ಕ್ಷ , ತ್ರ ಮತ್ತು ಜ್ಞ
ನಮಸ್ಕಾರ,
ಇದು ಸಂಪದದಲ್ಲಿ ನನ್ನ ಮೊದಲ ಪೋಸ್ಟ್ ( post ). ಈಗ ತಾನೇ Register ಮಾಡಿಕೊಂಡೆ. ಬರೆಯಲು ಹೆಚ್ಚೇನೂ ಇಲ್ಲ ಈಗ, ಒಂದು ಪ್ರಶ್ನೆ ಕೇಳಿಯೇ ಬಿಡೋಣ.
ಕನ್ನಡ ಅಕ್ಷರಮಾಲೆಯಲ್ಲಿ ಕ್ಷ, ತ್ರ, ಜ್ಞ ಗಳು ಯಾಕಿವೆ ?
ದೇವನಾಗರಿಯಲ್ಲೇನೋ ಒಪ್ಪೋಣ ಕ್ಷ , ತ್ರ ಮತ್ತು ಜ್ಞ ಗಳಿಗೆ ಸಾಮಾನ್ಯ ವ್ಯಂಜನ Combination ಬಿಟ್ಟು ಬೇರೆ ಚಿಹ್ನೆಗಳೂ ಇವೆ. ಈ ಕಾರಣದಿಂದ ಅಕ್ಷರಮಾಲೆಯ ಕೊನೆಗೆ ಚಿಹ್ನೆಗಳನ್ನು ಬರೆದಿದ್ದಾರೆ. ಆದರೆ ಕನ್ನಡದಲ್ಲಿ ಯಾಕೆ ?

- bachodi ರವರ ಬ್ಲಾಗ್
- Login or register to post comments
- 431 hits
- Email this blog




RSS:
ಪ್ರತಿಕ್ರಿಯೆಗಳು
Re: ಕ್ಷ , ತ್ರ ಮತ್ತು ಜ್ಞ
ಮೊದಲ ತಲೆಮಾರಿನ ಕನ್ನಡ ವೈಯಾಕರಣಿಗಳೆಲ್ಲರೂ ಸಂಸ್ಕೃತವನ್ನು ಮಾದರಿಯಾಗಿಟ್ಟುಕೊಂಡು ಕನ್ನಡ ವ್ಯಾಕರಣ ರಚಿಸಿದರು. ಇದಕ್ಕು ಶಬ್ದಮಣಿದರ್ಪಣ ಬರೆದ ಕೇಶಿರಾಜನೂ ಹೊರತಲ್ಲ. ಸಂಸ್ಕೃತ ವ್ಯಾಕರಣವನ್ನು ಕನ್ನಡಕ್ಕೆ ಒಗ್ಗಿಸಲು ಪ್ರಯತ್ನಿಸಿದ್ದರಿಂದ ಇದು ಸಂಭವಿಸಿತು. ಸಂಸ್ಕೃತದಂತೆಯೇ ಕನ್ನಡದಲ್ಲಿಯೂ ಒಂಬತ್ತು ಬಗೆಯ ಲಿಂಗಗಳಿವೆ. ಮೂರು ಬಿಟ್ಟರೆ ಉಳಿದವು ಅವ್ಯಕ್ತ ಮುಂತಾಗಿ ಕೇಶಿರಾಜ ಹೇಳುವುದರ ಹಿಂದಿನ ಮರ್ಮವೂ ಇದುವೇ. ಈಕಾಲದ ಪಂಡಿತರೆಲ್ಲರೂ ಇಂಗ್ಲಿಷ್ ಕಲಿತಿದ್ದಂತೆ ಆ ಕಾಲದ ಪಂಡಿತರೆಲ್ಲರೂ ಸಂಸ್ಕೃತ ಬಲ್ಲವರಾಗಿದ್ದರು. ಮೂಲಭಾಷೆ, ದೇವಭಾಷೆ ಇತ್ಯಾದಿ ನಂಬಿಕೆಗಳೂ ಇದ್ದುದರಿಂದ ಹೀಗೆಲ್ಲಾ ಆಗಿರಬಹುದು. ಈಗ ನಾವು ವ್ಯಾಕರಣವನ್ನು ರೂಪಿಸಲು ಬಳಸುತ್ತಿರುವ ಟೂಲ್ ಗಳು ಆಗ ಲಭ್ಯವಿರಲಿಲ್ಲ. ವಿದ್ವಾಂಸರು ತಮಗನ್ನಿಸಿದ್ದನ್ನು ಹೇಳಿದರು. ಈ ಬಗೆಯ ಪ್ರಯತ್ನಗಳಿಂದ ಕನ್ನಡಕ್ಕೊಂದು ವರ್ಣನಾತ್ಮಕ ವ್ಯಾಕರಣ ರೂಪಿಸುವ ಕ್ರಿಯೆಗಳು ಇಲ್ಲಿಯವರೆಗೂ ಬೆಳೆದಿವೆ. ಕ್ಷ, ತ್ರ ಜ್ಞ ಗಳನ್ನು ಕನ್ನಡ ವರ್ಣ ಮಾಲೆಯ ಭಾಗವೆಂದು ಈಗ ಯಾರೂ ಭಾವಿಸುವುದಿಲ್ಲ.
ಇಸ್ಮಾಯಿಲ್
ನನ್ನ ಬ್ಲಾಗ್: http://ismail.sampada.net
Re: ಕ್ಷ , ತ್ರ ಮತ್ತು ಜ್ಞ
ಇಸ್ಮಾಯಿಲ್ ಅವರು ಹೇಳಿದುದು ಸರಿ.!
ಅದಕ್ಕೆ ನನ್ನದೊಂದು ಕೊರೆ
ಕ್ಷ, ತ್ರ, ಜ್ಷ ಗಳು independent sounds/ಬರಿ ಅಕ್ಷರ ಅಲ್ಲ. ಇವು composite sounds/ಸಂಯುಕ್ತಾಕ್ಷರಗಳು/ ಎರಡು ವ್ಯಂಜನಗಳ ಕೂಡಿಕೆ.
ಸಂಸ್ಕೃತದಲ್ಲಿ ಕೂಡ"ಕ್ಷ, ತ್ರ, ಜ್ಞ" ಗಳಿಗೆ ಬರಿ ಬೇರೆಯದಾದ "ಗುರುತು/symbol" ಇವೆ [ಹಾಗೆ ಶ್ರ, ಓಂ ಗಳಿಗೂ] ಹೊರತು ಅವನ್ನೂ ಶುದ್ಧಗೆಗೆ/list of sounds ಗೆ ಸೇರಿಸಿಲ್ಲ.
ಕನ್ನಡದಲ್ಲಿ "ಕ್ಷ, ತ್ರ, ಜ್ಞ" ಗಳಿಗೆ ಬೇರೆಯದೇ ಆದ "ಗುರುತು/symbol" ಇಲ್ಲ. ಬದಲಿಗೆ ನಾವು ಒತ್ತಕ್ಕರಗಳನ್ನು ಬಳಸುತ್ತೇವೆ.
ಇಲ್ಲಿ ನೋಡಿರಿ.
http://en.wikipedia.org/wiki/Shiva_Sutra ಅದರಲ್ಲಿ ಕ್ಷ, ತ್ರ, ಜ್ಞ, ಗಳು ಇಲ್ಲ.!!!
Re: ಕ್ಷ , ತ್ರ ಮತ್ತು ಜ್ಞ
ಇಂಗ್ಲೀಸಿನಲ್ಲೂ ಇವು ಇವೆ, X ಮತ್ತು Z.
ಜ್ಞ ವನ್ನು ಜ ಬರೆದು ಕೆಳಗೆ ಞ್ ದ ಒತ್ತು ಬರೆಯುತ್ತೇವೆ. 'ಜ' ದ ಸಾಲಿನಲ್ಲೇ ಬರುವ ಝ = Z ಹೌದಾ, ಕನ್ನಡದಲ್ಲಿ ಕೆಳಗೆ ಞ್ ಬರೆಯುತ್ತೇವೆ, ಇಂಗ್ಲೀಸಿನಲ್ಲಿ ಬರೆಯಲ್ಲ, ಅಷ್ಟೆ. : )