ಸ್ತ್ರೀಯರು ವಿರಳ..ಅದ್ದರಿಂದ ಸಮಾಜ ಇನ್ನೂ ಈ ವಿರಳತೆಯನ್ನು ಸ್ತ್ರೀಯರಿಂದ ಅಪೇಕ್ಷಿಸುವದು. ಯಾಕೆಂದರೆ ಈಗಾಗಲೆ ಹೇಳಿದಂತೆ ಪೂಜಿಸುವವರಿಗಿಂತಲೂ....ಪೂಜಿಸಲ್ಪಡುವವರು ಉನ್ನತ ಸ್ಥಾನದಲ್ಲಿರುತ್ತಾರೆ. ರೂಪಾ ಮೇಡಮ್ ರವರಲ್ಲಿ ಒಂದು ವಿನಂತಿ...ಈ ಮೇಲಿನ ಘಟನೆಯಲ್ಲಿ ನೀವು ಹೆಳಿದ ಹಾಗೆ ಮದುವೆಯಾಗದೆ ಮೂರು ವರ್ಷ ಜತೆಯಲ್ಲಿ ಬಾಳಿದ್ದರಲ್ಲಿ ಹುಡುಗನದೂ ತಪ್ಪಿದೆ. ಆದರೆ ಹುಡುಗರು ನಡತೆಗೆಡುತ್ತಾರೆಂದು ಹುಡುಗಿಯರೂ ನಡತೆಗೆಡುವದು ಖಂಡಿತವಾಗಿಯೂ ಸ್ತ್ರೀ ಸ್ವಾತಂತ್ರ್ಯವಲ್ಲ. ದಯವಿಟ್ಟು ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by SURESH BHAT 79 on
ದಯವಿಟ್ಟು ಸ್ತ್ರೀ ಸ್ವಾತಂತ್ರ್ಯದ ಹೆಸರಿನಲ್ಲಿ ಹುಡುಗಿಯರ ಕೆಟ್ಟ ನಡತೆಯನ್ನು ಸಮರ್ಥಿಸಬೇಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
"ಯತ್ರ ನಾರ್ಯಂತು ಪೂಜ್ಯಂತೆ ತತ್ರ ರಮಂತೆ ದೆವತಾ:" ಮಾರಾಯ್ರೇ ಅದು "ಯತ್ರ ನಾರ್ಯಸ್ತು ಪೂಜ್ಯಂತೇ| ರಮಂತೇ ತತ್ರ ದೇವತಾಃ" ಆರು ಒರೆಗಳ ಒಂದು ಸಕ್ಕದ ಸಾಲೊಳು ನಾಲ್ಕು ತಪ್ಪುಗಳೇ...!! . . . ನಾರಿಯನ್ನ ಪೂಜೆ ಮಾಡಿದ್ರೆ ಅಲ್ಲಿ ಕಡವಳರು ಯಾಕೆ ತಿರುಗ್ತಾರೆ? ಈ ಪ್ರೆಶ್ನೆ ಉತ್ರ ಹೇಳಬೇಕು ನೀವೀಗ...!!.. ಇನ್ನೂ ನೀವು ಯಾವದನ್ನು ನಮ್ ಸಂಸ್ಕೃತಿ ಅಂತೀರೋ, ನಮ್ ಕನ್ನಡ ನಡೆಗೂ ಈ ಆರ್ಯ ಜನಾಂಗದ ಸಕ್ಕದ ಶ್ಲೋಕಕ್ಕೂ ಏನು ನಂಟು?[ ಇದ್ರೆ ಬಲು ದೂರದ್ದು ] ಇನ್ನೂ ಅದ್ವೇತಿಗಳಾದ್ರೇ ತಾರತಮ್ಯ ವಾದ ಒಪ್ಪದೇ ದೇವತೆಗಳು ಹೀಗೆ ಗಂಡಸರನ್ನು ಪೂಜೆಮಾಡಿದಾಗ ತಿರುಗದೇ, ಹೆಂಗಸರನ್ನ ಪೂಜೆ ಮಾಡಿದಾಗ ತಿರುಗೋದು, ಆ ಪರಂಬ್ರಹ್ಮನಿಗೆ ಅವಮಾನ. ಇನ್ನು ದ್ವೇತಿಗಳಾದ್ರೆ, ಅವರ ತಾರತಮ್ಯವಾದದಂತೆ ಎಲ್ಲದಕ್ಕೂ ಉತ್ತಮನಾದ ವಾಯು ’ಗಂಡು’, ಆ ವಾಯುವಿಗೆ ತೋರದ ಗರಿಮೆಯನ್ನು ಒಬ್ಬಳು ಹೆಣ್ಣಿಗೆ ತೋರೋದು ದೊಡ್ಡ ಅಪಚಾರ ಇನ್ನು ವಿಶಿಷ್ಟಾದ್ವೈತದಂತೆ ’ಶ್ರೀಮನ್ನಾರಯಣನೇ ಪರಂಬ್ರಹ್ಮ’ ಅವನೂ ಗಂಡು.. ಏನೋಪ್ಪ... ಆ ಶ್ಲೋಕ ಸುಮ್ನೆ ಹೆಂಸರನ್ನ ಉಬ್ಬರಿಗೆ ಏರಿಸಿ, ಸಿಕ್ಕಾಪಟ್ಟೆ ಮಡಿ ಮಾಡಿ, ಕೋಣೆ, ಮನೆಯೊಳಗೆ ಕೂಡಿ ಹಾಕೋ ಹುನ್ನಾರದ ಹಿನ್ನೆಲೆ ಅಂತ ಕೆಲವರೂ ಹೇಳ್ತಾರೆ... ನಾವ್ ಯಾಕೆ ’ಹೆಂಗಸರನ್ನ ಬರೀ ಮನುಶ್ಯರು’ ಅವರೂ ಗಂಡಸರಂತೆ ಸಮ.. ಇಶ್ಟಕ್ಕೆ ನಿಲ್ಲಿಸಬಾರದು.!! "ಒಬ್ಬಳು ಸ್ತ್ರೀ ನಡತೆಗೆಟ್ಟರೆ." ಹೆಂಗಸು ನಡೆತೆಗೆಡೋದು ಅಂದ್ರೇನು? ಹಾಗಾದ್ರೆ ಗಂಡಸು ನಡತೆಗೆಡಬೋದಾ!.. [ ಸೂಳೆಗಾಗಿ ಮನೆಮಟ ಹಾಳುಗಯ್ದ ವಿಟನಂತಹ ಚಾರುದತ್ತ ಒಂದು ಹೆಸರುವಾಸಿ ಸಕ್ಕದ ನಾಟಕದ ಉತ್ತಮ ನಾಯಕ :) ] ಯಾಕೆ ಹೀಗಾಗ್ತಾ ಇದ್ದಾರೆ ಮಂದಿ. ಎಲ್ಲೆಡೆ ತಾರತಮ್ಯ ಬೇಕಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಮಹೇಶ, ತುಂಬಾ ಒಳ್ಳೆಯ ವಿಷಯ ಪ್ರಸ್ತಾಪಿಸಿದ್ದೀಯಾ ಕಣೋ. ನಿನ್ನ ಯೋಚನಾ ಲಹರಿ ಇಲ್ಲಿ ತುಂಬಾ ಮೇಲ್ಮಟ್ಟದ್ದಾಗಿದೆ.
ನಾವ್ ಯಾಕೆ ’ಹೆಂಗಸರನ್ನ ಬರೀ ಮನುಶ್ಯರು’ ಅವರೂ ಗಂಡಸರಂತೆ ಸಮ.. ಇಶ್ಟಕ್ಕೆ ನಿಲ್ಲಿಸಬಾರದು.
ಮಹೇಶ, ಇದಂತೂ ಸೂಪರ್ ಪಾಯಿಂಟ್. ಇದರ ಬಗ್ಗೆ ಹೆಂಗಸರು ಏನು ಹೇಳುತ್ತಾರೆ ಅಂತ ತಿಳಿದುಕೊಳ್ಳಬೇಕು, ಕಣೋ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಬೊಂಬಾಟ್ ........ ಮಹಾ ಭಾಷ್ಯ! ...ಖಂಡನಾ (ಗ್ರಂಥ ಅಲ್ಲ :) ) ಭಾಷ್ಯ.. ಹೊಸ ರೀತಿಯಲ್ಲಿ ಈ ವಾಕ್ಯ ಅರ್ಥ ವಾಯ್ತು! ನನ್ನೀ ಸವಿತೃ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.